IND vs ENG: ಸಂಜು ಸ್ಯಾಮ್ಸನ್‌ರನ್ನು ಕೈ ಬಿಡಲು ಕಾರಣ ತಿಳಿಸಿದ ಆರ್ ಅಶ್ವಿನ್!
IND vs ENG: ಇಂಗ್ಲೆಂಡ್ ವಿರುದ್ಧ ಎರಡನೇನ ಟಿ20ಐ ಪಂದ್ಯದಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟ ನಿರ್ಧಾರದ ಬಗ್ಗೆ ಭಾರತದ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಗೌತಮ್ ಗಂಭೀರ್ ಅವರನ್ನು ಪ್ರಶ್ನಿಸಿದ್ದಾರೆ. ಅಂತಹ ನಿರ್ಧಾರಗಳು ತಂಡದ ವಾತಾವರಣವನ್ನು ಹಾಳು ಮಾಡುತ್ತವೆ ಎಂದು ಸ್ಪಿನ್ ದಿಗ್ಗಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಜು ಸ್ಯಾಮ್ಸನ್‌ಗೆ ಆರ್ ಅಶ್ವಿನ್ ಬೆಂಬಲ. -
ನವದೆಹಲಿ: ಭಾರತದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಎರಡನೇ ಟಿ20ಐ ಪಂದ್ಯದ ಪ್ಲೇಯಿಂಗ್ XIನಿಂದ ಕೈಬಿಟ್ಟ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ಟೀಕಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮ್ಯಾಂಚೆಸ್ಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲು ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಡಬೇಕಾಯಿತು. 2026ರ ಟಿ20 ವಿಶ್ವಕಪ್ ಟೂರ್ನಿಯ ನಾಕೌಟ್ ಹಂತಗಳಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಡುವುದು ಅನೇಕರಿಗೆ ವಿವಾದದ ವಿಷಯವಾಗಿತ್ತು.
ಸಂಜು ಸ್ಯಾಮ್ಸನ್ ಅವರಂಥ ಮ್ಯಾಚ್ ವಿನ್ನರ್ ಆಟಗಾರನನ್ನು ಒಳಗೊಂಡಂತೆ ಬದಲಾವಣೆಗಳು ತಂಡದೊಳಗೆ ಅಸಮಾಧಾನವನ್ನು ಉಂಟುಮಾಡಬಹುದು ಎಂದು ಮಾಜಿ ಭಾರತೀಯ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಅವರು ಸಂಜು ಸ್ಯಾಮ್ಸನ್ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ. ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಬಹುದಿತ್ತು ಎಂದು ಅವರು ನಂಬಿದ್ದಾರೆ. "ಸೂರ್ಯ ನಂತರ, ಈಗ ಸಂಜು ಅವರನ್ನು ಸಹ ಕೈಬಿಡಲಾಗಿದೆ; ಇದು ಎಲ್ಲಾ ಆಟಗಾರರು ತಾವು ಮುಂದಿನವರಾಗಬಹುದು ಎಂದು ಭಾವಿಸುವಂತೆ ಮಾಡಬಹುದು. ಇದು ತಂಡಕ್ಕೆ ಒಳ್ಳೆಯದಲ್ಲ," ಎಂದಿದ್ದಾರೆ.
IND vs ENG: ತಮಾಷೆ ಮಾಡುತ್ತಿದ್ದೀರಾ? ಸಂಜು ಸ್ಯಾಮ್ಸನ್‌ಗೆ ಕೊಕ್ ನೀಡಿದ್ದಂತೆ ಸಂಜಯ್ ಮಾಂಜ್ರೇಕರ್ ಕಿಡಿ!
"ಈ ಕ್ಷಣದಲ್ಲಿ ನನಗೆ ಕಳವಳವಾಗುತ್ತಿದೆ. ಸಂಜು ಸ್ಯಾಮ್ಸನ್ ಅವರನ್ನು ಇಷ್ಟು ಬೇಗ ತಂಡದಿಂದ ಕೈಬಿಟ್ಟಿರುವುದು ಆತಂಕ ಮೂಡಿಸಿದೆ. ಈಗ ಸಂಜು ಏನು ಯೋಚಿಸುತ್ತಿರಬಹುದು? ನೆಟ್ಸ್ ಅಭ್ಯಾಸಕ್ಕೆ ಹೋದಾಗ ಅವರಲ್ಲಿರುವ ಉತ್ಸಾಹದ ಮಟ್ಟ ಹೇಗಿರಬಹುದು?" ಎಂದು ಅಶ್ವಿನ್ ಪ್ರಶ್ನೆ ಮಾಡಿದ್ದಾರೆ.
ಭಾರತದ ಅಗ್ರ ಕ್ರಮಾಂಕದಲ್ಲಿ ಈಗಾಗಲೇ ಮೂವರು ಎಡಗೈ ಬ್ಯಾಟರ್‌ಗಳಿರುವ ಹಿನ್ನೆಲೆಯಲ್ಲಿ, ಸ್ಯಾಮ್ಸನ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸುವ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಚಿಂತನೆ ನಡೆಸಬಹುದು ಎಂದು ಅನುಭವಿ ಸ್ಪಿನ್ನರ್ ಅಭಿಪ್ರಾಯಪಟ್ಟಿದ್ದಾರೆ.
"ಸದ್ಯ ಅಗ್ರ ಕ್ರಮಾಂಕದಲ್ಲಿ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ ಹಾಗೂ ಇಶಾನ್ ಕಿಶನ್ ಎಂಬ ಮೂವರು ಎಡಗೈ ಬ್ಯಾಟರ್‌ಗಳಿದ್ದಾರೆ. ಆದ್ದರಿಂದ ಈಗ ಸಂಜುವನ್ನು ಮೂರನೇ ಕ್ರಮಾಂಕದಲ್ಲಿ ಆಡಿಸುವ ಬಗ್ಗೆ ಅವರು ಯೋಚಿಸಬಹುದು ಎಂದು ನಾನು ಹೇಳುತ್ತಿದ್ದೇನೆ. ಕೋಚಿಂಗ್ ಸಿಬ್ಬಂದಿ ಹಾಗೂ ಗೌತಮ್ ಗಂಭೀರ್ ಸೇರಿದಂತೆ ಎಲ್ಲರಿಗೂ ಸಂಜುಗೆ ನ್ಯಾಯಯುತವಾಗಿ ನಡೆದುಕೊಂಡಿಲ್ಲ ಎಂಬುದು ಗೊತ್ತಿದೆ. ಹೀಗಾಗಿ ಈಗ ಈ ಪರಿಸ್ಥಿತಿಯನ್ನು ಹೇಗಾದರೂ ಸಮತೋಲನಗೊಳಿಸಬೇಕಾದ ಅನಿವಾರ್ಯತೆ ತಂಡದ ಮೇಲಿದೆ," ಎಂದು ಆರ್ ಅಶ್ವಿನ್ ಹೇಳಿದ್ದಾರೆ.
ಭಾರತ ಟಿ20 ತಂಡದಲ್ಲಿ ರಜತ್ ಪಾಟಿದಾರ್‌ಗೆ ಸ್ಥಾನ ನೀಡಿ ಎಂದ ಇರ್ಫಾನ್ ಪಠಾಣ್!
"ನನಗೆ ಒಂದು ವಿಚಾರದ ಬಗ್ಗೆ ಆತಂಕವಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳು ಮತ್ತು ಹೊರಗಿನ ಒತ್ತಡಗಳು ತಂಡದೊಳಗೂ ಪ್ರವೇಶಿಸುತ್ತಿವೆಯೇ? ಅವು ತಂಡದ ಆಯ್ಕೆ ಮತ್ತು ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತಿವೆಯೇ? ನಾನು ಬಹಳ ವರ್ಷಗಳಿಂದ ಕ್ರಿಕೆಟ್ ನೋಡುತ್ತಿದ್ದೇನೆ. ಭಾರತ ತಂಡದ ಹಲವು ನಾಯಕರನ್ನು ನೋಡಿದ್ದೇನೆ. ಅವರು ಎಂದಿಗೂ ಹೊರಗಿನ ಗದ್ದಲವನ್ನು ಡ್ರೆಸ್ಸಿಂಗ್ ರೂಮ್‌ಗೆ ಪ್ರವೇಶಿಸಲು ಬಿಡಲಿಲ್ಲ. ಹಾಗೆಯೇ ಇರಬೇಕು ಕೂಡ," ಎಂದು ಸ್ಪಿನ್ ದಂತಕತೆ ತಿಳಿಸಿದ್ದಾರೆ.