ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಅರ್ಧಶತಕ ಬಾರಿಸಿ ಎಂಎಸ್‌ ಧೋನಿ ದಾಖಲೆ ಮುರಿದ ರಿಷಭ್‌ ಪಂತ್!

ಗಾಯದ ಹೊರತಾಗಿಯೂ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರು ಇಂಗ್ಲೆಂಡ್‌ ವಿರುದ್ಧ ನಾಲ್ಕನೇ ಟೆಸ್ಟ್‌ ಪಂದ್ಯದ ಎರಡನೇ ದಿನ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ದಾಖಲೆಯನ್ನು ರಿಷಭ್‌ ಪಂತ್‌ ಮುರಿದಿದ್ದಾರೆ.

ಅರ್ಧಶತಕ ಬಾರಿಸಿ ಎಂಎಸ್‌ ಧೋನಿ ದಾಖಲೆ ಮುರಿದ ರಿಷಭ್‌ ಪಂತ್!

ಅರ್ಧ ಶತಕ ಬಾರಿಸಿ ಎಂಎಸ್‌ ಧೋನಿಯ ದಾಖಲೆ ಮುರಿದ ರಿಷಭ್‌ ಪಂತ್‌.

Profile Ramesh Kote Jul 24, 2025 8:47 PM

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ (IND vs ENG) ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ (Rishabh Pant) ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರು ಆಡಿದ 7 ಇನಿಂಗ್ಸ್‌ಗಳಲ್ಲಿ 68.43ರ ಸರಾಸರಿಯಲ್ಲಿ 479 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು ಎರಡು ಶತಕಗಳು ಹಾಗೂ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ. ಆ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ನಾಯಕ ಶುಭಮನ್‌ ಗಿಲ್‌ 619 ರನ್‌ಗಳ ಮೂಲಕ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಅಂದ ಹಾಗೆ ಈ ಸರಣಿಯಲ್ಲಿ ರಿಷಭ್‌ ಪಂತ್‌, ಗಿಲ್‌ ಅವರನ್ನು ಹಿಂದಿಕ್ಕಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲು ಅವಕಾಶವಿತ್ತು. ಆದರೆ, ಅವರ ಈ ಆಸೆಯನ್ನು ಗಾಯ ಭಗ್ನಗೊಳಿಸಿದೆ.

ರಿಷಭ್‌ ಪಂತ್‌‌ ಎಡಗೈನ ತೋರು ಬೆರಳು ಗಾಯದಿಂದ ಗುಣಮುಖರಾಗಿ ಮ್ಯಾಂಚೆಸ್ಟರ್‌ ಟೆಸ್ಟ್‌ಗೆ ಆಗಮಿಸಿದ್ದರು. ಅದರಂತೆ ಮೊದಲನೇ ದಿನ 37 ರನ್‌ ಗಳಿಸಿ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, 68ನೇ ಓವರ್‌ನಲ್ಲಿ ಕ್ರೀಸ್‌ ವೋಕ್ಸ್‌ ಅವರ ಎಸೆತದಲ್ಲಿ ತಮ್ಮ ಬಲಗೈ ಪಾದದ ಗಾಯಕ್ಕೆ ತುತ್ತಾಗಿದ್ದರು. ಆ ಮೂಲಕ ಅವರು ಬ್ಯಾಟಿಂಗ್‌ ಮುಂದುವರಿಸದೆ ಪೆವಿಲಿಯನ್‌ಗೆ ಮರಳಿದ್ದರು. ಗುರುವಾರ ಗಾಯದ ಹೊರತಾಗಿಯೂ ಕ್ರೀಸ್‌ಗೆ ಬಂದ ರಿಷಭ್‌ ಪಂತ್‌, ಕೆಲ ಕಾಲ ಕಠಿಣ ಹೋರಾಟ ನಡೆಸಿದ್ದರು. ಅವರು ಎರಡನೇ ದಿನ 17 ರನ್‌ಗಳನ್ನು ಕಲೆ ಹಾಕಿದ್ದರು. ಅವರು ಒಟ್ಟು 75 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಮೂರು ಬೌಂಡರಿಗಳೊಂದಿಗೆ 54 ರನ್‌ಗಳನ್ನು ಗಳಿಸಿ ಜೋಫ್ರಾ ಆರ್ಚರ್‌ಗೆ ವಿಕೆಟ್‌ ಒಪ್ಪಿಸಿದರು.

