ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Blessing Muzarabani: ಕೆಕೆಆರ್‌ ವೇಗಿಗೆ ಎರಡು ವರ್ಷ ಬ್ಯಾನ್‌! ಕಾರಣ ಇಲ್ಲಿದೆ ನೋಡಿ

ಪಾಕಿಸ್ತಾನ ಸೂಪರ್‌ ಲೀಗ್‌ ತೊರೆದು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಲು ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಸೇರ್ಪಡೆಯಾದ ಜಿಂಬಾಬ್ವೆ ವೇಗದ ಬೌಲರ್‌ ಬ್ಲೆಸಿಂಗ್‌ ಮುಜರಾಬಾನಿಗೆ ಸಂಕಷ್ಟ ಎದುರಾಗಿದೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅವರನ್ನು ಎರಡು ವರ್ಷಗಳ ಕಾಲ ನಿಷೇಧ ಶಿಕ್ಷೆ ವಿಧಿಸಿದೆ.

ಪಾಕಿಸ್ತಾನ್‌ ಸೂಪರ್‌ ಲೀಗ್‌ನಿಂದ ಬ್ಲೆಸಿಂಗ್‌ ಮುಜರಾಬಾನಿ ಬ್ಯಾನ್‌!

ಬ್ಲೆಸಿಂಗ್‌ ಮುಜರಾಬಾನಿಗೆ ಎರಡು ವರ್ಷ ಅಮಾನತು ಶಿಕ್ಷೆ. -

Profile
Ramesh Kote Apr 14, 2026 9:49 PM

ನವದೆಹಲಿ: ಪಾಕಿಸ್ತಾನ ಸೂಪರ್‌ ಲೀಗ್‌ (PSL 2026) ಟೂರ್ನಿಯನ್ನು ತೊರೆದು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಆಡುತ್ತಿರುವ ಜಿಂಬಾಬ್ವೆ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ವೇಗದ ಬೌಲರ್‌ ಬ್ಲೆಸಿಂಗ್‌ ಮುಜರಾಬಾನಿ (Blessing Muzarabani) ಅವರನ್ನು ಎರಡು ವರ್ಷಗಳ ಕಾಲ ಪಿಎಸ್‌ಎಲ್‌ ಟೂರ್ನಿಯಿಂದ ನಿಷೇಧ ಹೇರಲಾಗಿದೆ. 2026ರ ಐಪಿಎಲ್‌ ಹಾಗೂ ಪಿಎಸ್‌ಎಲ್‌ ಎರಡೂ ಟೂರ್ನಿಗಳ ಆಟಗಾರರ ಹರಾಜಿನಲ್ಲಿ ಬ್ಲೆಸಿಂಗ್‌ ಮುಜರಾಬಾನಿ ಅನ್‌ಸೋಲ್ಡ್‌ ಆಗಿದ್ದರು. ಆದರೆ, ತಡವಾಗಿ ಇಸ್ಲಾಮಾಬಾದ್‌ ಯುನೈಟೆಡ್‌ ತಂಡ ಬದಲಿ ಆಟಗಾರನಾಗಿ ಜಿಂಬಾಬ್ವೆ ವೇಗಿಯನ್ನು ಸೇರಿಸಿಕೊಂಡಿತ್ತು.

ಭಾರತ ಹಾಗೂ ಬಾಂಗ್ಲಾದೇಶ ರಾಷ್ಟ್ರಗಳ ನಡುವಣ ರಾಜಕೀಯ ಕಾರಣಗಳಿಂದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಮಿನಿ ಹರಾಜಿನಲ್ಲಿ ಖರೀದಿಸಿದ್ದ ಬಾಂಗ್ಲಾ ಹಿರಿಯ ವೇಗಿ ಮುಸ್ತಾಫಿಝುರ್‌ ರೆಹಮಾನ್‌ ಅವರನ್ನು ಬಿಸಿಸಿಐ ಸೂಚನೆಯಂತೆ ಕೈ ಬಿಟ್ಟಿತ್ತು. ಇದಾದ ಬಳಿಕ ಕೋಲ್ಕತಾ ಫ್ರಾಂಚೈಸಿಯು ಮುಜರಬಾನಿಗೆ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಅವಕಾಶವನ್ನು ನೀಡಿತ್ತು, ಅದರಂತೆ ಜಿಂಬಾಬ್ವೆ ವೇಗಿ ಇದನ್ನು ಒಪ್ಪಿಕೊಂಡು ಪಿಎಸ್‌ಎಲ್‌ ತೊರೆದು ಐಪಿಎಲ್‌ ತಂಡಕ್ಕೆ ಬಂದಿದ್ದರು. ಇದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಕಾರಣದಿಂದ ಪಿಸಿಬಿ ಇದೀಗ ಮುಜರಾಬಾನಿಗೆ ಕಠಿಣ ಶಿಕ್ಷೆಯನ್ನು ವಿಧಿಸಿದೆ.

IPL 2026: ವಿರಾಟ್‌ ಕೊಹ್ಲಿ ಔಟ್‌? ಎಲ್‌ಎಸ್‌ಜಿ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಎಸ್‌ಆರ್‌ಎಚ್‌ ಎದುರು 4 ವಿಕೆಟ್‌ ಕಿತ್ತಿದ್ದ ಮುಜರಾಬಾನಿ

ಜಿಂಬಾಬ್ವೆ ವೇಗದ ಬೌಲರ್‌ ಈಗಾಗಲೇ ಅಜಿಂಕ್ಯ ರಹಾನೆ ನಾಯಕತ್ವದ ಕೋಲ್ಕತಾ ನೈಟ್‌ ರೈಡರ್ಸ್‌ ಪರ ಎರಡು ಪಂದ್ಯಗಳನ್ನು ಆಡಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ 41 ರನ್‌ ಹೊಡೆಸಿಕೊಂಡಿದ್ದರೂ ಅವರು ತಮ್ಮ ಚೊಚ್ಚಲ ಐಪಿಎಲ್‌ 4 ವಿಕೆಟ್‌ ಸಾಧನೆ ಮಾಡಿದ್ದರು.



ಪಿಎಸ್‌ಎಲ್‌ ಅಧಿಕೃತ ಹೇಳಿಕೆಯಲ್ಲಿ ಏನಿದೆ?

"ಫ್ರಾಂಚೈಸಿ ಆಧಾರಿತ ಲೀಗ್‌ಗಳಲ್ಲಿ ವೃತ್ತಿಪರತೆ ಎಂದರೆ ಭಾಗವಹಿಸುವವರು ಪಾರದರ್ಶಕತೆ ಮತ್ತು ಸ್ಥಿರತೆಯಿಂದ ನಡೆದುಕೊಳ್ಳಬೇಕು. ಈಗಾಗಲೇ ಬಾಧ್ಯತೆಯ ಒಪ್ಪಂದವಿದ್ದಾಗ, ಅದರೊಂದಿಗೆ ಸಂಘರ್ಷ ಉಂಟುಮಾಡುವ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕುವುದು ನಿಜಕ್ಕೂ ಆಟದ ನಿರೀಕ್ಷಿತ ಮಾನದಂಡಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಇಂತಹ ವರ್ತನೆಗೆ ಕ್ರಮ ಕೈಗೊಳ್ಳದಿದ್ದರೆ, ವ್ಯವಹಾರಗಳ ವಿಶ್ವಾಸಾರ್ಹತೆ ಕುಗ್ಗುತ್ತದೆ ಮತ್ತು ಫ್ರಾಂಚೈಸಿಗಳು, ನಿಯಂತ್ರಕರು ಹಾಗೂ ಹಿತಾಸಕ್ತಿಪಡೆಯವರು ವೃತ್ತಿಪರ ಒಪ್ಪಂದಗಳ ಮೇಲೆ ಇಡುವ ನಂಬಿಕೆ ಹದಗೆಡುತ್ತದೆ,” ಎಂದು ಪಾಕಿಸ್ತಾನ ಸೂಪರ್‌ ಲೀಗ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತ ಐಪಿಎಲ್‌ ಕಠಿಣ ಎಂದ ಬ್ಲೆಸಿಂಗ್ ಮುಜರಾಬಾನಿ!

ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿದ್ದ ಕಾರ್ಬಿನ್‌ ಬಾಷ್‌

ಇದಕ್ಕೂ ಮುನ್ನ, ಕಳೆದ ಸೀಸನ್‌ನಲ್ಲಿ ಇದೇ ರೀತಿಯ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ ಆಲ್‌ರೌಂಡರ್ ಕಾರ್ಬಿನ್‌ ಬಾಷ್‌ ಅವರಿಗೆ ಒಂದು ವರ್ಷ ನಿಷೇಧ ಹೇರಲಾಗಿತ್ತು.ಈ ವರ್ಷವೂ ಶ್ರೀಲಂಕಾದ ದಸೂನ್‌ ಶಣಕ ಹಾಗೂ ಸ್ಪೆನ್ಸರ್‌ ಜಾನಸನ್‌ ಸಹ ಇದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಇವರಿಗೂ ಪಾಕಿಸ್ತಾನ ಸೂಪರ್‌ ಲೀಗ್‌ನಿಂದ ಇದೇ ರೀತಿಯ ನಿಷೇಧ ಶಿಕ್ಷೆ ಎದುರಾಗುವ ಸಾಧ್ಯತೆ ಇದೆ.