ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs ENG: 141 ರನ್‌ ಸಿಡಿಸಿ ವಿವಿಯನ್‌ ರಿಚರ್ಡ್ಸ್‌ರ 47 ವರ್ಷಗಳ ದಾಖಲೆ ಮುರಿದ ಬೆನ್‌ ಡಕೆಟ್‌!

ಭಾರತ ವಿರುದ್ಧದ ಮೂರನೇ ಹಾಗೂ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್‌ ಆರಂಭಿಕ ಬೆನ್‌ ಡಕೆಟ್‌ ಅವರು 141 ರನ್‌ಗಳ ಮೂಲಕ ಭರ್ಜರಿ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಐತಿಹಾಸಿಕ ಲಾರ್ಡ್ಸ್‌ ಅಂಗಣದಲ್ಲಿ ವಿಂಡೀಸ್‌ ದಿಗ್ಗಜ ವಿವಿಯನ್‌ ರಿಚರ್ಡ್ಸ್‌ ಅವರ 47 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

141 ರನ್‌ ಸಿಡಿಸಿ ವಿವಿಯನ್‌ ರಿಚರ್ಡ್ಸ್‌ರ ದಾಖಲೆ ಮುರಿದ ಬೆನ್‌ ಡಕೆಟ್‌!

141 ರನ್‌ ಸಿಡಿಸಿ ವಿವಿಯನ್‌ ರಿಚರ್ಡ್ಸ್‌ ದಾಖಲೆ ಮುರಿದ ಬೆನ್‌ ಡಕೆಟ್‌. -

Profile
Ramesh Kote Jul 19, 2026 9:29 PM

ಲಂಡನ್‌: ಭಾರತ ವಿರುದ್ಧದ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ (IND vs ENG) ಇಂಗ್ಲೆಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಬೆನ್‌ ಡಕೆಟ್‌ (Ben Ducket) ಅವರು ಶತಕವನ್ನು ಬಾರಿಸಿದ್ದಾರೆ. ಅವರು ಆಡಿದ 120 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 18 ಬೌಂಡರಿಗಳೊಂದಿಗೆ 141 ರನ್‌ಗಳನ್ನು ಸಿಡಿಸಿದರು, ಆ ಮೂಲಕ ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಅಂಗಣದಲ್ಲಿ ವೆಸ್ಟ್‌ ಇಂಡೀಸ್‌ ದಿಗ್ಗಜ ವಿವಿಯನ್‌ ರಿಚರ್ಡ್ಸ್‌ ಅವರ 47 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಇಂಗ್ಲೆಂಡ್‌ ತಂಡದ ಎಡಗೈ ಬ್ಯಾಟ್ಸ್‌ಮನ್‌ ಶತಕವನ್ನು ಪೂರ್ಣಗೊಳಿಸಲು 108 ಎಸೆತಗಳನ್ನು ತೆಗೆದುಕೊಂಡಿದ್ದರು. ಇದಾದ ಬಳಿಕ ಅವರು 150 ರ ಸನಿಹ ಸಾಗುತ್ತಿದ್ದ ಹಾದಿಯಲ್ಲಿ ತವರು ಅಭಿಮಾನಿಗಳ ಎದುರು ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ನೂತನ ಮೈಲುಗಲ್ಲು ತಲುಪಿದ್ದಾರೆ. ಆ ಮೂಲಕ ಅಂಗಣದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದಾರೆ. ಆ ಮೂಲಕ ರಿಚರ್ಡ್ಸ್‌ ಅವರನ್ನು ಹಿಂದಿಕ್ಕಿದ್ದಾರೆ.

IND vs ENG: ಲಾರ್ಡ್ಸ್‌ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾ ಏಕೆ ಆಡುತ್ತಿಲ್ಲ? ಕಾರಣ ತಿಳಿಸಿದ ಶುಭಮನ್‌ ಗಿಲ್‌!

