ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CSK vs KKR: ಸತತ ಐದನೇ ಬಾರಿ ವಿಫಲರಾದ ಋತುರಾಜ್‌ ಗಾಯಕ್ವಾಡ್‌ಗೆ ಸಂಕಷ್ಟ!

CSK vs KKR: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕನಾಗಿ ಆಡುತ್ತಿರುವ ಋತುರಾಜ್‌ ಗಾಯಕ್ವಾಡ್ ಅವರು ಸತತ ಐದನೇ ಬಾರಿ ವೈಫಲ್ಯ ಕಂಡಿದ್ದಾರೆ. ಐದು ಇನಿಂಗ್ಸ್‌ಗಳಲ್ಲಿ ಅವರು ಕೇವಲ 63 ರನ್‌ಗಳನ್ನು ಮಾತ್ರ ಗಳಿಸಿದ್ದು, ಅಗ್ರ ಕ್ರಮಾಂಕದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಆ ಮೂಲಕ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸತತ ಐದನೇ ಬಾರಿ ವಿಫಲರಾದ ಋತುರಾಜ್‌ ಗಾಯಕ್ವಾಡ್‌ಗೆ ಸಂಕಷ್ಟ!

ಸತತ ಐದನೇ ಬಾರಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಋತುರಾಜ್‌ ಗಾಯಕ್ವಾಡ್‌. -

Profile
Ramesh Kote Apr 14, 2026 11:12 PM

ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್‌ (CSK) ನಾಯಕ ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಅವರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಮತ್ತೊಮ್ಮೆ ವಿಫಲರಾಗಿದ್ದಾರೆ. ಈ ಸೀಸನ್‌ನಲ್ಲಿ ಅವರು ಸತತ ಐದನೇ ಬಾರಿ ಕಡಿಮೆ ಸ್ಕೋರ್ ದಾಖಲಿಸಿದ್ದಾರೆ. ಸಿಎಸ್‌ಕೆ ನಾಯಕ ಅಗ್ರ ಕ್ರಮಾಂಕದಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ವಿಫಲರಾಗುತ್ತಿದ್ದಾರೆ ಹಾಗೂ ಇದು ಸಿಎಸ್‌ಕೆ ತಂಡದ ಆತಂಕ್ಕೆ ಕಾರಣವಾಗಿದೆ. ತಂಡದ ಇತರೆ ಬ್ಯಾಟ್ಸ್‌ಮನ್‌ಗಳಿಂದ ಸಮಾಧಾನಕಾರ ಆಟ ಮೂಡಿ ಬರುತ್ತಿದ್ದರೂ ಅಗ್ರ ಕ್ರಮಾಂಕದಲ್ಲಿ ದೊಡ್ಡ ಜೊತೆಯಾಟದ ಕೊರತೆ ಮೂಡಿ ಬರುತ್ತಿಲ್ಲ.

ಋತುರಾಜ್‌ ಗಾಯಕ್ವಾಡ್‌ ಅವರು ಸಂಜು ಸ್ಯಾಮ್ಸನ್‌ ಅವರೊಂದಿಗೆ ಇನಿಂಗ್ಸ್‌ ಆರಂಭಿಸುತ್ತಿದ್ದು, ಐದು ಇನಿಂಗ್ಸ್‌ಗಳಲ್ಲಿ ಕೇವಲ 63 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಇದರೊಂದಿಗೆ ಅವರ ಸರಾಸರಿ 12.6ಕ್ಕೆ ಇಳಿದಿದ್ದು, ತಂಡದಲ್ಲಿನ ಅವರ ಪಾತ್ರ ಹಾಗೂ ಬ್ಯಾಟಿಂಗ್ ವಿಧಾನ ಕುರಿತು ಪ್ರಶ್ನೆಗಳು ಎದುರಾಗಿವೆ.

