ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻನನಗೆ ಸ್ಟ್ರೈಕ್‌ ನೀಡಲಿಲ್ಲ, ತುಂಬಾ ಕೋಪ ಬಂದಿತ್ತುʼ: ಇಶಾನ್‌ ಕಿಶನ್‌ ಬಗ್ಗೆ ಸೂರ್ಯಕುಮಾರ್‌ ಹೇಳಿದ್ದಿದು!

ನ್ಯೂಜಿಲೆಂಡ್‌ ವಿರುದ್ದದ ಎರಡನೇ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕವನ್ನು ಸಿಡಿಸುವ ಮೂಲಕ ಸೂರ್ಯಕುಮಾರ್‌ ಯಾದವ್‌ ಹಾಗೂ ಇಶಾನ್‌ ಕಿಶನ್‌ ಅವರು ಭಾರತ ತಂಡದ ಗೆಲುವಿಗೆ ನೆರವು ನೀಡಿದರು. ಪಂದ್ಯದ ಬಳಿಕ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು, ಇಶಾನ್‌ ಕಿಶನ್‌ ಅವರನ್ನು ಹೊಗಳಿದರು. ಆದರೆ, ಪವರ್‌ಪ್ಲೇನಲ್ಲಿ ಕಿಶನ್‌ ಮೇಲೆ ಕೋಪ ಬಂದಿದ್ದ ಕ್ಷಣವನ್ನು ರಿವೀಲ್‌ ಮಾಡಿದರು.

ನನಗೆ ಸ್ಟ್ರೈಕ್‌ ನೀಡಲಿಲ್ಲ, ತುಂಬಾ ಕೋಪ ಬಂದಿತ್ತು: ಸೂರ್ಯಕುಮಾರ್‌!

ಇಶಾನ್‌ ಕಿಶನ್‌ ಆಟವನ್ನು ಶ್ಲಾಘಿಸಿದ ಸೂರ್ಯಕುಮಾರ್‌. -

Profile
Ramesh Kote Jan 24, 2026 3:26 PM

ರಾಯ್ಪುರ: ನ್ಯೂಜಿಲೆಂಡ್‌ ವಿರುದ್ದ ಎರಡನೇ ಟಿ20ಐ ಪಂದ್ಯದಲ್ಲಿ (IND vs NZ) ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಎರಡು ಪಂದ್ಯಗಳ ಅಂತ್ಯಕ್ಕೆ ಟಿ20ಐ ಸರಣಿಯಲ್ಲಿ ಟೀಮ್‌ ಇಂಡಿಯಾ 2-0 ಅಂತರದಲ್ಲಿ ಮುನ್ನಡೆಯನ್ನು ಪಡೆದಿದೆ. ಈ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ (Suryakumar Yadav) ಹಾಗೂ ಇಶಾನ್‌ ಕಿಶನ್‌ (Ishan KiShan) ಅವರು ತಮ್ಮ ಸ್ಪೋಟಕ ಅರ್ಧಶತಕಗಳ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಪಂದ್ಯದ ಬಳಿಕ ಭಾರತದ ನಾಯಕ ಸೂರ್ಯಕುಮಾರ್‌ ಯಾದವ್‌, ಪವರ್‌ಪ್ಲೇನಲ್ಲಿ ಇಶಾನ್‌ ಕಿಶನ್‌ ವಿರುದ್ಧ ಕೋಪ ಮಾಡಿಕೊಂಡಿದ್ದ ಕ್ಷಣವನ್ನು ರಿವೀಲ್‌ ಮಾಡಿದ್ದಾರೆ.

209 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ ಕೇವಲ 6 ರನ್‌ಗೆ ಎರಡ ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಇಶಾನ್‌ ಕಿಶನ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ ಕೇವಲ 32 ಎಸೆತಗಳಲ್ಲಿ 76 ರನ್‌ಗಳನ್ನು ಸಿಡಿಸಿದ್ದರು. ಇವರ ಇನಿಂಗ್ಸ್‌ನಲ್ಲಿ 11 ಬೌಂಡರಿಗಳು ಹಾಗೂ 4 ಸಿಕ್ಸರ್‌ಗಳನ್ನು ಬಾರಿಸಿದರು. ಅಲ್ಲದೆ ಸೂರ್ಯಕುಮಾರ್‌ ಯಾದವ್‌ ಅವರ ಜೊತೆ 48 ಎಸೆತಗಳಲ್ಲಿ 122 ರನ್‌ಗಳ ಜೊತೆಯಾಟವನ್ನು ಆಡಿದರು. ಸೂರ್ಯಕುಮಾರ್‌ ಯಾದವ್‌ ಕೂಡ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ 37 ಎಸೆತಗಳಲ್ಲಿ 82 ರನ್‌ಗಳನ್ನು ಬಾರಿಸಿದರು. ಅಂತಿಮವಾಗಿ ಭಾರತ ತಂಡ, 15.2 ಓವರ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು.

ಅತಿ ವೇಗದ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ ಇಶಾನ್‌ ಕಿಶನ್‌

ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಸೂರ್ಯಕುಮಾರ್‌ ಯಾದವ್‌, "ಪವರ್‌ನಲ್ಲಿ ನನಗೆ ಅವರು (ಇಶಾನ್‌ ಕಿಶನ್‌) ಸ್ಟ್ರೈಕ್‌ ನೀಡದ ಕಾರಣ ನನಗೆ ಕೋಪ ಬಂದಿತ್ತು. ಆದರೆ, ಇಲ್ಲಿನ ಕಂಡೀಷನ್ಸ್‌ ಮೇಲೆ ಹಿಡಿತ ಸಾಧಿಸಲು ಸ್ವಲ್ಪ ಸಮಯ ಸಿಕ್ಕಂತಾಯಿತು. ನೆಟ್ಸ್‌ನಲ್ಲಿ ನಾನು ತುಂಬಾ ಚೆನ್ನಾಗಿ ಬ್ಯಾಟ್‌ ಮಾಡುತ್ತಿದ್ದೆ ಹಾಗೂ ನನಗೆ ಉತ್ತಮವಾಗಿ ವಿರಾಮ ಸಿಕ್ಕಿದೆ. ಅಲ್ಲದೆ ಪಂದ್ಯಕ್ಕೂ ಮುನ್ನ ನನಗೆ ಒಳ್ಳೆಯ ಅಭ್ಯಾಸ ಕೂಡ ಸಿಕ್ಕಿದೆ," ಎಂದು ಹೇಳಿದ್ದಾರೆ.

ತಂಡ 6 ರನ್‌ಗೆ ಎರಡು ವಿಕೆಟ್‌ ಕಳೆದುಕೊಂಡ ಬಳಿಕ ನಂತರ ಪವರ್‌ಪ್ಲೇನಲ್ಲಿ 75 ರನ್‌ಗಳನ್ನು ಕಲೆ ಹಾಕಿದೆ. ಇಶಾನ್‌ ಕಿಶನ್‌ ಅವರ ಈ ರೀತಿಯ ಆಟವನ್ನು ನಾನು ಎಂದಿಗೂ ನೋಡಿಯೇ ಇಲ್ಲ ಎಂಬುದನ್ನು ನಾಯಕ ಸೂರ್ಯ ಅಚ್ಚರಿ ವ್ಯಕ್ತಪಡಿಸಿದ್ದಾರೆ.

"ಇಶಾನ್‌ ಕಿಶನ್‌ ಮಧ್ಯಾಹ್ನ ಏನು ಭೋಜನ ತಿಂದಿದ್ದಾರೆಂದು ನನಗೆ ಗೊತ್ತಿಲ್ಲ ಆದರೆ, ಒಂದು ಹಂತದಲ್ಲಿ 6 ರನ್‌ಗೆ 2 ವಿಕೆಟ್‌ ಕಳೆದುಕೊಂಡ ಬಳಿಕ ಪವರ್‌ಪ್ಲೇ ಅಂತ್ಯಕ್ಕೆ 75 ರನ್‌ ಕಲೆ ಹಾಕಿದ ಇಶಾನ್‌ ಕಿಶನ್‌ ಅವರ ಆಟದ ರೀತಿ ಬೇರೆ ಎಲ್ಲಿಯೂ ನೋಡಿಯೇ ಇಲ್ಲ. ಆದರೆ, ನಮ್ಮ ಬ್ಯಾಟ್ಸ್‌ಮನ್‌ ತಮ್ಮನ್ನು ತಾವು ಅಭಿವ್ಯಕ್ತಗೊಳಿಸುವುದನ್ನು ನಾವು ಬಯಸುತ್ತೇವೆ," ಎಂದು ಸೂರ್ಯಕುಮಾರ್‌ ಯಾದವ್‌ ತಿಳಿಸಿದ್ದಾರೆ.

IND vs NZ: ಇಶಾನ್‌ ಕಿಶನ್‌-ಸೂರ್ಯಕುಮಾರ್‌ ಅಬ್ಬರ, ಎರಡನೇ ಟಿ20ಐ ಗೆದ್ದ ಭಾರತ ತಂಡ!

ಬೌಲರ್‌ಗಳನ್ನು ಶ್ಲಾಘಿಸಿದ ಸೂರ್ಯ

ಅತ್ಯುತ್ತಮ ಬ್ಯಾಟಿಂಗ್ ಪರಿಸ್ಥಿತಿಯಲ್ಲಿ ಮತ್ತು ಕೈಯಲ್ಲಿ ಒದ್ದೆಯಾದ ಚೆಂಡನ್ನು ಹೊಂದಿದ್ದರೂ ನ್ಯೂಜಿಲೆಂಡ್ ತಂಡವನ್ನು 208 ರನ್‌ಗಳಿಗೆ ಸೀಮಿತಗೊಳಿಸಿದ ರೀತಿಗೆ ಬೌಲರ್‌ಗಳನ್ನು ಸೂರ್ಯಕುಮಾರ್‌ ಶ್ಲಾಘಿಸಿದರು.

“ಚೆಂಡಿನೊಂದಿಗೆ ಅದ್ಭುತ ಪ್ರಯತ್ನ. ಅವರು 2 ವಿಕೆಟ್‌ಗೆ 110 ರನ್ ಗಳಿಸಿದಾಗ, ಅದು 230 ರನ್‌ಗಳ ಮೊತ್ತವಾಗುತ್ತದೆ ಎಂದು ನಾನು ಭಾವಿಸಿದೆ ಆದರೆ ಎಲ್ಲಾ ಬೌಲರ್‌ಗಳು ಆಟಕ್ಕೆ ಇಳಿದು ಜವಾಬ್ದಾರಿಯನ್ನು ವಹಿಸಿಕೊಂಡರು. ಈಗ ಏನು ನಡೆಯುತ್ತಿದೆ ಎಂಬುದನ್ನು ನಾನು ನಿಜವಾಗಿಯೂ ಆನಂದಿಸುತ್ತಿದ್ದೇನೆ. ಶಿಬಿರದಲ್ಲಿ ಮನಸ್ಥಿತಿ ಸಂತೋಷವಾಗಿದೆ ಮತ್ತು ನಾನು ಅವರನ್ನು ಆ ಜಾಗದಲ್ಲಿ ಇಡಲು ಬಯಸುತ್ತೇನೆ, ”ಎಂದು ಅವರು ಹೇಳಿದ್ದಾರೆ.