ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ತಂಡದ ಡಬ್ಲ್ಯುಟಿಸಿ ಫೈನಲ್‌ ಭವಿಷ್ಯ ನುಡಿದ ಮಾಜಿ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌!

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಫೈನಲ್‌ ರೇಸ್‌ನಲ್ಲಿ ಭಾರತ ತಂಡ ಸದ್ಯ ಹಿನ್ನಡೆ ಅನುಭವಿಸಿದ್ದರೂ, ಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶ ಇನ್ನೂ ಇದೆ ಎಂದು ಭಾರತದ ಮಾಜಿ ಕೋಚ್‌ ಹಾಗೂ ದಿಗ್ಗಜ ಬ್ಯಾಟರ್‌ ರಾಹುಲ್‌ ದ್ರಾವಿಡ್‌ ಅಭಿಪ್ರಾಯಪಟ್ಟಿದ್ದಾರೆ. ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡಕ್ಕೆ ಇನ್ನೂ 8 ಟೆಸ್ಟ್‌ ಪಂದ್ಯಗಳು ಬಾಕಿಯಿದ್ದು, ಫೈನಲ್‌ ಸ್ಥಾನ ಖಚಿತಪಡಿಸಿಕೊಳ್ಳಲು ಅವುಗಳಲ್ಲಿ ಕನಿಷ್ಠ 6 ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ.

ಭಾರತ ತಂಡದ ಡಬ್ಲ್ಯುಟಿಸಿ ಪೈನಲ್‌ ಭವಿಷ್ಯ ನುಡಿದ ರಾಹುಲ್‌ ದ್ರಾವಿಡ್‌!

ಭಾರತ ತಂಡದ WTC Final ಭವಿಷ್ಯ ನುಡಿದ ರಾಹುಲ್‌ ದ್ರಾವಿಡ್‌. -

Profile
Ramesh Kote Aug 25, 2026 5:00 PM

ನವದೆಹಲಿ: ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡಕ್ಕೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಫೈನಲ್‌ಗೆ ಅರ್ಹತೆ ಪಡೆಯಲು ಇನ್ನೂ ಅವಕಾಶವಿದೆ ಎಂದು ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ಹಾಗೂ ದಿಗ್ಗಜ ಬ್ಯಾಟರ್‌ ರಾಹುಲ್‌ ದ್ರಾವಿಡ್‌ (Rahul Dravid) ಭವಿಷ್ಯ ನುಡಿದಿದ್ದಾರೆ. ಆದರೆ 2025-27ರ ಡಬ್ಲ್ಯುಟಿಸಿ ಋತುವಿನಲ್ಲಿ ಭಾರತ ತಂಡ, ಇನ್ನುಳಿದ ಪಂದ್ಯಗಳಲ್ಲಿ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎದುರಾಗಿದೆ. ಭಾರತ ಸದ್ಯ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಇನ್ನೂ 8 ಟೆಸ್ಟ್‌ ಪಂದ್ಯಗಳು ಆಡಬೇಕಿದೆ. ಫೈನಲ್‌ ರೇಸ್‌ನಲ್ಲಿ ಉಳಿಯಲು ಈ ಪಂದ್ಯಗಳಲ್ಲಿ ಕನಿಷ್ಠ 6 ಪಂದ್ಯಗಳನ್ನು ಗೆಲ್ಲಬೇಕಾಗಿದೆ.

“ಭಾರತ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಲಿ ಎಂದು ನಾನು ಆಶಿಸುತ್ತೇನೆ. ಇಲ್ಲಿಂದ ಭಾರತ ಫೈನಲ್‌ಗೆ ಅರ್ಹತೆ ಪಡೆದರೆ ಅದೊಂದು ಅದ್ಭುತ ಪ್ರಯಾಣವಾಗಲಿದೆ. ತಂಡ ಸ್ವಲ್ಪ ಹಿಂದೆ ಬಿದ್ದಿದೆ. ಆದರೆ ಭಾರತ ತಂಡದ ಗುಣಮಟ್ಟವನ್ನು ನೋಡಿದರೆ, ಯಾವುದೇ ಹಂತದಲ್ಲೂ ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ. ಶ್ರೀಲಂಕಾ ವಿರುದ್ಧ ಭಾರತ ಉತ್ತಮ ಆರಂಭ ಪಡೆದಿದೆ. ಇದು ಉತ್ತಮ ಮೊದಲ ಹೆಜ್ಜೆ,” ಎಂದು ರಾಹುಲ್‌ ದ್ರಾವಿಡ್‌ ಗುಣಗಾನ ಮಾಡಿದ್ದಾರೆ.

