ಆಸ್ಟ್ರೇಲಿಯಾದಲ್ಲಿ ಮಹಿಳಾ ಬಿಗ್‌ಬ್ಯಾಷ್ ಲೀಗ್ ಆಡಲು ಅರ್ಹಳಾಗಿದ್ದೇನೆಂದ ಅನಯಾ ಬಾಂಗರ್!
ಮಾಜಿ ಭಾರತ ಕ್ರಿಕೆಟಿಗ ಸಂಜಯ್ ಬಾಂಗರ್ ಅವರ ಪುತ್ರಿ ಅನಾಯಾ ಬಂಗಾರ್‌ಗೆ ಆಸ್ಟ್ರೇಲಿಯಾದಲ್ಲಿ ಪ್ರೀಮಿಯರ್ ಕಮ್ಯುನಿಟಿ ಮಹಿಳಾ ಕ್ರಿಕೆಟ್ ಆಡಲು ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನೀಡಿದೆ. ಈ ಅನುಮತಿಯ ಬಳಿಕ ಅನಯಾ ಬಂಗಾರ್, ಆಸ್ಟ್ರೇಲಿಯಾದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಆಡಲು ಸಜ್ಜಾಗುತ್ತಿದ್ದಾರೆ.
ಮಹಿಳಾ ಬಿಗ್‌ಬ್ಯಾಷ್ ಲೀಗ್‌ಗೆ ಅನಾಯಾ ಬಾಂಗರ್ ಸಜ್ಜು. -
ನವದೆಹಲಿ: ಮುಂಬರುವ 2027ರ ಮಾರ್ಚ್‌ನಿಂದ ಆಸ್ಟ್ರೇಲಿಯಾದ ಎಲೈಟ್ ಮಹಿಳಾ ಕ್ರಿಕೆಟ್‌ನಲ್ಲಿ ಆಡುವ ಅರ್ಹತೆ ತಮಗೆ ದೊರೆತಿದೆ ಎಂದು ಸಂಜಯ್ ಬಂಗಾರ್ (Anaya Bangar) ಅವರ ಪುತ್ರಿ ಅನಾಯಾ ಬಾಂಗರ್ ತಿಳಿಸಿದ್ದಾರೆ. ಈ ಬೆಳವಣಿಗೆ ಆಸ್ಟ್ರೇಲಿಯಾದ ಮಹಿಳಾ ಬಿಗ್‌ಬ್ಯಾಶ್ ಲೀಗ್ (WBBL) ಟೂರ್ನಿಯಲ್ಲಿ ಅವರು ಆಡಲು ಅವಕಾಶವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಾಗಿದ್ದ ಅನಾಯಾ, ಇದೀಗ ಮತ್ತೆ ಕ್ರಿಕೆಟ್‌ಗೆ ಮರಳುವ ಪ್ರಯತ್ನದಲ್ಲಿದ್ದಾರೆ. ಮುಂಬೈ ಪರ ವಯೋಮಿತಿ ಕ್ರಿಕೆಟ್‌ನಲ್ಲಿ ಆಡಿದ್ದ ಅನಾಯಾ, ಈ ಬೆಳವಣಿಗೆಯು ತಮ್ಮ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಬಾಂಬೆ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಅನಾಯಾ, ಮತ್ತೆ ಕ್ರಿಕೆಟ್ ಆಡಲು ಅವಕಾಶ ಸಿಗುವ ಸಾಧ್ಯತೆಯು ತಮ್ಮ ಪಾಲಿಗೆ ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ ಎಂದು ಹೇಳಿದ್ದಾರೆ. ಬಾಲ್ಯದಿಂದಲೂ ಕ್ರಿಕೆಟ್ ತಮ್ಮ ಜೀವನದ ಪ್ರಮುಖ ಭಾಗವಾಗಿತ್ತು. ಕ್ರೀಡೆಯಿಂದ ದೂರವಾಗಬೇಕಾದ ಪರಿಸ್ಥಿತಿ ಎದುರಾದಾಗ ತಮ್ಮ ಕ್ರಿಕೆಟ್ ವೃತ್ತಿಜೀವನವೇ ಮುಗಿದಿದೆ ಎಂದು ಭಾವಿಸಿದ್ದಾಗಿ ಅವರು ತಿಳಿಸಿದ್ದಾರೆ.
