ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಲಾರ್ಡ್ಸ್‌ ಅಂಗಣದಲ್ಲಿ ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಕೆಎಲ್‌ ರಾಹುಲ್‌!

ಇಂಗ್ಲೆಂಡ್‌ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯದ ಮೂರನೇ ದಿನ ಕೆಎಲ್‌ ರಾಹುಲ್‌ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಅಂಗಣದಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ ಎರಡು ಶತಕಗಳನ್ನು ಬಾರಿಸಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಯನ್ನು ಬರೆದಿದ್ದಾರೆ.

ಲಾರ್ಡ್ಸ್‌ ಅಂಗಣದಲ್ಲಿ ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಕೆಎಲ್‌ ರಾಹುಲ್‌!

ಟೆಸ್ಟ್‌ ವೃತ್ತಿ ಜೀವನದ 10ನೇ ಶತಕವನ್ನು ಬಾರಿಸಿದ ಕೆಎಲ್‌ ರಾಹುಲ್.

Profile Ramesh Kote Jul 12, 2025 7:41 PM

ಲಂಡನ್‌: ಇಂಗ್ಲೆಂಡ್‌ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯದ (IND vs ENG) ಎರಡನೇ ದಿನ ಭಾರತ ತಂಡದ ಬ್ಯಾಟ್ಸ್‌ಮನ್‌ ಕೆಲ್‌ ರಾಹುಲ್‌ (KL Rahul) ಶತಕವನ್ನು ಬಾರಿಸಿದರು. ಈ ಸರಣಿಯಲ್ಲಿ ಕೆಎಲ್‌ ರಾಹುಲ್‌ ದಾಖಲಿಸಿದ ಎರಡನೇ ಶತಕ ಇದಾಗಿದೆ. ಅವರು ಮೂರಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಲು 177 ಎಸೆತಗಳನ್ನು ತೆಗೆದುಕೊಂಡಿದ್ದರು. ಆದರೆ, ಶತಕವನ್ನು ಬಾರಿಸಿದ ತಕ್ಷಣ ಶೋಯೆಬ್‌ ಬಷೀರ್‌ಗೆ ಅವರು ವಿಕೆಟ್‌ ಒಪ್ಪಿಸಿದರು. ಅಂದ ಹಾಗೆ ಈ ಶತಕದ ಮೂಲಕ ಕನ್ನಡಿಗ ಕೆಎಲ್‌ ರಾಹುಲ್‌ ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಅಂಗಣದಲ್ಲಿ (Lords) ನೂತನ ಮೈಲುಗಲ್ಲು ತಲುಪಿದ್ದಾರೆ.

ಕೆಎಲ್‌ ರಾಹುಲ್‌ ಅವರು ಲಾರ್ಡ್ಸ್‌ ಅಂಗಣದಲ್ಲಿ ಒಟ್ಟು ಎರಡು ಶತಕಗಳನ್ನು ಬಾರಿಸಿದ್ದಾರೆ. ಆ ಮೂಲಕ ಈ ಅಂಗಣದಲ್ಲಿ ಎರಡು ಶತಕಗಳನ್ನು ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಇದಕ್ಕೂ ಮುನ್ನ ದಿಲೀಪ್‌ ವೆಂಗ್ಸರ್ಕಾರ್‌ ಅವರು ಲಾರ್ಡ್ಸ್‌ನಲ್ಲಿ ಎರಡು ಶತಕಗಳನ್ನು ಬಾರಿಸಿದ್ದಾರೆ.

IND vs ENG-'ಶುಭಮನ್‌ ಗಿಲ್‌ 430 ರನ್‌ ಗಳಿಸಿದ್ದಾರೆ': ಡ್ಯೂಕ್‌ ಬಾಲ್‌ ಸಿಇಒ ಟೀಕೆಗಳಿಗೆ ತಿರುಗೇಟು!

