IND vs ENG: ʻಒಂದು ವೇಳೆ ಬೆನ್ ಸ್ಟೋಕ್ಸ್ ಆಡಿದ್ರೆ ಇಂಗ್ಲೆಂಡ್ ಗೆಲ್ಲುತ್ತಿತ್ತುʼ-ಮೈಕಲ್ ವಾನ್!
ಓವಲ್ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಆಡಿದ್ದರೆ ಭಾರತದ ವಿರುದ್ಧ ಇಂಗ್ಲೆಂಡ್ ತಂಡ ಗೆಲ್ಲುತ್ತಿತ್ತು ಎಂದು ಆಂಗ್ಲರ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋಮವಾರ ಅಂತ್ಯವಾಗಿದ್ದ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಕೇವಲ 6 ರನ್‌ಗಳಿಂದ ರೋಚಕ ಗೆಲುವು ಸಾಧಿಸಿತು ಹಾಗೂ ಸರಣಿಯಲ್ಲಿ 2-2 ಸಮಬಲ ಸಾಧಿಸಿತು.

ಬೆನ್ ಸ್ಟೋಕ್ಸ್ ಬಗ್ಗೆ ಮೈಕಲ್ ವಾನ್ ಮಾತನಾಡಿದ್ದಾರೆ.

ಲಂಡನ್: ಭಾರತ ಕ್ರಿಕೆಟ್ ತಂಡದ ಬಗ್ಗೆ ಒಂದಲ್ಲ ಒಂದು ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸದಾ ಸುದ್ದಿಯಲ್ಲಿರುವ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್(Michael Vaughan), ಇದೀಗ ಮತ್ತೊಂದು ಹೇಳಿಕೆಯನ್ನು ನೀಡಿದ್ದಾರೆ. ಸೋಮವಾರ ಇಲ್ಲಿನ ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಅಂತ್ಯವಾಗಿದ್ದ ಐದನೇ ಹಾಗೂ ಟೆಸ್ಟ್ ಸರಣಿಯ (IND vs ENG) ಕೊನೆಯ ಪಂದ್ಯದಲ್ಲಿ ಭಾರತ ತಂಡ 6 ರನ್ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿ 2-2 ಅಂತರದಲ್ಲಿ ಡ್ರಾನಲ್ಲಿ ಅಂತ್ಯ ಕಂಡಿತು. ಆದರೆ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್‌ಗೆ ಈ ಪಂದ್ಯದ ಫಲಿತಾಂಶದ ಬಗ್ಗೆ ತೃಪ್ತಿ ಇಲ್ಲ ಎಂದು ಅನಿಸುತ್ತಿದೆ. ನಾಯಕ ಬೆನ್ ಸ್ಟೋಕ್ಸ್ (Ben Stokes) ಆಡಿದ್ದರೆ ಓವಲ್ ಟೆಸ್ಟ್ ಅನ್ನು ಇಂಗ್ಲೆಂಡ್ ತಂಡ ಗೆಲ್ಲುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ತಂಡ ನೀಡಿದ್ದ 374 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಇಂಗ್ಲೆಂಡ್ ತಂಡ, ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಅವರ ಶತಕಗಳ ಬಲದಿಂದ ನಾಲ್ಕನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 339 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಐದನೇ ಹಾಗೂ ಅಂತಿಮ ದಿನ ಇಂಗ್ಲೆಂಡ್‌ಗೆ ಕೇವಲ 35 ರನ್‌ಗಳ ಅಗತ್ಯವಿತ್ತು ಹಾಗೂ ಆತೀಥೇಯ ತಂಡ ಈ ಪಂದ್ಯವನ್ನು ಗೆಲ್ಲುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಮೊಹಮ್ಮದ್ ಸಿರಾಜ್ ಐದನೇ ದಿನದ ಆರಂಭಿಕ ಅರ್ಧ ಗಂಟೆ ಒಳಗೆ ಮೂವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಗೆಲುವು ಖಾತ್ರಿಗೊಳಿಸಿದರು. ಸಿರಾಜ್‌ಗೆ ಕೈ ಜೋಡಿಸಿದ್ದ ಪ್ರಸಿಧ್ ಕೃಷ್ಣ ಕೂಡ ಒಂದು ವಿಕೆಟ್ ಪಡೆದರು.
