ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಭಾರತ ತಂಡದ ಮೂರನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಸಂಜಯ್‌ ಬಾಂಗರ್‌!

Sanjay bangar on India's No 3: ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿ ಜೂನ್‌ 20 ರಂದು ಆರಂಭವಾಗಲಿದೆ. ಈ ಸರಣಿಯಲ್ಲಿ ಭಾರತ ತಂಡದ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆಂಬ ಬಗ್ಗೆ ಗೊಂದಲಗಳು ಇವೆ. ಇದರ ನಡುವೆ ಭಾರತ ತಂಡದ ಮೂರನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಸಂಜಯ್‌ ಬಾಂಗರ್‌ ಸೂಚಿಸಿದ್ದಾರೆ.

ಭಾರತದ 3ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಬಾಂಗರ್!

ಭಾರತ ತಂಡದ ಮೂರನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಸಂಜಯ್‌ ಬಾಂಗರ್‌.

Profile Ramesh Kote Jun 12, 2025 12:22 PM

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿ (IND vs ENG) ಜೂನ್‌ 20 ರಂದು ಆರಂಭವಾಗಲಿದೆ. ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ಪ್ಲೇಯಿಂಗ್‌ (India) xiನಲ್ಲಿ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ರೋಹಿತ್‌ ಶರ್ಮಾ ಅವರ ಬದಲು ಯಾರು ಇನಿಂಗ್ಸ್‌ ಆರಂಭಿಸಲಿದ್ದಾರೆ? ಹಾಗೂ ವಿರಾಟ್‌ ಕೊಹ್ಲಿಯ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಬಹುದು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಂದ ಹಾಗೆ ಭಾರತ ತಂಡದ ಮಾಜಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ (Sanjay Bangar), ಪ್ಲೇಯಿಂಗ್‌ xiನಲ್ಲಿ ಮೂರನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ್ದಾರೆ.

ಚೇತೇಶ್ವರ್‌ ಪೂಜಾರ ಟೆಸ್ಟ್‌ ತಂಡದಿಂದ ಹೊರ ಬಿದ್ದ ಬಳಿಕ ಶುಭಮನ್‌ ಗಿಲ್‌ ಮೂರನೇ ಕ್ರಮಾಂಕದಲ್ಲಿ ಆಡುತ್ತದ್ದಾರೆ. ಇದೀಗ ಒಬ್ಬರು ದಿಗ್ಗಜರು ವಿದಾಯ ಹೇಳಿರುವ ಕಾರಣ, ಭಾರತ ತಂಡದ ಬ್ಯಾಟಿಂಗ್‌ ಅಗ್ರ ನಾಲ್ಕು ಕ್ರಮಾಂಕಗಳಲ್ಲಿ ಹಲವು ಬದಲಾವನೆಗಳಾಗುವ ಸಾಧ್ಯತೆ ಇದೆ. ಭಾರತ ತಂಡದ ಅಭ್ಯಾಸದ ವೇಳೆ ಶುಭಮನ್‌ ಗಿಲ್‌, ಜಸ್‌ಪ್ರೀತ್‌ ಬುಮ್ರಾ ಬೌಲಿಂಗ್‌ ಅನ್ನು ಎದುರಿಸಿದ್ದರು. ನಂತರ ಸಾಯಿ ಸುದರ್ಶನ್‌ ಅವರ ಬಗ್ಗೆ ಕೂಡ ಟೀಮ್‌ ಮ್ಯಾನೇಜ್‌ಮೆಂಟ್‌ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದೆ. ನಾಲ್ಕನೇ ದಿನದ ಅಭ್ಯಾಸದಲ್ಲಿ ಇಡೀ ತಂಡ ಲಭ್ಯವಿದ್ದಾಗ, ಕೆ.ಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ನೆಟ್ಸ್‌ನಲ್ಲಿ ಬ್ಯಾಟ್‌ ಮಾಡಿದ್ದರು. ನಂತರ ಕರುಣ್ ನಾಯರ್ ಮತ್ತು ಗಿಲ್ ಆಡಿದ್ದರು. ಮೂರನೇ ನೆಟ್ ಅನ್ನು ರಿಷಭ್ ಪಂತ್ ಮತ್ತು ಧ್ರುವ್ ಜುರೆಲ್ ಆಕ್ರಮಿಸಿಕೊಂಡರು.

IND vs ENG: ಜಸ್‌ಪ್ರೀತ್‌ ಬುಮ್ರಾ ಬಗ್ಗೆ ಇಂಗ್ಲೆಂಡ್‌ಗ ವಾರ್ನಿಂಗ್‌ ಕೊಟ್ಟ ಮಾರ್ನೆ ಮಾರ್ಕೆಲ್!

