ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್, ಬಿಬಿಎಲ್‌ನಲ್ಲಿ 41 ಎಸೆತಗಳಲ್ಲಿ ಶತಕ ಚಚ್ಚಿದ ಸ್ಟೀವನ್ ಸ್ಮಿತ್!
ಸ್ಟೀವನ್ ಸ್ಮಿತ್ ಅವರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು. ಆದರ, ಪ್ರಸ್ತುತ ನಡೆಯುತ್ತಿರುವ 2026ರ ಬಿಗ್‌ಬ್ಯಾಷ್ ಲೀಗ್ ಟೂರ್ನಿಯಲ್ಲಿ ಮಿಂಚುತ್ತಿದ್ದಾರೆ. ಅವರು ಸಿಡ್ನಿ ಥಂಡರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 41 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದಾರೆ.
ಬಿಗ್‌ಬ್ಯಾಷ್ ಲೀಗ್ ಪಂದ್ಯದಲ್ಲಿ ಸ್ಪೋಟಕ ಶತಕ ಬಾರಿಸಿದ ಸ್ಟೀವನ್ ಸ್ಮಿತ್. -
ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದಿದ್ದ ಸಿಡ್ನಿ ಥಂಡರ್ಸ್ ವಿರುದ್ಧದ ಬಿಗ್‌ಬ್ಯಾಷ್ ಲೀಗ್ (BigBash League) ಟೂರ್ನಿಯ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ (SYdney Sixers) ತಂಡದ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ (Steven Smith) ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಆ ಮೂಲಕ ಕೇವಲ 41 ಎಸೆತಗಳಲ್ಲಿಯೇ ಭರ್ಜರಿ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಸ್ಮಿತ್, ಇದೀಗ ಐಪಿಎಲ್ ಫ್ರಾಂಚೈಸಿಗಳಿಗೆ ತಿರುಗೇಟು ನೀಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಅವರು ರಯಾನ್ ಹ್ಯಾಡ್ಲಿ ಅವರ ಒಂದು ಓವರ್‌ಗೆ 32 ರನ್‌ಗಳನ್ನು ಚಚ್ಚಿದ್ದರು. ಈ ಓವರ್‌ನಲ್ಲಿ ಅವರು ನಾಲ್ಕು ಸತತ ಸಿಕ್ಸರ್‌ಗಳನ್ನು ಬಾರಿಸಿದ್ದು ವಿಶೇಷ. ಇದು ಬಿಬಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಓವರ್ ಆಗಿದೆ.
"ಹೌದು, ನಾವು 10 ಓವರ್‌ಗಳ ಅಂಕದಲ್ಲಿ ಮಾತನಾಡಿದಾಗ ಅವರು, ಸರ್ಜ್ ಅನ್ನು ತಕ್ಷಣ ತೆಗೆದುಕೊಳ್ಳಿ ಎಂದು ಹೇಳಿದರು. ನಾನು, ಇಲ್ಲ, ಒಂದು ಓವರ್ ನೀಡಿ ಎಂದು ಹೇಳಿದೆ. ನಾನು ಶಾರ್ಟ್ ಬೌಂಡರಿಗೆ ಹೊಡೆಯಲು ಬಯಸುತ್ತೇನೆ ಮತ್ತು ಮೊದಲ ಓವರ್ ಅನ್ನು ಹಾಳು ಮಾಡಲು ನಾನು ಬಯಸುವುದಿಲ್ಲ. ಆ ಓವರ್‌ನಲ್ಲಿ 30 ರನ್ ಗಳಿಸಲು ಪ್ರಯತ್ನಿಸಿದೆ. ನಾವು 32 ರನ್ ಗಳಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಇದು ಉತ್ತಮ ಫಲಿತಾಂಶವಾಗಿದೆ," ಎಂದು ಸ್ಮಿತ್ 32 ರನ್ ಓವರ್‌ನಲ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿಯನ್ನು ಹೊರಗಿಟ್ಟು ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಪ್ಲೇಯಿಂಗ್ XI ಕಟ್ಟಿದ ಜಿತೇಶ್ ಶರ್ಮಾ!
ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಸ್ಟೀವನ್ ಸ್ಮಿತ್ ಅವರು ಕೇವಲ 41 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಬಿಬಿಎಲ್ ಟೂರ್ನಯ ಇತಿಹಾಸದಲ್ಲಿಯೇ ಎರಡನೇ ಅತ್ಯಂತ ವೇಗದ ಶತಕ ಬಾರಿಸಿದ ಜಂಟಿ ದಾಖಲೆಯನ್ನು ಬರೆದರು. ಗ್ಲೆನ್ ಮ್ಯಾಕ್ಸ್‌ವೆಲ್ ಹಗೂ ಜಾಶ್ ಬ್ರೌನ್ ಅವರ ಜೊತೆಗೆ ಇದೀಗ ಸ್ಮಿತ್ ಸೇರ್ಪಡೆಯಾಗಿದ್ದಾರೆ.
ಡೇವಿಡ್ ವಾರ್ನರ್ ದಾಖಲೆ ಮುರಿದ ಸ್ಮಿತ್
ಬಿಗ್‌ಬ್ಯಾಷ್ ಲೀಗ್ ಟೂರ್ನಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಅವರನ್ನು ಸ್ಟೀವನ್ ಸ್ಮಿತ್ ಮುರಿದಿದ್ದಾರೆ. ಇದಕ್ಕೂ ಮುನ್ನ ಮೂರು ಸಿಕ್ಸರ್ ಬಾರಿಸುವ ಮೂಲಕ ವಾರ್ನರ್, ಸ್ಮಿತ್ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಸ್ಟೀವನ್ ಸ್ಮಿತ್ ನಾಲ್ಕು ಶತಕಗಳ ಮೂಲಕ ವಾರ್ನರ್ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ್ದಾರೆ.
Steven Smith in last four seasons in BBL:
— Peeyush Sharma (@peeyushsharmaa) January 16, 2026
Innings: 11
Hundreds: 4
Fifties: 3
Average of 87, SR of 177
pic.twitter.com/SvB12kSSQY#BBL15
ಬಿಬಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳು
ಸ್ಟೀವನ್ ಸ್ಮಿತ್: 04 ಶತಕಗಳು
ಡೇವಿಡ್ ವಾರ್ನರ್: 03
ಬೆನ್ ಮೆಕ್ಡರ್ಮಟ್: 03
ಥಂಡರ್ಸ್ ವಿರುದ್ಧ ಸಿಕ್ಸರ್‌ಗೆ ಜಯ
ಸ್ಟೀವನ್ ಸ್ಮಿತ್ ಶತಕದ ಬಲದಿಂದ ಸಿಡ್ನಿ ಸಿಕ್ಸರ್ ತಂಡ, ಎದುರಾಳಿ ಸಿಡ್ನಿ ಥಂಡರ್ಸ್ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದು ಬೀಗಿತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಬಾಬರ್ ಆಝಮ್ ಅವರು 47 ರನ್‌ಗಳನ್ನು ಬಾರಿಸಿದ್ದರು. ಅದರೂ ಇವರ ಸ್ಟ್ರೈಕ್ ರೇಟ್ ಬಗ್ಗೆ ಪ್ರಶ್ನೆಗಳು ಎದುರಾಗಿವೆ.
STEVE SMITH DENIED THE SINGLE IN THE FINAL BALL To Babar Azam.
— AVIKASH yadav (@YadavAvikash) January 16, 2026
- Took the Power Surge.
SMITH SMASHED 6,6,6,6 - AURA. 🥶🔥 pic.twitter.com/TF5FvlUHGd
ಸ್ಮಿತ್ ಮತ್ತು ಆಝಮ್ ಅವರು 141 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಈ ಟೂರ್ನಿಯಲ್ಲಿ ಮೊದಲನೇ ವಿಕೆಟ್‌ಗೆ ದಾಖಲಾದ ಅತ್ಯಂತ ಗರಿಷ್ಠ ಮೊತ್ತ ಇದಾಗಿದೆ. ಈ ಹಿಂದೆ ಮೈಕಲ್ ಲಂಬ್ ಹಾಗೂ ಬ್ರಾಡ್ ಹೆಡ್ಡಿನ್ ಜೋಡಿ 124 ರನ್‌ಗಳ ಜೊತೆಯಾಟವನ್ನು ಆಡಿತ್ತು.