ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿʼ: ವಿದೇಶಿ ಕ್ರಿಕೆಟ್‌ ಪಂಡಿತರನ್ನು ಜಾಡಿಸಿದ ಸುನೀಲ್‌ ಗವಾಸ್ಕರ್‌!

ಏಷ್ಯಾ ಕಪ್‌ ಟೂರ್ನಿಗೆ ಭಾರತ ತಂಡದ ಆಯ್ಕೆಯನ್ನು ಪ್ರಶ್ನೆ ಮಾಡಿದ ವಿದೇಶಿ ಕ್ರಿಕೆಟ್‌ ಪಂಡಿತರ ವಿರುದ್ಧ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಕಿಡಿಕಾರಿದ್ದಾರೆ. ನಿಮ್ಮ ದೇಶದ ಕ್ರಿಕೆಟ್‌ಗೆ ನೀವು ಮಾತನಾಡಿ, ಅದು ಬಿಟ್ಟು ಭಾರತೀಯ ಕ್ರಿಕೆಟ್‌ ಬಗ್ಗೆ ಪ್ರಶ್ನಿಸುವ ಅಧಿಕಾರ ನಿಮಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದೇಶಿ ಕ್ರಿಕೆಟ್‌ ಪಂಡಿತರ ವಿರುದ್ಧ ಸುನೀಲ್‌ ಗವಾಸ್ಕರ್‌ ಕಿಡಿ!

ವಿದೇಶಿ ಕ್ರಿಕೆಟ್‌ ಪಂಡಿತರ ವಿರುದ್ಧ ಸುನೀಲ್‌ ಗವಾಸ್ಕರ್‌ ಕಿಡಿ.

Profile Ramesh Kote Aug 26, 2025 10:21 PM

ನವದೆಹಲಿ: ಮುಂಬರುವ ಏಷ್ಯಾ ಕಪ್‌ (Asia Cup 2025) ಟೂರ್ನಿಗೆ ಭಾರತ ತಂಡದ ಆಯ್ಕೆಯ ಬಗ್ಗೆ ಪ್ರಶ್ನೆ ಮಾಡಿದ ಎಬಿ ಡಿ ವಿಲಿಯರ್ಸ್‌ ಸೇರಿದಂತೆ ವಿದೇಶಿ ಕ್ರಿಕೆಟ್‌ ಪಂಡಿತರ ವಿರುದ್ಧ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತ ತಂಡಕ್ಕೆ (India) ಶ್ರೇಯಸ್‌ ಅಯ್ಯರ್‌ ಹಾಗೂ ಯಶಸ್ವಿ ಜೈಸ್ವಾಲ್‌ ಅವರನ್ನು ಕಡೆಗಣಿಸಿದ ಬಗ್ಗೆ ವಿದೇಶಿ ಕ್ರಿಕೆಟ್‌ ಪಂಡಿತರು ಟೀಕಿಸಿದ್ದಾರೆ. ಈ ಬಗ್ಗೆ ಪ್ರೆತಿಕ್ರಿಯಿಸಿದ ಭಾರತದ ಮಾಜಿ ನಾಯಕ, ಭಾರತದ ಕ್ರಿಕೆಟ್‌ ಬಗ್ಗೆ ಮಾತನಾಡುವ ಬದಲು, ನಿಮ್ಮ ದೇಶದ ಕ್ರಿಕೆಟ್‌ ಬಗ್ಗೆ ಮಾತನಾಡಿ ಎಂದು ಖಾರವಾಗಿ ಹೇಳಿದ್ದಾರೆ. ನಮಗೆ ಇಷ್ಟಬಂದ ಹಾಗೆ ತಂಡವನ್ನು ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಸೆಪ್ಟಂಬರ್‌ 9 ರಂದು ಆರಂಭವಾಗುವ 2025ರ ಏಷ್ಯಾ ಕಪ್‌ ಟೂರ್ನಿಗೆ ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿತ್ತು. ಇದಾದ ಬಳಿಕ ಹಲವು ಮಾಜಿ ಕ್ರಿಕೆಟಿಗರು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಶ್ರೇಯಸ್‌ ಅಯ್ಯರ್‌ ಅವರನ್ನು ಕೈ ಬಿಟ್ಟಿದ್ದ ಎಬಿ ಡಿ ವಿಲಿಯರ್ಸ್‌ ವಿರೋಧಿಸಿದ್ದರು. ಆದರೆ, ಇದನ್ನು ಸುನೀಲ್‌ ಗವಾಸ್ಕರ್‌ ಟೀಕಿಸಿದ್ದಾರೆ.