ಭಾರತ ತಂಡದ ಡಬ್ಲ್ಯುಟಿಸಿ ಫೈನಲ್ ಭವಿಷ್ಯ ನುಡಿದ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್!
ಆಸ್ಟ್ರೇಲಿಯಾದಲ್ಲಿ ಎಲೈಟ್ ಮಹಿಳಾ ಕ್ರಿಕೆಟ್ ಆಡಲು ದೊರೆತಿರುವ ಅರ್ಹತೆಯು ಅನಾಯಾ ಅವರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಪ್ರಯತ್ನಕ್ಕೆ ಹೊಸ ದಾರಿ ತೆರೆದಿದೆ. ಮುಂದಿನ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ WBBLನಂತಹ ಉನ್ನತ ಮಟ್ಟದ ಟಿ20 ಟೂರ್ನಿಯಲ್ಲಿ ಅವಕಾಶ ಪಡೆಯುವ ಗುರಿಯನ್ನು ಅವರು ಹೊಂದಿದ್ದಾರೆ.
“2027ರ ಮಾರ್ಚ್‌ನಿಂದ ಆಸ್ಟ್ರೇಲಿಯಾದ ವುಮೆನ್ಸ್ ಬಿಗ್‌ಬ್ಯಾಶ್ ಲೀಗ್ (WBBL)ನಲ್ಲಿ ಆಡಲು ನಾನು ಈಗ ಅರ್ಹಳಾಗಿದ್ದೇನೆ. ಇದು ನನಗೆ ಅತ್ಯಂತ ಭಾವನಾತ್ಮಕ ಕ್ಷಣ. ಒಂದು ಹಂತದಲ್ಲಿ ನಾನು ಕ್ರಿಕೆಟ್ ಅನ್ನು ಶಾಶ್ವತವಾಗಿ ಕಳೆದುಕೊಂಡಿದ್ದೇನೆ ಎಂದು ನಿಜವಾಗಿಯೂ ಭಾವಿಸಿದ್ದೆ,” ಎಂದು ಅನಾಯಾ ಬಂಗಾರ್ ಹೇಳಿದ್ದಾರೆ.
“ಬಾಲ್ಯದಿಂದಲೂ ಕ್ರಿಕೆಟ್ ನನ್ನ ಗುರುತಿನ ಪ್ರಮುಖ ಭಾಗವಾಗಿದೆ. ನನ್ನ ಪರಿವರ್ತನೆಯ ಬಳಿಕ ಕ್ರೀಡೆಯಿಂದ ದೂರವಾಗಬೇಕಾದ ಪರಿಸ್ಥಿತಿ ಎದುರಾದದ್ದು ನಾನು ಅನುಭವಿಸಿದ ಅತ್ಯಂತ ಕಠಿಣ ಸಂದರ್ಭಗಳಲ್ಲಿ ಒಂದಾಗಿತ್ತು. ಹೀಗಾಗಿ ಇದು ಕೇವಲ ಮಹಿಳಾ ಲೀಗ್‌ನಲ್ಲಿ ಆಡುವ ಅವಕಾಶ ಪಡೆಯುವ ವಿಚಾರವಲ್ಲ. ನಾನು ಅಪಾರವಾಗಿ ಪ್ರೀತಿಸುವ ಕ್ರೀಡೆಗೆ ಮತ್ತೆ ಮರಳುವ ಸಾಧ್ಯತೆಯನ್ನು ಇದು ಪ್ರತಿನಿಧಿಸುತ್ತದೆ,” ಎಂದು ಅನಾಯಾ ತಿಳಿಸಿದ್ದಾರೆ.
