ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ಒಡಿಐ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ಶ್ರೇಯಸ್‌ ಅಯ್ಯರ್‌!

ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ವಿಶೇಷ ದಾಖಲೆಯನ್ನು ಬರೆಯಲಿದ್ದಾರೆ. ಅವಚರು 83 ರನ್‌ಗಳನ್ನು ಕಲೆ ಹಾಕಿದರೆ, ಏಕದಿನ ಕ್ರಿಕೆಟ್‌ನಲ್ಲಿ 3000 ರನ್‌ಗಳನ್ನು ಪೂರ್ಣಗೊಳಿಸಲಿದ್ದಾರೆ.

ಒಡಿಐ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ಶ್ರೇಯಸ್‌!

3000 ಒಡಿಐ ರನ್‌ಗಳ ಸನಿಹದಲ್ಲಿ ಶ್ರೇಯಸ್‌ ಅಯ್ಯರ್‌. -

Profile
Ramesh Kote Jan 10, 2026 5:47 PM

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ (IND vs NZ) ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಭಾರತ ತಂಡದ ಉಪ ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಎದುರು ನೋಡುತ್ತಿದ್ದಾರೆ. ಜನವರಿ 11 ರಂದು ವಡೋದರದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯುವ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಕಾದಾಟ ನಡೆಸಲಿವೆ. 2025ರ ಅಕ್ಟೋಬರ್‌ 25 ರಂದು ಆಸ್ಟ್ರೇಲಿಯಾ ವಿರುದ್ಧ ಶ್ರೇಯಸ್‌ ಅಯ್ಯರ್‌ ಭಾರತದ ಪರ (India) ಕೊನೆಯ ಪಂದ್ಯವನ್ನು ಆಡಿದ್ದರು. ಈ ಸರಣಿಯ ವೇಳೆ ಅವರು ಪಕ್ಕೆಲಬು ಗಾಯಕ್ಕೆ ತುತ್ತಾಗಿದ್ದರು. ಇದೀಗ ಸಂಪೂರ್ಣ ಫಿಟ್‌ ಆಗಿರುವ ಅಯ್ಯರ್‌ ಭಾರತ ಏಕದಿನ ತಂಡಕ್ಕೆ ಮರಳಿದ್ದಾರೆ.

ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿಯಿಂದಲೂ ಸಾಧ್ಯವಾಗದ ಒಡಿಐ ದಾಖಲೆಯನ್ನು ಬರೆಯಲು ಶ್ರೇಯಸ್‌ ಅಯ್ಯರ್‌ ಸಜ್ಜಾಗುತ್ತಿದಾರೆ. ಅವರು 83 ರನ್‌ಗಳನ್ನು ಗಳಿಸಿದರೆ, ಏಕದಿನ ಕ್ರಿಕೆಟ್‌ನಲ್ಲಿ ವಿಶೇಷ ಮೈಲುಗಲ್ಲು ತಲುಪಲಿದ್ದಾರೆ. ಅಂದಹಾಗೆ ಕಿವೀಸ್‌ ಎದುರು ಮೂರು ಏಕದಿನ ಪಂದ್ಯಗಳಲ್ಲಿ ಭಾರತ ತಂಡದ ಉಪ ನಾಯಕನಿಗೆ ಅವಕಾಶವಿದೆ. 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅಯ್ಯರ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು.

T20 World Cup 2026: ತಿಲಕ್‌ ವರ್ಮಾ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಸೂಚಿಸಿದ ಆಕಾಶ್‌ ಚೋಪ್ರಾ!

3000 ಒಡಿಐ ರನ್‌ಗಳ ಸನಿಹದಲ್ಲಿ ಶ್ರೇಯಸ್‌ ಅಯ್ಯರ್‌

ತಮ್ಮ ಒಡಿಐ ವೃತ್ತಿ ಜೀವನದಲ್ಲಿ 3000 ರನ್‌ಗಳನ್ನು ಪೂರ್ಣಗೊಳಿಸಲು ಶ್ರೇಯಸ್‌ ಅಯ್ಯರ್‌ಗೆ ಇನ್ನು ಕೇವಲ 83 ರನ್‌ಗಳ ಅಗತ್ಯವಿದೆ. ಸದ್ಯ ಇವರು 73 ಪಂದ್ಯಗಳ 67 ಇನಿಂಗ್ಸ್‌ಗಳಿಂದ 2917 ರನ್‌ಗಳನ್ನು ಕಲೆ ಹಾಕಿದ್ದಾರೆ. ಕಿವೀಸ್‌ ಎದುರು ಮೊದಲನೇ ಏಕದಿನ ಪಂದ್ಯದಲ್ಲಿ ಅವರು 83 ರನ್‌ ಗಳಿಸಿದರೆ, 70ಕ್ಕೂ ಕಡಿಮೆ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಮೊದಲನೇ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲಿದ್ದಾರೆ.

IND vs NZ: ಮೊದಲನೇ ಒಡಿಐಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಇರ್ಫಾನ್‌ ಪಠಾಣ್‌!

ಅತ್ಯಂತ ವೇಗವಾಗಿ 3000 ಒಡಿಐ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳು

ಶಿಖರ್ ಧವನ್: 72

ವಿರಾಟ್ ಕೊಹ್ಲಿ: 75

ಕೆಎಲ್ ರಾಹುಲ್: 78

ನವಜೋತ್ ಸಿಂಗ್ ಸಿಧು: 79

ಸೌರವ್ ಗಂಗೂಲಿ: 82

ಗೌತಮ್ ಗಂಭೀರ್: 87

ರಾಹುಲ್ ದ್ರಾವಿಡ್: 89

ಎಂಎಸ್ ಧೋನಿ: 90

ಸಚಿನ್ ತೆಂಡೂಲ್ಕರ್: 93

ದಿಲೀಪ್ ವೆಂಗ್‌ಸರ್ಕರ್: 98

ʻಸೆಲೆಕ್ಟರ್‌ಗಳ ನಿರ್ಧಾರವನ್ನು ಗೌರವಿಸಬೇಕುʼ: ಟಿ20 ವಿಶ್ವಕಪ್‌ ಭಾರತ ತಂಡದಿಂದ ಕೈ ಬಿಟ್ಟ ಬಗ್ಗೆ ಶುಭಮನ್‌ ಗಿಲ್‌ ಪ್ರತಿಕ್ರಿಯೆ!

ಶ್ರೇಯಸ್‌ ಅಯ್ಯರ್‌ ಮುಂದಿನ ಎರಡು ಇನಿಂಗ್ಸ್‌ಗಳಲ್ಲಿ 83 ರನ್‌ಗಳನ್ನು ಕಲೆ ಹಾಕಿದರೆ, ಏಕದಿನ ಕ್ರಿಕೆಟ್‌ನಲಿ ವೇಗವಾಗಿ 3000 ರನ್‌ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ ಈ ದಾಖಲೆ ಶಿಖರ್‌ ಧವನ್‌ ಅವರ ಹೆಸರಿನಲ್ಲಿದೆ. ಧವನ್‌ ಅವರು 3000 ರನ್‌ಗಳನ್ನು ಪೂರ್ಣಗೊಳಿಸಲು 72 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಧವನ್‌ ಬಳಿಕ ಈ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ, ಸಚಿನ್‌ ತೆಂಡೂಲ್ಕರ್‌ ಅವರು ಇದ್ದಾರೆ.