ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಏಕದಿನ ವಿಶ್ವಕಪ್‌ ಸನಿಹವಾಗುತ್ತದೆ ಏನು ಮಾಡುತ್ತಿದ್ದೀರಿ? ಗೌತಮ್‌ ಗಂಭೀರ್‌ಗೆ ಅಜಿಂಕ್ಯ ರಹಾನೆ ಪ್ರಶ್ನೆ!

ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡ, ಏಕದಿನ ಸರಣಿಯನ್ನು 1-2 ಅಂತರದಲ್ಲಿ ಸೋಲು ಅನುಭವಿಸಿದ ಬಳಿಕ ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರನ್ನು ಮಾಜಿ ನಾಯಕ ಅಜಿಂಕ್ಯ ರಹಾನೆ ಟೀಕಿಸಿದ್ದಾರೆ. ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಹೆಚ್ಚು-ಹೆಚ್ಚು ಬದಲಾವಣೆ ಮಾಡಿದ ಕಾರಣ ಸೋಲಬೇಕಾಯಿತು ಎಂದು ಕಿಡಿ ಕಾರಿದ್ದಾರೆ.

ಕಿವೀಸ್‌ ಎದುರು ಭಾರತ ಒಡಿಐ ಸರಣಿ ಸೋಲಲು ಕಾರಣ ತಿಳಿಸಿದ ರಹಾನೆ!

ಗೌತಮ್‌ ಗಂಭೀರ್‌ ವಿರುದ್ಧ ಅಜಿಂಕ್ಯ ರಹಾನೆ ಅಸಮಾಧಾನ. -

Profile
Ramesh Kote Jan 19, 2026 10:12 PM

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡ ಮೂರು ಪಂದ್ಯಗಳ (IND vs NZ) ಏಕದಿನ ಸರಣಿಯನ್ನು 1-2 ಅಂತರದಲ್ಲಿ ಸೋಲು ಅನುಭವಿಸಿದ ಬಳಿಕ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಅವರನ್ನು ಮಾಜಿ ನಾಯಕ ಅಜಿಂಕ್ಯ ರಹಾನೆ (Ajinkya Rahane) ಪ್ರಶ್ನೆ ಮಾಡಿದ್ದಾರೆ. ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಪದೇ-ಪದೆ ಆಟಗಾರರನ್ನು ಬದಲಾವಣೆ ಮಾಡಿದ್ದರ ಪರಿಣಾಮ ಆತಿಥೇಯ ತಂಡ ಏಕದಿನ ಸರಣಿಯನ್ನು ಕಳೆದುಕೊಂಡಿದೆ ಎಂದು ಮುಂಬೈ ಬ್ಯಾಟರ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಭಾರತ ತಂಡ ಮೊದಲನೇ ಏಕದಿನ ಪಂದ್ಯವನ್ನು ಗೆದ್ದು ಏಕದಿನ ಸರಣಿಯಲ್ಲಿ 1-0 ಅಂತರದಲ್ಲಿಶ ಶುಭಾರಂಭ ಕಂಡಿತ್ತು. ನಂತರ ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ನಂತರ ಭಾನುವಾರ ನಡೆದಿದ್ದ ಮೂರನೇ ಪಂದ್ಯದಲ್ಲಿ ಕಿವೀಸ್‌ ನೀಡಿದ್ದ 338 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ, ವಿರಾಟ್‌ ಕೊಹ್ಲಿ (124 ರನ್‌) ಅವರ ಶತಕದ ಹೊರತಾಗಿಯೂ 41 ರನ್‌ಗಳಿಂದ ಸೋಲು ಅನುಭವಿಸಿತ್ತು. 46 ಓವರ್‌ಗಳಿಗೆ 296 ರನ್‌ಗಳಿಗೆ ಆಲ್‌ಔಟ್‌ ಆಯಿತು.

ʻಯಂಗ್‌ ಕ್ರಿಕೆಟರ್‌ಗಳಿಗೆ ಇದು ದೊಡ್ಡ ಪಾಠʼ: ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ಗೆ ಸುನೀಲ್‌ ಗವಾಸ್ಕರ್ ಮೆಚ್ಚುಗೆ!

ಕ್ರಿಕ್‌ಬಝ್‌ ಜೊತೆ ಮಾತನಾಡಿದ ಅಜಿಂಕ್ಯ ರಹಾನೆ,"ಕಠಿಣ ಪ್ರಶ್ನೆಗಳು ಇರುತ್ತವೆ. ಕಳೆದ ಒಂಬತ್ತು ಪಂದ್ಯಗಳಲ್ಲಿ ಭಾರತ ಐದು ಏಕದಿನ ಪಂದ್ಯಗಳನ್ನು ಸೋತಿದೆ. ಏಕೆಂದರೆ ಭಾರತ ತಂಡದಲ್ಲಿ ಹಲವು ಬದಲಾವಣೆಗಳಿವೆ. ಅದಕ್ಕಾಗಿಯೇ ನಾನು ಹೇಳಿದ್ದೇನೆಂದರೆ, ನೀವು ವಿಶ್ವಕಪ್ ಟೂರ್ನಿಯ ಸನಿಹದಲ್ಲಿದ್ದೀರಿ. ಹಾಗಾಗಿ ತಂಡದಲ್ಲಿ ಆಟಗಾರರಿಗೆ ಆ ಭದ್ರತೆ ಬೇಕು, ಅವರಿಗೆ ಟೀಮ್‌ ಮ್ಯಾನೇಜ್‌ಮೆಂಟ್‌ ಕಡೆಯಿಂದ ಸ್ಪಷ್ಟತೆ ಬೇಕು," ಎಂದು ರಹಾನೆ ಹೇಳಿದ್ದಾರೆ.

"ನೀವು ಏಕದಿನ ಸ್ವರೂಪದಲ್ಲಿ ಕೆಲವು ನಿರ್ದಿಷ್ಟ ಆಟಗಾರರನ್ನು ಆಡಿಸುತ್ತಿದ್ದರೆ, ಅದು ಯಾವಾಗಲೂ ಸ್ಪಷ್ಟತೆ ಇರಬೇಕು. ಕಠಿಣ ಪ್ರಶ್ನೆಗಳು ಇರುತ್ತವೆ, ಅದು ತುಂಬಾ ಸಹಜ, ವಿಶೇಷವಾಗಿ ಅಭಿಮಾನಿಗಳಿಂದ ಇದ್ದೇ ಇರುತ್ತದೆ. ಭಾರತೀಯ ಕ್ರಿಕೆಟ್ ತುಂಬಾ ಸಂಪರ್ಕ ಹೊಂದಿದೆ. ಭಾರತ ತಂಡ ಪಂದ್ಯಗಳು ಮತ್ತು ಸರಣಿಗಳನ್ನು ಗೆಲ್ಲಬೇಕೆಂದು ಎಲ್ಲರೂ ಬಯಸುತ್ತಾರೆ, ವಿಶೇಷವಾಗಿ ತವರು ಅಂಗಣದಲ್ಲಿ," ಎಂದು ತಿಳಿಸಿದ್ದಾರೆ.

IND vs NZ: ವಿರಾಟ್‌ ಕೊಹ್ಲಿ ಅಲ್ಲ, ನಾವು ಟಾರ್ಗೆಟ್‌ ಮಾಡಿದ್ದು ಈ ಆಟಗಾರನನ್ನು ಎಂದ ಡ್ಯಾರಿಲ್‌ ಮಿಚೆಲ್!

"ನ್ಯೂಜಿಲೆಂಡ್‌ ತಂಡವಾಗಬಹುದು ಅಥವಾ ಅದರ ಎ ಅಥವಾ ಬಿ ತಂಡದ ವಿರುದ್ಧ ಆಡುವಾಗ, ಎಲ್ಲಾ ಆಟಗಾರರಿಗೆ ಗೌರವ ನೀಡಬೇಕು ಹಾಗೂ ಇಲ್ಲಿ ಯಾವಾಗಲೂ ನಿರೀಕ್ಷೆಗಳಿರುತ್ತವೆ. ಭಾರತ ಸುಲಭವಾಗಿ ಗೆಲ್ಲುತ್ತದೆ ಎಂದು ನಾವೆಲ್ಲರೂ ಭಾವಿಸಿದ್ದೆವು, ಬಹುಶಃ 3-0 ಅಂತರದಲ್ಲಿ. ಆದರೆ ನ್ಯೂಜಿಲೆಂಡ್ ಆಡಿದ ರೀತಿ ಅದ್ಭುತವಾಗಿದೆ," ಎಂದು ಹೇಳಿದರು.

"ಕಠಿಣ ಪ್ರಶ್ನೆಗಳಿರುತ್ತವೆ, ಆದರೆ ಭಾರತ ತಂಡದ ದೃಷ್ಟಿಕೋನದಿಂದ, ಅವರು ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ನೀವು ಯಾವ ಆಟಗಾರರನ್ನು ಬೆಂಬಲಿಸುತ್ತೀರಿ ಎಂಬುದನ್ನು ನೋಡಿ ಏಕೆಂದರೆ ಆರು ತಿಂಗಳ ನಂತರ ನೀವು ಮತ್ತೆ ಏಕದಿನ ಕ್ರಿಕೆಟ್ ಆಡಲಿದ್ದೀರಿ," ಎಂದು ಅವರು ಹೇಳಿದರು.

"ನಿಮಗೆ ಸಮಯವಿದೆ. ನ್ಯೂಜಿಲೆಂಡ್ ಟಿ20ಐ ಸರಣಿ ಮುಗಿದ ನಂತರ, ಏನೂ ಇಲ್ಲ. ಬಹುಶಃ ಐಪಿಎಲ್ ನಂತರ, ನೀವು ಏಕದಿನ ಪಂದ್ಯಗಳನ್ನು ಆಡಲಿದ್ದೀರಿ. ಆದ್ದರಿಂದ ಯಾವಾಗಲೂ ನಿಮ್ಮ ಸರಿಯಾದ ಆಟಗಾರರು ಮತ್ತು ಸರಿಯಾದ ಸಂಯೋಜನೆಗಳನ್ನು ಹುಡುಕುವುದು ಮತ್ತು ಅವರಿಗೆ ಬೆಂಬಲ ನೀಡುವುದರ ಬಗ್ಗೆ ಇದಾಗಿದೆ," ಎಂದು ಅಜಿಂಕ್ಯ ರಹಾನೆ ತಿಳಿಸಿದ್ದಾರೆ.