ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಜಂಕ್‌ ಫುಡ್‌ ತಿನ್ನೋದೇ ಇಲ್ಲʼ: ಸಿರಾಜ್‌ರ ದೀರ್ಘಾವಧಿ ಸ್ಪೆಲ್‌ಗಳ ಸಕ್ಸಸ್‌ಗೆ ಕಾರಣ ತಿಳಿಸಿದ ಸಹೋದರ!

ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್‌ ಸಿರಾಜ್‌ ಅವರ ದೀರ್ಘಾವಧಿ ಬೌಲಿಂಗ್‌ ಸ್ಪೆಲ್‌ಗಳ ಹಿಂದಿನ ರಹಸ್ಯವನ್ನು ಅವರ ಸಹೋದರ ಮೊಹಮ್ಮದ್‌ ಇಸ್ಮಾಯಿಲ್‌ ಬಹಿರಂಗಪಡಿಸಿದ್ದಾರೆ. ಕೆನಿಂಗ್ಟನ್‌ ಓವಲ್‌ನಲ್ಲಿ ಸೋಮವಾರ ಅಂತ್ಯವಾಗಿದ್ದ ಐದನೇ ಟೆಸ್ಟ್‌ ಪಂದ್ಯದಲ್ಲಿ ಮೊಹಮ್ಮದ್‌ ಸಿರಾಜ್‌ 9 ವಿಕೆಟ್‌ಗಳನ್ನು ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಸಿರಾಜ್‌ರ ದೀರ್ಘಾವಧಿ ಸ್ಪೆಲ್‌ಗಳ ಸಕ್ಸಸ್‌ಗೆ ಕಾರಣ ತಿಳಿಸಿದ ಸಹೋದರ!

ಮೊಹಮದ್‌ ಸಿರಾಜ್‌ರ ಆಹಾರ ಕ್ರಮದ ಬಗ್ಗೆ ಸಹೋದರ ಇಸ್ಲಾಯಿಲ್‌ ಮಾಹಿತಿ ನೀಡಿದ್ದಾರೆ.

Profile Ramesh Kote Aug 5, 2025 4:01 PM

ಲಂಡನ್‌: ಇಂಗ್ಲೆಂಡ್‌ ವಿರುದ್ಧ ಐದನೇ ಹಾಗೂ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ(IND vs ENG) 9 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಹಿರಿಯ ವೇಗಿ ಮೊಹಮ್ಮದ್‌ ಸಿರಾಜ್‌ (Mohammed Siraj) ಅವರು ಭಾರತ ತಂಡದ 6 ರನ್‌ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಆ ಮೂಲಕ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಂದ ಹಾಗೆ ಜಸ್‌ಪ್ರೀತ್‌ ಬುಮ್ರಾ ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಸಲುವಾಗಿ ಐದನೇ ಟೆಸ್ಟ್‌ನಿಂದ ಹೊರಗುಳಿದಿದ್ದರು. ಆದರೆ, ಮೊಹಮ್ಮದ್‌ ಸಿರಾಜ್‌ ಐದೂ ಪಂದ್ಯಗಳನ್ನು ಆಡಿದ್ದರು ಹಾಗೂ ಸತತವಾಗಿ ದೀರ್ಘಾವಧಿ ಸ್ಪೆಲ್‌ಗಳನ್ನು ಬೌಲ್‌ ಮಾಡಿದ್ದರು. ಇದೀಗ ಮೊಹಮ್ಮದ್‌ ಸಿರಾಜ್‌ ಫಿಟ್‌ನೆಸ್‌ ಬಗ್ಗೆ ಅವರ ಸಹೋದರ ಮೊಹಮ್ಮದ್‌ ಇಸ್ಮಾಯಿಲ್‌ (Mohammed Ismail) ಮಾತನಾಡಿದ್ದಾರೆ.

ಐದೂ ಟೆಸ್ಟ್‌ ಪಂದ್ಯಗಳನ್ನು ಆಡಿದ ಹೊರತಾಗಿಯೂ ಮೊಹಮ್ಮದ್‌ ಸಿರಾಜ್‌ ಅವರು ಎಲ್ಲಿಯೂ ಸುಸ್ತಾದ ರೀತಿ ಕಾಣಿಸಲಿಲ್ಲ ಹಾಗೂ ಅವರು ಪಂದ್ಯದ ಕೆಲವು ಹಂತಗಳಲ್ಲಿ ಎಂಟು ಓವರ್‌ಗಳ ಸ್ಪೆಲ್‌ ಅನ್ನು ಹಾಕಿದ್ದರು. ಓವಲ್‌ ಟೆಸ್ಟ್‌ ಪಂದ್ಯದ ಬಳಿಕ ಮೊಹಮ್ಮದ್‌ ಸಿರಾಜ್‌ ಅವರ ಆಹಾರ ಕ್ರಮ ಹಾಗೂ ಫಿಟ್‌ನೆಸ್‌ ಬಗ್ಗೆ ಸಹೋದರ ಮೊಹಮ್ಮದ್‌ ಇಸ್ಮಾಯಿಲ್‌ ತಿಳಿಸಿದ್ದಾರೆ.

IND vs ENG: ʻಒಂದು ವೇಳೆ ಬೆನ್‌ ಸ್ಟೋಕ್ಸ್‌ ಆಡಿದ್ರೆ ಇಂಗ್ಲೆಂಡ್‌ ಗೆಲ್ಲುತ್ತಿತ್ತುʼ-ಮೈಕಲ್‌ ವಾನ್‌!

"ಹೌದು, ನಿಸ್ಸಂಶಯವಾಗಿ ಅವರು ಫಿಟ್‌ನೆಸ್‌ ಕಡೆಗೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸುತ್ತಾರೆ. ಅವರು ಜಂಕ್‌ ಆಹಾರವನ್ನು ಕಡೆಗಣಿಸುತ್ತಾರೆ ಹಾಗೂ ಶಿಸ್ತುಬದ್ದವಾಗಿ ಆಹಾರ ಕ್ರಮವನ್ನು ಅನುಸರಿಸುತ್ತಾರೆ. ಅವರು ಹೈದರಾಬಾದ್‌ನಲ್ಲಿ ನೆಲೆಸಿದ್ದರೂ, ಅಪರೂಪಕ್ಕೆ ಬಿರಿಯಾನಿಯನ್ನು ತಿನ್ನುತ್ತಾರೆ. ಅಂದರೆ, ಕೆಲವೊಮ್ಮೆ ಮನೆಯಲ್ಲಿ ಮಾಡಿದರೆ ಮಾತ್ರ ತಿನ್ನುತ್ತಾರೆ. ಆದರೆ, ಫಿಜಾ ಅಥವಾ ಫಾಸ್ಟ್‌ ಫುಡ್‌ ಅನ್ನು ತಿನ್ನುವುದೇ ಇಲ್ಲ. ಅವರು ತಮ್ಮ ದೇಹದ ಬಗ್ಗೆ ತುಂಬಾ ಶಿಸ್ತನ್ನು ಹೊಂದಿದ್ದಾರೆ," ಎಂದು ಸಿರಾಜ್‌ ಅವರ ಸಹೋದರ ಮೊಹಮ್ಮದ್‌ ಇಸ್ಮಾಯಿಲ್‌ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಭಾರತ ತಂಡದಲ್ಲಿ ಅವಕಾಶ ನೀಡದ ಹೊರತಾಗಿಯೂ ಮೊಹಮ್ಮದ್‌ ಸಿರಾಜ್‌ ತಲೆ ಕೆಡಿಸಿಕೊಳ್ಳಲಿಲ್ಲ ಹಾಗೂ ಅವರು ಇನ್ನಷ್ಟು ಹೆಚ್ಚಿನದಾಗಿ ಫಿಟ್‌ನೆಸ್‌ ಹಾಗೂ ಅಭ್ಯಾಸ ಕಡೆಗೆ ಗಮನ ಹರಿಸಿದ್ದರು. ಆ ಮೂಲಕ ಕಮ್‌ಬ್ಯಾಕ್‌ ಮಾಡಲು ಪಣ ತೊಟ್ಟಿದ್ದರು ಎಂದು ಅವರು ಹೇಳಿದ್ದಾರೆ.

IND vs ENG 5th Test: ಗೆಲುವು ಕಂಡು ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕುಣಿದು ಕುಪ್ಪಳಿಸಿದ ಕೋಚ್‌ ಗಂಭೀರ್‌; ವಿಡಿಯೊ ವೈರಲ್‌

"ಶೇ 100 ರಷ್ಟು ಅವರು ಯಾವುದನ್ನೂ ಬಿಟ್ಟು ಕೊಡುವುದಿಲ್ಲ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಭಾರತ ತಂಡದಲ್ಲಿ ಸ್ಥಾನ ನೀಡದ ವೇಳೆಯೂ ಅವರು ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಇದರ ಬದಲು ಅವರು ತಮ್ಮ ಕೆಲಸವನ್ನು ಇನ್ನಷ್ಟು ಕಠಿಣಗೊಳಿಸಿದರು. ಜಿಮ್‌ಗೆ ತೆರಳಿದ್ದರು ಹಾಗೂ ಫಿಟ್‌ನೆಸ್‌ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿದ್ದರು. ಪ್ರತಿಯೊಂದು ದಿನ ಬೆಳಿಗ್ಗೆ ಹಾಗೂ ಸಂಜೆ ಅವರು ಫಿಟ್‌ನೆಸ್‌ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದರು. ಯಾವ ಅಂಶದಲ್ಲಿ ಸುಧಾರಣೆ ಕಂಡುಕೊಳ್ಳಬೇಕೆಂಬುದನ್ನು ಅವರು ಸರಿ ಮಾಡಿಕೊಂಡಿದ್ದರು," ಎಂದು ಅವರು ತಿಳಿಸಿದ್ದಾರೆ.

IND vs ENG: ʻನನಗೋಸ್ಕರ ಅಲ್ಲ, ದೇಶಕ್ಕೋಸ್ಕರ ಬೌಲ್‌ ಮಾಡುತ್ತೇನೆʼ: ಮೊಹಮ್ಮದ್‌ ಸಿರಾಜ್‌!

23 ವಿಕೆಟ್‌ ಕಿತ್ತ ಮೊಹಮ್ಮದ್‌ ಸಿರಾಜ್‌

ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್‌ ಸಿರಾಜ್‌ ಅವರು ಈ ಟೆಸ್ಟ್‌ ಸರಣಿಯಲ್ಲಿ ಆಡಿದ ಐದು ಪಂದ್ಯಗಳಿಂದ 23 ವಿಕೆಟ್‌ಗಳನ್ನು ಕಬಳಿಸಿದ್ದರು ಹಾಗೂ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಇದರಲ್ಲಿ ಅವರು ಎರಡು ಬಾರಿ 5 ವಿಕೆಟ್‌ ಸಾಧನೆ ಮಾಡಿದ್ದಾರೆ. ಅಂದ ಹಾಗೆ ಈ ಸರಣಿಯಲ್ಲಿ ಭಾರತ ತಂಡ 2-2 ಅಂತರದಲ್ಲಿ ಸಮಬಲ ಮಾಡಿಕೊಂಡಿತ್ತು.