IND vs ENG ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಕೀ ಬೌಲರ್ ಆರಿಸಿದ ಮ್ಯಾಥ್ಯೂ ಹೇಡನ್!
Matthew Hayden on Kuldeep Yadav: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಕೀ ಬೌಲರ್ ಆಗಿದ್ದಾರೆಂದು ಆಸ್ಟ್ರೇಲಿಯಾ ಮಾಜಿ ಆರಂಭಿಕ ಮ್ಯಾಥ್ಯೂ ಹೇಡನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಭಯ ತಂಡಗಳ ನಡುವಣ ಟೆಸ್ಟ್ ಸರಣಿಯು ಜೂನ್ 20 ರಂದು ಆರಂಭವಾಗಲಿದೆ.

ಭಾರತಕ್ಕೆ ಕುಲ್ದೀಪ್ ಯಾದವ್ ಕೀ ಬೌಲರ್ ಎಂಬ ಮ್ಯಾಥ್ಯೂ ಹೇಡನ್.

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ(IND vs ENG) ಭಾರತ ತಂಡಕ್ಕೆ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav) ಕೀ ಬೌಲರ್ ಆಗಲಿದ್ದಾರೆಂದು ಆಸ್ಟ್ರೇಲಿಯಾ ದಿಗ್ಗಜ ಮ್ಯಾಥ್ಯೂ ಹೇಡನ್ (Matthew Hayden) ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಉಭಯ ತಂಡಗಳ ನಡುವಣ ಟೆಸ್ಟ್ ಸರಣಿ ಜೂನ್ 20ರಂದು ಆರಂಭವಾಗಲಿದೆ. ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಹಾಗಾಗಿ, ಮೊಲದನೇ ಆಯ್ಕೆಯ ಸ್ಪಿನ್ನರ್ ಆಗಿರುವ ರವೀಂದ್ರ ಜಡೇಜಾಗೆ ಕುಲ್ದೀಪ್ ಯಾದವ್ ಎರಡನೇ ಆಯ್ಕೆಯ ಸ್ಪಿನ್ನರ್ ಆಗಿ ಕಣಕ್ಕೆ ಇಳಿಯಬಹುದು. ಏಷ್ಯಾದ ಹೊರಗಡೆ ಕುಲ್ದೀಪ್ ಯಾದಬ್ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. ಇಂಗ್ಲೆಂಡ್ನಲ್ಲಿ ಅವರು ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ.
2025-26ರ ಆಸ್ಟ್ರೇಲಿಯನ್ ಬೇಸಿಗೆಯ ಕ್ರಿಕೆಟ್ನ ಉದ್ಘಾಟನೆಯ ವೇಳೆ ಮಾತನಾಡಿದ ಮ್ಯಾಥ್ಯೂ ಹೇಡನ್, ಇಂಗ್ಲೆಂಡ್ನಲ್ಲಿ ಭಾರತ ತಂಡದ ಪ್ರದರ್ಶನದ ಬಗ್ಗೆ ತುಂಬಾ ಕುತೂಹಲವಿದೆ ಎಂದು ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ನಾಯಕತ್ವದ ಭಾರತ ಯುವ ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
IND vs ENG: ʻನಾಚಿಕೆಗೇಡಿನ ಸಂಗತಿʼ-ರೋಹಿತ್, ಕೊಹ್ಲಿ ಟೆಸ್ಟ್ ನಿವೃತ್ತಿ ಬಗ್ಗೆ ಕ್ರಿಸ್ ವೋಕ್ಸ್ ಪ್ರತಿಕ್ರಿಯೆ!
ಈ ಸರಣಿಯಲ್ಲಿ ಭಾರತ ತಂಡದ ಸ್ಪಿನ್ನರ್ ಕುಲ್ದೀಪ್ ಯಾದವ್ಗೆ 20 ವಿಕೆಟ್ಗಳ ಅಗತ್ಯವಿದೆ ಎಂದು ಆಸೀಸ್ ಮಾಜಿ ಆರಂಭಿಕ ತಿಳಿಸಿದ್ದಾರೆ. ಆಸ್ಟ್ರೇಲಿಯಾ ತಂಡವು ನೇಥನ್ ಲಿಯಾನ್ ರೂಪದಲ್ಲಿ ಸ್ಥಿರ ಸ್ಪಿನ್ನರ್ ಅನ್ನು ಹೊಂದಿದೆ ಮತ್ತು ಪ್ರತಿ ತಂಡವು ತಮ್ಮ ಶ್ರೇಯಾಂಕದಲ್ಲಿ ವಿಶ್ವಾಸಾರ್ಹ ಸ್ಪಿನ್ನರ್ ಅನ್ನು ಹೊಂದಿರಬೇಕು ಎಂದು ಆಸೀಸ್ನ ಮಾಜಿ ಆರಂಭಿಕ ಆಟಗಾರ ತಿಳಿಸಿದ್ದಾರೆ.
