ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಇಶಾನ್‌ ಕಿಶನ್‌ ಗಾಯದ ಭೀತಿ!

ನಮೀಬಿಯಾ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳಿಗೂ ಮುನ್ನ ಭಾರತ ತಂಡಕ್ಕೆ ಮತ್ತೊಬ್ಬ ಸ್ಟಾರ್‌ ಆಟಗಾರನ ಗಾಯದ ಭೀತಿ ಶುರುವಾಗಿದೆ. ಬುಧವಾರ ದೆಹಲಿಯ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಬ್ಯಾಟಿಂಗ್‌ ಅಭ್ಯಾಸದಲ್ಲಿ ಜಸ್‌ಪ್ರೀತ್‌ ಬುಮ್ರಾ ಯಾರ್ಕರ್‌ ಎಸೆತದಲ್ಲಿ ಇಶಾನ್‌ ಕಿಶನ್‌ ಅವರ ಎಡಗಾಲಿಗೆ ಗಾಯವಾಗಿದೆ. ಹಾಗಾಗಿ ಟೀಮ್‌ ಮ್ಯಾನೇಜ್‌ಮೆಂಟ್‌ ಸ್ಟಾರ್‌ ಬ್ಯಾಟ್ಸ್‌ಮನ್‌ ಬಗ್ಗೆ ಆತಂಕ ಶುರುವಾಗಿದೆ.

IND vs NAM: ಇಶಾನ್‌ ಕಿಶನ್‌ಗೆ ಗಾಯ, ಭಾರತ ತಂಡಕ್ಕೆ ಆಘಾತ!

ಅಭ್ಯಾಸದ ವೇಳೆ ಇಶಾನ್‌ ಕಿಶನ್‌ಗೆ ಗಾಯವಾಗಿದೆ. -

Profile
Ramesh Kote Feb 11, 2026 8:52 PM

ನವದೆಹಲಿ: ನಮಿಬೀಯಾ ಹಾಗೂ ಪಾಕಿಸ್ತಾನ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯ ಪಂದ್ಯಗಳಿಗೂ ಮುನ್ನ ಭಾರತ ತಂಡಕ್ಕೆ ಗಾಯದ ಭೀತಿ ಎದುರಾಗಿದೆ. ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ (Ishan Kishan) ಎಡಗಾಲಿಗೆ ಚೆಂಡು ತಗುಲಿ ಗಾಯವಾಗಿದೆ. ಫೆಬ್ರವರಿ 12 ರಂದು ನಮೀಬಿಯಾ ವಿರುದ್ಧದ ಪಂದ್ಯದ ನಿಮಿತ್ತ ಬುಧವಾರ ಇಲ್ಲಿನ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದ ವೇಳೆ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಎಸೆದ ಯಾರ್ಕರ್‌ ಎಸೆತದಲ್ಲಿ ಇಶಾನ್‌ ಕಿಶನ್‌ ಎಡಗಾಲಿಗೆ ಚೆಂಡು ತಗುಲಿ ಗಾಯವಾಗಿದೆ. ಅವರ ಕಾಲಿಗೆ ಚೆಂಡು ಬಡಿದ ತಕ್ಷಣ ತಂಡದ ಫಿಸಿಯೊ ಆಗಮಿಸಿ ಇಶಾನ್‌ ಕಿಶನ್‌ ಅವರ ಕಾಲನ್ನು ಪರಿಶೀಲಿಸಿದರು ಹಾಗೂ ಸೂಕ್ತ ಕಾಳಜಿ ತೋರಿಸಿದರು.

ಫಿಸಿಯೊ ಬಂದು ಹೋದ ಬಳಿಕ ಇಶಾನ್‌ ಕಿಶನ್‌ ಮತ್ತೆ ನೆಟ್ಸ್‌ಗೆ ತೆರಳಿ ಹೆಚ್ಚುವರಿ 5 ನಿಮಿಷಗಳ ಕಾಲ ಬ್ಯಾಟಿಂಗ್‌ ಅಭ್ಯಾಸವನ್ನು ನಡೆಸಿದ್ದರು. ಹಾಗಾಗಿ ಅವರ ಕಾಲಿಗೆ ಗಂಭೀರ ಗಾಯವಾಗಿಲ್ಲ ಎಂಬುದು ಸ್ಪಷ್ಟವಾಗಿದ್ದು, ಟೀಮ್‌ ಮ್ಯಾನೇಜ್‌ಮೆಂಟ್‌ನ ಆತಂಕವನ್ನು ದೂರ ಮಾಡಿದೆ. ಆದರೆ, ಅಭ್ಯಾಸ ಮುಗಿಸಿ ಮರಳಿದ ಬಳಿಕ ಇಶಾನ್‌ ಕಿಶನ್‌ ಅಷ್ಟೊಂದು ಆರಾಮದಾಯಕವಾಗಿ ಇರುವಂತೆ ಕಂಡಿಲ್ಲ. ಇದು ತಂಡದಲ್ಲಿ ಆತಂಕವನ್ನು ಉಂಟು ಮಾಡಿದೆ.

AFG vs SA: ಅಫ್ಘಾನಿಸ್ತಾನ ಎದುರು ಎರಡನೇ ಸೂಪರ್‌ ಓವರ್‌ ಥ್ರಿಲ್ಲರ್‌ ಗೆದ್ದ ದಕ್ಷಿಣ ಆಫ್ರಿಕಾ!

