ಮಾನವೀಯತೆಯ ಸಂದೇಶ ಸಾರಿದ ಮುಂಬೈ ಪೊಲೀಸ್: ಬೀದಿ ಬದಿಯ ಮಗುವಿಗೆ ತೊಟ್ಟಿಲು ಉಡುಗೊರೆ
Viral Video: ಕಾನೂನು ಪಾಲನೆಯ ರಕ್ಷಣೆಯ ಜತೆಗೆ ಮಾನವೀಯತೆಯಲ್ಲೂ ಕೈ ಜೋಡಿಸಿರುವ ಮುಂಬೈ ಪೊಲೀಸ್ ಅಧಿಕಾರಿಯೊಬ್ಬರ ವಿಡಿಯೊ ಎಲ್ಲರ ಮನ ಗೆದ್ದಿದೆ. ಮುಂಬೈ ಬೀದಿಯಲ್ಲಿ ವಾಸಿಸುವ ಕುಟುಂಬಕ್ಕೆ ಮಗುವಿನ ತೊಟ್ಟಿಲನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಧಿಕಾರಿ ಸುಶೀಲ್ ಶಿಖರೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ.
ಬೀದಿ ಬದಿಯ ಮಗುವಿಗೆ ತೊಟ್ಟಿಲು ಉಡುಗೊರೆ -
ಮುಂಬೈ, ಫೆ. 5: ಮಾನವೀಯತೆ ಇನ್ನೂ ಜೀವಂತವಾಗಿ ಉಳಿದಿದೆ ಅನ್ನೋದಕ್ಕೆ ಈ ಘಟನೆ ಸಾಕ್ಷಿ. ಕಾನೂನು ಪಾಲನೆಯ ರಕ್ಷಣೆಯ ಜತೆಗೆ ಮಾನವೀಯತೆಯಲ್ಲೂ ಕೈ ಜೋಡಿಸಿರುವ ಮುಂಬೈ ಪೊಲೀಸ್ ಅಧಿಕಾರಿಯೊಬ್ಬರ ವಿಡಿಯೊ ಎಲ್ಲರ ಮನ ಗೆದ್ದಿದೆ. ಮುಂಬೈ ಬೀದಿಯಲ್ಲಿ ವಾಸಿಸುವ ಕುಟುಂಬಕ್ಕೆ ಮಗುವಿನ ತೊಟ್ಟಿಲನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಧಿಕಾರಿ ಸುಶೀಲ್ ಶಿಖರೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊವನ್ನು ಶೇರ್ (Viral Video) ಮಾಡಿದ್ದಾರೆ.
ರಸ್ತೆ ಬದಿಯಲ್ಲಿ ವಾಸವಿದ್ದ ತಾಯಿ ಮತ್ತು ಆಕೆಯ ಮಗುವಿನ ಬಡತನವನ್ನು ಗಮನಿಸಿದ ಪೊಲೀಸ್ ಅಧಿಕಾರಿ ತೊಟ್ಟಿಲನ್ನು ನೀಡುವ ಮೂಲಕ ಸಹಾಯ ಮಾಡಿದ್ದಾರೆ. ಅವರು ಹೊಸ ತೊಟ್ಟಿಲನ್ನು ಉಡುಗೊರೆಯಾಗಿ ನೀಡುವ ಮೂಲಕ ಹೃದಯ ಗೆದ್ದಿದ್ದಾರೆ. ಅಧಿಕಾರಿ ಕರ್ತವ್ಯ ಮುಗಿಸಿ ಮನೆಗೆ ಹೋಗುವಾಗ, ತಾತ್ಕಾಲಿಕ ಮರದ ತೊಟ್ಟಿಲಿನಲ್ಲಿ ಮಗು ಅಳುತ್ತಿರುವುದನ್ನು ಗಮನಿಸಿದ್ದಾರೆ. ಸೊಳ್ಳೆಗಳು ಮತ್ತು ನೊಣಗಳ ಕಾಟದಿಂದ ಮಗು ಕೂಗುತ್ತಿದ್ದರು ಆ ತಾಯಿ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದರು.
ವಿಡಿಯೊ ನೋಡಿ:
ಇದನ್ನು ಅರಿತ ಪೊಲೀಸ್ ಅಧಿಕಾರಿ ಮಾರುಕಟ್ಟೆಯಿಂದ ಹೊಸದಾದ ತೊಟ್ಟಿಲನ್ನು ಖರೀದಿ ಮಾಡಿದ್ದು ಮಗುವನ್ನು ಸುರಕ್ಷಿತವಾಗಿ ಮಲಗಿಸುವ ಮೂಲಕ ಆ ತಾಯಿಯ ಮುಖದಲ್ಲಿ ಮಂದ ಹಾಸ ಮೂಡಿಸಿದ್ದಾರೆ. ಈ ಕೆಲಸಕ್ಕೆ ತಾಯಿ ಸಂತೋಷದಿಂದ ಅಧಿಕಾರಿಗೆ ಧನ್ಯವಾದ ಹೇಳಿದ್ದಾರೆ. ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು ಸುಮಾರು 600 ಸಾವಿರ ಲೈಕ್‌ಗಳನ್ನು ಪಡೆದಿದೆ.
ಮಕ್ಕಳ ಎದುರೇ ಮಹಿಳೆಯ ಜತೆ ಹೋಮ್ ಗಾರ್ಡ್ ಅಶ್ಲೀಲ ನೃತ್ಯ
ಬಳಕೆದಾರರೊಬ್ಬರು "ನಿಮ್ಮ ಕೆಲಸದಷ್ಟೇ ನಿಮ್ಮ ಹೃದಯವು ದೊಡ್ಡದಾಗಿದೆ" ಎಂದಿದ್ದಾರೆ. ಮತ್ತೊಬ್ಬರು, ʼʼಹೊಸ ತಲೆಮಾರಿನ ಪೊಲೀಸರು ಸದ್ದಿಲ್ಲದೆ ತಮ್ಮ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡುತ್ತಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ.