ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಮ್ಮ ಯಶಸ್ವಿ ಜೈಸ್ವಾಲ್‌ ಕ್ರಿಕೆಟ್‌ ಭವಿಷ್ಯಕ್ಕಾಗಿ ಸೇಲ್ಸ್‌ ಮ್ಯಾನ್‌ ಆಗಿದ್ದ ಅಣ್ಣ ತೇಜಸ್ವಿ!

ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಅವರ ಅಣ್ಣ ತೇಜಶ್ವಿ ಜೈಸ್ವಾಲ್‌ ಅವರು ತ್ರಿಪುರ ತಂಡದ ಪರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಈ ಹಿಂದೆ ದೆಹಲಿಯಲ್ಲಿ ಸೇಲ್ಸ್‌ ಮ್ಯಾನ್‌ ಆಗಿ ಕೆಲಸ ಮಾಡಿದ್ದ ತೇಜಸ್ವಿ, ಆರ್ಥಿಕ ಸಮಸ್ಯೆಯಿಂದ ತಮ್ಮ ಯಶಸ್ವಿ ಜೈಸ್ವಾಲ್‌ಗಾಗಿ ತನ್ನ ಕ್ರಿಕೆಟ್‌ ಕನಸನ್ನು ತ್ಯಾಗ ಮಾಡಿದ್ದರು.

ತಮ್ಮ ಯಶಸ್ವಿಗಾಗಿ ತನ್ನ ಕನಸನ್ನು ತ್ಯಾಗ ಮಾಡಿದ್ದ ಅಣ್ಣ ತೇಜಸ್ವಿ!

ತಮ್ಮ ಯಶಸ್ವಿ ಜೈಸ್ವಾಲ್‌ಗಾಗಿ ಸೇಲ್ಸ್‌ಮ್ಯಾನ್‌ ಆಗಿದ್ದ ತೇಜಸ್ವಿ. -

Profile
Ramesh Kote Dec 13, 2025 4:05 PM

ನವದೆಹಲಿ: ಭಾರತ ತಂಡದ ಸ್ಟಾರ್‌ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ಗೆ (Yashasvi jaiswal) ಅಣ್ಣ ಇರುವುದು ಬಹುತೇಕ ಮಂದಿಗೆ ಇಂದಿಗೂ ತಿಳಿದಿಲ್ಲ. ಕೇವಲ ಅಣ್ಣ ಮಾತ್ರವಲ್ಲ, ಅವರು ಕೂಡ ಕ್ರಿಕೆಟರ್‌ ಆಗಿ ದೊಡ್ಡ ಹೆಸರು ಮಾಡಬೇಕೆಂದು ಕನಸು ಕಂಡವರು. ಆದರೆ, ಅವರು ತನ್ನ ತಮ್ಮ ಯಶಸ್ವಿ ಜೈಸ್ವಾಲ್‌ಗಾಗಿ ತನ್ನ ಕ್ರಿಕೆಟ್‌ ಕನಸನ್ನೇ ತ್ಯಾಗ ಮಾಡಿದ್ದರು! ಅವರ ಹೇಸರೇ ತೇಜಸ್ವಿ ಜೈಸ್ವಾಲ್ (Tejasvi Jaiswal).‌ ಯಶಸ್ವಿ ಕ್ರಿಕೆಟ್‌ನಲ್ಲಿ ಬೆಳಕಿಗೆ ಬರುವುದಕ್ಕೂ ಮುಂದೆ ಅವರ ಕುಟುಂಬ ಕಡು ಬಡತನದಲ್ಲಿತ್ತು ಹಾಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸಿತ್ತು. ಈ ವೇಳೆ ಅಣ್ಣ ತೇಜಸ್ವಿ ಜೈಸ್ವಾಲ್‌, ತನ್ನ ಕ್ರಿಕೆಟ್‌ ಕನಸನ್ನು ಬದಿಗಿಟ್ಟು ತಮ್ಮ ಯಶಸ್ವಿ ಕ್ರಿಕೆಟ್‌ ಭವಿಷ್ಯಕ್ಕಾಗಿ ದೆಹಲಿಯಲ್ಲಿ ಸೇಲ್ಸ್‌ ಮ್ಯಾನ್‌ ಕೆಲಸ ಮಾಡಿದ್ದರು. ಆದರೆ, ಈಗ ಅವರ ಅದೃಷ್ಟ ಸಂಪೂರ್ಣ ಬದಲಾಗಿದೆ. ಇದೀಗ ತಮ್ಮ ಅಣ್ಣನ ಕ್ರಿಕೆಟ್‌ ಕನಸನ್ನು ಈಡೇರಿಸಲು ಯಶಸ್ವಿ ಜೈಸ್ವಾಲ್‌ ಪಣ ತೊಟ್ಟಿದ್ದಾರೆ.

ಹೌದು! ಡಿಸೆಂಬರ್‌ 09 ರಂದು ಯಶಸ್ವಿ ಜೈಸ್ವಾಲ್‌ ಅವರ ಅಣ್ಣ ತಜಸ್ವಿ ಜೈಸ್ವಾಲ್‌ ಅವರು ತ್ರಿಪುರ ತಂಡದ ಪರ ಸೈಯದ್‌ ಮುಷ್ತಾಕ್‌ ಟ್ರೋಫಿ ಟೂರ್ನಿಗೆ ಪದಾರ್ಪಣೆ ಮಾಡಿದ್ದಾರೆ. ಅಷ್ಟೇ ಅಲ್ಲ; ತಮ್ಮ ದೇಶಿ ಟಿ20 ಕ್ರಿಕೆಟ್‌ ಪದಾರ್ಪಣೆ ಪಂದ್ಯದಲ್ಲಿಯೇ ಅರ್ಧಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಈ ಹಿಂದೆ ತಮ್ಮನಿಗಾಗಿ ಶ್ರಮಪಟ್ಟಿದ್ದ ಅಣ್ಣ ತೇಜಸ್ವಿಗಾಗಿ ಇದೀಗ ಟೀಮ್‌ ಇಂಡಿಯಾ ಆರಂಭಿಕ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಕ್ಷಣ ನಿಜಕ್ಕೂ ಜೈಸ್ವಾಲ್‌ ಸಹೋದರರಿಗೆ ಅತ್ಯಂತ ಸ್ಮರಣೀಯವಾಗಿದೆ ಎಂದರೆ ತಪ್ಪಾಗಲಾರದು. ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ತೇಜಸ್ವಿ, ತಮ್ಮ ಕ್ರಿಕೆಟ್‌ ಪಯಣದ ಬಗ್ಗೆ ವಿವರಿಸಿದ್ದಾರೆ.

IND vs SA: ಗಿಲ್‌ ಔಟ್‌, ಸಂಜು ಇನ್?‌ ಮೂರನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ನಾನು ಕೆಲಸ ಮಾಡಬೇಕಾದ ಅಗತ್ಯವಿತ್ತು

"ನಾನು ಕೆಲಸಕ್ಕೆ ಹೋದಾಗ, ನನ್ನ ಕುಟುಂಬ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರಲಿಲ್ಲ. ಆದರೆ ನಾನು ಕೆಲಸ ಮಾಡುತ್ತಿದ್ದಾಗಲೂ, ನನ್ನ ಮನಸ್ಸು ನಿಜವಾಗಿಯೂ ಅದರ (ಕೆಲಸದ) ಮೇಲೆ ಇರಲಿಲ್ಲ. ಕೆಲವು ದಿನಗಳ ನಂತರ, ಕೆಲಸ ನನಗೆ ಅನಿವಾರ್ಯವಾಯಿತು ಹಾಗೂ ಅದರಲ್ಲಿಯೇ ಮುಂದುವರಿದೆ. ಆದರೂ, ಯಶಸ್ವಿ ಜೈಸ್ವಾಲ್‌ ದೊಡ್ಡ ಸಾಧನೆ ಮಾಡಿದಾಗ, ನಾನು ಮತ್ತೆ ಕ್ರಿಕೆಟ್ ಆಡಲು ಪ್ರಾರಂಭಿಸುತ್ತೇನೆ ಎಂಬ ಭರವಸೆ ಇತ್ತು," ಎಂದು ಅಹಮದಾಬಾದ್‌ನಲ್ಲಿ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಕರ್ನಾಟಕ ವಿರುದ್ಧ ಸೂಪರ್ ಓವರ್ ಗೆಲುವಿನ ನಂತರ ತೇಜಸ್ವಿ ಜೈಸ್ವಾಲ್‌ ಹೇಳಿಕೊಂಡಿದ್ದಾರೆ.

"ಕ್ರಿಕೆಟ್‌ ಆಡಲು ಸಾಧ್ಯವಾಗುವುದಿಲ್ಲ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಒಂದು ದಿನ ಖಂಡಿತವಾಗಿಯೂ ಆಡುತ್ತೇನೆ ಎಂಬುದು ನನ್ನ ಮನಸ್ಸಿನಲ್ಲಿ ಯಾವಾಗಲೂ ಇತ್ತು. ನಾನು ನನ್ನ ತಮ್ಮನಿಗೆ ಇದನ್ನೇ ಹೇಳುತ್ತಿದ್ದೆ. ನಂತರ ಅವನು ಕ್ರಿಕೆಟ್‌ನಲ್ಲಿ ಸಕ್ಸಸ್‌ ಕಂಡ ನಂತರ ನನಗೆ ತುಂಬಾ ಬೆಂಬಲ ನೀಡಿದನು. ಅವನಿಂದಲೇ ನಾನು ಇಂದು ಆಡಲು ಸಾಧ್ಯವಾಗುತ್ತಿದೆ. ಅವನೇ ನನ್ನ ಸರ್ವಸ್ವ," ಎಂದು ಅಣ್ಣ ಭಾವುಕರಾಗಿದ್ದಾರೆ.

ತೇಜಸ್ವಿ ಅವರು ಕ್ರಿಕೆಟ್‌ ಅನ್ನು ತುಂಬಾ ನಿಧಾನವಾಗಿ ಆರಂಭಿಸಿದ್ದರು. 2019ರಲ್ಲಿ ತನ್ನ ಅಣ್ಣ ತೇಜಸ್ವಿಗೆ ತ್ರಿಪುರದಲ್ಲಿ ಕ್ರಿಕೆಟ್‌ ಆಡಲು ನೆರವು ನೀಡಲು ಪ್ರಯತ್ನ ನಡೆಸಿದ್ದರು. ಭಾರತೀಯ ಕ್ರಿಕೆಟ್‌ನಲ್ಲಿ ತ್ರಿಪುರ ಒಂದು ಸಣ್ಣ ದೇಶಿ ತಂಡವಾಗಿದೆ. ಒಂದು ಅಲ್ಫಾವಧಿ ಬಳಿಕ ತೇಜಸ್ವಿ, ಪೂರ್ಣ ಪ್ರಮಾಣದಲ್ಲಿ ಕ್ರಿಕೆಟ್‌ ಆಡಲು ದೆಹಲಿಗೆ ಮರಳಿದ್ದರು. ಆದರೆ, ನಂತರ ಕೋವಿಡ್‌ ಲಾಕ್‌ಡೌನ್‌ ಎದುರಾಗಿತ್ತು. ಆಗ ಅವರು ತಮ್ಮ ಕೆಲಸ ಹಾಗೂ ಕ್ರಿಕೆಟ್‌ ಚಟುವಟಿಕೆಗಳನ್ನು ನಿಲ್ಲಿಸಿದ್ದ.

IND vs SA: ರೋಹಿತ್‌ ಶರ್ಮಾರ ವಿಶೇಷ ದಾಖಲೆ ಮುರಿದ ಸೂರ್ಯಕುಮಾರ್‌ ಯಾದವ್!

ನಂತರ 2021 ರಲ್ಲಿ ಅಂದರೆ ಸರಿ ಸುಮಾರು ಏಳು ವರ್ಷಗಳ ಬಳಿಕ ತೇಜಸ್ವಿ ತನ್ನ ಸೇಲ್ಸ್‌ ಮ್ಯಾನ್‌ ಕೆಲಸ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಕ್ರಿಕೆಟ್‌ ಆಡಲು ಪ್ರಾರಂಭಿಸಿದರು. ಅವರು ಕ್ರಿಕೆಟ್‌ ನಿಜಕ್ಕೂ ಅನಿರೀಕ್ಷಿತ ಎಂದೇ ಹೇಳಬಹುದು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತೇಜಸ್ವಿ, "ಅದೃಷ್ಟವಶಾತ್, 2021ರ ಐಪಿಎಲ್ ತಾತ್ಕಾಲಿಕವಾಗಿ ನಿಲ್ಲಿಸಿದ್ದಾಗ ರಾಜಸ್ಥಾನ ರಾಯಲ್ಸ್ ಶಿಬಿರಕ್ಕೆ ಅಭ್ಯಾಸಕ್ಕಾಗಿ ಬೌಲರ್‌ಗಳ ಅಗತ್ಯವಿತ್ತು ಮತ್ತು ನಾನು ನನ್ನ ತಮ್ಮನೊಂದಿಗೆ ಅಲ್ಲಿಗೆ ಹೋಗಿದ್ದೆ. ನನ್ನ ಕ್ರಿಕೆಟ್ ನಿಜವಾಗಿಯೂ ಅಲ್ಲಿಂದ ಪ್ರಾರಂಭವಾಯಿತು," ಎಂದರು.

ಇಲ್ಲಿ ಅವರು ಮಧ್ಯಮ ವೇಗಿಯಾಗಿ ದೀರ್ಘಾವಧಿ ನೆಟ್‌ ಬೌಲರ್‌ ಆಗಿ ಬೌಲ್‌ ಮಾಡಿದ್ದರು. ಇದರಿಂದ ಅವರ ವಿಶ್ವಾಸ ಹಾಗೂ ಕೌಶಲ ಸುಧಾರಣೆಯಾಗಿತ್ತು. ಇಲ್ಲಿ ಅವರಿಗೆ ಫಿಟ್‌ನೆಸ್‌ ಕಡೆಗೆ ಹೆಚ್ಚಿನ ಗಮನ ನೀಡುವಂತೆ ಪ್ರೇರೇಪಿಸಿತು. "ನಾನು ತನ್ನ ತರಬೇತಿಯನ್ನು ತುಂಬಾ ಕಠಿಣಗೊಳಿಸಿದೆ ಏಕೆಂದರೆ ಆ ಸಮಯದಲ್ಲಿ ನಾನು ತುಂಬಾ ತೂಕವಿದ್ದೆ," ಎಂದು ಹೇಳಿದ್ದಾರೆ.

IND vs SA: ಕ್ವಿಂಟನ್‌ ಡಿ ಕಾಕ್‌ ಅಬ್ಬರ, ಭಾರತ ತಂಡಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!

ಒಂದೇ ದಿನ ಶತಕ, ಅರ್ಧಶತಕ ಬಾರಿಸಿದ್ದ ಜೈಸ್ವಾಲ್‌ ಸಹೋದರರು

ಡಿಸೆಂಬರ್‌ 6 ರಂದು ಯಶಸ್ವಿ ಜೈಸ್ವಾಲ್‌ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಒಡಿಐ ಶತಕ ಬಾರಿಸಿದ್ದರು. ಇದೇ ದಿನ ಕರ್ನಾಟಕ ವಿರುದ್ಧ ತೇಜಸ್ವಿ ಜೈಸ್ವಾಲ್‌ ಟಿ20 ಚೊಚ್ಚಲ ಅರ್ಧಶತಕ ಬಾರಿಸಿದ್ದರು. ಇವರ ತಂದೆ ತಮ್ಮ ಮಕ್ಕಳ ಪ್ರದರ್ಶನವನ್ನು ನೋಡಿ ಸಂತೋಷ ಪಟ್ಟಿದ್ದರು. ಅರ್ಧಶತಕ ಸಿಡಿಸಿದ ಬಳಿಕ ಯಶಸ್ವಿ ಜೈಸ್ವಾಲ್‌, ಅಣ್ಣ ತೇಜಸ್ವಿಗೆ ಅವಕಾಶವನ್ನು ಆನಂದಿದು ಎಂದು ಫೋನ್‌ನಲ್ಲಿ ತಿಳಿಸಿದ್ದರು.

ತಮ್ಮನಂತೆ ಅಣ್ಣನೂ ಎಡಗೈ ಬ್ಯಾಟ್ಸ್‌ಮನ್‌

ತಮ್ಮ ಯಶಸ್ವಿ ಜೈಸ್ವಾಲ್‌ನಂತೆ ಅಣ್ಣ ತೇಜಸ್ವಿ ಜೈಸ್ವಾಲ್‌ ಕೂಡ ಎಡಗೈ ಬ್ಯಾಟ್ಸ್‌ಮನ್‌ ಆಗಿದ್ದಾರೆ. ತಾವು ಪ್ರತಿ ಬಾರಿ ಬ್ಯಾಟಿಂಗ್‌ಗೆ ಇಳಿದಾಗಲೂ ಅವರು ತಮ್ಮದೇ ಆದ ಅನುಭವಗಳನ್ನು ಮಾತ್ರವಲ್ಲದೆ, ತಮ್ಮ ಯಶಸ್ವಿ ಅವರ ಕಠಿಣ ಪರಿಶ್ರಮ, ಕಲಿಕೆ ಮತ್ತು ಬೆಳವಣಿಗೆಯನ್ನು ನೋಡಿದ ಅನುಭವವನ್ನೂ ಸಹ ಅಳವಡಿಸಿಕೊಳ್ಳುತ್ತಾರೆ.

