ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nigar Sultana: ಕಿರಿಯ ಆಟಗಾರ್ತಿಗೆ ದೈಹಿಕ ಕಿರುಕುಳ: ಬಾಂಗ್ಲಾದೇಶ ಮಹಿಳಾ ತಂಡದ ನಾಯಕಿ ಮೇಲೆ ಗಂಭೀರ ಆರೋಪ!

ಬಾಂಗ್ಲಾದೇಶ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ನಿಗರ್‌ ಸುಲ್ತಾನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ವೇಳೆ ನಿಗರ್‌ ಸುಲ್ತಾನ ಅವರು ತಮ್ಮ ಕಿರಿಯ ಆಟಗಾರ್ತಿಯರ ಮೇಲೆ ದೈಹಿಕ ಕಿರುಕುಳ ನೀಡಿದ್ದಾರೆಂದು ಹೇಳಲಾಗುತ್ತಿದೆ. ಈ ಬಗ್ಗೆ ಬಾಂಗ್ಲಾ ಮಾಜಿ ಆಟಗಾರ್ತಿ ಜಹನರ ಅಲಾಮ್‌ ಆರೋಪ ಮಾಡಿದ್ದಾರೆ.

ಬಾಂಗ್ಲಾದೇಶ ಮಹಿಳಾ ತಂಡದ ಕಿರಿಯ ಆಟಗಾರ್ತಿಗೆ ದೈಹಿಕ ಕಿರುಕುಳ!

ಬಾಂಗ್ಲಾ ಮಹಿಲಾ ತಂಡದ ನಾಯಕಿ ನಿಗರ್‌ ಸುಲ್ತಾನ ವಿರುದ್ಧ ಗಂಭೀರ ಆರೋಪ. -

Profile Ramesh Kote Nov 5, 2025 4:10 PM

ನವದೆಹಲಿ: ಬಾಂಗ್ಲಾದೇಶ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ನಿಗರ್‌ ಸುಲ್ತಾನ (Nigar Sultana) ಅವರ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಮುಕ್ತಾಯವಾಗಿದ್ದ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ (Women's World Cup) ವೇಳೆ ಬಾಂಗ್ಲಾ ನಾಯಕಿ, ತಮ್ಮ ತಂಡದ ಕಿರಿಯ ಆಟಗಾರ್ತಿಯರಿಗೆ ದೈಹಿಕ ಕಿರುಕುಳ ನೀಡಿದ್ದಾರೆಂದು ಬಾಂಗ್ಲಾ ಮಾಜಿ ಆಟಗಾರ್ತಿ ಜಹನರ ಆಲಾಮ್‌ (Jahanara Alam) ಆರೋಪಿಸಿದ್ದಾರೆ. ಈ ಗಂಭೀರ ಆರೋಪಕ್ಕೆ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಕೂಡ ಪ್ರತಿಕ್ರಿಯೆ ನೀಡಿದೆ. ಅಂದ ಹಾಗೆ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ್ದ 7 ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಪಡೆದಿದ್ದ ಬಾಂಗ್ಲಾದೇಶ ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿತ್ತು.

ಬಾಂಗ್ಲಾದೇಶದ ಕಾಲರ್‌ ಕಾಂಥೋ ಪತ್ರಿಕೆ ಸಂದರ್ಶನದಲ್ಲಿ ಬಾಂಗ್ಲಾ ಮಾಜಿ ಆಟಗಾರ್ತಿ ಜಹನರ ಆಲಾಮ್‌ ಮಾತನಾಡಿ, ನಾಯಕಿ ನಿಗರ್‌ ಸುಲ್ತಾನ ಅವರಿಗೆ ಕಿರಿಯ ಆಟಗಾರ್ತಿಯರಿಗೆ ದೈಹಿಕ ಕಿರುಕುಳ ನೀಡುವ ಹವ್ಯಾಸವಿದೆ. ಅದರಂತೆ ಇತ್ತೀಚೆಗೆ ಮುಕ್ತಾಯವಾಗಿದ್ದ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ವೇಳೆಯೂ ಅವರು ಈ ರೀತಿ ನಡದುಕೊಂಡಿದ್ದಾರೆಂದು ಮಾಜಿ ಆಟಗಾರ್ತಿ ದೂರಿದ್ದಾರೆ.

ಚೊಚ್ಚಲ ಮಹಿಳಾ ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಸಿಕ್ಕ ನಗದು ಬಹುಮಾನದ ವಿವರ!

"ಇದು ಏನು ಹೊಸತಲ್ಲ. ನಿಗರ್‌ ಸುಲ್ತಾನ ಅವರು ಕಿರಿಯ ಆಟಗಾರ್ತಿಯರನ್ನು ಹೊಡಯುತ್ತಾರೆ. ಈ ವಿಶ್ವಕಪ್‌ ಟೂರ್ನಿಯ ಸಂದರ್ಭದಲ್ಲಿಯೂ ಅವರು ಈ ರೀತಿ ಮಾಡಿದ್ದಾರೆಂದು ಕಿರಿಯರು ನನ್ನ ಬಳಿ ಹೇಳಿಕೊಂಡಿದ್ದಾರೆ. ʻಇನ್ನು ಮುಂದೆ ನಾನು ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಹೇಳತ್ತಾರೆ, ಆದರೆ ಮತ್ತೆ ಇದೇ ರೀತಿ ಮಾಡಿದರೆ, ಹೊಡೆಯುತ್ತೇನೆ,ʼ ಎಂದಿದ್ದರು. ʻನಾನು ನಿನ್ನೆ ಹೊಡೆಸಿಕೊಂಡಿದ್ದೇನೆಂದುʼ ಕಿರಿಯ ಆಟಗಾರ್ತಿಯೊಬ್ಬರು ಹೇಳುವುದನ್ನು ಕೇಳಿದ್ದೇನೆ. ದುಬೈ ಪ್ರವಾಸದ ವೇಳೆಯೂ ಇದು ನಡೆದಿತ್ತು. ಅವರು ತಮ್ಮ ಕೊಠಡಿಗೆ ಕಿರಿಯ ಆಟಗಾರ್ತಿಯರನ್ನು ಕರೆದು ಹೊಡೆಯುತ್ತಿದ್ದರು," ಎಂದು ಅಲಾಮ್‌ ಆರೋಪ ಮಾಡಿದ್ದಾರೆ.

ಬಾಂಗ್ಲಾ ಕ್ರಿಕೆಟ್‌ ತಂಡದಲ್ಲಿ ರಾಜಕೀಯ

ಬಾಂಗ್ಲಾದೇಶ ಕ್ರಿಕೆಟ್‌ ತಂಡದಲ್ಲಿ ತುಂಬಾ ರಾಜಕೀಯ ನಡೆಯುತ್ತಿದೆ ಎಂದು ಜಹನರ ಅಲಾಮ್‌ ಆರೋಪ ಮಾಡಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಕೆಲ ಆಟಗಾರ್ತಿಯರಿಗೆ ಮಾತ್ರ ಉತ್ತಮ ಸೌಲಭ್ಯ ಸಿಗುತ್ತಿದೆ, ಇನ್ನುಳಿದ ಆಟಗಾರ್ತಿಯರಿಗೆ ಸಿಗುತ್ತಿಲ್ಲ. ಹಿರಿಯ ಆಟಗಾರ್ತಿಯರನ್ನು ತಂಡದಿಂದ ಎಲಿಮಿನೇಟ್‌ ಮಾಡುವ ಪ್ರಕ್ರಿಯೆಯು ಕೋವಿಡ್‌ ಸಮಯದಲ್ಲಿ ಆರಂಭವಾಗಿತ್ತು.

women's World Cup: ಮಹಿಳಾ ವಿಶ್ವಕಪ್‌ನಲ್ಲಿ ಒಂದೂ ಜಯ ಕಾಣದ ಪಾಕ್‌; ಕೋಚ್ ವಜಾಗೊಳಿಸಲು ನಖ್ವಿ ನಿರ್ಧಾರ