ಭಾರತಕ್ಕೆ ಕುಲ್ದೀಪ್ ಯಾದವ್ ಕೀ ಬೌಲರ್: ಹೇಡನ್
"ಇಂಗ್ಲೆಂಡ್ನಲ್ಲಿ ಭಾರತ ತಂಡ ಏನನ್ನು ತರಲಿದೆ ಎಂಬುದರ ಬಗ್ಗೆ ನನಗೆ ತೀವ್ರ ಕುತೂಹಲವಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯು ಅತ್ಯಂತ ಕಠಿಣವಾಗಿರುತ್ತದೆ. ಈ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ 20 ವಿಕೆಟ್ ಕಬಳಿಸಬಲ್ಲ ಕುಲ್ದೀಪ್ ಯಾದವ್ ಕೀ ಬೌಲರ್ ಆಗಲಿದ್ದಾರೆಂದು ನಾವು ಆರಂಭದಲ್ಲಿಯೇ ಚರ್ಚೆ ನಡೆಸಿದ್ದೆವು. ನೇಥನ್ ಲಯಾನ್ ಅವರ ಸ್ಥಿರತೆಯ ಪ್ರಯೋಜನವನ್ನು ನಾವು ಹೊಂದಿದ್ದೇವೆ ಮತ್ತು ಕಳೆದ ಆಷಸ್ನಲ್ಲಿ ಅವರ ಅನುಪಸ್ಥಿತಿಯು ವಿಶ್ವಾಸಾರ್ಹ ಸ್ಪಿನ್ನರ್ ಅನ್ನು ಕಳೆದುಕೊಂಡ ಪರಿಣಾಮವನ್ನು ತೋರಿಸಿದೆ. ಪ್ರತಿಯೊಂದು ಯುಗದಲ್ಲೂ ಅತ್ಯುತ್ತಮ ತಂಡಗಳು ಯಾವಾಗಲೂ ಒಂದು ವಿಷಯವನ್ನು ಸಾಮಾನ್ಯವಾಗಿ ಹೊಂದಿವೆ. ಅದೇನೆಂದರೆ ಸ್ಥಿರತೆ," ಎಂದು ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.
IND vs ENG Test Series: ಮೊದಲ ಟೆಸ್ಟ್ಗೆ ಭಾರತ ಆಡುವ ಬಳಗ ಹೇಗಿದ್ದೀತು?
ಆಸ್ಟ್ರೇಲಿಯಾ ಫೈನಲ್ ಗೆಲ್ಲುವ ನೆಚ್ಚಿನ ತಂಡ
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿನ ಅವಕಾಶದ ಬಗ್ಗೆ ಮಾತನಾಡಿದ ಮ್ಯಾಥ್ಯೂ ಹೇಡನ್,"ನಮ್ಮ ತಂಡದಲ್ಲಿ ಇನ್ನೂ ಒಂದು ಪ್ರಮುಖ ಗುಂಪು ಇದೆ, ಆದರೆ ಅದು ಕೆಲವು ರೀತಿಯಲ್ಲಿ ಬದಲಾಗಲು ಪ್ರಾರಂಭಿಸುತ್ತಿದೆ. ಸ್ಟೀವ್ ಸ್ಮಿತ್ ಎಷ್ಟು ದಿನ ಆಡಲಿದ್ದಾರೆ ಅಥವಾ ಉಸ್ಮಾನ್ ಖವಾಜಾ ಎಷ್ಟು ದಿನ ಆಡಲಿದ್ದಾರೆ? ಎಂಬುದು ಗೊತ್ತಿಲ್ಲ," ಎಂದಿದ್ದಾರೆ.
"ಇದೇ ಸಮಸ್ಯೆಯನ್ನು ನಾವು ನಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ್ದೇವೆ ಹಾಗೂ ಮನವರಿಕೆಯನ್ನು ಮಾಡಿಕೊಂಡಿದ್ದೇವೆ. ಆದರೆ, ಈ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ತಂಡ ಪ್ರಾಬಲ್ಯವನ್ನು ಮೆರೆದಿದೆ. ಇದರ ಆಧಾರದ ಮೇಲೆ ಹೇಳುವುದಾದರೆ, ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯವನ್ನು ಗೆಲ್ಲಬೇಕೆಂದರೆ, ನಮಗೆ 20 ವಿಕೆಟ್ಗಳ ಅಗತ್ಯವಿದೆ. ಸ್ಟೀವಾ ತಲೆಮಾರಿನ ರೀತಿ ಈ ತಂಡದಲ್ಲಿಯೂ ಅದ್ಭುತ ಬೌಲರ್ಗಳಿದ್ದಾರೆ. ಅವರಲ್ಲಿ ವಿಶ್ವದರ್ಜೆಯ ಸ್ಪಿನ್ನರ್ ಕೂಡ ಇದ್ದಾರೆ. ಈ ಕಾರಣದಿಂದ ಆಸ್ಟ್ರೇಲಿಯಾ ಗೆಲ್ಲುವ ನೆಚ್ಚಿನ ತಂಡವಾಗಿದೆ," ಎಂದು ಮ್ಯಾಥ್ಯೂ ಹೇಡನ್ ಅಭಿಪ್ರಾಯ ಪಟ್ಟಿದ್ದಾರೆ.