ನನ್ನ ಪಾಕಿಸ್ತಾನ ಸಂಬಂಧ ಮುಗಿಯಿತು, ಇನ್ನು ಮುಂದೆ ನಾನು ಬ್ರಿಟಿಷ್ ಪ್ರಜೆ ಎಂದ ಮೊಹಮ್ಮದ್ ಆಮಿರ್!
ಮಾಜಿ ಪಾಕಿಸ್ತಾನ ವೇಗದ ಬೌಲರ್ ಮೊಹಮ್ಮದ್ ಆಮಿರ್, ತಮ್ಮ ಪಾಕಿಸ್ತಾನ ಕ್ರಿಕೆಟ್ ಅಧ್ಯಾಯ ಮುಗಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬ್ರಿಟಿಷ್ ಪೌರತ್ವ ಪಡೆದಿರುವ ಆಮಿರ್, ಇಂಗ್ಲೆಂಡ್‌ನಲ್ಲಿ ‘ಲೋಕಲ್ ಪ್ಲೇಯರ್’ ಸ್ಥಾನಮಾನವನ್ನೂ ಪಡೆದುಕೊಂಡಿದ್ದಾರೆ. ಹೀಗಾಗಿ ಇಂಗ್ಲೆಂಡ್‌ನ ದೇಶಿ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಅವರು ಸಿದ್ಧರಾಗಿದ್ದಾರೆ.
ಪಾಕಿಸ್ತಾನದ ನನ್ನ ಸಂಬಂಧ ಮುಗಿಯಿತು ಎಂದ ಮೊಹಮ್ಮದ್ ಆಮಿರ್. -
ನವದೆಹಲಿ: ಪಾಕಿಸ್ತಾನ ಕ್ರಿಕೆಟ್ (Pakistan Cricket) ಸಂಬಂಧ ಸಂಪೂರ್ಣವಾಗಿ ಮುಗಿದಿದೆ ಎಂದು ಪಾಕ್ ಮಾಜಿ ವೇಗಿ ಮೊಹಮ್ಮದ್ ಆಮಿರ್ (Mohammad Amir) ಹೇಳಿದ್ದಾರೆ. ಬ್ರಿಟಿಷ್ ಪೌರತ್ವ ಪಡೆದ ಬಳಿಕ ತಮ್ಮ “ಪಾಕಿಸ್ತಾನ ಅಧ್ಯಾಯ ಮುಗಿದಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆಮಿರ್ ಇದೀಗ ಇಂಗ್ಲೆಂಡ್‌ನ ದೇಶಿ ಕ್ರಿಕೆಟ್‌ನಲ್ಲಿ ಸ್ಥಳೀಯ ಆಟಗಾರನಾಗಿ ಆಡುವ ಅರ್ಹತೆ ಪಡೆದಿದ್ದಾರೆ. ಇದರಿಂದ ಕ್ರಿಕೆಟ್‌ನಲ್ಲಿ ಅವರ ಆಟಗಾರ ಸ್ಥಾನಮಾನವೂ ಬದಲಾಗಿದೆ.
2024ರ ಡಿಸೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಆಮಿರ್, ಇಂಗ್ಲೆಂಡ್‌ನಲ್ಲಿ ಸ್ಥಳೀಯ ಆಟಗಾರನಾಗಿ ಆಡುವುದಕ್ಕೆ ಕೆಲವು ನಿಯಮಗಳಿವೆ ಎಂದು ತಿಳಿಸಿದ್ದಾರೆ. ಕ್ರಿಕೆಟ್ ಪತ್ರಕರ್ತ ಹಾಗೂ ಯೂಟ್ಯೂಬರ್ ಮುಹಮ್ಮದ್ ಫುರ್ಕಾನ್ ಭಟ್ಟಿ ಅವರೊಂದಿಗೆ ಮಾತನಾಡಿದ ಆಮಿರ್, ತಮ್ಮ ಪ್ರಸ್ತುತ ಸ್ಥಾನಮಾನದ ಕಾರಣ ಪಾಕಿಸ್ತಾನ ಪರ ಮತ್ತೆ ಆಡುವುದು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ.
“ನಾನು ಈಗ ಬ್ರಿಟಿಷ್ ಸ್ಥಳೀಯ ಆಟಗಾರ. ಕೌಂಟಿ ಚಾಂಪಿಯನ್‌ಶಿಪ್ ಮತ್ತು ದಿ ಹಂಡ್ರೆಡ್‌ನಂತಹ ಟೂರ್ನಿಗಳಲ್ಲಿ ಸ್ಥಳೀಯ ಆಟಗಾರನಾಗಿ ಆಡಬೇಕಾದರೆ, ಮತ್ತೊಂದು ದೇಶದ ಪರ ಸ್ಥಳೀಯ ಆಟಗಾರನಾಗಿ ಆಡುವುದಿಲ್ಲ ಎಂದು ಒಪ್ಪಂದಕ್ಕೆ ಸಹಿ ಹಾಕಬೇಕು. ಹಾಗಾಗಿ ನನ್ನ ಹಿಂದಿನ ಪಾಕಿಸ್ತಾನ ಅಧ್ಯಾಯ ಈಗ ಮುಗಿದಿದೆ,” ಎಂದು ಆಮಿರ್ ಹೇಳಿದ್ದಾರೆ.
