ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಈ ಒಂದೇ ಒಂದು ಕಾರಣಕ್ಕೆ ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌ ವಿರುದ್ದ ಡೇಲ್‌ ಸ್ಟೇನ್‌ ಆಕ್ರೋಶ!

Dale steyn on Washington, Jadeja: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಆದರೆ, ಈ ಪಂದ್ಯದಲ್ಲಿ ಹ್ಯಾಂಡ್‌ಶೇಕ್‌ ವಿವಾದದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ ಹಸ್ತಲಾಘವ ನೀಡದ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಡೇಲ್‌ ಸ್ಟೇನ್‌ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌ ವಿರುದ್ದ ಡೇಲ್‌ ಸ್ಟೇನ್‌ ಆಕ್ರೋಶ!

ವಾಷಿಂಗ್ಟನ್‌ ಸುಂದರ್‌, ರವೀಂದ್ರ ಜಡೇಜಾ ವಿರುದ್ಧ ಡೇಲ್‌ ಸ್ಟೇನ್‌ ಕಿಡಿ.

Profile Ramesh Kote Jul 29, 2025 4:35 PM

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ (IND vs ENG) ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ರವೀಂದ್ರ ಜಡೇಜಾ (Ravindra Jadeja) ಹಾಗೂ ವಾಷಿಂಗ್ಟನ್‌ ಸುಂದರ್‌ (Washington Sundar) ಶತಕಗಳನ್ನು ಸಿಡಿಸುವ ಮೂಲಕ ನಾಲ್ಕನೇ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.ಆದರೆ, ಒಂದೇ ಒಂದು ಕಾರಣದಿಂದ ಈ ಇಬ್ಬರೂ ಆಟಗಾರರನ್ನು ದಕ್ಷಿಣ ಆಫ್ರಿಕಾ ಮಾಜಿ ವೇಗಿ ಡೇಲ್‌ ಸ್ಟೇನ್‌ ಟೀಕಿಸಿದ್ದಾರೆ. ಮ್ಯಾಂಚೆಸ್ಟರ್‌ ಟೆಸ್ಟ್‌ ಬಳಿಕ ರವೀಂದ್ರ ಜಡೇಜಾ, ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ಗೆ ಹ್ಯಾಂಡ್‌ಶೇಕ್‌ ನೀಡಲು ನಿರಾಕರಿಸಿದ್ದರು. ಇದು ಸಾಕಷ್ಟು ವಿವಾದವನ್ನು ಹುಟ್ಟಿ ಹಾಕಿತ್ತು. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಜುಲೈ 27 ರಂದು ಅಂತ್ಯವಾಗಿದ್ದ ನಾಲ್ಕನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡ 358 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ನಂತರ ಪ್ರಥಮ ಇನಿಂಗ್ಸ್‌ ನಡೆಸಿದ್ದ ಇಂಗ್ಲೆಂಡ್‌ ತಂಡ 669 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ 300ಕ್ಕೂ ಅಧಿಕ ರನ್‌ಗಳ ಹಿನ್ನಡೆಯನ್ನು ಟೀಮ್‌ ಇಂಡಿಯಾ ಅನುಭವಿಸಿತ್ತು. ನಂತರ ದ್ವಿತೀಯ ಇನಿಂಗ್ಸ್‌ ಆರಂಭಿಸಿದ್ದ ಭಾರತ ತಂಡ ಶೂನ್ಯ ಸಂಪಾದನೆಯಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಕೆಎಲ್‌ ರಾಹುಲ್‌ 90 ರನ್‌ಗಳನ್ನು ಕಲೆ ಹಾಕಿ ಔಟ್‌ ಆದರು. ಶುಭಮನ್‌ ಗಿಲ್‌, ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ ಶತಕಗಳನ್ನು ಗಳಿಸಿದರು. ಆ ಮೂಲಕ ಸೋಲಿನಿಂದ ಭಾರತ ತಂಡವನ್ನು ಪಾರು ಮಾಡಿದ್ದಾರೆ.