Asia Cup 2025: ʻಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲಲಿದೆʼ-ಹ್ಯಾರಿಸ್‌ ರೌಫ್‌ ಎಚ್ಚರಿಕೆ!

ಸ್ಪೋರ್ಟ್ಸ್‌ಸ್ಟಾರ್‌ನಲ್ಲಿ ತಾವು ಬರೆದ ಅಂಕಣದಲ್ಲಿ ಸುನೀಲ್‌ ಗವಾಸ್ಕರ್‌, "ಭಾರತೀಯ ಕ್ರಿಕೆಟ್‌ನಲ್ಲಿ ಯಾವುದೇ ಪಾಲು ಇಲ್ಲದ ಮತ್ತು ಅದರ ಬಗ್ಗೆ ಕಡಿಮೆ ಜ್ಞಾನ ಹೊಂದಿರುವ ವಿದೇಶಿಯರು ಚರ್ಚೆಯಲ್ಲಿ ತೊಡಗಿಕೊಂಡು ಬೆಂಕಿಗೆ ತುಪ್ಪ ಸುರಿಯುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಅವರು ಆಟಗಾರರಾಗಿ ಎಷ್ಟೇ ಉತ್ತಮ ಆಟಗಾರರಾಗಿದ್ದರೂ ಮತ್ತು ಭಾರತಕ್ಕೆ ಎಷ್ಟೇ ಬಾರಿ ಸೇವೆ ಸಲ್ಲಿಸಿದ್ದರೂ, ಭಾರತೀಯ ತಂಡದ ಆಯ್ಕೆ ಅವರಿಗೆ ಸೇರಿಲ್ಲ. ಅವರು ತಮ್ಮ ದೇಶದ ಕ್ರಿಕೆಟ್‌ನತ್ತ ಗಮನಹರಿಸಬೇಕು ಮತ್ತು ನಾವು ಭಾರತೀಯರು ನಮ್ಮ ಕ್ರಿಕೆಟ್ ಬಗ್ಗೆ ಚಿಂತಿಸುವಂತೆ ಮಾಡಬೇಕು. ಆಶ್ಚರ್ಯಕರವಾಗಿ, ಅವರ ದೇಶದ ತಂಡಗಳನ್ನು ಆಯ್ಕೆ ಮಾಡಿದಾಗ, ಆಯ್ಕೆಯ ಬಗ್ಗೆ ಅವರಿಂದ ಯಾವುದೇ ಸುದ್ದಿ ಕೇಳಿಬರುವುದಿಲ್ಲ," ಎಂದು ಗುಡುಗಿದ್ದಾರೆ.

Asia Cup 2025: ಏಷ್ಯಾ ಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಒಮಾನ್

ದ್ವಂದ್ವ ನೀತಿಯನ್ನು ಅನುಸರಿಸಬೇಡಿ

ಕ್ರಿಕೆಟ್ ಪಂಡಿತರ ದ್ವಂದ್ವ ನೀತಿಯನ್ನು ಗವಾಸ್ಕರ್ ಎತ್ತಿ ತೋರಿಸಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗರು ಎಂದಿಗೂ ಇತರ ದೇಶಗಳ ತಂಡಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ಆದ್ದರಿಂದ ಭಾರತ, ಟೂರ್ನಿಗೆ ನಿರ್ದಿಷ್ಟ ತಂಡವನ್ನು ಘೋಷಿಸುವಾಗ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಾರದು ಎಂದು ಹೇಳುತ್ತಾರೆ.

