ʻಅವರ ಮೇಲೆ ತುಂಬಾ ಕೋಪ ಬಂದಿತ್ತುʼ: ಸಂಜಯ್ ಮಾಂಜ್ರೇಕರ್ ಜತೆ ಮಾತು ಬಿಟ್ಟಿದ್ದೇಕೆಂದು ತಿಳಿಸಿದ ಆರ್ ಅಶ್ವಿನ್!
ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಪ್ರಸ್ತುತ ಕ್ರಿಕೆಟ್ ನಿರೂಪಕ ಸಂಜಯ್ ಮಾಂಜ್ರೇಕರ್ ಒಂದಲ್ಲ ಒಂದು ವಿಷಯದಲ್ಲಿ ಆಟಗಾರರಿಗೆ ಬೇಸರ ಮೂಡಿಸಿದ್ದಾರೆ. ರವೀಂದ್ರ ಜಡೇಜಾಗೆ 2019ರಲ್ಲಿ ಬೇಸರ ತರಿಸಿದ್ದ ಮಾಂಜ್ರೇಕರ್, ಆರ್ ಅಶ್ವಿನ್‌ಗೂ ಅವರ ವೃತ್ತಿ ಜೀವನದ ಆರಂಭದಲ್ಲಿ ಕೋಪ ಬರುವಂತೆ ಹೇಳಿಕೆಯನ್ನು ನೀಡಿದ್ದರು. ಇದೀಗ ಆ ಸಂಗತಿಯನ್ನು ಸ್ಪಿನ್ ದಿಗ್ಗಜ ಅಶ್ವಿನ್ ಬಹಿರಂಗಪಡಿಸಿದ್ದಾರೆ.
ಸಂಜಯ್ ಮಾಂಜ್ರೇಕರ್ ಬಗ್ಗೆ ಆಸಕ್ತದಾಯಕ ಸಂಗತಿ ತಿಳಿಸಿದ ಅಶ್ವಿನ್. -
ನವದೆಹಲಿ: ಯಾವುದೇ ಒಬ್ಬ ಆಟಗಾರನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಟೀಕೆಗಳು ಇದ್ದೇ ಇರುತ್ತವೆ. ಉತ್ತಮ ಪ್ರದರ್ಶನವನ್ನು ತೋರಿದಾಗ ಹೊಗಳಿಕೆ, ಕಳಪೆ ಪ್ರದರ್ಶನವನ್ನು ತೋರಿದಾಗ ಟೀಕೆಗಳು ಸಾಮಾನ್ಯ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಇದಕ್ಕೆ ಹೊರತಾಗಿಲ್ಲ. ಅದರಂತೆ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ಅವರು, ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ (Sanjay Manjrekar) ಟೀಕಿಸಿದ್ದ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ಈ ಘಟನೆಯಿಂದ ಅವರ ಜೊತೆಗೆ ಮಾತನಾಡುವುದನ್ನೇ ಬಿಟ್ಟುಬಿಟ್ಟಿದ್ದೇನೆಂದು ಆರ್ ಅಶ್ವಿನ್ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು. ಅವರು ಎಲ್ಲಾ ಸ್ವರೂಪಗಳಲ್ಲಿ 765 ಅಂತಾರಾಷ್ಟ್ರೀಯ ವಿಕೆಟ್‌ಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಮುಗಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 537 ವಿಕೆಟ್‌ಗಳು, ಒಡಿಐ ಕ್ರಿಕೆಟ್‌ನಲ್ಲಿ 156 ವಿಕೆಟ್‌ಗಳು ಹಾಗೂ ಟಿ20ಐ ಕ್ರಿಕೆಟ್‌ನಲ್ಲಿ 72 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
IND vs SLXI Warm-up Match: ಮೊದಲನೇ ದಿನ ಶ್ರೀಲಂಕಾ ಇಲೆವೆನ್ ತಂಡಕ್ಕೆ ಮುನ್ನಡೆ!
ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಕ್ರಿಕೆಟ್ ಕಾಮೆಂಟೇಟರ್ ಸಂಜಯ್ ಮಾಂಜ್ರೇಕರ್ ಹಾಗೂ ತಮ್ಮ ನಡುವೆ ಉಂಟಾಗಿದ್ದ ಅಸಮಾಧಾನವನ್ನು ರವಿಚಂದ್ರನ್ ಅಶ್ವಿನ್ ಬಹಿರಂಗಪಡಿಸಿದ್ದಾರೆ. ತನ್ನ ಮೊದಲ ಆಸ್ಟ್ರೇಲಿಯಾ ಪ್ರವಾಸದ ವೇಳೆ ಸಂಜಯ್ ಮಾಂಜ್ರೇಕರ್ ಅವರು ನನ್ನ ಫಿಟ್ನೆಸ್ ಬಗ್ಗೆ ಪ್ರಶ್ನೆ ಮಾಡಿದ್ದರು. ಇದರಿಂದಾಗಿ ತಮ್ಮ ಬೌಲಿಂಗ್ ಹಾಗೂ ಫೀಲ್ಡಿಂಗ್ ಪ್ರದರ್ಶನಗಳ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಟೀಕಿಸಿದ್ದರು ಎಂಬ ಮಾತನ್ನು ಅಶ್ವಿನ್ ಸ್ಮರಿಸಿಕೊಂಡಿದ್ದಾರೆ.
ಮಾಂಜ್ರೇಕರ್ ಮೇಲೆ ತುಂಬಾ ಕೋಪ ಬಂದಿತ್ತು: ಅಶ್ವಿನ್
"ಸಂಜಯ್ ಮಾಂಜ್ರೇಕರ್‌ಗೆ ನಾನು ಒಮ್ಮೆ ಸಂದೇಶ ಕಳುಹಿಸಿದ್ದೆ. ನನ್ನ ಮೊದಲ ಆಸ್ಟ್ರೇಲಿಯಾ ಪ್ರವಾಸದ ಬಳಿಕ, ಅವರು ನನ್ನ ಬಗ್ಗೆ ದೊಡ್ಡ ಅಂಕಣವನ್ನು ಬರೆದಿದ್ದರು ಹಾಗೂ ನಾನು ಭಾರತಕ್ಕೆ ಮರಳುವ ಸಂದರ್ಭದಲ್ಲಿ ಈ ಅಂಕಣವನ್ನು ಸಂಪೂರ್ಣವಾಗಿ ಓದಿದ್ದೆ. ಇದನ್ನು ಓದಿದ ಬಳಿಕ ನನಗೆ ಕೋಪ ಬಂದಿತ್ತು, ಕೋಪ ಬರುವುದು ಒಂದು ಸಂಗತಿ ಆದರೆ ನನಗೆ ಅತ್ಯಂತ ಕೆಟ್ಟ ಅನುಭವವಾಗಿತ್ತು. ಹೋದರೆ ಹೋಗಲಿ ಎಂದು ಬಿಟ್ಟುಕೊಟ್ಟಿದ್ದೆ. ಈ ಘಟನೆಯ ಬಳಿಕ ನಾನು ಸಂಜಯ್ ಮಾಂಜ್ರೇಕರ್ ಅವರ ಬಳಿ ಮಾತನಾಡುವುದನ್ನೂ ಬಿಟ್ಟುಬಿಟ್ಟಿದ್ದೆ," ಎಂದು ಜಿಯೊ ಹಾಟ್‌ಸ್ಟಾರ್‌ನ ಚೀಕಿ ಸಿಂಗಲ್ಸ್‌ನಲ್ಲಿ ಅಶ್ವಿನ್ ಹೇಳಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್‌ನಲ್ಲಿ ಅಭಿಮನ್ಯು ಈಶ್ವರನ್‌ಗೆ ಅನ್ಯಾಯವಾಗುತ್ತಿದೆ ಎಂದ ಆಕಾಶ್ ಚೋಪ್ರಾ!
"ಇದಾದ ನಾಲ್ಕು ವರ್ಷಗಳ ಬಳಿಕ, ನಾನು ತುಂಬಾ ಕೆಲಸ ಮಾಡಿದ್ದೆ, ಏಕೆಂದರೆ ನಾನು ಹುಟ್ಟಿನಿಂದಲೇ ಅಥ್ಲಿಟ್ ಆಗಿ ಬಂದಿಲ್ಲ. 2015ರಲ್ಲಿ ಅವರು ನಾನು ಚೆನ್ನಾಗಿ ಬೌಲ್ ಮಾಡಿದ್ದೇನೆಂದು ಮತ್ತೊಂದು ಅಂಕಣವನ್ನು ಬರೆದಿದ್ದರು. ನಂತರ ನಾನು ಅವರ ನಂಬರ್ ಅನ್ನು ತೆಗೆದುಕೊಂಡು, ನೀವು ಈ ಹಿಂದೆ ಬರೆದಿದ್ದ ಅಂಕಣದಿಂದ ನನ್ನ ಜೀವನ ಸಂಪೂರ್ಣ ಬದಲಾಯಿತು ಎಂದು ಸಂದೇಶ ಕಳುಹಿಸಿದ್ದೆ. ಟೀಕೆಗಳಿಂದ ಏನಾದರೂ ಕಲಿಯುವ ಕಡೆಗೆ ನಾವು ಹೆಚ್ಚಿನ ಗಮನ ನೀಡಬೇಕೆಂಬುದನ್ನು ನಾನು ಸದಾ ಎದುರು ನೋಡುತ್ತೇನೆ," ಎಂದು ಸ್ಪಿನ್ ದಂತಕತೆ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಆರ್ ಅಶ್ವಿನ್ ಇತರೆ ಮಾದರಿ ಕ್ರಿಕೆಟ್‌ನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಮೇಜರ್ ಕ್ರಿಕೆಟ್ ಲೀಗ್‌ನಲ್ಲಿ ಕಾಣಿಸಿಕೊಂಡ ಅವರು, ಅಂತಾರಾಷ್ಟ್ರೀಯ ಕ್ರಿಕೆಟ್ ಬಳಿಕ ತನ್ನ ಆಟವನ್ನು ವಿಭಿನ್ನ ವೇದಿಕೆಗಳಲ್ಲಿ ಮುಂದುವರಿಸಲು ಬಯಸಿದ್ದಾರೆ. ಕಳೆದ ಆವೃತ್ತಿಯ ಬಿಗ್‌ಬ್ಯಾಷ್ ಲೀಗ್‌ನಲ್ಲಿಯೂ ಅವರು ತಂಡವೊಂದಕ್ಕೆ ಸಹಿ ಮಾಡಿದ್ದರು, ಆದರೆ, ಗಾಯದ ಕಾರಣ ಅವರು ಟೂರ್ನಿಯಿಂದ ಹೊರಬಿದ್ದಿದ್ದರು.