ಲಾರ್ಡ್ಸ್‌ ಅಂಗಣದಲ್ಲಿ ವಿಶೇಷ ದಾಖಲೆ ಬರೆದ ಕೆಎಲ್‌ ರಾಹುಲ್‌

ಲಂಡನ್‌ನ ಲಾರ್ಡ್ಸ್‌ ಅಂಗಣದಲ್ಲಿ ಎರಡು ಶತಕಗಳನ್ನು ಬಾರಿಸಿದ ಏಷ್ಯಾದ ಮೊದಲ ಆರಂಭಿಕ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಕೆಎಲ್‌ ರಾಹುಲ್‌ ಬರೆದಿದ್ದಾರೆ. ಈ ಅಂಗಣದಲ್ಲಿ ಯಾರೊಬ್ಬ ಏಷ್ಯಾದ ಆರಂಭಿಕ ಬ್ಯಾಟ್ಸ್‌ಮನ್‌ ಒಂದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿಲ್ಲ. ದಿಲೀಪ್‌ ವೆಗ್ಸರ್ಕಾರ್‌ ಅವರು ಲಾರ್ಡ್ಸ್‌ ಅಂಗಣದಲ್ಲಿ ಮೂರು ಶತಕಗಳನ್ನು ಬಾರಿಸಿದ್ದಾರೆ. ಆದರೆ, ಆರಂಭಿಕ ಬ್ಯಾಟ್ಸ್‌ಮನ್‌ ಆಗಿರಲಿಲ್ಲ. ‌



ಕೆಎಲ್‌ ರಾಹುಲ್ 2021 ರಲ್ಲಿ ಲಾರ್ಡ್ಸ್‌ನಲ್ಲಿ ತಮ್ಮ ಮೊದಲ ಟೆಸ್ಟ್ ಶತಕವನ್ನು ಗಳಿಸಿದ್ದರು. ಅವರ ಶತಕದ ಸಹಾಯದಿಂದ ಭಾರತ ತಂಡ, 364 ರನ್‌ಗಳ ದೊಡ್ಡ ಮೊತ್ತವನ್ನು ದಾಖಲಿಸಿತು. ಆ ಪಂದ್ಯವನ್ನು ಪ್ರವಾಸಿ ತಂಡವು 272 ರನ್‌ಗಳ ಗುರಿಯನ್ನು ಕಾಯ್ದುಕೊಂಡು 151 ರನ್‌ಗಳಿಂದ ಗೆದ್ದುಕೊಂಡಿತ್ತು.

ಫಾರ್ಮ್‌ ಮುಂದುವರಿಸಿದ ಕೆಎಲ್‌ ರಾಹುಲ್‌

ಕೆಎಲ್‌ ರಾಹುಲ್‌ ಇಂಗ್ಲೆಂಡ್‌ ನೆಲದಲ್ಲಿ ತಮ್ಮ ಬ್ಯಾಟಿಂಗ್‌ ಫಾರ್ಮ್‌ ಅನ್ನು ಮುಂದುವರಿಸಿದ್ದಾರೆ. ಅವರು ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಕ್ರಮವಾಗಿ 42 ರನ್‌ ಹಾಗೂ 137 ರನ್‌ಗಳನ್ನು ಕಲೆ ಹಾಕಿದ್ದರು. ನಂತರ ಎಜ್‌ಬಾಸ್ಟನ್‌ ಟೆಸ್ಟ್‌ ಪಂದ್ಯದಲ್ಲಿ ಅವರು ಅರ್ಧಶತಕವನ್ನು ಬಾರಿಸಿದ್ದರು. ಇದೀಗ ಲಾರ್ಡ್ಸ್‌ ಅಂಗಣದಲ್ಲಿ ಪ್ರಥಮ ಇನಿಂಗ್ಸ್‌ನಲ್ಲಿ ಶತಕವನ್ನು ಬಾರಿಸಿದ್ದು, ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡುವ ಅಗತ್ಯವಿದೆ. ಇನ್ನು ಕೆಎಲ್‌ ರಾಹುಲ್‌ ಜೊತೆ ಬ್ಯಾಟ್‌ ಮಾಡಿದ್ದ ರಿಷಭ್‌ ಪಂತ್‌ 112 ಎಸೆತಗಳಲ್ಲಿ 74 ರನ್‌ ಗಳಿಸಿದ್ದರು. ಆದರೆ, ಅವರು ಅನಿರೀಕ್ಷಿತವಾಗಿ ರನ್‌ಔಟ್‌ ಆಗಿದ್ದಾರೆ. ಸದ್ಯ ಭಾರತ ತಂಡ 86 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 302 ರನ್‌ಗಳನ್ನು ಕಲೆ ಹಾಕಿದೆ. ರವೀಂದ್ರ ಜಡೇಜಾ ಹಾಗೂ ನಿತೀಶ್‌ ರೆಡ್ಡಿ ಬ್ಯಾಟ್‌ ಮಾಡುತ್ತಿದ್ದಾರೆ.