ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಭಾರತೀಯ ಕ್ರಿಕೆಟ್‌ನ ದೊಡ್ಡ ಸೂಪರ್‌ ಸ್ಟಾರ್‌ ಆಟಗಾರನನ್ನು ಹೆಸರಿಸಿದ ಜೋಸ್‌ ಬಟ್ಲರ್‌!

ಜೂನ್‌ 20 ರಂದು ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಇಂಗ್ಲೆಂಡ್‌ ತಂಡಕ್ಕೆ ಜಸ್‌ಪ್ರೀತ್‌ ಬುಮ್ರಾ ಭೀತಿ ಇದೆ ಎಂದು ಜೋಸ್‌ ಬಟ್ಲರ್‌ ಹೇಳಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ದೊಡ್ಡ ಸೂಪರ್‌ ಸ್ಟಾರ್‌ ಆಟಗಾರ ಎಂದು ಗುಣಗಾನ ಮಾಡಿದ್ದಾರೆ.

ಭಾರತೀಯ ಕ್ರಿಕೆಟ್‌ನ ಸೂಪರ್‌ ಸ್ಟಾರ್‌ ಆಟಗಾರನನ್ನು ಹೆಸರಿಸಿದ ಬಟ್ಲರ್‌!

ಭಾರತದ ಸೂಪರ್‌ ಸ್ಟಾರ್‌ ಆಟಗಾರನನ್ನು ಆರಿಸಿದ ಜೋಸ್‌ ಬಟ್ಲರ್‌.

Profile Ramesh Kote Jun 17, 2025 4:27 PM

ನವದೆಹಲಿ: ಭಾರತೀಯ ಕ್ರಿಕೆಟ್‌ನಲ್ಲಿ ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ದೊಡ್ಡ ಸ್ಟಾರ್‌ ಆಟಗಾರ ಎಂದು ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ (Jos Buttler) ಬಣ್ಣಿಸಿದ್ದಾರೆ. ಸ್ಟುವರ್ಟ್‌ ಬ್ರಾಡ್‌ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಜೋಸ್‌ ಬಟ್ಲರ್‌, ಮುಂದಿನ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ ತಂಡಕ್ಕೆ ಜಸ್‌ಪ್ರೀತ್‌ ಬುಮ್ರಾ ಭೀತಿ ಹುಟ್ಟಿಸಿದ್ದಾರೆಂದು ಅವರು ಹೇಳಿದ್ದಾರೆ. ಜೂನ್‌ 20 ರಂದು ಉಭಯ ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿ (IND vs ENG) ಆರಂಭವಾಗಲಿದೆ. ಆ ಮೂಲಕ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಭಿಯಾನವನ್ನು ಉಭಯ ತಂಡಗಳು ಆರಂಭಿಸಲಿವೆ. ಜೋಸ್‌ ಬಟ್ಲರ್‌ ಹೇಳಿದಂತೆ ಭಾರತ ತಂಡಕ್ಕೆ ಜಸ್‌ಪ್ರೀತ್‌ ಬುಮ್ರಾ ಕೀ ಬೌಲರ್‌ ಆಗಿದ್ದಾರೆ.

ಬೆನ್ನು ನೋವಿನಿಂದ ಗುಣಮುಖರಾಗಿರುವ ಜಸ್‌ಪ್ರೀತ್‌ ಬುಮ್ರಾ ಅವರು ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಭಾರತ ಟೆಸ್ಟ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲಿದ್ದಾರೆ. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವ ಶುಭಮನ್‌ ಗಿಲ್‌ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

IND vs ENG Test: ಇಂದು ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳಲಿರುವ ಕೋಚ್‌ ಗಂಭೀರ್‌