ಅಭಿಷೇಕ್ ಶರ್ಮಾ ಲಭ್ಯತೆ ಬಗ್ಗೆ ಅನಿಶ್ಚಿತತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಗುರುವಾರದ ಪಂದ್ಯಕ್ಕೆ ಇಶಾನ್ ಕಿಶನ್ ಫಿಟ್ ಆಗಿರಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಭಾರತ ತಂಡ ಇದೆ. ಸನ್‌ರೈಸರ್ಸ್ ಹೈದರಾಬಾದ್‌ನ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಹೊಟ್ಟೆ ಸಂಬಂಧಿತ ಅಸ್ವಸ್ಥತೆಗೆ ಚಿಕಿತ್ಸೆ ಪಡೆದ ಬಳಿಕ ಬುಧವಾರ ದೆಹಲಿಯ ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಈ ಅಸ್ವಸ್ಥತೆಯ ಕಾರಣದಿಂದ ಅವರು ಮಂಗಳವಾರ ಮತ್ತು ಬುಧವಾರ ಅರುಣ್ ಜೈಟ್ಲಿ ಸ್ಟೇಡಿಯಂನಲ್ಲಿ ನಡೆದ ಭಾರತದ ತರಬೇತಿ ಅವಧಿಗಳಿಗೆ ಹಾಜರಾಗಲಿಲ್ಲ.

ಇಂದು ಬೆಳಿಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ತಿಲಕ್ ವರ್ಮಾ, ಅಭಿಷೇಕ್ ಈಗ ಉತ್ತಮವಾಗಿದ್ದಾರೆ ಎಂದು ತಿಳಿಸಿದರು. ಆದರೆ ಅವರ ಲಭ್ಯತೆ ಬಗ್ಗೆ ಅಂತಿಮ ನಿರ್ಧಾರವನ್ನು ಪಂದ್ಯ ದಿನವೇ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಭಾರತ ತಂಡ ಅಭಿಷೇಕ್ ಶರ್ಮಾ ಅವರನ್ನು ತ್ವರಿತವಾಗಿ ಅಂತಿಮ XIಗೆ ಸೇರಿಸುವ ಸಾಧ್ಯತೆ ಕಡಿಮೆ. ವಿಶೇಷವಾಗಿ ಭಾನುವಾರ ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಬಹು ನಿರೀಕ್ಷಿತ ಪಂದ್ಯಕ್ಕೆ ತಂಡ ಪ್ರಯಾಣಿಸಬೇಕಿರುವ ಹಿನ್ನೆಲೆಯಲ್ಲಿ, ಟೀಮ್‌ ಮ್ಯಾನೇಜ್‌ಮೆಂಟ್‌ ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬ ಸೂಚನೆಗಳು ವ್ಯಕ್ತವಾಗಿವೆ.

AFG vs SA: ದಕ್ಷಿಣ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ ಸೋಲಿಗೆ ಇವರೇ ಕಾರಣ ಎಂದ ರಶೀದ್‌ ಖಾನ್!

ವರದಿಗಳ ಪ್ರಕಾರ, ಅಸ್ವಸ್ಥರಾಗಿದ್ದರೂ ಫೆಬ್ರವರಿ 7ರಂದು ಮುಂಬೈನಲ್ಲಿ ನಡೆದ ಯುಎಸ್ಎ ವಿರುದ್ಧದ ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಭಾರತ ಪರ ಆಡಿದ್ದರು. ವಿಶ್ವ ನಂ.1 ಟಿ20ಐ ಆರಂಭಿಕ ಬ್ಯಾಟರ್ ಆಗಿರುವ ಅವರು ಎರಡನೇ ಎಸೆತಕ್ಕೆ ಔಟ್ ಆಗಿ ಶೂನ್ಯಕ್ಕೆ ಪೆವಿಲಿಯನ್‌ಗೆ ಮರಳಿದ್ದರು. ನಂತರ ಯುಎಸ್ಎ ತಂಡದ ಇನಿಂಗ್ಸ್‌ನಲ್ಲಿ ಅವರು ಮೈದಾನಕ್ಕೆ ಇಳಿದಿರಲಿಲ್ಲ.

ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಆಸ್ಪತ್ರೆಗೆ ದಾಖಲಾದ ಅಭಿಷೇಕ್ ಶರ್ಮಾ

ಇಶಾನ್‌ ಕಿಶನ್‌ ಜೊತೆ ಸಂಜು ಓಪನರ್‌

ಇಶಾನ್ ಕಿಶನ್‌ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಘೋಷಿಸಿದರೆ, ಭಾರತ ತಂಡ, ನಮೀಬಿಯಾ ವಿರುದ್ಧ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರೊಂದಿಗೆ ಆರಂಭಿಕರಾಗಿ ಆಡಿಸುವ ಸಾಧ್ಯತೆಯಿದೆ. ಆರಂಭಿಕ ಸ್ಥಾನಕ್ಕೆ ಮರಳಿದಾಗಿನಿಂದ ತನ್ನಿಂದ ದೂರವಾಗಿರುವ ಫಾರ್ಮ್ ಅನ್ನು ಮತ್ತೆ ಕಂಡುಕೊಳ್ಳುವ ಆಶಯದೊಂದಿಗೆ ಸ್ಯಾಮ್ಸನ್ ದೆಹಲಿಯಲ್ಲಿ ಎರಡೂ ದಿನಗಳಲ್ಲಿ ನೆಟ್‌ ಫ್ರಾಕ್ಟೀಸ್‌ಗೆ ಹಾಜರಾಗಿದ್ದರು. ಯುಎಸ್‌ಎ ವಿರುದ್ಧದ ಪ್ಲೇಯಿಂಗ್‌ XIನಿಂದ ಅವರನ್ನು ಹೊರಗಿಡಲಾಯಿತು, ಫಾರ್ಮ್‌ನಲ್ಲಿರುವ ಇಶಾನ್‌ಗೆ ಆದ್ಯತೆ ನೀಡಲಾಯಿತು.