ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅತಿ ವೇಗದ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ ಇಶಾನ್‌ ಕಿಶನ್‌

Ishan Kishan: ಪವರ್-ಪ್ಲೇಯಲ್ಲೇ ಇಶಾನ್ 56 ರನ್ ಗಳಿಸಿದರು. ಆ ಮೂಲಕ ಅಭಿಷೇಕ್ ಶರ್ಮಾ (58) ಬಳಿಕ ಮೊದಲ ಆರು ಓವರ್‌ಗಳಲ್ಲಿ ವೈಯಕ್ತಿಕವಾಗಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿದರು. 209 ರನ್‌ಗಳ ಗುರಿಯನ್ನು ಇನ್ನೂ 28 ಎಸೆತಗಳು ಉಳಿದಿರುವಂತೆ ಭಾರತ ವಿಜಯ ದಾಖಲಿಸಿತು.

ಅತಿ ವೇಗದ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ ಇಶಾನ್‌ ಕಿಶನ್‌

Ishan Kishan -

Abhilash BC
Abhilash BC Jan 24, 2026 9:38 AM

ರಾಯ್ಪುರ, ಜ.24: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20ಐ(India vs New Zealand 2nd T20I) ಪಂದ್ಯದಲ್ಲಿ ಭಾರತ ಪರ ಇಶಾನ್ ಕಿಶನ್(Ishan Kishan) ಸ್ಫೋಟಕ ಬ್ಯಾಟಿಂಗ್‌ ನಡೆಸಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಕೇವಲ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ನ್ಯೂಜಿಲೆಂಡ್ ವಿರುದ್ಧದ ಟಿ20ಐ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಬಾರಿಸಿದ್ದ ಭಾರತ ಪರ ವೇಗದ ಅರ್ಧಶತಕದ ದಾಖಲೆಯನ್ನು ಮುರಿದರು.

ಬುಧವಾರ (ಜನವರಿ 21) ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20ಐನಲ್ಲಿ ವಿಶ್ವದ ನಂ. 1 ಟಿ20ಐ ಬ್ಯಾಟ್ಸ್‌ಮನ್ ಅಭಿಷೇಕ್ 50 ರನ್‌ಗಳ ಗಡಿ ತಲುಪಲು 22 ಎಸೆತಗಳನ್ನು ತೆಗೆದುಕೊಂಡಿದ್ದರು. ಎರಡನೇ ಪಂದ್ಯದಲ್ಲಿ ಈ ದಾಖಲೆಯನ್ನು ಇಶಾನ್‌ ಕಿಶನ್‌ ಮುರಿದರು. ಭಾರತೀಯ ಇನ್ನಿಂಗ್ಸ್‌ನ ಆರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮ್ಯಾಟ್ ಹೆನ್ರಿ ಅವರನ್ನು ಬೌಂಡರಿ ಮಾಡುವ ಮೂಲಕ ಇಶಾನ್ ಅರ್ಧಶತಕ ಪೂರೈಸಿದರು. ಅವರು 9 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ ಅರ್ಧಶತಕ ಗಳಿಸಿದರು. ಒಟ್ಟಾರೆ 32 ಎಸೆತ ಎದುರಿಸಿದ ಇಶಾನ್‌ 11 ಬೌಂಡರಿ ಮತ್ತು 4 ಸಿಕ್ಸರ್‌ ನೆರವಿನಿಂದ 76 ರನ್‌ ಸಿಡಿಸಿದರು.

ಎರಡನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ಮೇಲೆ ಭಾರತ ಹೆಚ್ಚಿನ ನಿರೀಕ್ಷೆಯಿಟ್ಟಿತ್ತು. ಅವರು ಸರಣಿಯ ಆರಂಭಿಕ ಪಂದ್ಯದಲ್ಲಿ 35 ಎಸೆತಗಳಲ್ಲಿ 84 ರನ್ ಗಳಿಸಿದ್ದರು. ಆದರೆ ಅವರು ಖಾತೆ ತೆರೆಯಲು ವಿಫಲರಾದರು. ಭಾರತದ ಇನ್ನಿಂಗ್ಸ್‌ನ ಎರಡನೇ ಓವರ್‌ನ ಮೊದಲ ಎಸೆತದಲ್ಲಿ, ಜಾಕೋಬ್ ಡಫಿ ಬೌಲಿಂಗ್‌ನಲ್ಲಿ ಸಿಕ್ಸ್ ಹೊಡೆಯುವ ಪ್ರಯತ್ನದಲ್ಲಿ, ಅವರು ಡೆವೊನ್ ಕಾನ್ವೇಗೆ ಕ್ಯಾಚ್ ನೀಡಿ ಶೂನ್ಯಕ್ಕೆ ವಿಕೆಟ್‌ ಕಳೆದುಕೊಂಡರು.

ಪಾಕಿಸ್ಥಾನದ ವಿಶ್ವ ದಾಖಲೆ ಮುರಿದ ಭಾರತ

ಪವರ್-ಪ್ಲೇಯಲ್ಲೇ ಇಶಾನ್ 56 ರನ್ ಗಳಿಸಿದರು. ಆ ಮೂಲಕ ಅಭಿಷೇಕ್ ಶರ್ಮಾ (58) ಬಳಿಕ ಮೊದಲ ಆರು ಓವರ್‌ಗಳಲ್ಲಿ ವೈಯಕ್ತಿಕವಾಗಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿದರು. 209 ರನ್‌ಗಳ ಗುರಿಯನ್ನು ಇನ್ನೂ 28 ಎಸೆತಗಳು ಉಳಿದಿರುವಂತೆ ಭಾರತ ವಿಜಯ ದಾಖಲಿಸಿತು. ಇದು ಟ್ವೆಂಟಿ-20 ಇತಿಹಾಸದಲ್ಲಿ 200ಕ್ಕೂ ಅಧಿಕ ರನ್ ಗುರಿ ಇದ್ದಾಗ ಅತಿವೇಗದ ರನ್‌ ಚೇಸ್ ದಾಖಲೆ ಎನಿಸಿತು.

ನಾಯಕ ಸೂರ್ಯಕುಮಾರ್‌ ಯಾದವ್‌, ಈ ಪಂದ್ಯದಲ್ಲಿ ಸ್ಪೋಟಕ ಇನಿಂಗ್ಸ್‌ ಆಡುವ ಮೂಲಕ ತಮ್ಮ ಲಯಕ್ಕೆ ಮರಳಿದರು. ಅವರು ಆಡಿದ 37 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 82 ರನ್‌ಗಳನ್ನು ಬಾರಿಸಿದರು. ಆ ಮೂಲಕ ಭಾರತ ತಂಡದ ಗೆಲುವಿಗೆ ನೆರವು ನೀಡಿದರು. ಇವರ ಜೊತೆ ನಾಲ್ಕನೇ ವಿಕೆಟ್‌ಗೆ 81 ರನ್‌ ಗಳಿಸಿದ್ದ ಶಿವಂ ದುಬೆ 18 ಎಸೆತಗಳಲ್ಲಿ ಅಜೇಯ 36 ರನ್‌ ಸಿಡಿಸಿದರು.