IND vs ENG: ಓವಲ್ ಪಿಚ್ ಕ್ಯುರೇಟರ್ ಜತೆ ಗಂಭೀರ್ ಜಗಳದ ಬಗ್ಗೆ ಶುಭಮನ್ ಗಿಲ್ ಪ್ರತಿಕ್ರಿಯೆ!
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಇತ್ತೀಚೆಗೆ ಕೆನಿಂಗ್ಟನ್ ಓವಲ್ ಪಿಚ್ ಕ್ಯುರೇಟರ್ ಲೀ ಫೋರ್ಟಿಸ್ ಜೊತೆ ವಾಗ್ವಾದ ನಡೆಸಿದ್ದರು. ಇದೀಗ ಈ ಬಗ್ಗೆ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಪ್ರತಿಕ್ರಿಯೆ ನೀಡಿದ್ದಾರೆ. ಐದನೇ ಟೆಸ್ಟ್ ಪಂದ್ಯ ಜುಲೈ 31 ರಂದು ಆರಂಭವಾಗಲಿದೆ.

ಗೌತಮ್ ಗಂಭೀರ್-ಪಿಚ್ ಕ್ಯುರೇಟರ್ ಜಗಳದ ಬಗ್ಗೆ ಗಿಲ್ ಪ್ರತಿಕ್ರಿಯೆ.

ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ಭಾರತ ತಂಡದ ಐದು ಪಂದ್ಯಗಳ (IND vs ENG) ಸರಣಿಯ ಕೊನೆಯ ಪಂದ್ಯ ಗುರುವಾರದಿಂದ (ಜುಲೈ 31) ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಇತ್ತೀಚೆಗೆ ಓವಲ್ ಮೈದಾನದ ಚೀಫ್ ಪಿಚ್ ಕ್ಯುರೇಟರ್ ಲೀ ಫೋರ್ಟಿಸ್ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದರು. ಈ ವಿಷಯದ ಬಗ್ಗೆ ಸಾಕಷ್ಟು ಗದ್ದಲವಿತ್ತು. ಇದೀಗ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ (Shubman Gill) 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಗಂಭೀರ್ ಹಾಗೂ ಲೀ ಫೋರ್ಟಿಸ್ ಅವರ ನಡುವಣ ಜಗಳದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗಂಭೀರ್ ಮತ್ತು ಪಿಚ್ ಕ್ಯುರೇಟರ್ ನಡುವಿನ ವಾಗ್ವಾದದ ಬಗ್ಗೆ ಶುಭಮನ್ ಗಿಲ್ ದೊಡ್ಡ ಹೇಳಿಕೆ ನೀಡಿದ್ದಾರೆ. ಕ್ಯುರೇಟರ್, ಮುಖ್ಯ ಕೋಚ್ ಜೊತೆ ಏಕೆ ವಾದಿಸಿದರು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. "ನಿನ್ನೆ(ಜುಲೈ 29) ಏನಾಯಿತು ಮತ್ತು ಪಿಚ್ ಕ್ಯುರೇಟರ್ ಇದನ್ನು ಏಕೆ ಮಾಡಿದರು ಎಂದು ನನಗೆ ತಿಳಿದಿಲ್ಲ. ನಾವು ನಾಲ್ಕು ಪಂದ್ಯಗಳನ್ನು ಆಡಿದ್ದೇವೆ ಮತ್ತು ಯಾರೂ ನಮ್ಮನ್ನು ತಡೆಯಲು ಪ್ರಯತ್ನಿಸಲಿಲ್ಲ. ಎಲ್ಲರೂ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ ಮತ್ತು ಕೋಚ್ ಮತ್ತು ನಾಯಕ ಹಲವು ಬಾರಿ ಪಿಚ್ ಅನ್ನು ನೋಡಲು ಹೋಗಿದ್ದಾರೆ. ಅಷ್ಟೊಂದು ಗದ್ದಲ ಯಾಕೆ ಇತ್ತು ಅಂತ ನನಗೆ ಗೊತ್ತಿಲ್ಲ," ಎಂದು ತಿಳಿಸಿದ್ದಾರೆ.
IND vs ENG: 5ನೇ ಟೆಸ್ಟ್‌ನಿಂದ ಬೆನ್ ಸ್ಟೋಕ್ಸ್ ಹೊರಗುಳಿಯಲು ಕಾರಣವೇನು?
"ಕ್ಯುರೇಟರ್ ಪಿಚ್ ಅನ್ನು ನೋಡಬೇಡಿ ಅಥವಾ ಮೂರು ಮೀಟರ್ ಹಿಂದಿನಿಂದ ನೋಡಬೇಡಿ ಎಂದು ಹೇಳಿದ್ದರೆ, ನಾವು ಈ ರೀತಿ ಇದನ್ನು ಹಿಂದೆಂದೂ ನೋಡಿಲ್ಲ. ನಾವು ಬಹಳ ಸಮಯದಿಂದ ಕ್ರಿಕೆಟ್ ಆಡುತ್ತಿದ್ದೇವೆ ಮತ್ತು ನೀವು ರಬ್ಬರ್ ಸ್ಪೈಕ್ಸ್ ಅಥವಾ ಬರಿ ಪಾದಗಳಲ್ಲಿ ನೀವು ವಿಕೆಟ್ ಅನ್ನು ಹತ್ತಿರದಿಂದ ನೋಡಲು ಅವಕಾಶವಿದೆ. ಇದು ಕೋಚ್ ಮತ್ತು ನಾಯಕನ ಕೆಲಸ. ಹಾಗಾದರೆ, ಕ್ಯುರೇಟರ್ ನಮಗೆ ಹಾಗೆ ಮಾಡಲು ಏಕೆ ಅವಕಾಶ ನೀಡಲಿಲ್ಲ ಎಂದು ನನಗೆ ತಿಳಿದಿಲ್ಲ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶುಭಮನ್ ಗಿಲ್ ಅಂತಿಮ ಟೆಸ್ಟ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಲಭ್ಯತೆಯ ಬಗ್ಗೆಯೂ ಮಾತನಾಡಿದರು. ಅನುಭವಿ ವೇಗದ ಬೌಲರ್ ಪ್ರಸ್ತುತ ಸರಣಿಯ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಆಡಬೇಕಾಗಿತ್ತು. ಅವರು ಈಗಾಗಲೇ ಮೂರು ಪಂದ್ಯಗಳನ್ನು ಆಡಿದ್ದಾರೆ, ಈಗ ಅವರು ನಾಲ್ಕನೇ ಬಾರಿ ಮೈದಾನಕ್ಕೆ ಇಳಿಯುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
IND vs ENG: ಐದನೇ ಟೆಸ್ಟ್‌ಗೆ ಭಾರತ ತಂಡದಲ್ಲಿ 3 ಬದಲಾವಣೆಯನ್ನು ಸೂಚಿಸಿದ ಇರ್ಫಾನ್ ಪಠಾಣ್!
"ಜಸ್‌ಪ್ರೀತ್ ಬುಮ್ರಾ ಅವರನ್ನು ಆಡಿಸುವ ನಿಟ್ಟಿನಲ್ಲಿ ನಾವು ನಾಳೆ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಪಿಚ್ ನೋಡಲು ಹಸಿರಿನಿಂದ ಕೂಡಿದೆ. ಹಾಗಾಗಿ ನೋಡೋಣ," ಎಂದು ಸುದ್ದಿಗೋಷ್ಠಿಯಲ್ಲಿ ಶುಭಮನ್ ಗಿಲ್ ತಿಳಿಸಿದ್ದಾರೆ. ಹಾಗಾಗಿ ಜಸ್‌ಪ್ರೀತ್ ಬುಮ್ರಾ ಇನ್ನೂ ಐದನೇ ಟೆಸ್ಟ್ ಪಂದ್ಯದಲ್ಲಿ ಆಡುವ ಆಸೆ ಇನ್ನೂ ಜೀವಂತವಾಗಿದೆ ಎಂದು ಹೇಳಬಹುದು.