ಇದನ್ನು ನೋಡಿದಾಗ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಅಗ್ರ ಆರು ಕ್ರಮಾಂಕದ ಬ್ಯಾಟಿಂಗ್‌ ಲೈನ್‌ ಅಪ್‌ ಇದೇ ಇರಬಹುದು ಎಂದು ಹೇಳಬಹುದು. ಇದರ ಹೊರತಾಗಿಯೂ ಟೀಮ್‌ ಇಂಡಿಯಾದ ಮೂರನೇ ಕ್ರಮಾಂಕದಲ್ಲಿ ಶುಭಮನ್‌ ಗಿಲ್‌ ಅಥವಾ ಕರುಣ್‌ ನಾಯರ್‌ ಇರುವುದಿಲ್ಲ ಎಂದು ಸಂಜಯ್‌ ಬಾಂಗರ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶುಭಮನ್‌ ಗಿಲ್‌ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕು: ಬಾಂಗರ್‌

"ಮೂರನೇ ಕ್ರಮಾಂಕಕ್ಕೆ ಶುಭಮನ್‌ ಗಿಲ್‌ ಅಥವಾ ಕರುಣ್‌ ನಾಯರ್‌ ಅವರನ್ನು ನಾನು ಆಯ್ಕೆ ಮಾಡುವುದಿಲ್ಲ. ಕರುಣ್‌ ನಾಯರ್‌ ಪ್ಲೇಯಿಂಗ್‌ xiನಲ್ಲಿ ಸ್ವಲ್ಪ ಕಳೆ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲಿ ಎಂದು ನಾನು ಬಯಸುತ್ತೇನೆ. ಇನ್ನು ಶುಭಮನ್‌ ಗಿಲ್‌ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲಿದ್ದಾರೆಂದು ನಾನು ಭಾವಿಸುತ್ತೇನೆ. ಹಾಗಾಗಿ ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್‌ ಹಾಗೂ ಅಭಿಮನ್ಯು ಈಶ್ವರನ್‌ ಅವರಲ್ಲಿ ಒಬ್ಬರು ಆಡಬಹುದು. ಅಭ್ಯಾಸ ಪಂದ್ಯವೊಂದರಲ್ಲಿ ಈಶ್ವರನ್‌ ಕೂಡ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು," ಎಂದು ಸಂಜಯ್‌ ಬಾಂಗರ್‌ ತಿಳಿಸಿದ್ದಾರೆ.

IND vs ENG: ʻಕೇವಲ 5 ವಿಕೆಟ್‌ ಅಗತ್ಯʼ-ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ಜಸ್‌ಪ್ರೀತ್‌ ಬುಮ್ರಾ!

ರಿಷಭ್‌ ಪಂತ್‌ಗೆ 5ನೇ ಕ್ರಮಾಂಕ

ರಿಷಭ್‌ ಪಂತ್‌ ಐದನೇ ಕ್ರಮಾಂಕದಲ್ಲಿ ಹಾಗೂ ಕರುಣ್‌ ನಾಯರ್‌ ಅವರು ಆರನೇ ಕ್ರಮಾಂಕದಲ್ಲಿ ಆಡಬಹದು. ಇನ್ನು ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್‌ ಅಥವಾ ಈಶ್ವರನ್‌ ಆಡಬಹುದು ಎಂದಿದ್ದಾರೆ ಮಾಜಿ ಬ್ಯಾಟಿಂಗ್‌ ಕೋಚ್‌.

"ಅಲ್ಲಿ ಯಾವುದೇ ವ್ಯತ್ಯಾಸವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಆ ಇಬ್ಬರಲ್ಲಿ ಒಬ್ಬರು 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. 4ನೇ ಸ್ಥಾನದಲ್ಲಿ ಶುಭಮನ್ ಗಿಲ್ ಮತ್ತು 5ನೇ ಸ್ಥಾನದಲ್ಲಿ ರಿಷಭ್ ಪಂತ್ ಮತ್ತು 6ನೇ ಸ್ಥಾನದಲ್ಲಿ ಕರುಣ್ ನಾಯರ್ ಆಡಲಿದ್ದಾರೆ. ಪರಿಸ್ಥಿತಿಯ ಬಗ್ಗೆ ನನ್ನ ತಿಳುವಳಿಕೆ ಅಷ್ಟೆ," ಎಂದು ಸಂಜಯ್‌ ಬಾಂಗರ್ ಹೇಳಿದ್ದಾರೆ.