2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ತಂಡ ಪ್ರಕಟ, ಜೋಫ್ರಾ ಆರ್ಚರ್‌ಗೆ ಸ್ಥಾನ!
England Squad for T20 World Cup 2026: ಶ್ರೀಲಂಕಾ ವಿರುದ್ಧದ ಟಿ20ಐ ಸರಣಿ ಹಾಗೂ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಆಷಸ್ ಟೆಸ್ಟ್ ಸರಣಿಯ ವೇಳೆ ಗಾಯಕ್ಕೆ ತುತ್ತಾಗಿದ್ದ ವೇಗದ ಬೌಲರ್ ಜೋಫ್ರಾ ಆರ್ಚರ್‌ಗೆ ಸ್ಥಾನವನ್ನು ನೀಡಲಾಗಿದೆ. ಫೆಬ್ರವರಿ ಹಾಗೂ ಮಾರ್ಚ್ ಅವಧಿಯಲ್ಲಿ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ.
2026ರ ಟಿ20 ವಿಶ್ವಕಪ್‌ಗೆ ಇಂಗ್ಲೆಂಡ್ ಸಂಭಾವ್ಯ ತಂಡ. -
ನವದೆಹಲಿ: ಶ್ರೀಲಂಕಾ ವಿರುದ್ದದ ಟಿ20ಐ ಸರಣ ಹಾಗೂ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಗಾಯದ ಹೊರತಾಗಿಯೂ ವೇಗದ ಬೌಲರ್ ಜೋಫ್ರಾ ಆರ್ಚರ್‌ಗೆ ಸ್ಥಾನವನ್ನು ನೀಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಆಷಸ್ ಟೆಸ್ಟ್ ಸರಣಿಯ ವೇಳೆ ಜೋಫ್ರಾ ಆರ್ಚರ್‌ಗೆ ಗಾಯಕ್ಕೆ ತುತ್ತಾಗಿದ್ದರು. ಶ್ರೀಲಂಕಾ ವಿರುದ್ಧದ ವೈಟ್‌ಬಾಲ್ ಸರಣಿಗಳಿಗೆ ಹಾಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಂಭಾವ್ಯ ಇಂಗ್ಲೆಂಡ್ ತಂಡವನ್ನು ಹ್ಯಾರಿ ಬ್ರೂಕ್ ಮುನ್ನಡೆಸಲಿದ್ದಾರೆ.
ಶ್ರೀಲಂಕಾದಲ್ಲಿ ಇಂಗ್ಲೆಂಡ್ ತಂಡ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿಗಳನ್ನು ಆಡುವ ಮೂಲಕ ಫೆಬ್ರವರಿ 7 ರಂದು ಆರಂಭವಾಗುವ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗಲಿದೆ. ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳುತ್ತಿರುವ ಜೋಫ್ರಾ ಆರ್ಚರ್ ಇನ್ನೂ ಸಂಪೂರ್ಣವಾಗಿ ಫಿಟ್ ಇಲ್ಲ. ಅವರು ಶ್ರೀಲಂಕಾ ವೈಟ್‌ಬಾಲ್ ಸರಣಿಗಳಲ್ಲಿ ಅವರು ಆಡುವುದಿಲ್ಲ. ಆದರೆ, ಟಿ20 ವಿಶ್ವಕಪ್ ಸಂಭಾವ್ಯ ಇಂಗ್ಲೆಂಡ್ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ.
Abhishek sharma: ಈ ಯುವ ಆಟಗಾರನಿಗೆ ಏಕದಿನ ತಂಡದಲ್ಲಿಯೂ ಸ್ಥಾನ ನೀಡಬೇಕೆಂದ ಆರ್ ಅಶ್ವಿನ್!
ಜಾಶ್ ಟಾಂಗ್ ಇನ್ನೂ ಇಂಗ್ಲೆಂಡ್ ತಂಡದ ಒಂದೇ ಒಂದು ವೈಟ್‌ಬಾಲ್ ಪಂದ್ಯವನ್ನು ಆಡಿಲ್ಲ, ಆದರೆ ಆಷಸ್ ಟೆಸ್ಟ್ ಸರಣಿಯಲ್ಲಿ ತೋರಿದ ಉತ್ತಮ ಪ್ರದರ್ಶನದ ಆಧಾರದ ಮೇಲೆ ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. ಹ್ಯಾರಿ ಬ್ರೂಕ್ ನಾಯಕತ್ವದ ತಂಡದಲ್ಲಿ ಟಾಮ್ ಬ್ಯಾಂಟನ್, ಜೋಸ್ ಬಟ್ಲರ್, ಜಾಕೋಬ್ ಬೆಥೆಲ್, ಸ್ಯಾಮ್ ಕರನ್, ಬೆನ್ ಡಕೆಟ್ ಹಾಗೂ ಫಿಲ್ ಸಾಲ್ಟ್ ಸ್ಥಾನವನ್ನು ಪಡೆದಿದ್ದಾರೆ.
Sri Lanka here we come! 💥
— England Cricket (@englandcricket) December 30, 2025
Our squads for our ODI and IT20 series 😎 pic.twitter.com/ahLd2h7NWO
ಜನವರಿ 22, 24 ಹಾಗೂ 27 ರಂದು ಕೊಲಂಬೊದ ಆರ್ ಪ್ರೇಮದಾಸ ಅಂಗಣದಲ್ಲಿ ಶ್ರೀಲಂಕಾ ಹಾಗೂ ಇಂಗ್ಲೆಂಡ್ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ. ಇದಾದ ಬಳಿಕ ಕ್ಯಾಂಡಿಯ ಪಲ್ಲೆಕೆಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಜನವರಿ 30, ಫೆಬ್ರವರಿ 1 ಮತ್ತು 3 ರಂದು ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಆಡಲಿವೆ. 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7 ರಿಂದ ಮಾರ್ಚ್ 8ರವರೆಗೆ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.
Bring it on! 🔥
— England Cricket (@englandcricket) December 30, 2025
Our provisional 15-strong squad for the Men's T20 World Cup in India and Sri Lanka 💪 pic.twitter.com/KFKGwOZC20
ಶ್ರೀಲಂಕಾ ವಿರುದ್ಧದ ಟಿ20ಐ ಸರಣಿ, 2026ರ ಟಿ20 ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹಮದ್, ಜೋಫ್ರಾ ಆರ್ಚರ್ (ಟಿ20 ವಿಶ್ವಕಪ್‌ಗೆ ಮಾತ್ರ), ಟಾಮ್ ಬ್ಯಾಂಟನ್, ಜಾಕೋವ್ ಬೆಥೆಲ್ಮ ಜೋಸ್ ಬಟ್ಲರ್, ಬ್ರೈಡನ್ ಕಾರ್ಸ್(ಶ್ರೀಲಂಕಾ ಪ್ರವಾಸಕ್ಕೆ ಮಾತ್ರ), ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮಿ ಓವರ್ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜಾಶ್ ಟಾಂಗ್, ಲ್ಯೂಕ್ ವುಡ್.
ಶ್ರೀಲಂಕಾ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್,ಬ್ರೈಡೆನ್ ಕಾರ್ಸ್, ಝ್ಯಾಕ್ ಕ್ರಾವ್ಲಿ, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮಿ ಓವರ್ಟನ್, ಆದಿಲ್ ರಶೀದ್, ಜೋ ರೂಟ್, ಲ್ಯೂಕ್ ವುಡ್