ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ವಿರುದ್ಧದ ಏಕದಿನ, ಟಿ20 ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ನ್ಯೂಜಿಲ್ಯಾಂಡ್‌

IND vs NZ: 3 ಪಂದ್ಯಗಳ ಏಕದಿನ ಮತ್ತು 5 ಪಂದ್ಯಗಳ ಟಿ20 ಸರಣಿ ಆಡಲಿದೆ. ಇತ್ತಂಡಗಳ ಸರಣಿ ಏಕದಿನದ ಮೂಲಕ ಪ್ರಾರಂಭವಾಗಲಿದೆ. ಮೊದಲ ಏಕದಿನ ಜ.11ರಂದು ನಡೆಯಲಿದೆ. ಟಿ20 ಸರಣಿ ಜ.21ರಿಂದ ಆರಂಭವಾಗಲಿದೆ. ಜ.31ರಂದು ಸರಣಿ ಮುಕ್ತಾಯಗೊಳ್ಳಲಿದೆ.

ಭಾರತ ವಿರುದ್ಧದ ಏಕದಿನ, ಟಿ20 ಸರಣಿಗೆ ನ್ಯೂಜಿಲ್ಯಾಂಡ್‌ ತಂಡ ಪ್ರಕಟ

New Zealand -

Abhilash BC
Abhilash BC Dec 24, 2025 8:57 AM

ಆಕ್ಲೆಂಡ್‌, ಡಿ.24: ಜನವರಿಯಲ್ಲಿ ನಡೆಯಲಿರುವ ಭಾರತ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಮತ್ತು ಟಿ20ಐ ಸರಣಿಗೆ ನ್ಯೂಜಿಲೆಂಡ್(IND vs NZ) ಕ್ರಿಕೆಟ್ ತನ್ನ ತಂಡಗಳನ್ನು ಪ್ರಕಟಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಗೆ ನಾಯಕ ಮಿಚೆಲ್ ಸ್ಯಾಂಟ್ನರ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಕೈಬಿಡಲಾಗಿದೆ. ಸ್ಯಾಂಟ್ನರ್ ಅನುಪಸ್ಥಿತಿಯಲ್ಲಿ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ 50 ಓವರ್‌ಗಳ ಸ್ವರೂಪದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಮ್ಯಾಟ್ ಹೆನ್ರಿ, ಮಾರ್ಕ್ ಚಾಪ್ಮನ್ ಮತ್ತು ರಾಚಿನ್ ರವೀಂದ್ರ ಅವರಿಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. 2026 ರ ಟಿ20 ವಿಶ್ವಕಪ್‌ಗೆ ಮುನ್ನ ತನ್ನ ತಂಡ ಸಂಯೋಜನೆಯನ್ನು ಉತ್ತಮಗೊಳಿಸಲು ಭಾರತದ ವಿರುದ್ಧದ ಟಿ20ಐ ಸರಣಿಯು ತಂಡಕ್ಕೆ ಕೊನೆಯ ಅವಕಾಶವಾಗಿದೆ. ಕಿವೀಸ್ ತಂಡವು ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಕೆನಡಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಜೊತೆಗೆ ಗ್ರೂಪ್ ಡಿಯಲ್ಲಿ ಸ್ಥಾನ ಪಡೆದಿದೆ.

3 ಪಂದ್ಯಗಳ ಏಕದಿನ ಮತ್ತು 5 ಪಂದ್ಯಗಳ ಟಿ20 ಸರಣಿ ಆಡಲಿದೆ. ಇತ್ತಂಡಗಳ ಸರಣಿ ಏಕದಿನದ ಮೂಲಕ ಪ್ರಾರಂಭವಾಗಲಿದೆ. ಮೊದಲ ಏಕದಿನ ಜ.11ರಂದು ನಡೆಯಲಿದೆ. ಟಿ20 ಸರಣಿ ಜ.21ರಿಂದ ಆರಂಭವಾಗಲಿದೆ. ಜ.31ರಂದು ಸರಣಿ ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ ಭಾರತ vs ನ್ಯೂಜಿಲ್ಯಾಂಡ್‌ ಸರಣಿ ಯಾವಾಗ ಆರಂಭ?

ಏಕದಿನ ತಂಡ: ಮೈಕೆಲ್ ಬ್ರೇಸ್‌ವೆಲ್ (ನಾಯಕ), ಆದಿ ಅಶೋಕ್, ಕ್ರಿಸ್ಟಿಯನ್ ಕ್ಲಾರ್ಕ್, ಜೋಶ್ ಕ್ಲಾರ್ಕ್ಸನ್, ಡೆವೊನ್ ಕಾನ್ವೇ, ಜ್ಯಾಕ್ ಫೌಲ್ಕ್ಸ್, ಮಿಚ್ ಹೇ (ವಿಕೆ), ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಜೇಡನ್ ಲೆನಾಕ್ಸ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರೇ, ವಿಲ್ ಯಂಗ್.

ಟಿ20 ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ (ವಿಕೆ), ಜಾಕೋಬ್ ಡಫಿ, ಜ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಬೆವೊನ್ ಜಾಕೋಬ್ಸ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಾಚಿನ್ ರವೀಂದ್ರ, ಟಿಮ್ ರಾಬಿನ್ಸನ್, ಇಶ್ ಸೋಧಿ.

ಭಾರತ vs ನ್ಯೂಜಿಲೆಂಡ್ ODI ಸರಣಿ ವೇಳಾಪಟ್ಟಿ

ಜನವರಿ 11, 2026: ಮೊದಲ ODI, ವಡೋದರಾ

ಜನವರಿ 14, 2026: ಎರಡನೇ ODI, ರಾಜ್‌ಕೋಟ್

ಜನವರಿ 18, 2026: ಮೂರನೇ ODI, ಇಂದೋರ್

ಭಾರತ vs ನ್ಯೂಜಿಲೆಂಡ್ ಟಿ20 ಸರಣಿ ವೇಳಾಪಟ್ಟಿ

ಜನವರಿ 21, 2026: ಮೊದಲ ಟಿ20, ನಾಗ್ಪುರ

ಜನವರಿ 23, 2006: ದ್ವಿತೀಯ ಟಿ20, ರಾಯ್ಪುರ

ಜನವರಿ 25, 2006: ಮೂರನೇ ಟಿ20, ಗುವಾಹಟಿ

ಜನವರಿ 28, 2006: ನಾಲ್ಕನೇ ಟಿ20, ವಿಶಾಖಪಟ್ಟಣಂ

ಜನವರಿ 28, 2006: ಐದನೇ ಟಿ20, ತಿರುವನಂತಪುರಂ