Blessing Muzarabani: ಕೆಕೆಆರ್‌ ವೇಗಿಗೆ ಎರಡು ವರ್ಷ ಬ್ಯಾನ್‌! ಕಾರಣ ಇಲ್ಲಿದೆ ನೋಡಿ

ಮಂಗಳವಾರ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ನಡುವಿನ ಪಂದ್ಯದಲ್ಲಿ ಋತುರಾಜ್‌ ಗಾಯಕ್ವಾಡ್‌ ಅವರು ಮತ್ತೆ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾಗಿದ್ದು, ಅನುಕುಲ್‌ ರಾಯ್‌ ಅವರ ಬೌಲಿಂಗ್‌ನಲ್ಲಿ ಕೇವಲ ಆರನೇ ಎಸೆತದಲ್ಲಿಯೇ ಸ್ಲಾಗ್ ಸ್ವೀಪ್ ಪ್ರಯತ್ನಿಸಿ ವಿಕೆಟ್ ಒಪ್ಪಿಸಿದರು.

ಗಾಯಕ್ವಾಡ್‌ ವೈಫಲ್ಯದ ಬಗ್ಗೆ ಇರ್ಫಾನ್‌ ಪಠಾಣ್‌ ಪ್ರತಿಕ್ರಿಯೆ

ಋತುರಾಜ್‌ ಗಾಯಕ್ವಾಡ್‌ ಅವರ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಬ್ಯಾಟಿಂಗ್‌ ಕಡೆಗೆ ಗಾಯಕ್ವಾಡ್‌ ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದ್ದಾರೆ.

RCB vs LSG: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಮಯಾಂಕ್‌ ಯಾದವ್‌ ಫಿಟ್‌, ಲಖನೌಗೆ ಸಿಕ್ತು ಆನೆ ಬಲ!

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸಿಎಸ್‌ಕೆ ಗೆಲುವು ಸಾಧಿಸಿದ ಬಳಿಕ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಇರ್ಫಾನ್‌ ಪಠಾಣ್‌, “ಕೊನೆಯ ಪಂದ್ಯದಲ್ಲಿ ಅವರ ಬ್ಯಾಟಿಂಗ್ ಕ್ರಮವನ್ನು ಗಮನಿಸಿದರೆ, ಅವರು 17 ಎಸೆತಗಳನ್ನು ಎದುರಿಸಿದ್ದು, ಅವರ ನಿಐಂತ್ರಣ ಶೇಕಡಾವಾರು ಬಹಳ ಉತ್ತಮವಾಗಿತ್ತು. ಅಂದರೆ ಅವರು ಹೆಚ್ಚಿನ ಅಪಾಯ ತೆಗೆದುಕೊಳ್ಳಲಿಲ್ಲ ಮತ್ತು ಹೆಚ್ಚು ಆಕ್ರಮಣಾತ್ಮಕವಾಗಿ ಆಡಲು ಪ್ರಯತ್ನಿಸಲಿಲ್ಲ,” ಎಂದು ಹೇಳಿದ್ದಾರೆ.

CSK vs DC: ನಾಲ್ಕನೇ ಐಪಿಎಲ್‌ ಸೆಂಚುರಿ ಬಾರಿಸಿ ಮಿಂಚಿದ ಸಂಜು ಸ್ಯಾಮ್ಸನ್‌!

“ಅವರು ತಮ್ಮ ವಿಕೆಟ್ ಕಳೆದುಕೊಳ್ಳಲು ಇಷ್ಟಪಡಲಿಲ್ಲ. ಹಾಗಾದರೆ ಅವರು ಮೂರನೇ ಕ್ರಮಾಂಕದಲ್ಲಿ ಮಾತ್ರ ಬ್ಯಾಟ್‌ ಮಾಡಬೇಕು. ಈ ರೀತಿಯ ವಿಧಾನವನ್ನು ಮುಂದುವರಿಸಬೇಕೆಂದರೆ, ಅವರು ನಂ.3 ಸ್ಥಾನದಲ್ಲಿ ಆಡಬೇಕು. ಆದರೆ ಅವರು ಓಪನರ್ ಆಗಿ ಮುಂದುವರಿಯಬೇಕೆಂದರೆ, ಗಾಯಕ್ವಾಡ್‌ ಆಗಿ ಅವರ ಬ್ಯಾಟಿಂಗ್ ವಿಧಾನವನ್ನು ಬದಲಾಯಿಸಬೇಕು,” ಎಂದು ಇರ್ಫಾನ್‌ ಪಠಾಣ್‌ ಅವರು ಸೇರಿಸಿದರು.