IND vs SL: ಕೊಲಂಬೊದಲ್ಲಿ ಶತಕದ ಯಶಸ್ಸಿಗೆ ಕಾರಣರಾದ ಆಟಗಾರನನ್ನು ಹೆಸರಿಸಿದ ಧ್ರುವ್‌ ಜುರೆಲ್‌!

ನ್ಯೂಜಿಲೆಂಡ್‌ ಪ್ರವಾಸದಲ್ಲಿ ದೊಡ್ಡ ಸವಾಲು

ಭಾರತ ಸದ್ಯ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಎರಡನೇ ಟೆಸ್ಟ್‌ನಲ್ಲೂ ಬಲಿಷ್ಠ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಮೇಲುಗೈ ಸಾಧಿಸಿದೆ. ಆದರೆ ಮುಂದಿನ ಹಾದಿ ಸುಲಭವಲ್ಲ. ಅಕ್ಟೋಬರ್‌ನಲ್ಲಿ ಭಾರತ, ನ್ಯೂಜಿಲೆಂಡ್‌ನಲ್ಲಿ ಎರಡು ಟೆಸ್ಟ್‌ ಪಂದ್ಯಗಳ ಸರಣಿ ಆಡಲಿದೆ. ನ್ಯೂಜಿಲೆಂಡ್‌ನ ಪರಿಸ್ಥಿತಿಗಳು ಭಾರತಕ್ಕೆ ದೊಡ್ಡ ಸವಾಲಾಗಬಹುದು ಎಂದು ದ್ರಾವಿಡ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ನ್ಯೂಜಿಲೆಂಡ್‌ನಲ್ಲಿ ಕಿವೀಸ್‌ ವಿರುದ್ಧ ಆಡುವುದು ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ತವರಿನ ಹೊರಗೆ ನ್ಯೂಜಿಲೆಂಡ್‌ ಕಠಿಣ ತಂಡ. ಭಾರತದ ಹಲವು ಯುವ ಆಟಗಾರರು ಅಲ್ಲಿನ ಪರಿಸ್ಥಿತಿಗಳಲ್ಲಿ ಆಡಿರುವ ಅನುಭವ ಹೊಂದಿಲ್ಲ. ಹೀಗಾಗಿ ಇದು ದೊಡ್ಡ ಸವಾಲಾಗಲಿದೆ,” ಎಂದು ದ್ರಾವಿಡ್‌ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಧೋನಿಯ ಸಾರ್ವಕಾಲಿಕ ಟೆಸ್ಟ್‌ ದಾಖಲೆ ಮುರಿದ ಜುರೆಲ್‌

ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿ

ನ್ಯೂಜಿಲೆಂಡ್‌ ಪ್ರವಾಸದ ಬಳಿಕ ಭಾರತ ತಂಡ 2027ರ ಜನವರಿಯಿಂದ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಸರಣಿಯನ್ನು ಆಡಲಿದೆ. ಈ ವೇಳೆ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್‌ ಪೂಜಾರ ಅವರಂತಹ ಅನುಭವಿ ಆಟಗಾರರ ಅನುಪಸ್ಥಿತಿ ಭಾರತ ತಣಡಕ್ಕೆ ಬಲವಾಗಿ ಕಾಡಬಹುದು ಎಂದು ದ್ರಾವಿಡ್‌ ಅಭಿಪ್ರಾಯಪಟ್ಟಿದ್ದಾರೆ.

“ಮುಂದಿನ ಕೆಲವು ತಿಂಗಳುಗಳಲ್ಲಿ ಆಟಗಾರರು ಫಿಟ್‌ ಆಗಿರಲಿ ಮತ್ತು ಹೆಚ್ಚಿನ ಗಾಯಗಳು ಸಂಭವಿಸದಿರಲಿ ಎಂದು ಆಶಿಸುತ್ತೇನೆ. ವಿರಾಟ್‌, ರೋಹಿತ್‌, ಅಜಿಂಕ್ಯ ರಹಾನೆ ಮತ್ತು ಪೂಜಾರ ಅವರಂತಹ ಅನುಭವಿ ಆಟಗಾರರ ಅನುಭವವನ್ನು ನಾವು ಕಳೆದುಕೊಂಡಿದ್ದೇವೆ. ಭಾರತ ಕೊನೆಯ ಬಾರಿ ನ್ಯೂಜಿಲೆಂಡ್‌ಗೆ ತೆರಳಿದ್ದಾಗ ಈ ಆಟಗಾರರು ತಂಡದಲ್ಲಿದ್ದರು. ಹೀಗಾಗಿ ಮುಂದಿನ ಸರಣಿಯೂ ಕುತೂಹಲಕಾರಿಯಾಗಲಿದೆ,” ಎಂದು ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ.