ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs GT: ʻರೊಮ್ಯಾರಿಯೊ ಶೆಫರ್ಡ್‌ ಬೌಲ್‌ ಮಾಡಿದ್ರೆ ಸೋಲು ಖಚಿತʼ-ಆರ್‌ಸಿಬಿಗೆ ಕೆ ಶ್ರೀಕಾಂತ್‌ ವಾರ್ನಿಂಗ್‌!

K Srikkanth warns RCB aheda of Final: ಗುಜರಾತ್‌ ಟೈಟನ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಎಚ್ಚರಿಕೆ ನೀಡಿದ್ದಾರೆ. ರೊಮ್ಯಾರಿಯೊ ಶೆಫರ್ಡ್‌ಗೆ ಪ್ಲೇಯಿಂಗ್‌ XIನಲ್ಲಿ ಅವಕಾಶ ನೀಡಬೇಡಿ ಎಂದು ಆಗ್ರಹಿಸಿದ್ದಾರೆ.

RCB vs GT ಫೈನಲ್‌ಗೂ ಮುನ್ನ ಆರ್‌ಸಿಬಿಗೆ ಕೆ ಶ್ರೀಕಾಂತ್‌ ಎಚ್ಚರಿಕೆ!

ಜಿಟಿ ಎದುರು ಫೈನಲ್‌ಗೂ ಮುನ್ನ ಆರ್‌ಸಿಬಿಗೆ ಶ್ರೀಕಾಂತ್‌ ಎಚ್ಚರಿಕೆ. -

Profile
Ramesh Kote May 31, 2026 6:46 PM

ಅಹಮದಾಬಾದ್‌: ಗುಜರಾತ್‌ ಟೈಟನ್ಸ್‌ ಎದುರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಫೈನಲ್‌ ಪಂದ್ಯಕ್ಕೂ ಮುನ್ನ ಹಾಲಿ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್‌ (K Srikkanth) ಎಚ್ಚರಿಕೆಯನ್ನು ನೀಡಿದ್ದಾರೆ. ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ರೊಮ್ಯಾರಿಯೊ ಶೆಫರ್ಡ್‌ಗೆ (Romario Shepherd) ಅವಕಾಶ ನೀಡಿಬೇಡಿ ಎಂದ ಮಾಜಿ ಸೆಲೆಕ್ಟರ್‌, ಒಂದು ವೇಳೆ ಆಲ್‌ರೌಂಡರ್‌ಗೆ ಅವಕಾಶ ನೀಡಿ ಮೂರು ಓವರ್‌ ಬೌಲಿಂಗ್‌ ಕೊಟ್ಟರೆ ಖಂಡಿತಾ ನೀವು ಸೋಲುತ್ತೀರಿ ಎಂದು ಬೆಂಗಳೂರು ತಂಡಕ್ಕೆ ಸಲಹೆ ನೀಡಿದ್ದಾರೆ. ಅಂದ ಹಾಗೆ ಫೈನಲ್‌ ಪಂದ್ಯ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31 ರಂದು ನಡೆಯಲಿದೆ.

ಈ ಸೀಸನ್‌ನಲ್ಲಿ ವೆಸ್ಟ್‌ ಇಂಡೀಸ್‌ ಆಲ್‌ರೌಂಡರ್‌ ಆರ್‌ಸಿಬಿಗೆ ತಮ್ಮ ಪ್ರದರ್ಶನದ ಮೂಲಕ ನಿರಾಶೆ ಮೂಡಿಸಿದ್ದಾರೆ. ಅವರು ಬೌಲಿಂಗ್‌ನಲ್ಲಿ ಕೇವಲ 7 ವಿಕೆಟ್‌ಗಳನ್ನು ಮಾತ್ರ ಕಬಳಿಸಿದ್ದು, 12ರ ಎಕಾನಮಿ ರೇಟ್‌ನಲ್ಲಿ ರನ್‌ ಬಿಟ್ಟುಕೊಟ್ಟಿದ್ದಾರೆ. ಅಲ್ಲದೆ ಫಿಲ್‌ ಸಾಲ್ಟ್‌ ಸಂಪೂರ್ಣವಾಗಿ ಫಿಟ್‌ ಇದ್ದರೂ ವೆಂಕಟೇಶ್‌ ಅಯ್ಯರ್‌ ಅವರನ್ನು ಮುಂದುವರಿಸಬೇಕೆಂದು ಬಿಸಿಸಿಐ ಮಾಜಿ ಸೆಲೆಕ್ಟರ್‌ ಆರ್‌ಸಿಬಿಗೆ ಸಲಹೆ ನೀಡಿದ್ದಾರೆ.