Duleep Trophy: ಇಶಾನ್ ಕಿಶನ್‌ಗೆ ಗಾಯ, ಪೂರ್ವ ವಲಯ ತಂಡಕ್ಕೆ ವೈಭವ್ ಸೂರ್ಯವಂಶಿ ನಾಯಕ!
ನರ್ಗಿಸ್ ಖಾನ್ ಎಂಬ ಬ್ರಿಟಿಷ್ ಪ್ರಜೆಯನ್ನು ವಿವಾಹವಾಗಿರುವ ಆಮಿರ್, ಆ ವಿವಾಹದ ಮೂಲಕ ಬ್ರಿಟಿಷ್ ಪೌರತ್ವ ಪಡೆದಿದ್ದಾರೆ. ಹಲವು ವರ್ಷಗಳಿಂದ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿರುವ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯಾದ ಬಳಿಕ ಅಲ್ಲಿನ ದೇಶಿ ಮತ್ತು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ.
ಪಿಎಸ್‌ಎಲ್‌ನಲ್ಲಿ ವಿದೇಶಿ ಆಟಗಾರನಾಗಿ ಆಮಿರ್
ಪಾಕಿಸ್ತಾನ ಕ್ರಿಕೆಟ್‌ಗೆ ಮರಳುವ ಸಾಧ್ಯತೆ ಇಲ್ಲ ಎಂದು ಹೇಳುವುದಕ್ಕೂ ಮುನ್ನ ಪಾಕಿಸ್ತಾನ ಸೂಪರ್ ಲೀಗ್ (PSL)ನಲ್ಲಿ ವಿದೇಶಿ ಆಟಗಾರನಾಗಿ ಆಡುವುದಕ್ಕೆ ತಾವು ಸಿದ್ಧರಾಗಿರುವುದಾಗಿ ಆಮಿರ್ ಸ್ಪಷ್ಟಪಡಿಸಿದ್ದರು.
ಹೊಸ ಸ್ಥಾನಮಾನದಿಂದ ಇಂಗ್ಲೆಂಡ್‌ನಲ್ಲಿ ಸ್ಥಳೀಯ ಆಟಗಾರನಾಗಿ ಮುಂದುವರಿಯುವುದರ ಜೊತೆಗೆ, ಪಿಎಸ್‌ಎಲ್‌ನಲ್ಲಿ ವಿದೇಶಿ ಆಟಗಾರರ ವಿಭಾಗದಲ್ಲಿ ಆಡಲು ಅವರಿಗೆ ಅವಕಾಶವಿದೆ. 2026ರ ಪಿಎಸ್‌ಎಲ್ ಟೂರ್ನಿಯಲ್ಲಿ ರಾವಲ್ಪಿಂಡಿ ಪರ ಆಡಿದ್ದರಿಂದ ಅವರ ಈ ಸ್ಥಾನಮಾನ ಗಮನ ಸೆಳೆದಿತ್ತು.
IND vs SL: ಭಾರತ ತಂಡದ ವೈಡ್‌ಬಾಲ್ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ಸುನೀಲ್ ಗವಾಸ್ಕರ್!
ಬ್ರಿಟಿಷ್ ಪೌರತ್ವದಿಂದ ಇಂಗ್ಲೆಂಡ್‌ನ ದೇಶಿ ಕ್ರಿಕೆಟ್‌ನಲ್ಲೂ ಆಮಿರ್‌ಗೆ ಅನುಕೂಲವಾಗಿದೆ. ನಾಟಿಂಗ್‌ಹ್ಯಾಮ್‌ಶೈರ್ 2026ರ qi20 ಬ್ಲಾಸ್ಟ್‌ಗಾಗಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಇದರಿಂದ ಅವರು ವಿದೇಶಿ ಆಟಗಾರರ ಕೋಟಾದಲ್ಲಿ ಸೇರ್ಪಡೆಯಾಗಿರಲಿಲ್ಲ. ಬಳಿಕ ದಿ ಹಂಡ್ರೆಡ್‌ನಲ್ಲಿ ಟ್ರೆಂಟ್ ರಾಕೆಟ್ಸ್ ಪರ ಸ್ಥಳೀಯ ಆಟಗಾರನಾಗಿ ಆಡಿದರು. ಆಮಿರ್ ಪಾಕಿಸ್ತಾನ ಪರ ಒಟ್ಟು 147 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 259 ವಿಕೆಟ್ ಪಡೆದಿದ್ದಾರೆ. 2017ರಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡದ ಪ್ರಮುಖ ಸದಸ್ಯರಾಗಿದ್ದರು.