ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟಿ20 ವಿಶ್ವಕಪ್ ತಂಡದಿಂದ ಗಿಲ್ ಹೊರಗಿಟ್ಟ ಬಗ್ಗೆ ಮಾತನಾಡಲು ನಿರಾಕರಿಸಿದ ಗೌತಮ್ ಗಂಭೀರ್

Gautam Gambhir: ಗಿಲ್ ಅವರನ್ನು ಕೈಬಿಟ್ಟಿರುವುದಕ್ಕೆ ಭಾರತ ತಂಡದ ಮುಖ್ಯ ತರಬೇತುದಾರ ಅಜಿತ್ ಅಗರ್ಕರ್ ಈಗಾಗಲೇ ಕಾರಣ ಬಹಿರಂಗಪಡಿಸಿದ್ದಾರೆ. ಗಿಲ್ ಅವರು ರನ್ ಗಳಿಸಲು ಪರದಾಡುತ್ತಿದ್ದಾರೆ ಹಾಗೂ ತಂಡದ ಸಂಯೋಜನೆಯ ದೃಷ್ಟಿಯಿಂದ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ತಿಳಿಸಿದ್ದಾರೆ.

ಗಿಲ್ ಹೊರಗಿಟ್ಟ ಬಗ್ಗೆ ಮಾತನಾಡಲು ನಿರಾಕರಿಸಿದ ಗೌತಮ್ ಗಂಭೀರ್

Gautam Gambhir -

Abhilash BC
Abhilash BC Dec 21, 2025 2:15 PM

ನವದೆಹಲಿ, ಡಿ.21: ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ 15 ಸದಸ್ಯರ ಭಾರತ(IND's 2026 T20 WC Squad) ತಂಡವನ್ನು ಶನಿವಾರ ಪ್ರಕಟಿಸಲಾಗಿತ್ತು. ಅಚ್ಚರಿ ಎಂಬಂತೆ ಉಪನಾಯಕನಾಗಿದ್ದ ಶುಭಮನ್ ಗಿಲ್(Shubman Gill) ಅವರನ್ನು ವಿಶ್ವಕಪ್ ತಂಡದಿಂದ ಹೊರಗಿಟ್ಟ ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ಈ ಮಧ್ಯೆ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್(Gautam Gambhir) ಅವರು ಗಿಲ್‌ಗೆ ಸ್ಥಾನ ನೀಡದ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿ ಮುಕ್ತಾಯದ ಬಳಿಕ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಗಂಭೀರ್ ಅವರನ್ನು ವರದಿಗಾರರು ಗುಂಪುಗುಂಪಾಗಿ ಕರೆದು ಗಿಲ್‌ ಕೈಬಿಟ್ಟ ನಿರ್ಧಾರದ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದರು. ಆದಾಗ್ಯೂ, ಗಂಭೀರ್‌ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ನೇರವಾಗಿ ತಮ್ಮ ಕಾರಿನತ್ತ ನಡೆದುಕೊಂಡು ಹೋಗಿ ಒಂದು ಮಾತನ್ನೂ ಹೇಳದೆ ಹೊರಟುಹೋದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದೇ ವರ್ಷ ನಡೆದಿದ್ದ ಏಷ್ಯಾ ಕಪ್ ಸಮಯದಲ್ಲಿ ಗಿಲ್ ಟಿ20ಐಗಳಿಗೆ ಮರಳಿದ್ದರು, ಜತೆಗೆ ಉಪನಾಯಕನ ಸ್ಥಾನ ಕೂಡ ಪಡೆದಿದ್ದರು. ಆದರೆ ಫಾರ್ಮ್‌ಗಾಗಿ ಹೆಣಗಾಡಿದರು. 15 ಇನ್ನಿಂಗ್ಸ್‌ಗಳಲ್ಲಿ 137.26 ಸ್ಟ್ರೈಕ್ ರೇಟ್‌ನಲ್ಲಿ ಅರ್ಧಶತಕ ದಾಖಲಿಸದೆ 291 ರನ್ ಗಳಿಸಿದರು. ಅವರ ಗರಿಷ್ಠ ಸ್ಕೋರ್ ಪಾಕಿಸ್ತಾನ ವಿರುದ್ಧ 47 ರನ್‌ಗಳು.

ಇದನ್ನೂ ಓದಿ The Ashes: 3-0 ಮುನ್ನಡೆ ಸಾಧಿಸಿ ಆಶಸ್ ಸರಣಿ ಗೆದ್ದ ಆಸ್ಟ್ರೇಲಿಯಾ

ಗಿಲ್ ಅವರನ್ನು ಕೈಬಿಟ್ಟಿರುವುದಕ್ಕೆ ಭಾರತ ತಂಡದ ಮುಖ್ಯ ತರಬೇತುದಾರ ಅಜಿತ್ ಅಗರ್ಕರ್ ಈಗಾಗಲೇ ಕಾರಣ ಬಹಿರಂಗಪಡಿಸಿದ್ದಾರೆ. ಗಿಲ್ ಅವರು ರನ್ ಗಳಿಸಲು ಪರದಾಡುತ್ತಿದ್ದಾರೆ ಹಾಗೂ ತಂಡದ ಸಂಯೋಜನೆಯ ದೃಷ್ಟಿಯಿಂದ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ತಿಳಿಸಿದ್ದಾರೆ.

‘ಶುಭಮನ್‌ ಗಿಲ್ ಉತ್ತಮ ಗುಣಮಟ್ಟದ ಆಟಗಾರ ಎಂಬುದು ನಮಗೆ ತಿಳಿದಿದೆ, ಆದರೆ, ಈ ಸಮಯದಲ್ಲಿ ಅವರ ಬ್ಯಾಟ್‌ನಿಂದ ರನ್‌ಗಳು ಬರುತ್ತಿಲ್ಲ’ ಎಂದು ಅಗರ್ಕರ್ ತಿಳಿಸಿದ್ದಾರೆ. ಕಳೆದ ಟಿ20 ವಿಶ್ವಕಪ್‌ಗೆ ನಾವು ವಿಭಿನ್ನ ಸಂಯೋಜನೆಗಳೊಂದಿಗೆ ಹೋಗಿದ್ದರಿಂದ ಟ್ರೋಫಿ ಗೆಲ್ಲಲು ಸಾಧ್ಯವಾಯಿತು. ನಾವು 15 ಜನ ಸದಸ್ಯರ ಸಮತೋಲನ ತಂಡ ಕಟ್ಟುವಾಗ ಯಾರಾದರೂ ಒಬ್ಬರನ್ನು ತಂಡದಿಂದ ಕೈಬಿಡುವುದು ಅನಿವಾರ್ಯ, ಈ ಬಾರಿ ಗಿಲ್‌ರನ್ನು ಕೈಬಿಡಲಾಗಿದೆ’ ಎಂದರು.

ಟಿ20 ವಿಶ್ವಕಪ್‌ಗೆ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪನಾಯಕ), ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ವಾಷಿಂಗ್ಟನ್‌ ಸುಂದರ್, ವರುಣ ಚಕ್ರವರ್ತಿ, ಇಶಾನ್ ಕಿಶನ್ (ವಿಕೆಟ್‌ಕೀಪರ್), ರಿಂಕು ಸಿಂಗ್.