RCB vs GT ನಡುವೆ ಐಪಿಎಲ್‌ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವನ್ನು ಆರಿಸಿದ ಆರ್‌ ಅಶ್ವಿನ್‌!

“ಫಿಲ್‌ ಸಾಲ್ಟ್‌ ಅವರ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಬಂದಿಲ್ಲ. ಅವರು ಫಿಟ್ ಆಗಿದ್ದರೂ ಈಗ ತಂಡದಲ್ಲಿ ಬದಲಾವಣೆ ಮಾಡುವ ಅಗತ್ಯವಿಲ್ಲ, ಏಕೆಂದರೆ ವೆಂಕಟೇಶ್‌ ಅಯ್ಯರ್‌ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆರ್‌ಸಿಬಿ ತಂಡ ಸೋಲುವ ಏಕೈಕ ಸಾಧ್ಯತೆ ಎಂದರೆ ರೊಮ್ಯಾರಿಯೊ ಶೆಫರ್ಡ್‌ ಮೂರು ಓವರ್‌ಗಳನ್ನು ಬೌಲ್‌ ಮಾಡುವುದು. ಅವರು ಮೂರು ಓವರ್‌ಗಳನ್ನು ಎಸೆದರೆ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಬಹುದು. ಶೆಫರ್ಡ್ ಬೌಲ್‌ ಮಾಡಬಾರದು ಮತ್ತು ಅಂತಿಮ ಹನ್ನೊಂದರಲ್ಲಿಯೂ ಸ್ಥಾನ ಪಡೆಯಬಾರದು,” ಎಂದು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಹೇಳಿದ್ದಾರೆ.

ಗುಜರಾತ್‌ ಟೈಟನ್ಸ್ ತಂಡಕ್ಕೆ ಫೈನಲ್‌ನಲ್ಲಿ ಅತ್ಯಂತ ಪ್ರಮುಖ ಸವಾಲು ಎಂದರೆ ವಿರಾಟ್‌ ಕೊಹ್ಲಿ ಮತ್ತು ದೇವದತ್‌ ಪಡಿಕ್ಕಲ್‌ ನಡುವಿನ ಜೊತೆಯಾಟವನ್ನು ಬೇಗ ಮುರಿಯುವುದು. ಈ ಇಬ್ಬರು ಬ್ಯಾಟರ್‌ಗಳು ಈ ಸೀಸನ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದು, ನಿರಂತರವಾಗಿ ತಂಡಕ್ಕೆ ಭದ್ರ ಅಡಿಪಾಯ ಒದಗಿಸಿದ್ದಾರೆ. ಹೀಗಾಗಿ ಅವರು ದೊಡ್ಡ ಇನಿಂಗ್ಸ್‌ಗಳನ್ನು ಕಟ್ಟಲು ಅವಕಾಶ ನೀಡದಿರುವುದು ಜಿಟಿಗೆ ಅತ್ಯಂತ ಮುಖ್ಯವಾಗಿದೆ ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

IPL 2026 Final: ಇಂದಿನ ಐಪಿಎಲ್‌ ಫೈನಲ್‌ನಲ್ಲಿ ಆರ್‌ಸಿಬಿ-ಗುಜರಾತ್‌ ತಂಡದ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು

“ಗುಜರಾತ್‌ ಟೈಟನ್ಸ್ ತಂಡವು ಗೆಲ್ಲಬೇಕಾದರೆ, ಮೊದಲಿಗೆ ವಿರಾಟ್‌ ಕೊಹ್ಲಿ ಮತ್ತು ದೇವದತ್‌ ಪಡಿಕ್ಕಲ್‌ ನಡುವಿನ ಜೊತೆಯಾಟವನ್ನು ಮುರಿಯಲೇಬೇಕು. ಸಾಮಾನ್ಯವಾಗಿ ಕೋಹ್ಲಿ 40 ರನ್‌ಗಳ ಗಡಿ ದಾಟಿದರೆ ಆರ್‌ಸಿಬಿ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಆರ್‌ಸಿಬಿಗೆ ನಿಜವಾದ ಬಲ ನೀಡುವುದು ಕೋಹ್ಲಿ ಮತ್ತು ಪಡಿಕ್ಕಲ್ ನಡುವಿನ ಜೊತೆಯಾಟ. ಈ ಇಬ್ಬರಲ್ಲಿ ಒಬ್ಬರು ಬೇಗ ಔಟಾದರೆ ಅಥವಾ ಅವರ ನಡುವೆ ಗಮನಾರ್ಹ ಜೊತೆಯಾಟ ಮೂಡದಿದ್ದರೆ ಮಾತ್ರ ಆರ್‌ಸಿಬಿ ಒತ್ತಡಕ್ಕೆ ಸಿಲುಕುತ್ತದೆ. ಇಲ್ಲದಿದ್ದರೆ ತಂಡವನ್ನು ನಿಯಂತ್ರಿಸುವುದು ತುಂಬಾ ಕಷ್ಟ,” ಎಂದು ಕ್ರಿಸ್‌ ಶ್ರೀಕಾಂತ್‌ ಹೇಳಿದ್ದಾರೆ.

“ಜಿಟಿ ಗೆಲ್ಲುವ ಏಕೈಕ ಅವಕಾಶವೆಂದರೆ ವಿರಾಟ್‌ ಕೊಹ್ಲಿ, ದೇವದತ್‌ ಪಡಿಕ್ಕಲ್‌ ಮತ್ತು ರಜತ್‌ ಪಾಟಿದಾರ್‌ ಈ ಮೂವರನ್ನು ಆರಂಭದಲ್ಲೇ ಔಟ್ ಮಾಡುವುದು. ಈ ಮೂವರಲ್ಲಿ ಇಬ್ಬರಾದರೂ ತಮ್ಮ ಲಯ ಕಂಡುಕೊಂಡರೆ, ಆರ್‌ಸಿಬಿ ಗೆಲುವಿನತ್ತ ಸಾಗುತ್ತದೆ. ಆದ್ದರಿಂದ ಗುಜರಾತ್‌ಗೆ ಗೆಲುವಿನ ಅವಕಾಶ ಉಳಿಯಬೇಕಾದರೆ, ಈ ಮೂವರಲ್ಲಿ ಕನಿಷ್ಠ ಇಬ್ಬರನ್ನು ಆರಂಭಿಕ ಹಂತದಲ್ಲೇ ಪೆವಿಲಿಯನ್‌ಗೆ ಕಳುಹಿಸಬೇಕು. ಜೊತೆಗೆ ಕಗಿಸೊ ರಬಾಡ ಮತ್ತು ಮೊಹಮ್ಮದ್‌ ಸಿರಾಜ್‌ ಇಬ್ಬರೂ ಒಟ್ಟಾಗಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರೆ ಮಾತ್ರ ಗುಜರಾತ್‌ಗೆ ಜಯದ ಅವಕಾಶ ಸಿಗಬಹುದು,” ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.