"ಇಂಗ್ಲೆಂಡ್‌ ಪ್ರವಾಸಕ್ಕೆ ಬಂದಿರುವ ಭಾರತ ತಂಡದಲ್ಲಿ ಜಸ್‌ಪ್ರೀತ್‌ ಬುಮ್ರಾ ದೊಡ್ಡ ಸೂಪರ್‌ ಸ್ಟಾರ್‌ ಆಗಿದ್ದಾರೆ. ಆದರೆ, ಏಕೆಂದರೆ ಅವರನ್ನು ಎದುರಿಸುವುದು ತುಂಬಾ ಕಷ್ಟ. ಅವರ ಬೌಲಿಂಗ್‌ ಶೈಲಿ ವಿಶಿಷ್ಠವಾಗಿದೆ, ಅವರ ರನ್‌ಅಪ್‌ ಕೂಡ ವಿಶಿಷ್ಠವಾಗಿದೆ. ಸೈಡ್‌ ಆನ್‌ ಬೌಲರ್‌ಗಳನ್ನು ನಾನು ನೋಡಿದ್ದೇನೆ. ಆದರೆ, ಅವರು ತಮ್ಮ ಪಾದದಿಂದ ಚೆಂಡನ್ನು ರಿಲೀಸ್‌ ಮಾಡುತ್ತಾರೆ. ಇದರಿಂದ ಅವರು ಬೌಲ್‌ ಮಾಡುವ ವೇಗಕ್ಕಿಂತ, ಅವರ ಚೆಂಡು ಹೆಚ್ಚಿನ ವೇಗವಾಗಿ ಬರುತ್ತದೆ,"ಎಂದು ಜೋಸ್‌ ಬಟ್ಲರ್‌ ತಿಳಿಸಿದ್ದಾರೆ.

"ಬಲಗೈ ಬ್ಯಾಟ್ಸ್‌ಮನ್‌ ಆಗಿ ನನಗೆ, ಅವರ (ಬುಮ್ರಾ) ಚೆಂಡು ಯಾವಾಗಲೂ ಒಳಗೆ ಬರುತ್ತಿರುವಂತೆ ಭಾಸವಾಗುತ್ತಿತ್ತು, ಆದರೆ ಅವರು ಹೊರಗೆ ಹಾಕುವ ಮೂಲಕ ನನ್ನನ್ನು ಹಿಂದಿಕ್ಕುತ್ತಾರೆ. ಈ ವೇಳೆ ನೀವು ಕಠಿಣ ಸವಾಲನ್ನು " ಎಂದು ಇಂಗ್ಲೆಂಡ್‌ನ ಮಾಜಿ ವೈಟ್-ಬಾಲ್ ನಾಯಕ ಹೇಳಿದರು.

IND vs ENG: ವಾಷಿಂಗ್ಟನ್‌ ಸುಂದರ್‌ ನನಗೆ ಸ್ಫೂರ್ತಿ ಎಂದ ಸಾಯಿ ಸುದರ್ಶನ್‌!

"ಅವರು ಸೂಪರ್‌ ಸ್ಟಾರ್‌ ಬೌಲರ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾವು ಕೂಡ ಇದನ್ನೇ ನಿರೀಕ್ಷೆ ಮಾಡುತ್ತೇವೆ. ನೀವು ಉತ್ತಮ ಆಟಗಾರರನ್ನು ಎದುರಿಸಲಿದ್ದೀರಿ ಮತ್ತು ಖಂಡಿತವಾಗಿಯೂ ಇಂಗ್ಲೆಂಡ್‌ ತಂಡದಲ್ಲಿ ಯಾರಾದರೂ ಉತ್ತಮ ಯಶಸ್ಸನ್ನು ಸಾಧಿಸಬೇಕೆಂದರೆ ಚೆನ್ನಾಗಿ ಆಡಬೇಕಾಗುತ್ತದೆ," ಎಂದು ಜೋಸ್‌ ಬಟ್ಲರ್‌ ತಿಳಿಸಿದ್ದಾರೆ.

ಜಸ್‌ಪ್ರೀತ್‌ ಬುಮ್ರಾ ಟಸ್ಟ್‌ ಸರಣಿಯಲ್ಲಿ ಐದು ಪಂದ್ಯಗಳನ್ನು ಆಡುವ ನಿರೀಕ್ಷೆಯಿಲ್ಲ. ಭಾರತ ತಂಡ ಇಂಗ್ಲೆಂಡ್‌ಗೆ ತೆರಳುವುದಕ್ಕೂ ಮುನ್ನ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಇದನ್ನು ದೃಢಪಡಿಸಿದ್ದರು. ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಕಾರಣ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದರು.