IND vs NZ: ವಾಷಿಂಗ್ಟನ್ ಸುಂದರ್ ಔಟ್, ಭಾರತ ಟಿ20ಐ ತಂಡಕ್ಕೆ ಮರಳಿದ ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್!
India's T20I Squad: ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯಿಂದ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಹೊರಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ದೀರ್ಘಾವಧಿ ಬಳಿಕ ಭಾರತ ಟಿ20ಐ ತಂಡಕ್ಕೆ ಶ್ರೇಯಸ್ ಅಯ್ಯರ್ ಹಾಗೂ ಸ್ಪಿನ್ನರ್ ರವಿ ಬಿಷ್ಣೋಯ್ ಮರಳಿದ್ದಾರೆ. ಈ ಬಗ್ಗೆ ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಭಾರತ ಟಿ20ಐ ತಂಡಕ್ಕೆ ಮರಳಿದ ಶ್ರೇಯಸ್ ಅಯ್ಯರ್. -
ನವದೆಹಲಿ: ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್ (ICC T20I World Cup 2026) ಟೂರ್ನಿಯ ನಿಮಿತ್ತ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ (Shreyas Iyer) ಅವರು ಭಾರತ ಟಿ20ಐ (India's T20I Squad) ತಂಡಕ್ಕೆ ಮರಳಿದ್ದಾರೆ. ಜನವರಿ 16 ರಂದು ಶುಕ್ರವಾರ ಬಿಸಿಸಿಐ, ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ ಭಾರತ ಟಿ20ಐ ತಂಡದಲ್ಲಿ ಕೆಲ ಬದಲಾವಣೆಯನ್ನು ಮಾಡಿದೆ. ಗಾಯದ ಕಾರಣ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರು ಟಿ20ಐ ಸರಣಿಯಿಂದ ಹೊರಬಿದ್ದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಸೈಡ್ ಸ್ಟ್ರೇನ್ ಗಾಯಕ್ಕೆ ತುತ್ತಾಗಿದ್ದರು ಹಾಗೂ ಏಕದಿನ ಸರಣಿಯ ಇನ್ನುಳಿದ ಭಾಗದಿಂದ ಹೊರ ನಡೆದಿದ್ದರು.
2023ರ ಬಳಿಕ ಶ್ರೇಯಸ್ ಅಯ್ಯರ್ ಇದೇ ಮೊದಲ ಬಾರಿ ಭಾರತ ಟಿ20ಐ ತಂಡಕ್ಕೆ ಮರಳಿದ್ದಾರೆ. 2024ರ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಶ್ರೇಯಸ್ ಅವರನ್ನು ಬಿಸಿಸಿಐ ಚುಟುಕು ತಂಡದಿಂದ ಕೈ ಬಿಟ್ಟಿತ್ತು. ಅಂದಿನಿಂದಲೂ ಇವರು ಟಿ20 ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡಿಕೊಂಡು ಬಂದಿದ್ದಾರೆ. ಶ್ರೇಯಸ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ 2024ರಲ್ಲಿ ಚಾಂಪಿಯನ್ ಆಗಿತ್ತು. 2025ರ ಟೂರ್ನಿಯಲ್ಲಿ ಇವರ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ಫೈನಲ್‌ಗೆ ಪ್ರವೇಶ ಮಾಡಿತ್ತು. ಈ ಸೀಸನ್‌ನಲ್ಲಿ ಅವರು 175ರ ಸ್ಟ್ರೈಕ್ ರೇಟ್‌ನಲ್ಲಿ 604 ರನ್‌ಗಳನ್ನು ಬಾರಿಸಿದ್ದರು.
ಸಿಂಗಲ್ ರನ್ ಪಡೆಯಲು ನಿರಾಕರಿಸಿದ ಸ್ಟೀವನ್ ಸ್ಮಿತ್: ಬಿಗ್‌ಬ್ಯಾಷ್ ಲೀಗ್‌ನಲ್ಲಿ ಬಾಬರ್ ಆಝಮ್‌ಗೆ ಅವಮಾನ!
ತಿಲಕ್ ವರ್ಮಾ ಸ್ಥಾನಕ್ಕೆ ಶ್ರೇಯಸ್, ವಾಷಿಂಗ್ಟನ್ ಸುಂದರ್ ಸ್ಥಾನಕ್ಕೆ ರವಿ ಬಿಷ್ಣೋಯ್
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ತಿಲಕ್ ವರ್ಮಾ ಅವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಕಿವೀಸ್ ಎದುರಿನ ಟಿ20ಐ ಸರಣಿಯ ಆರಂಭಿಕ ಮೂರು ಪಂದ್ಯಗಳಿಗೆ ಆರಿಸಲಾಗಿದೆ. ವಾಷಿಂಗ್ಟನ್ ಸುಂದರ್ ಅವರ ಸ್ಥಾನಕ್ಕೆ ರವಿ ಬಿಷ್ಣೋಯ್ ಅವರನ್ನು ಸೇರಿಸಲಾಗಿದೆ. ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
🚨 News 🚨
— BCCI (@BCCI) January 16, 2026
Shreyas Iyer & Ravi Bishnoi added to #TeamIndia T20I squad; Washington Sundar ruled out.
Details ▶️ https://t.co/cNWHX9TOVk#INDvNZ | @IDFCFIRSTBank
ವಾಷಿಂಗ್ಟನ್ ಸುಂದರ್‌ಗೆ ಏನಾಯ್ತು?
ಜನವರಿ 11 ರಂದು ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬೌಲ್ ಮಾಡುವಾಗ ವಾಷಿಂಗ್ಟನ್ ಸುಂದರ್ ಅವರ ಕೆಳ ಪಕ್ಕೆಲುಬಿನಲ್ಲಿ ತೀವ್ರವಾದ ಅಸ್ವಸ್ಥತೆ ಕಂಡುಬಂದ ನಂತರ ಸ್ಕ್ಯಾನ್‌ಗೆ ಒಳಗಾದರು. ಇದರ ನಂತರ ತಜ್ಞರೊಂದಿಗೆ ವೈಯಕ್ತಿಕ ಸಮಾಲೋಚನೆ ನಡೆಸಲಾಯಿತು. ಅವರಿಗೆ ಪಾರ್ಶ್ವ ನೋವು ಇರುವುದು ಪತ್ತೆಯಾಗಿದ್ದು, ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ, ನಂತರ ಅವರ ಗಾಯದ ಹೆಚ್ಚಿನ ನಿರ್ವಹಣೆಗಾಗಿ ಅವರು ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ)ಗೆ ವರದಿ ಮಾಡಲಿದ್ದಾರೆ.
IND vs NZ: ʻನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ನೀಡಿʼ-ರಯಾನ್ ಟೆನ್ ಡಶಾಟ್‌ಗೆ ತಿರುಗೇಟು!
ಈ ಹಿನ್ನೆಲೆಯಲ್ಲಿ ಸ್ಪಿನ್ ಆಲ್‌ರೌಂಡರ್ ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯಿಂದ ಹೊರ ನಡೆದಿದ್ದಾರೆ. ಇವರ ಸ್ಥಾನಕ್ಕೆ ರವಿ ಬಿಷ್ಣೋಯ್ ಅವರನ್ನು ಆಯ್ಕೆ ಮಾಡಲಾಗಿದೆ. ತಿಲಕ್ ವರ್ಮಾ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಬಂದಿದ್ದಾರೆಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನ್ಯೂಜಿಲೆಂಡ್ ವಿರುದ್ದದ ಟಿ20ಐ ಸರಣಿಗೆ ಪರಿಷ್ಕೃತ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ಮೊದಲ ಮೂರು ಟಿ20ಐ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪ ನಾಯಕ), ರಿಂಕು ಸಿಂಗ್, ಜಸ್‌ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲ್‌ದೀಪ್ ಯಾದವ್, ವರುಣ್ ಚಕ್ರವರ್ತಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿ ಬಿಷ್ಣೋಯ್