ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs BAN: ಅರ್ಧಶತಕ ಬಾರಿಸಿ ಯುವರಾಜ್‌ ಸಿಂಗ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮಾ!

ಬಾಂಗ್ಲಾದೇಶ ವಿರುದ್ಧ 2025ರ ಏಷ್ಯಾ ಕಪ್‌ ಟೂರ್ನಿಯ ಸೂಪರ್-‌4 ರ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭಾರತ ತಂಡದ ಆರಂಭಿಕ ಅಭಿಷೇಕ್‌ ಶರ್ಮಾ, ದಿಗ್ಗಜ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅವರ ದಾಖಲೆಯನ್ನು ಮುರಿದಿದ್ದಾರೆ. 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅಭಿಷೇಕ್‌ 5 ಬಾರಿ 50ಕ್ಕಿಂತ ಹೆಚ್ಚು ರನ್‌ ಗಳಿಸಿದ್ದಾರೆ.

ಅರ್ಧಶತಕ ಬಾರಿಸಿ ಯುವರಾಜ್‌ ಸಿಂಗ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮಾ!

ಯುವರಾಜ್‌ ಸಿಂಗ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮಾ. -

Profile Ramesh Kote Sep 24, 2025 9:53 PM

ದುಬೈ: ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ(Abhishek Sharma) ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ. ಇದುವರೆಗೂ ಆಡಿದ ಪ್ರತಿಯೊಂದು ಪಂದ್ಯದಲ್ಲೂ ಅವರು ಭಾರತ ತಂಡಕ್ಕೆ ಸ್ಪೋಟಕ ಆರಂಭವನ್ನು ತಂದುಕೊಟ್ಟಿದ್ದಾರೆ. ಪಾಕಿಸ್ತಾನ ವಿರುದ್ಧದ ಸೂಪರ್-4ರ ಪಂದ್ಯದಲ್ಲಿ ಅವರು ಭರ್ಜರಿ ಅರ್ಧಶತಕ ಸಿಡಿಸಿದ್ದರು. ಇದೀಗ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿಯೂ ಅಭಿಷೇಕ್ ಶರ್ಮಾ ತಮ್ಮ ಬ್ಯಾಟಿಂಗ್ ಫಾರ್ಮ್‌ ಮುಂದುವರಿಸಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅವರ ಆರಂಭ ನಿಧಾನವಾಗಿತ್ತು. ಅವರು ತಮ್ಮ ಇನಿಂಗ್ಸ್‌ ಮೊದಲ 9 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿದ್ದರು. ಆದರೆ, ಮುಂದಿನ 16 ಎಸೆತಗಳನ್ನು ಪೂರ್ಣಗೊಳಿಸುವ ಹೊತ್ತಿಗೆ ಅರ್ಧಶತಕವನ್ನು ಸಿಡಿಸಿದರು. ಆ ಮೂಲಕ ಯುವರಾಜ್‌ ಸಿಂಗ್‌ (Yuvraj Singh) ದಾಖಲೆಯನ್ನು ಮುರಿದಿದ್ದಾರೆ.

ನಿಧಾನಗತಿಯ ಆರಂಭದ ನಂತರ ಅಭಿಷೇಕ್ ಶರ್ಮಾ ತಮ್ಮ ಲಯ ಕಂಡುಕೊಂಡರು ಮತ್ತು ಮುಕ್ತವಾಗಿ ರನ್ ಗಳಿಸಲು ಪ್ರಾರಂಭಿಸಿದರು. ಅವರು ನಾಲ್ಕನೇ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಐದನೇ ಓವರ್‌ನಲ್ಲಿ ಎರಡು ಸಿಕ್ಸರ್‌ ಬಾರಿಸಿದರು. ಆರನೇ ಓವರ್‌ನಲ್ಲಿ ಅವರು, ಮೊಹಮ್ಮದ್ ಸೈಫುದ್ದೀನ್ ವಿರುದ್ಧ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಅಭಿಷೇಕ್ 25 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು.75 ರನ್ ಗಳಿಸಿದ ನಂತರ ಅವರು ವಿಕೆಟ್‌ ಒಪ್ಪಿಸಿದರು. ಅವರ 37 ಎಸೆತಗಳ ಇನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿವೆ.

IND vs BAN: ಬಾಂಗ್ಲಾದೇಶ ಎದುರು ಟಾಸ್‌ ಸೋತ ಭಾರತ ಮೊದಲ ಬ್ಯಾಟಿಂಗ್‌!

ಯುವರಾಜ್‌ ಸಿಂಗ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮಾ

ಈ ಇನಿಂಗ್ಸ್‌ನಲ್ಲಿ ಅಭಿಷೇಕ್ ಶರ್ಮಾ ತಮ್ಮ ಮೆಂಟರ್‌ ಹಾಗೂ ಕೋಚ್‌ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ. 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅವರ ಐದನೇ ಟಿ20ಐ ಅರ್ಧಶತಕವಾಗಿದೆ. ಯುವರಾಜ್ ಸಿಂಗ್ ಎರಡು ಶತಕಗಳು ಸೇರಿದಂತೆ ನಾಲ್ಕು ಬಾರಿ ಮಾತ್ರ ಐವತ್ತಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಭಾರತ ಪರ 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಇದರಲ್ಲಿ ಅವರು ಏಳು ಅರ್ಧಶತಕಗಳನ್ನು ಸಿಡಿಸಿದ್ದಾರೆ.



ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತ ಪರ 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ವಿವರವನ್ನು ಇಲ್ಲಿ ನೀಡಲಾಗಿದೆ.

ಸೂರ್ಯಕುಮಾರ್ ಯಾದವ್ - 7

ರೋಹಿತ್ ಶರ್ಮಾ - 6

ಅಭಿಷೇಕ್ ಶರ್ಮಾ - 5

ಯುವರಾಜ್ ಸಿಂಗ್ - 4

ಕೆಎಲ್ ರಾಹುಲ್ - 3

Asia Cup: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ವಿರುದ್ಧ ಕ್ರಮ ಜರುಗಿಸುವಂತೆ ಸುನೀಲ್‌ ಗವಾಸ್ಕರ್‌ ಆಗ್ರಹ!

ಶತಕ ವಂಚಿತರಾದ ಅಭಿಷೇಕ್ ಶರ್ಮಾ

ಅಭಿಷೇಕ್ ಶರ್ಮಾ ಅದ್ಭುತವಾಗಿ ಬ್ಯಾಟ್‌ ಮಾಡುತ್ತಿದ್ದರು. ಅವರು ತಮ್ಮ ಟಿ20ಐ ವೃತ್ತಿಜೀವನದ ಮೂರನೇ ಶತಕ ಗಳಿಸುವ ಅವಕಾಶವನ್ನು ಹೊಂದಿದ್ದರು. ಆದರೆ ಅವರು ಅದನ್ನು ಕಳೆದುಕೊಂಡರು. ಸೂರ್ಯಕುಮಾರ್ ಯಾದವ್ ಅವರೊಂದಿಗೆ ಹೊಂದಾಣಿಕೆಯ ಕೊರತೆಯಿಂದಾಗಿ ಅಭಿಷೇಕ್ ಶರ್ಮಾ ರನೌಟ್ ಆಗಬೇಕಾಯಿತು. ಅವರು 37 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 75 ರನ್ ಸಿಡಿಸಿದರು.