"ವಾಸ್ತವ ಏನೆಂದರೆ ನಾನು ಒಬ್ಬಂಟಿಯಲ್ಲ, ಬಾಂಗ್ಲಾದೇಶ ತಂಡದಲ್ಲಿರುವ ಎಲ್ಲರೂ ಹೆಚ್ಚು ಕಡಿಮೆ ಬಲಿಪಶುಗಳೇ. ಪ್ರತಿಯೊಬ್ಬರ ನೋವು ವಿಭಿನ್ನವಾಗಿರುತ್ತದೆ. ಇಲ್ಲಿ, ಒಬ್ಬರು ಅಥವಾ ಇಬ್ಬರು ಜನರಿಗೆ ಸುಧಾರಿತ ಸೌಲಭ್ಯಗಳು ಸಿಗುತ್ತವೆ ಮತ್ತು ಕೆಲವು ಸಂದರ್ಭಗಳಲ್ಲಿ, ಒಬ್ಬ ವ್ಯಕ್ತಿ ಮಾತ್ರ ಅವುಗಳನ್ನು ಪಡೆಯುತ್ತಾನೆ. 2021ರಲ್ಲಿ ಕೋವಿಡ್ ನಂತರದ ಕ್ಯಾಂಪ್‌ನಿಂದ ನನ್ನಂತಹ ಹಿರಿಯರನ್ನು ಮತ್ತು ಇತರ ಕೆಲವರನ್ನು ತೆಗೆದುಹಾಕುವ ಪ್ರಕ್ರಿಯೆ ಪ್ರಾರಂಭವಾಯಿತು. ನಂತರ ಬಾಂಗ್ಲಾದೇಶ ಕ್ರೀಡಾಕೂಟದ ಮೂರು ತಂಡಗಳಲ್ಲಿ ಒಂದಕ್ಕೆ ನನ್ನನ್ನು ನಾಯಕಿಯನ್ನಾಗಿ ಮಾಡಲಾಯಿತು. ಇತರ ಎರಡು ತಂಡಗಳ ನಾಯಕಿಯರು ನಿಗರ್ ಸುಲ್ತಾನ ಮತ್ತು ಶರ್ಮಿನ್ ಸುಲ್ತಾನ. ಅಂದಿನಿಂದ ಹಿರಿಯರ ಮೇಲಿನ ಒತ್ತಡ ಪ್ರಾರಂಭವಾಯಿತು," ಎಂದು ಆಲಮ್‌ ಆರೋಪ ಮಾಡಿದ್ದಾರೆ.

ಆರೋಪಗಳನ್ನು ತಳ್ಳಿ ಹಾಕಿದ ಬಾಂಗ್ಲಾ ಕ್ರಿಕೆಟ್‌ ಮಂಡಳಿ

"ಬಾಂಗ್ಲಾದೇಶ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ಸದಸ್ಯೆಯೊಬ್ಬರು ಇತ್ತೀಚೆಗೆ ಮಾಧ್ಯಮಗಳಲ್ಲಿ ಮಾಡಿದ ಹೇಳಿಕೆಗಳನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಗಮನಿಸಿದೆ, ಇದರಲ್ಲಿ ಅವರು ಪ್ರಸ್ತುತ ರಾಷ್ಟ್ರೀಯ ತಂಡದ ನಾಯಕಿ, ಆಟಗಾರ್ತಿಯರ, ಸಿಬ್ಬಂದಿ ಮತ್ತು ತಂಡದ ನಿರ್ವಹಣೆಯ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ," ಎಂದು ಹೇಳಿಕೆಯಲ್ಲಿ ತಿಳಿಸಿದೆ.

"ಈ ಆರೋಪಗಳನ್ನು ಬಿಸಿಬಿ ಸ್ಪಷ್ಟವಾಗಿ ಮತ್ತು ಬಲವಾಗಿ ನಿರಾಕರಿಸುತ್ತದೆ, ಇವು ಆಧಾರರಹಿತ, ಕಟ್ಟುಕಥೆ ಮತ್ತು ಯಾವುದೇ ಸತ್ಯದಿಂದ ಮುಕ್ತವಾಗಿವೆ. ಬಾಂಗ್ಲಾದೇಶ ಮಹಿಳಾ ತಂಡ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಶ್ಲಾಘನೀಯ ಪ್ರಗತಿ ಮತ್ತು ಏಕತೆಯನ್ನು ತೋರಿಸುತ್ತಿರುವ ಸಮಯದಲ್ಲಿ ಇಂತಹ ಅವಹೇಳನಕಾರಿ ಮತ್ತು ಹಗರಣದ ಹೇಳಿಕೆಗಳನ್ನು ನೀಡಿರುವುದು ದುರದೃಷ್ಟಕರ ಎಂದು ಮಂಡಳಿ ಕಂಡುಕೊಂಡಿದೆ," ಎಂದು ತಿಳಿಸಿದೆ.