"ಆಯ್ಕೆ ಪರಿಪೂರ್ಣವಾಗಿದೆ ಮತ್ತು ಅವರಿಗೆ ಯಾವುದೇ ಕಾಮೆಂಟ್‌ಗಳಿಲ್ಲ ಎಂಬಂತೆ ಭಾಸವಾಗುತ್ತಿದೆ. ಹಾಗಾದರೆ, ಭಾರತೀಯ ತಂಡದ ಆಯ್ಕೆಯಲ್ಲಿ ನೀವು ಯಾಕೆ ಮೂಗು ತೂರಿಸುತ್ತೀರಿ? ಇತರ ದೇಶಗಳ ತಂಡಗಳ ಆಯ್ಕೆಯ ಬಗ್ಗೆ ಭಾರತೀಯ ಮಾಜಿ ಕ್ರಿಕೆಟಿಗರು ಮಾತನಾಡುವುದನ್ನು ನೀವು ಎಂದಾದರೂ ಕೇಳಿದ್ದೀರಾ? ಇಲ್ಲ, ನಾವು ನಮ್ಮ ಸ್ವಂತ ವ್ಯವಹಾರವನ್ನು ನೋಡಿಕೊಳ್ಳುತ್ತೇವೆ ಮತ್ತು ಅವರು ಯಾರನ್ನು ಆಯ್ಕೆ ಮಾಡುತ್ತಾರೆ ಅಥವಾ ಯಾರನ್ನು ಆಯ್ಕೆ ಮಾಡುವುದಿಲ್ಲ ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸಲಾಗುವುದಿಲ್ಲ," ಎಂದು ತಿಳಿಸಿದ್ದಾರೆ.

Asia Cup 2025: ಏಷ್ಯಾಕಪ್‌ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಬೌಲರ್‌ಗಳ ಪಟ್ಟಿ ಹೀಗಿದೆ

ನಕಾರಾತ್ಮಕ ಪ್ರತಿಕ್ರಿಯೆ ನೀಡಿ ಲಾಭ ಪಡೆಯುತ್ತಾರೆ: ಗವಾಸ್ಕರ್‌ ಟೀಕೆ

"ಇಂದು ಸಾರ್ವಜನಿಕ ಮಾಧ್ಯಮಗಳ ದಿನಗಳಲ್ಲಿ ವೀಕ್ಷಣೆಗಳು ಮತ್ತು ಫಾಲೋವರ್ಸ್‌ ಪಡೆಯುವುದು ಮುಖ್ಯವಾದ ವಿಷಯವಾಗಿದೆ, ಸಂಖ್ಯೆಯನ್ನು ಹೆಚ್ಚಿಸುವ ವೇಗವಾದ ಮಾರ್ಗವೆಂದರೆ ಭಾರತೀಯ ವಿಷಯಗಳ ಬಗ್ಗೆ ಕಾಮೆಂಟ್ ಮಾಡುವುದು. ಹೆಚ್ಚಾಗಿ, ಅವರು ಅದನ್ನು ನಕಾರಾತ್ಮಕವಾಗಿ ಮಾಡುತ್ತಾರೆ, ಆದ್ದರಿಂದ ಭಾರತೀಯ ನೆಟ್ಟಿಗರಿಂದ ಭಾರಿ ಪ್ರತಿಕ್ರಿಯೆ ಇದೆ. ಇದು ಅವರ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ನೀವು ದಪ್ಪ ಚರ್ಮವನ್ನು ಹೊಂದಿದ್ದರೆ, ಅದು ಉತ್ತಮವಾಗಿರುತ್ತದೆ. ಅದಕ್ಕಾಗಿಯೇ ಅನೇಕ ವಿದೇಶಿ ಕ್ರಿಕೆಟಿಗರು ಭಾರತೀಯ ಕ್ರಿಕೆಟ್ ಮತ್ತು ಕ್ರಿಕೆಟಿಗರ ಬಗ್ಗೆ ತಮ್ಮ ಹೆಚ್ಚಾಗಿ ನಕಾರಾತ್ಮಕ ಕಾಮೆಂಟ್‌ಗಳಿಂದ ಭಾರತೀಯ ಕ್ರಿಕೆಟ್ ಪ್ರಿಯರನ್ನು ಬೆದರಿಸಿ ಜೀವನ ಸಾಗಿಸಿದ್ದಾರೆ," ಎಂದು ಅವರು ಕಿಡಿ ಕಾರಿದ್ದಾರೆ.