IND vs ENG: ಮೂರನೇ ಟಿ20ಐ ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ XI ಪ್ರಕಟ!
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಜುಲೈ 7 ರಂದು ಟ್ರೆಂಟ್ ಬ್ರಿಡ್ಜ್‌ನ ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಇಂಗ್ಲೆಂಡ್ ತಂಡದ ಪ್ಲೇಯಿಂಗ್ XI ಪ್ರಕಟವಾಗಿದ್ದು, ಕಳೆದ ಪಂದ್ಯವನ್ನು ಆಡಿದ್ದ ಅದೇ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ.
ಮೂರನೇ ಟಿ20ಐಗೆ ಇಂಗ್ಲೆಂಡ್ ಪ್ಲೇಯಿಂಗ್ XI. -
ಟ್ರೆಂಟ್ ಬ್ರಿಡ್ಜ್: ಭಾರತ ಎದುರು ಎರಡನೇ ಪಂದ್ಯದಲ್ಲಿ (IND vs ENG) ಗೆಲುವಿನ ವಿಶ್ವಾಸದಲ್ಲಿರುವ ಇಂಗ್ಲೆಂಡ್ ತಂಡ, ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಪಂದ್ಯಕ್ಕೂ ಒಂದು ದಿನದ ಮುನ್ನ ಇಂಗ್ಲೆಂಡ್ ತಂಡದ ಪ್ಲೇಯಿಂಗ್ XI ಅನ್ನು ಪ್ರಕಟಿಸಲಾಗಿದೆ. ಅಂದ ಹಾಗೆ ಕಳೆದ ಪಂದ್ಯವನ್ನು ಆಡಿದ್ದ ಅದೇ ಆಡುವ ಬಳಗವನ್ನು ಮೂರನೇ ಪಂದ್ಯಕ್ಕೂ ಉಳಿಸಿಕೊಳ್ಳಲಾಗಿದೆ. ಈಗಾಗಲೇ ಎರಡನೇ ಪಂದ್ಯವನ್ನು ಗೆದ್ದಿರುವ ಹ್ಯಾರಿ ಬ್ರೂಕ್ (Harry Brook) ನಾಯಕತ್ವದ ಇಂಗ್ಲೆಂಡ್ ಟಿ20ಐ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ.
ಇಲ್ಲಿನ ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಮೂರನೇ ಪಂದ್ಯವನ್ನು ಗೆದ್ದು ಟಿ20ಐ ಸರಣಿಯಲ್ಲಿ ಮುನ್ನಡೆಯನ್ನು ಪಡೆಯಲು ಆಂಗ್ಲರು ಎದುರು ನೋಡುತ್ತಿದ್ದಾರೆ. ಇದಕ್ಕೂ ಮುನ್ನ ಚೆಸ್ಟರ್-ಲೀ-ಸ್ಟ್ರೀಟ್‌ನಲ್ಲಿ ನಡೆದಿದ್ದ ಮೊದಲನೇ ಪಂದ್ಯ ಮಳೆಗೆ ಬಲಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ 189 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಇಂಗ್ಲೆಂಡ್ ತಂಡದ ಚೇಸಿಂಗ್‌ಗೆ ಮಳೆ ಅಡ್ಡಿ ಉಂಟು ಮಾಡಿತ್ತು. ಅಂತಿಮವಾಗಿ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಯಿತು.
ಭಾರತ ಟಿ20 ತಂಡದಲ್ಲಿ ರಜತ್ ಪಾಟಿದಾರ್‌ಗೆ ಸ್ಥಾನ ನೀಡಿ ಎಂದ ಇರ್ಫಾನ್ ಪಠಾಣ್!
ಮೂರನೇ ಟಿ20ಐ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI
ಫಿಲ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್ (ನಾಯಕ), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಜಾಶ್ ಟಂಗ್
ಇಂಗ್ಲೆಂಡ್ ಪರ ಮತ್ತೊಮ್ಮೆ ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಆರಂಭಿಕ ಬ್ಯಾಟರ್‌ಗಳಾಗಿ ಕಣಕ್ಕಿಳಿದಿದ್ದಾರೆ. ಓಲ್ಡ್ ಟ್ರಾಫೋರ್ಡ್‌ನಲ್ಲಿ ನಡೆದಿದ್ದ ಹಿಂದಿನ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಜೇಕಬ್ ಬೆಥೆಲ್ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಟಾಮ್ ಬ್ಯಾಂಟನ್ ಹಾಗೂ ಸ್ಯಾಮ್ ಕರನ್ ತಂಡದ ಅಗ್ರ ಹಾಗೂ ಮಧ್ಯಮ ಕ್ರಮಾಂಕಕ್ಕೆ ಮತ್ತಷ್ಟು ಬಲ ತುಂಬಲಿದ್ದು, ವಿಲ್ ಜ್ಯಾಕ್ಸ್ ಅವರ ಆಲ್‌ರೌಂಡ್ ಸಾಮರ್ಥ್ಯ ಇಂಗ್ಲೆಂಡ್‌ನ ಟಿ20 ತಂಡದ ಪ್ರಮುಖ ಬಲವಾಗಿ ಮುಂದುವರಿದಿದೆ.
IND vs ENG: ತಮಾಷೆ ಮಾಡುತ್ತಿದ್ದೀರಾ? ಸಂಜು ಸ್ಯಾಮ್ಸನ್‌ಗೆ ಕೊಕ್ ನೀಡಿದ್ದಂತೆ ಸಂಜಯ್ ಮಾಂಜ್ರೇಕರ್ ಕಿಡಿ!
ಬೌಲಿಂಗ್ ವಿಭಾಗದಲ್ಲಿ ಜೋಫ್ರಾ ಆರ್ಚರ್ ಪ್ರಮುಖ ವೇಗದ ಅಸ್ತ್ರವಾಗಿದ್ದು, ಅವರಿಗೆ ಜಾಶ್ ಟಂಗ್ ಹಾಗೂ ಸ್ಯಾಮ್ ಕರನ್ ಉತ್ತಮ ಬೆಂಬಲ ನೀಡಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಆದಿಲ್ ರಶೀದ್ ಅವರ ಲೆಗ್‌ಸ್ಪಿನ್ ಹಾಗೂ ಲಿಯಾಮ್ ಡಾಸನ್ ಅವರ ಎಡಗೈ ಸ್ಪಿನ್ ಮಧ್ಯದ ಓವರ್‌ಗಳಲ್ಲಿ ನಾಯಕ ಹ್ಯಾರಿ ಬ್ರೂಕ್‌ಗೆ ಪರಿಣಾಮಕಾರಿ ಆಯ್ಕೆಗಳಾಗಿವೆ.
ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ಸರಣಿಯಲ್ಲಿ ಮುನ್ನಡೆ ಸಾಧಿಸಬಹುದೇ?
ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದರೆ, ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಹ್ಯಾರಿ ಬ್ರೂಕ್ ನಾಯಕತ್ವದ ತಂಡ ಸರಣಿಯನ್ನು ಬಹುತೇಕ ಮುನ್ನಡೆ ಸಾಧಿಸಲಿದೆ.
ಇನ್ನೊಂದೆಡೆ, ಭಾರತಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಸರಣಿಯನ್ನು ಸಮಬಲಗೊಳಿಸಿ ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಮಂಗಳವಾರದ ಪಂದ್ಯದಲ್ಲಿ ಗೆಲುವು ಸಾಧಿಸುವುದು ಪ್ರವಾಸಿ ತಂಡಕ್ಕೆ ಅತ್ಯಗತ್ಯವಾಗಿದೆ. ಟ್ರೆಂಟ್ ಬ್ರಿಡ್ಜ್ ಪಂದ್ಯದ ಬಳಿಕ ನಾಲ್ಕನೇ ಹಾಗೂ ಐದನೇ ಟಿ20 ಪಂದ್ಯಗಳು ನಡೆಯಲಿದ್ದು, ಇಂಗ್ಲೆಂಡ್ ಈ ಪಂದ್ಯವನ್ನು ಗೆದ್ದು ಸರಣಿಯ ಮೇಲೆ ಬಲಿಷ್ಠ ಹಿಡಿತ ಸಾಧಿಸುವ ಉದ್ದೇಶದಲ್ಲಿದೆ.