IND vs ENG 4th Test: ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲ್‌ಔಟ್‌!

ಈ ಕಠಿಣ ಹೋರಾಟದ ಅರ್ಧಶತಕದ ಮೂಲಕ ರಿಷಭ್‌ ಪಂತ್‌, ಭಾರತ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ದಾಖಲೆಯನ್ನು ಮುರಿದಿದ್ದಾರೆ. ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಮೊದಲ ಭಾರತೀಯ ವಿಕೆಟ್‌ ಕೀಪರ್‌ ಎಂಬ ದಾಖಲೆಯನ್ನು ರಿಷಭ್‌ ಪಂತ್‌ ಬರೆದಿದ್ದಾರೆ. ಅವರು ಇಂಗ್ಲೆಂಡ್‌ ನೆಲದಲ್ಲಿ 9 ಅರ್ಧಶತಕಗಳನ್ನು ಗಳಿಸಿದ್ದಾರೆ. ಮಾಜಿ ನಾಯಕ ಎಂಎಸ್‌ ಧೋನಿ 8 ಅರ್ಧಶತಕಗಳನ್ನು ಇಂಗ್ಲೆಂಡ್‌ನಲ್ಲಿ ಗಳಿಸಿದ್ದಾರೆ.

ಅಂದ ಹಾಗೆ ಈ ಸರಣಿಯಲ್ಲಿ ರಿಷಭ್‌ ಪಂತ್‌ ಅವರು ಐದು ಬಾರಿ 50ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಎಂಎಸ್‌ ಧೋನಿ ಹಾಗೂ ಫಾರೂಖ್‌ ಇಂಜಿನಿಯರ್‌ ಅವರನ್ನು ಪಂತ್‌ ಹಿಂದಿಕ್ಕಿದ್ದಾರೆ. ಇನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್‌ ಅವರ ದಾಖಲೆಯನು ಸರಿಗಟ್ಟಿದ್ದಾರೆ.



ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಭಾರತೀಯ ವಿಕೆಟ್‌ ಕೀಪರ್ಸ್‌

ರಿಷಭ್‌ ಪಂತ್‌: 9

ಎಂಎಸ್‌ ಧೋನಿ: 8

ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ಬಾರಿ 50ಕ್ಕೂ ಅಧಿಕ ರನ್‌ ಗಳಿಸಿದ ಭಾರತೀಯ ವಿಕೆಟ್‌ ಕೀಪರ್ಸ್‌

ರಿಷಭ್‌ ಪಂತ್‌: 5 (ಇಂಗ್ಲೆಂಡ್‌ ವಿರುದ್ದ 2025*)

ಫಾರೂಖ್‌ ಇಂಜಿನಿಯರ್‌: 4 (ಇಂಗ್ಲೆಂಡ್‌ ವಿರುದ್ಧ 1972/73)

ಎಂಎಸ್‌ ಧೋನಿ: 4 (ಆಸ್ಟ್ರೇಲಿಯಾ ವಿರುದ್ಧ 2008-09)

ಎಂಎಸ್‌ ಧೋನಿ: 4 (ಇಂಗ್ಲೆಂಡ್‌ ವಿರುದ್ಧ 2014)

IND vs ENG: ನಾಲ್ಕನೇ ಟೆಸ್ಟ್‌ಗೆ ರಿಷಭ್‌ ಪಂತ್‌ ಲಭ್ಯತೆ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿ!

ಭಾರತದ ಪರ ಅತಿ ಹೆಚ್ಚು ಟೆಸ್ಟ್‌ ಶತಕ ಸಿಡಿಸಿದವರು

ರಿಷಭ್‌ ಪಂತ್‌: 90*

ವೀರೇಂದ್ರ ಸೆಹ್ವಾಗ್‌: 90

ರೋಹಿತ್‌ ಶರ್ಮಾ: 88

ಎಂಎಸ್‌ ಧೋನಿ: 78

ರವೀಂದ್ರ ಜಡೇಜಾ: 74