IND vs SL: ಕೊಲಂಬೊದಲ್ಲಿ ಶತಕದ ಯಶಸ್ಸಿಗೆ ಕಾರಣರಾದ ಆಟಗಾರನನ್ನು ಹೆಸರಿಸಿದ ಧ್ರುವ್ ಜುರೆಲ್!
ಕ್ರಿಕೆಟ್ ಆಸ್ಟ್ರೇಲಿಯಾ ದೇಶಿ ಕ್ರಿಕೆಟ್‌ನಲ್ಲಿ ಟ್ರಾನ್ಸ್‌ಜೆಂಡರ್ ಹಾಗೂ ಜೆಂಡರ್-ಡೈವರ್ಸ್ ಆಟಗಾರರಿಗಾಗಿ ಬಹುಕಾಲದಿಂದಲೇ ಒಳಗೊಳ್ಳುವಿಕೆಯ ನೀತಿಯನ್ನು ಅನುಸರಿಸುತ್ತಿದೆ. ಅದರ ಮಾರ್ಗಸೂಚಿಗಳಲ್ಲಿ ಕಮ್ಯುನಿಟಿ ಕ್ರಿಕೆಟ್ ಮತ್ತು ಎಲೈಟ್ ಕ್ರಿಕೆಟ್ ನಡುವೆ ವ್ಯತ್ಯಾಸವಿದ್ದು, ವುಮೆನ್ಸ್ ಬಿಗ್‌ಬ್ಯಾಶ್ ಲೀಗ್ (WBBL) ಅನ್ನು ಎಲೈಟ್ ಸ್ಪರ್ಧೆಯಾಗಿ ವರ್ಗೀಕರಿಸಲಾಗಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ಇದೀಗ ತಮಗೆ ಆಸ್ಟ್ರೇಲಿಯಾದ ಎಲೈಟ್ ಮಹಿಳಾ ಕ್ರಿಕೆಟ್‌ನಲ್ಲಿ ಮುಂದುವರಿಯಲು ಅವಕಾಶ ನೀಡಿದೆ ಎಂದು ಅನಾಯಾ ಬಂಗಾರ್ ತಿಳಿಸಿದ್ದಾರೆ. ಆದರೆ WBBL ಫ್ರಾಂಚೈಸಿಯಿಂದ ಒಪ್ಪಂದ ಪಡೆಯುವ ಮೊದಲು ಇನ್ನೂ ದೊಡ್ಡ ಸವಾಲುಗಳನ್ನು ಎದುರಿಸಬೇಕಿದೆ ಎಂದು ಅವರು ಹೇಳಿದ್ದಾರೆ.
“ಕ್ರಿಕೆಟ್ ಆಸ್ಟ್ರೇಲಿಯಾ ನನಗೆ ಆಸ್ಟ್ರೇಲಿಯಾದ ಎಲೈಟ್ ಮಹಿಳಾ ಕ್ರಿಕೆಟ್‌ನಲ್ಲಿ ಮುಂದುವರಿಯಲು ಅವಕಾಶ ನೀಡಿದೆ. ಈಗ ನನ್ನ ಮುಂದಿರುವ ಸವಾಲು ಎಂದರೆ ಸಾಧ್ಯವಾದಷ್ಟು ಉತ್ತಮ ದೈಹಿಕ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕ ಫಾರ್ಮ್ ಪಡೆದುಕೊಳ್ಳುವುದು. ಬಳಿಕ WBBL ಫ್ರಾಂಚೈಸಿಗಳ ಪರಿಗಣನೆಗೆ ಬರುವಂತಹ ಸ್ಥಾನವನ್ನು ನಾನು ಗಳಿಸಬೇಕು,” ಎಂದು ಅನಾಯಾ ತಿಳಿಸಿದ್ದಾರೆ.