IND vs ENG: ಭಾರತ ಟೆಸ್ಟ್ ತಂಡದಲ್ಲಿ ರಿಷಭ್ ಪಂತ್ ಸ್ಥಾನಕ್ಕೆ ಸೇರ್ಪಡೆಯಾದ ಎನ್ ಜಗದೀಶನ್!
ಭಾರತ ಟೆಸ್ಟ್ ತಂಡದಲ್ಲಿ ಗಾಯಕ್ಕೆ ತುತ್ತಾಗಿರುವ ರಿಷಭ್ ಪಂತ್ ಅವರ ಸ್ಥಾನಕ್ಕೆ ತಮಿಳುನಾಡು ತಂಡದ ಎನ್ ಜಗದೀಶನ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರಸ್ತುತ ನಡೆಯುತ್ತಿರುವ ಮ್ಯಾಂಚೆಸ್ಟರ್ ಟೆಸ್ಟ್ ಮೊದಲನೇ ದಿನ ರಿಷಭ್ ಪಂತ್ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಇದೀಗ ಅವರು ಐದನೇ ಟೆಸ್ಟ್‌ನಿಂದ ಹೊರ ನಡೆದಿದ್ದಾರೆ.

ಭಾರತ ಟೆಸ್ಟ್ ತಂಡಕ್ಕೆ ಎನ್ ಜಗದೀಶನ್ ಸೇರ್ಪಡೆ.

ಮ್ಯಾಂಚೆಸ್ಟರ್: ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ(IND vs ENG) ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಈ ಟೆಸ್ಟ್ ಪಂದ್ಯದ ವಿಕೆಟ್ ಕೀಪಿಂಗ್ ಜವಾಬ್ದಾರಿಯಿಂದ ಹೊರ ನಡೆದಿದ್ದಾರೆ. ಆದರೆ, ಅವರು ಬ್ಯಾಟಿಂಗ್‌ಗೆ ಮಾತ್ರ ಲಭ್ಯರಾಗಿದ್ದಾರೆ. ಅಂದ ಹಾಗೆ ರಿಷಭ್ ಪಂತ್ ಅವರ ಸ್ಥಾನಕ್ಕೆ ಮುಂಜಾಗ್ರತಾ ಕ್ರಮವಾಗಿ ತಮಿಳುನಾಡು ವಿಕೆಟ್ ಕೀಪರ್ ಎನ್ ಜಗದೀಶನ್ (N Jagadeesan) ಅವರಿಗೆ ಸ್ಥಾನವನ್ನು ನೀಡಲಾಗಿದೆ. ಗಾಯದ ಹೊರತಾಗಿಯೂ ರಿಷಭ್ ಪಂತ್ ಅವರು ಎರಡನೇ ದಿನ ಬ್ಯಾಟಿಂಗ್‌ಗೆ ಬಂದು ಅರ್ಧಶತಕವನ್ನು ಬಾರಿಸಿದ್ದರು.
ರಿಷಭ್ ಪಂತ್ ಸ್ಥಾನಕ್ಕೆ ಎನ್ ಜಗದೀಶನ್‌ಗೆ ಸ್ಥಾನ ನೀಡಿರುವ ಬಗ್ಗೆ ಬಿಸಿಸಿಐ ಈ ವಿಷಯವನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ. "ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಮೊದಲನೇ ದಿನ ಬಲ ಪಾದದ ಗಾಯಕ್ಕೆ ತುತ್ತಾಗಿರುವ ರಿಷಭ್ ಪಂತ್, ಅವರು ಈ ಪಂದ್ಯದ ಇನ್ನುಳಿದ ಭಾಗದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸುವುದಿಲ್ಲ. ಅವರ ಬದಲು ವಿಕೆಟ್ ಕೀಪರ್ ಆಗಿ ಧ್ರುವ್ ಜುರೆಲ್ ಆಡಲಿದ್ದಾರೆ," ಎಂದು ಬಿಸಿಸಿಐ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
"ಗಾಯದ ಹೊರತಾಗಿಯೂ ರಿಷಭ್ ಪಂತ್ ಎರಡನೇ ದಿನ ತಂಡವನ್ನು ಕೂಡಿಕೊಂಡಿದ್ದಾರೆ ಹಾಗೂ ತಂಡದ ಅಗತ್ಯಗಳಿಗೆ ಅವರು ಲಭ್ಯರಾಗಿದ್ದಾರೆ," ಎಂದು ಬಿಸಿಸಿಐ ತಿಳಿಸಿದೆ.
IND vs ENG: ಅರ್ಧಶತಕ ಬಾರಿಸಿ ಎಂಎಸ್ ಧೋನಿ ದಾಖಲೆ ಮುರಿದ ರಿಷಭ್ ಪಂತ್!