"ಖಂಡಿತಾ, ನಾನು ಅವರಿಂದ ಕಲಿಯುತ್ತೇನೆ. ಅವರು ಭಾರತದ ಆಟಗಾರ. ಅವರು ನನಗೆ ಬ್ಯಾಟ್‌ ಮಾಡುವುದು ಹೇಗೆಂದು ಕಲಿಸುತ್ತಾರೆ ಮತ್ತು ಇದು ನನಗೆ ಇಷ್ಟ. ಅವರ ಮನಸ್ಥಿತಿ ಅದ್ಭುತವಾಗಿದೆ. 'ಏನೇ ಆದರೂ, ನಿಮ್ಮನ್ನು ಎಂದಿಗೂ ನಿರಾಸೆಗೊಳಿಸಬೇಡಿ,ʼ ಎಂದು ಅವರು ಹೇಳುತ್ತಾರೆ. ಹಾಗಾಗಿ ನಾನು ಕೂಡ ಅದೇ ರೀತಿ ಯೋಚಿಸುತ್ತೇನೆ," ಎಂದು ತೇಜಸ್ವಿ ತಿಳಿಸಿದ್ದಾರೆ.

IND vs SA: ಒಂದೇ ಓವರ್‌ನಲ್ಲಿ 7 ವೈಡ್‌ ಹಾಕಿದ ಅರ್ಷದೀಪ್‌ ಸಿಂಗ್‌ ವಿರುದ್ಧ ಗಂಭೀರ್‌ ಕಿಡಿ!

ಇದು ನನ್ನ ಜವಾಬ್ದಾರಿ, ತ್ಯಾಗವಲ್ಲ

"ಇದು ನನ್ನ ಜವಾಬ್ದಾರಿ, ತ್ಯಾಗವಲ್ಲ. ಆ ಸಮಯದಲ್ಲಿ ನಮ್ಮ ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ ಮತ್ತು ಅವರು (ಯಶಸ್ವಿ ಜೈಸ್ವಾಲ್‌) ತುಂಬಾ ಚೆನ್ನಾಗಿ ಆಡುತ್ತಿದ್ದರು. ಆ ಸಮಯದಲ್ಲಿ ಅವರು ನಿಜವಾಗಿಯೂ ಉತ್ತಮ ಕ್ರಿಕೆಟ್ ಆಡುತ್ತಿದ್ದರು. ನಾವಿಬ್ಬರೂ ಮುಂಬೈಗೆ ಆಟವಾಡಲು ಹೋಗಿದ್ದೆವು, ಆದರೆ ಅವರು ಸಾಕಷ್ಟು ರನ್ ಗಳಿಸುತ್ತಿದ್ದರು ಮತ್ತು ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಾನು ಭಾವಿಸಿದೆ. ಅವರು ದೊಡ್ಡ ಸಾಧನೆ ಮಾಡುತ್ತಾರೆಂದು ನಾನು ಬಾಲ್ಯದಿಂದಲೇ ನೋಡುತ್ತಿದ್ದೆ. ಅವರ ಪ್ರದರ್ಶನವನ್ನು ನೋಡಿ, ನಾನು ನನ್ನ ಹೆಜ್ಜೆಯನ್ನು ಹಿಂದಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದೆ," ಎಂದು ತ್ರಿಪುರ ಬ್ಯಾಟ್ಸ್‌ಮನ್‌ ಹೇಳಿದ್ದಾರೆ.

ವರ್ಷಗಳ ನಂತರ, ಆ ವೃತ್ತ ಕೊನೆಗೂ ಮುಚ್ಚಿದೆ. ತನ್ನ ತಮ್ಮನನ್ನು ದೂರದಿಂದಲೇ ನೋಡುತ್ತಿದ್ದ ಹುಡುಗ ಈಗ ಮತ್ತೆ ವೃತ್ತಿಪರ ಕ್ರಿಕೆಟಿಗನಾಗಿ ಮೈದಾನಕ್ಕೆ ಕಾಲಿಡುತ್ತಿದ್ದಾನೆ ಹಾಗೂ ಪ್ರತಿ ಹೆಜ್ಜೆಯಲ್ಲೂ ತನ್ನ ಜೀವನದ ಕಠಿಣ ವರ್ಷಗಳಲ್ಲಿ ಅವನಿಗೆ ಮಾರ್ಗದರ್ಶನ ನೀಡಿದ ಮಾತುಗಳನ್ನು ಅವರು ಹೊತ್ತುಕೊಂಡಿದ್ದಾರೆ.