ಬೆನ್ ಸ್ಟೋಕ್ಸ್ ಆಡಿದ್ದರೆ ಇಂಗ್ಲೆಂಡ್ ಗೆಲ್ಲುತ್ತಿತ್ತು: ವಾನ್
ಬಿಸಿಸಿ ಟೆಸ್ಟ್ ಮಾಚ್ ವಿಶೇಷದಲ್ಲಿ ಮಾತನಾಡಿದ ಮೈಕಲ್ ವಾನ್, ಬೆನ್ ಸ್ಟೋಕ್ಸ್ ಅವರು ಭುಜದ ಗಾಯದಿಂದ ಓವಲ್ ಟೆಸ್ಟ್ ಪಂದ್ಯದಿಂದ ಹೊರಗುಳಿದರು. ಇದು ಇಂಗ್ಲೆಂಡ್ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಂದ್ಯದ ಕೆಲವು ನಿರ್ಣಾಯಕ ಹಂತಗಳಲ್ಲಿ ತಂಡವನ್ನು ಸರಿಯಾಗಿ ಮುನ್ನೆಡೆಸಿಲ್ಲ ಎಂದು ವಾನ್ ಹೇಳಿದ್ದಾರೆ.
"ಸೋಮವಾರ ಬೆಳಿಗ್ಗೆ ಬೆನ್ ಸ್ಟೋಕ್ಸ್ ಆಡಿದ್ರೆ, ಇಂಗ್ಲೆಂಡ್ ತಂಡ ಓವಲ್ ಟೆಸ್ಟ್ ಅನ್ನು ಸುಲಭವಾಗಿ ಗೆಲ್ಲುತ್ತಿತ್ತು. ಈ ತಂಡದಲ್ಲಿ ಅವರು ಬಹುದೊಡ್ಡ ಪಾತ್ರವನ್ನು ವಹಿಸುತ್ತಾರೆ," ಎಂದು ಇಂಗ್ಲೆಂಡ್ ಮಾಜಿ ನಾಯಕ ತಿಳಿಸಿದ್ದಾರೆ.
'With Ben Stokes, England have a chance to win in every series' 🤩
— Test Match Special (@bbctms) July 27, 2025
Michael Vaughan believes England's captain is THAT important to the side 🏏#BBCCricket #ENGvIND pic.twitter.com/q4a668S6Nf
"ಇಂದು ಬೆಳಿಗ್ಗೆ ನೀವು ಆಟ ಮುಗಿಸಿದ್ದೀರಿ ಮತ್ತು ಇಂಗ್ಲೆಂಡ್ ಭಯಭೀತವಾಗಿತ್ತು. ಅವರಿಗೆ (ಇಂಗ್ಲೆಂಡ್) ಕೇವಲ ಒಂದು ಪಾಲುದಾರಿಕೆ ಮಾತ್ರ ಬೇಕಿತ್ತು. ಅವರು ಆಡುವ ರೀತಿಯಿಂದ ಅವರು ಸಾಧ್ಯವಾದಷ್ಟು ಭಯಭೀತರಾದರು, ಅವರು ಅಗಾಧ ಪ್ರಮಾಣದ ಆಕ್ರಮಣಕಾರಿತನದಿಂದ ಆಡುತ್ತಾರೆ," ಎಂದು ವಾನ್ ಹೇಳಿದ್ದಾರೆ.
ಇಂಗ್ಲೆಂಡ್‌ನ ಬ್ಯಾಝ್‌ಬಾಲ್ ಕ್ರಾಂತಿಯ ಕೇಂದ್ರಬಿಂದುವಾಗಿದ್ದ ಸ್ಟೋಕ್ಸ್ ಅವರ ಶಾಂತ ಪ್ರಭಾವ, ಯುದ್ಧತಂತ್ರದ ನಡೆ ಮತ್ತು ಒತ್ತಡದ ಸಂದರ್ಭಗಳಲ್ಲಿ ಹೆಜ್ಜೆ ಹಾಕುವ ಸಾಮರ್ಥ್ಯವನ್ನು ಇಂಗ್ಲೆಂಡ್ ತುಂಬಾ ಕಳೆದುಕೊಂಡಿತು. ತಾತ್ಕಾಲಿಕ ನಾಯಕ ಒಲ್ಲಿ ಪೋಪ್ ಕೆಲವು ಆಕ್ರಮಣಕಾರಿ ನಿರ್ಧಾರಗಳನ್ನು ತೆಗೆದುಕೊಂಡರು, ಆದರೆ ಅವರು ಕೆಲ ನಿರ್ಣಾಯಕ ಸನ್ನಿವೇಶದಲ್ಲಿ ಬೋಲ್ಡ್ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆಂಬುದು ಮೈಕಲ್ ವಾನ್ ಅವರ ಅಭಿಪ್ರಾಯ.