ಇದಕ್ಕೂ ಮುನ್ನ ರಿಷಭ್ ಪಂತ್ ಟೆಸ್ಟ್ ಸರಣಿಯ ಇನ್ನುಳಿದ ಭಾಗದಿಂದ ಹೊರ ನಡೆಯಲಿದ್ದಾರೆ ಹಾಗೂ ಅವರ ಸ್ಥಾನಕ್ಕೆ ಮತ್ತೊರ್ವ ವಿಕೆಟ್ ಕೀಪರ್ ಇಶಾನ್ ಕಿಶನ್‌ಗೆ ಸ್ಥಾನ ನೀಡಬಹುದೆಂದು ವರದಿಯಾಗಿತ್ತು. ಆದರೆ, ತಡವಾಗಿ ತಮಿಳುನಾಡು ವಿಕೆಟ್‌ಕೀಪರ್ ಎನ್ ಜಗದೀಶನ್ ಅವರು ಲಂಡನ್‌ಗೆ ಪ್ರಯಾಣ ಬೆಳೆಸುತ್ತಿದ್ದು, ಗಾಯಾಳು ರಿಷಭ್ ಪಂತ್ ಅವರ ಸ್ಥಾನವನ್ನು ಭಾರತ ತಂಡದಲ್ಲಿ ತುಂಬಲಿದ್ದಾರೆ. ಅವರು ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಭಾಗವಾಗಲಿದ್ದಾರೆ.
🚨
— Cricbuzz (@cricbuzz) July 24, 2025
Tamil Nadu's N Jagadeesan likely to replace Rishabh Pant in India squad
✍️ @vijaymirror #ENGvIND #RishabhPant https://t.co/tNbmVwLwnF pic.twitter.com/BmjoUUaDzb
ಅರ್ಧಶತಕ ಸಿಡಿಸಿದ ರಿಷಭ್ ಪಂತ್
ರಿಷಭ್ ಪಂತ್ ಗಾಯದ ಹೊರತಾಗಿಯೂ ಎರಡನೇ ದಿನ ಕ್ರೀಸ್‌ಗೆ ಬಂದು ಅರ್ಧಶತಕವನ್ನು ಪೂರ್ಣಗೊಳಿಸಿದರು. ಅವರು ಆಡಿದ 75 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿಗಳೊಂದಿಗೆ 54 ರನ್ ಗಳಿಸಿ ಜೋಫ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು. ಈ ಅರ್ಧಶತಕದ ಮೂಲಕ ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚುಅರ್ಧಶತಕಗಳನ್ನು ಗಳಿಸಿದ ಭಾರತೀಯ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಆ ಮೂಲಕ ಎಂಟು ಅರ್ಧಶತಕಗಳನ್ನು ಬಾರಿಸಿದ್ದ ಎಂಎಸ್ ಧೋನಿಯನ್ನು ಪಂತ್ ಹಿಂದಿಕ್ಕಿದ್ದಾರೆ. ರಿಷಭ್ ಪಂತ್ ಇಂಗ್ಲೆಂಡ್‌ನಲ್ಲಿ 9 ಅರ್ಧಶತಕಗಳನ್ನು ಬಾರಿಸಿದ್ದಾರೆ.
IND vs ENG 4th Test: ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲ್‌ಔಟ್!
ಭಾರತ ತಂಡ 358ಕ್ಕೆ ಆಲ್‌ಔಟ್
ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್ ಹಾಗೂ ರಿಷಭ್ ಪಂತ್ ಅವರ ಆಕರ್ಷಕ ಅರ್ಧಶತಕಗಳ ಬಲದಿಂದ ಭಾರತ ತಂಡ, ಮ್ಯಾಂಚೆಸ್ಟರ್ ಟೆಸ್ಟ್ ಪ್ರಥಮ ಇನಿಂಗ್ಸ್‌ನಲ್ಲಿ 114.1 ಓವರ್‌ಗಳಿಗೆ 358 ರನ್‌ಗಳಿಗೆ ಆಲ್‌ಔಟ್ ಆಯಿತು. ಮೊದಲನೇ ದಿನ 264 ರನ್‌ಗಳನ್ನು ಕಲೆ ಹಾಕಿದ್ದ ಭಾರತ, ಎರಡನೇ ದಿನ ಕನಿಷ್ಠ ಮೂರಂಕಿ ಮೊತ್ತವನ್ನೂ ಕಲೆ ಹಾಕಲಿಲ್ಲ. ಬೆನ್ ಸ್ಟೋಕ್ಸ್ 5 ವಿಕೆಟ್ ಕಿತ್ತರೆ, ಜೋಫ್ರಾ ಆರ್ಚರ್ 3 ವಿಕೆಟ್ ಪಡೆದರು.