ವೆಸ್ಟ್‌ ಇಂಡೀಸ್‌ ಮಾಜಿ ನಾಯಕ ವಿವಿಯನ್‌ ರಿಚರ್ಡ್ಸ್‌ ಅವರು 1979ರ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 138 ರನ್‌ಗಳನ್ನು ಗಳಿಸಿದ್ದರು. ಐದು ದಶಕಗಳ ಕಾಲ ಈ ಅಂಗಣದಲ್ಲಿ ಒಡಿಐ ಕ್ರಿಕೆಟ್‌ನ ವೈಯಕ್ತಿಕ ಗರಿಷ್ಠ ಸ್ಕೋರರ್‌ ಆಗಿ ರಿಚರ್ಡ್ಸ್‌ ಇದ್ದರು. ಪ್ರಿನ್ಸ್‌ ಯಾದವ್‌ಗೆ ಔಟ್‌ ಆಗುವುದಕ್ಕೂ ಮುನ್ನ ಬೆನ್‌ ಡಕೆಟ್‌ ಈ ದಾಖಲೆಯನ್ನು ಬರೆದಿದ್ದರು.

ಲಾರ್ಡ್ಸ್‌ ಅಂಗಣದಲ್ಲಿ ವೈಯಕ್ತಿಕ ಗರಿಷ್ಠ ಒಡಿಐ ಸ್ಕೋರರ್ಸ್‌

141- ಬೆನ್ ಡಕೆಟ್- ಭಾರತ- 2026

138*- ವಿವ್ ರಿಚರ್ಡ್ಸ್- ಇಂಗ್ಲೆಂಡ್- 1979 ವಿಶ್ವಕಪ್ ಫೈನಲ್

137 -ಡೆನಿಸ್ ಅಮಿಸ್- ಭಾರತ- 1975

137- ಮಾರ್ಕಸ್ ಟ್ರೆಸ್ಕೋಥಿಕ್- ಪಾಕಿಸ್ತಾನ 2001

136 -ಗ್ರಹಾಂ ಗೂಚ್- ಆಸ್ಟ್ರೇಲಿಯಾ- 1989



192 ರನ್‌ಗಳ ಜೊತೆಯಾಟ

ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಬೆನ್ ಡಕೆಟ್, ಜೇಕಬ್ ಬೆಥೆಲ್ ಅವರೊಂದಿಗೆ ಮೊದಲ ವಿಕೆಟ್‌ಗೆ 192 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಸರಣಿ ನಿರ್ಣಾಯಕ ಪಂದ್ಯದಲ್ಲಿ ತಂಡಕ್ಕೆ ಬಲಿಷ್ಠ ಅಡಿಪಾಯ ಹಾಕಿದರು. ಶತಕ ಪೂರೈಸಿದ ಬಳಿಕವೂ ಆಕ್ರಮಣಕಾರಿ ಆಟ ಮುಂದುವರಿಸಿದ ಡಕೆಟ್, ಸಾಕಷ್ಟು ಓವರ್‌ಗಳು ಬಾಕಿ ಇರುವಾಗಲೇ ಇಂಗ್ಲೆಂಡ್ ತಂಡವನ್ನು 220 ರನ್‌ಗಳ ಗಡಿ ದಾಟಿಸಿದರು.

ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದ ಪ್ರಮುಖ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರ ಅನುಪಸ್ಥಿತಿ ಭಾರತದ ಬೌಲಿಂಗ್ ದಾಳಿಗೆ ಭಾರಿ ಹಿನ್ನಡೆಯನ್ನು ಅನುಭವಿಸಿತು. ವೇಗಿಗಳು ನಿರಂತರ ಒತ್ತಡ ಹೇರುವಲ್ಲಿ ವಿಫಲರಾದರೆ, ಸ್ಪಿನ್ನರ್‌ಗಳಿಗೂ ಡಕೆಟ್ ಅವರನ್ನು ಔಟ್‌ ಮಾಡಲು ಸಾಧ್ಯವಾಗಲಿಲ್ಲ. ಪರಿಣಾಮ, ಡಕೆಟ್ ನಿರಂತರವಾಗಿ ಬೌಂಡರಿಗಳನ್ನು ಬಾರಿಸುತ್ತಾ ಭಾರತದ ಬೌಲರ್‌ಗಳ ವಿರುದ್ಧ ಮೇಲುಗೈ ಸಾಧಿಸಿದರು. ಅಂತಿಮವಾಗಿ ಇಂಗ್ಲೆಂಡ್‌ ತಂಡ 50 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 387 ರನ್‌ಗಳನ್ನು ಕಲೆ ಹಾಕಿತು.