IND Vs ENG 5th Test: ಓವಲ್‌ ಟೆಸ್ಟ್‌ಗೆ ಶಾರ್ದೂಲ್‌, ಅಂಶುಲ್‌ ಮುಂದುವರಿಕೆ ಅನುಮಾನ

ಅಂದ ಹಾಗೆ ಪಂದ್ಯದ ಐದನೇ ಹಾಗೂ ಅಂತಿಮ ದಿನ ಹೈ ಡ್ರಾಮಾ ನಡೆದಿತ್ತು. ವಾಷಿಂಗ್ಟನ್‌ ಸುಂದರ್‌ ಹಾಗೂ ರವೀಂದ್ರ ಜಡೇಜಾ ಇಡೀ ದಿನ ಬ್ಯಾಟಿಂಗ್‌ ನಡೆಸಿದ್ದರು. ಇದರಿಂದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಹತಾಶರಾಗಿದ್ದರು. ಈ ವೇಳೆ ವಾಷಿಂಗ್ಟನ್‌ ಹಾಗೂ ಜಡೇಜಾ ಇಬ್ಬರೂ ಶತಕಗಳನ್ನು ಸಿಡಿಸುವುದಕ್ಕೂ ಮುನ್ನ ಬೆನ್‌ ಸ್ಟೋಕ್ಸ್‌ ಡ್ರಾ ಘೋಷಿಸಲು ಭಾರತ ತಂಡಕ್ಕೆ ತಿಳಿಸಿದ್ದರು. ಆದರೆ, ಈ ಇಬ್ಬರೂ ಶತಕಗಳನ್ನು ಪೂರ್ಣಗೊಳಿಸುವ ಕಾರಣ ಇಂಗ್ಲೆಂಡ್‌ ನಾಯಕನ ಮನವಿಯನ್ನು ಟೀಮ್‌ ಇಂಡಿಯಾ ತಿರಸ್ಕರಿಸಿತ್ತು. ವಾಷಿಂಗ್ಟನ್‌ ಸುಂದರ್‌ ಶತಕ ಸಿಡಿಸಿದ ಬಳಿಕ ಪಂದ್ಯವನ್ನು ಡ್ರಾಗೆ ಮುಗಿಸಲಾಯಿತು. ಈ ವೇಳೆ ಬೆನ್‌ ಸ್ಟೋಕ್ಸ್‌ ಅವರು ರವೀಂದ್ರ ಜಡೇಜಾಗೆ ಹಸ್ತಲಾಘವ ನೀಡಲು ಮುಂದಾದರು. ಆದರೆ, ಜಡೇಜಾ ಇದನ್ನು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಜಡೇಜಾ ಹಾಗೂ ವಾಷಿಂಗ್ಟನ್‌ ಅವರನ್ನು ದಕ್ಷಿಣ ಆಫ್ರಿಕಾ ಮಾಜಿ ವೇಗಿ ಡೇಲ್‌ ಸ್ಟೇನ್‌ ಟೀಕಿಸಿದ್ದಾರೆ.

IND vs ENG: ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ತಮ್ಮ ನೆಚ್ಚಿನ ಇನಿಂಗ್ಸ್‌ ಹೆಸರಿಸಿದ ಶುಭಮನ್‌ ಗಿಲ್!

"ಈ ನಿಂಬೆ ಹಣ್ಣಿನಲ್ಲಿ ಸಾಕಷ್ಟು ಪದರಗಳು ಇವೆ ಹಾಗೂ ಇದರಲ್ಲಿ ಒಂದೊಂದು ಪದರದಿಂದ ಕೆಲವೊಬ್ಬರು ಅಳುವಂತಾಗಿದೆ. ನಾನು ಈ ಪಂದ್ಯದಲ್ಲಿ ಒಂದು ಅಂಶವನ್ನು ಗಮನಿಸಿದ್ದೇನೆ, ಇಲ್ಲಿ ಬ್ಯಾಟ್ಸ್‌ಮನ್‌ಗಳು ಶತಕಗಳಿಗಾಗಿ ಆಡದೆ, ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಆಡುತ್ತಿದ್ದರು. ಇದು ಮುಖ್ಯ ಗುರಿಯಾಗಿತ್ತು. ಪಂದ್ಯ ಡ್ರಾನಲ್ಲಿ ಮುಗಿಯಿತು. ಅದು ಪೂರ್ಣಗೊಂಡ ನಂತರ ಫಲಿಯಾಂಶ ಏನೇ ಇದ್ದರೂ ಹ್ಯಾಂಡ್‌ಶೇಕ್‌ ನೀಡುವುದು ಸಾಂಪ್ರದಾಯ. ಆದರೆ, ಇದು ಮಾಡಿಲ್ಲವಾದರೆ ಸಜ್ಜನಿಕೆಯ ಕೆಲಸವೇ? ಅವು ಸುರಕ್ಷಿತವೆಂದು ಅರಿತುಕೊಳ್ಳುವ ಸಮಯ ಇದಲ್ಲ ಮತ್ತು ಈಗ ನಾವು ಕೆಲವು ಉಚಿತ ಮೈಲುಗಲ್ಲುಗಳನ್ನು ಬಯಸುತ್ತೇವೆ ಎಂದು ಹೇಳಲು ಇದು ಸಮಯವಲ್ಲ... ಆದರೂ ನಿಯಮಗಳ ಒಳಗೆ, ಇದು ಸ್ವಲ್ಪ ವಿಚಿತ್ರವೆನಿಸುತ್ತದೆ. ಅವರು ಚನ್ನಾಗಿ ಬ್ಯಾಟ್‌ ಮಾಡಿದ್ದಾರೆ. ಆದರೆ, ಕೊನೆಯ ಗಂಟೆಯಲ್ಲಿ ಕನಿಷ್ಠ ಸ್ವಲ್ಪ ಆಕ್ರಮಣಕಾರಿಯಾಗಿ ಆಡಬಹುದಾಗಿತ್ತು,": ಎಂದು ಡೇಲ್‌ ಸ್ಟೇನ್‌ ತಿಳಿಸಿದ್ದಾರೆ.

ನಾಲ್ಕು ಪಂದ್ಯಗಳ ಅಂತ್ಯಕ್ಕೆ ಭಾರತ ತಂಡ 1-2 ಅಂತರದಲ್ಲಿ ಹಿನ್ನಡೆಯನ್ನು ಅನುಭವಿಸಿದೆ. ಇದೀಗ ಐದನೇ ಹಾಗೂ ಟೆಸ್ಟ್‌ ಸರಣಿಯ ಕೊನೆಯ ಪಂದ್ಯ ಜುಲೈ 31 ರಂದು ಲಂಡನ್‌ನ ಕೆನಿಂಗ್ಟನ್‌ ಓವಲ್‌ನಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಗೆಲುವು ಪಡೆದರೆ, ಭಾರತ ತಂಡ ಈ ಟೆಸ್ಟ್‌ ಸರಣಿಯನ್ನು 2-2 ಅಂತರದಲ್ಲಿ ಡ್ರಾ ಸಾಧಿಸಲಿದೆ.