ನಕಲಿ ಜನನ ಪ್ರಮಾಣ ಪತ್ರ: ಭಾರತ ಅಂಡರ್-19 ತಂಡದ ರೋಹಿತ್ ಯಾದವ್‌ಗೆ 2 ವರ್ಷ ನಿಷೇಧ!
ವಯಸ್ಸಿನ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದ ಕಾರಣ ಭಾರತ ಅಂಡರ್-19 ತಂಡದ ಆಟಗಾರ ರೋಹಿತ್ ಯಾದವ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಎರಡು ವರ್ಷಗಳ ಕಾಲ ನಿಷೇಧ ಹೇರಿದೆ. ರೋಹಿತ್ ಯಾದವ್ ಅವರ ಜತೆಗೆ ಇತರೆ 64 ಮಂದಿ ಆಟಗಾರರ ಮೇಲೆಯೂ ನಿಷೇಧವನ್ನು ಹೇರಿದೆ.
ರೋಹಿತ್ ಯಾದವ್‌ಗೆ ಎರಡು ವರ್ಷ ನಿಷೇಧ. -
ನವದೆಹಲಿ: ವಯಸ್ಸಿನ ಬಗ್ಗೆ ಸುಳ್ಳು ದಾಖಲೆ ನೀಡಿದ್ದ ಭಾರತ ಅಂಡರ್-19 ತಂಡದ ಲೆಗ್ ಸ್ಪಿನ್ನರ್ ರೋಹಿತ್ ಯಾದವ್ (Rohit Yadav) ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಎರಡು ವರ್ಷಗಳ ಕಾರಣ ನಿಷೇಧ ಶಿಕ್ಷೆಯನ್ನು ವಿಧಿಸಿದೆ. ಕಳೆದ ಜುಲೈ ತಿಂಗಳಲ್ಲಿ ಭಾರತ ಅಂಡರ್-19 ತಂಡದ ಜೊತೆಗೆ ರೋಹಿತ್ ಯಾದವ್ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದ್ದರು. ಇತ್ತೀಚೆಗೆ ಬಂಗಾಳ ಕ್ರಿಕೆಟ್ ಸಂಸ್ಥೆ (CAB) ತನ್ನ ಆಟಗಾರರಿಗಾಗಿ ನಡೆಸಿದ್ದ ಪೂರ್ವ-ಋತು ದಾಖಲೆ ಪರಿಶೀಲನಾ ಅಭಿಯಾನದ ವೇಳೆ ವಯಸ್ಸಿನ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಸೆಪ್ಟಂಬರ್ ಅಂತ್ಯದಲ್ಲಿ ಭಾರತ ಅಂಡರ್-19 ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಹಮ್ಮಿಕೊಳ್ಳಲಿದ್ದು, ಇಲ್ಲಿ ಐದು ಪಂದ್ಯಗಳ ಒಡಿಐ ಸರಣಿ ಹಾಗೂ ಮೂರು ರೆಡ್ ಪಂದ್ಯಗಳನ್ನು ಆಡಲಿದೆ. ಇದೀಗ ವಯ್ಸಸಿನ ವಂಚನೆ ಪ್ರಕರಣದಲ್ಲಿ ರೋಹಿತ್ ಯಾದವ್ ಸಿಕ್ಕಿ ಹಾಕಿಕೊಂಡಿದ್ದು, ಅವರು ಆಸ್ಟ್ರೇಲಿಯಾ ಪ್ರವಾಸದಿಂದ ಹೊರ ನಡೆದಿದ್ದಾರೆ.
ದೇಶಿ ಕ್ರಿಕೆಟ್‌ನಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸುವ ರೋಹಿತ್ ಯಾದವ್, ತಮ್ಮ ಮಂಡಳಿಗೆ 27 ತಿಂಗಳ ವಯಸ್ಸು ಕಡಿಮೆ ನೀಡಿದ್ದರು. ಇದೀಗ ತಕ್ಷಣ ಜಾರಿಗೆ ಬರುವಂತೆ ಅವರು ಎರಡು ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಬಿಸಿಸಿಐ ಕೂಡ ಎಲ್ಲಾ ರಾಜ್ಯ ಕ್ರಿಕೆಟ್ ಮಂಡಳಿಗಳಿಗೆ ಸೂಚನೆಯನ್ನು ನೀಡಿದೆ.
ದೀಪ್ತಿ ಶರ್ಮಾ ದಾಖಲೆ ಹಿಂದಿಕ್ಕಿದ ಶ್ರೀ ಚರಣಿ
ರೋಹಿತ್ ಯಾದವ್ ಅವರ ಜೊತೆಗೆ ಇತರೆ 64 ಮಂದಿ ಆಟಗಾರರು ಕೂಡ ವಯಸ್ಸಿನ ವಂಚನೆ ಪ್ರಕರಣ ಸಂಬಂಧ ನಿಷೇಧ ಶೀಕ್ಷೆಗೆ ಗುರಿಯಾಗಿದ್ದಾರೆ. ಇವರ ಪೈಕಿ ಪ್ರಮುಖ ಹೆಸರು ರವಿ ಕುಮಾರ್. 2022ರ ಅಂಡರ್-19 ವಿಶ್ವಕಪ್ ಗೆದ್ದಿದ್ದ ಭಾರತ ತಂಡದಲ್ಲಿ ಎಡಗೈ ವೇಗದ ಬೌಲರ್ ಆಡಿದ್ದರು. ಅದೇ ವರ್ಷ ರವಿ ಕುಮಾರ್ ಬಂಗಾಳ ಹಿರಿಯರ ತಂಡದ ಪರ ಆಡಿದ್ದರು. ಆದರೆ, ಅವರು 2023ರಲ್ಲಿ ಬಂಗಾಳ ತಂಡವನ್ನು ದೇಶಿ ಕ್ರಿಕೆಟ್‌ನಲ್ಲಿ ಕೊನೆಯ ಬಾರಿ ಪ್ರತಿನಿಧಿಸಿದ್ದಾರೆ.
2025-26ರ ಸೀಸನ್‌ವರೆಗೆ ವಯಸ್ಸಿನ ವಂಚನೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಎಲ್ಲಾ ಆಟಗಾರರ ಕ್ರಿಕೆಟ್ ದಾಖಲೆಗಳು ಹಾಗೂ ಅಂಕಿಅಂಶಗಳನ್ನು ಅನರ್ಹಗೊಳಿಸಲಾಗಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ. ಈ ಎಲ್ಲಾ ಆಟಗಾರರ ವಯಸ್ಸಿನ ಅಂತರ 40 ತಿಂಗಳು ಇದೆ.