ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs NZ: ಸಚಿನ್‌ ತೆಂಡೂಲ್ಕರ್‌ರ ವಿಶ್ವ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್‌ ಕೊಹ್ಲಿ!

Virat Kohli's Record: ದೆಹಲಿ ಪರ ಎರಡು ವಿಜಯ ಹಝಾರೆ ಟ್ರೋಫಿ ಟೂರ್ನಿಯ ಪಂದ್ಯಗಳಲ್ಲಿ ಶತಕ ಹಾಗೂ ಅರ್ಧಶತಕ ಸಿಡಿಸಿದ ಬಳಿಕ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ, ಇದೀಗ ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲು ಎದುರು ನೋಡುತ್ತಿದ್ದಾರೆ. ಈ ಸರಣಿಯಲ್ಲಿ ವಿರಾಟ್‌ ಕೊಹ್ಲಿಗೆ ಸಚಿನ ತೆಂಡೂಲ್ಕರ್‌ ದಾಖಲೆಯನ್ನು ಮುರಿಯುವ ಅವಕಾಶವಿದೆ.

ಸಚಿನ್‌ ತೆಂಡೂಲ್ಕರ್‌ ವಿಶ್ವ ದಾಖಲೆಯ ಮೇಲೆ ವಿರಾಟ್‌ ಕೊಹ್ಲಿ ಕಣ್ಣು!

ಸಚಿನ್‌ ತೆಂಡೂಲ್ಕರ್‌ ದಾಖಲೆ ಮೇಲೆ ವಿರಾಟ್‌ ಕೊಹ್ಲಿ ಕಣ್ಣು. -

Profile
Ramesh Kote Dec 29, 2025 11:11 PM

ನವದೆಹಲಿ: ವಿಜಯ ಹಝಾರೆ ಟ್ರೋಫಿ (Vijay Hazare Trophy) ಟೂರ್ನಿಯ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಶತಕ ಹಾಗೂ ಅರ್ಧಶತಕಗಳನ್ನು ಬಾರಿಸಿ ದೆಹಲಿ ತಂಡದ ಗೆಲುವಿಗೆ ನೆರವು ನೀಡಿದ್ದ ಆಧುನಿಕ ಬ್ಯಾಟಿಂಗ್‌ ದಿಗ್ಗಜ ವಿರಾಟ್‌ ಕೊಹ್ಲಿ (Virat Kohli), ಇದೀಗ ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿದ್ದಾರೆ. ಅವರು ಕೇವಲ 25 ರನ್‌ಗಳನ್ನು ಗಳಿಸಿದರೆ, ಮಾಸ್ಟರ್‌-ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ವಿಶ್ವ ದಾಖಲೆಯನ್ನು ಮುರಿಯಲಿದ್ದಾರೆ. ಜನವರಿ 11 ರಂದು ಮೊದಲನೇ ಪಂದ್ಯದ ಮೂಲಕ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿ ಆರಂಭವಾಗಲಿದೆ. ಮೊದಲನೇ ಏಕದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಈ ದಾಖಲೆ ಮುರಿಯಬಹುದು.

ದಕ್ಷಿಣ ಆಫ್ರಿಕಾ ವಿರುದ್ಧದ ಕಳೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದರು. ಈ ಸರಣಿಯಲ್ಲಿ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಜನವರಿ 6 ರಂದು ವಿರಾಟ್‌ ಕೊಹ್ಲಿ ದೆಹಲಿ ಪರ ಮತ್ತೊಂದು ಪಂದ್ಯವನ್ನು ಆಡುವ ಮೂಲಕ ಏಕದಿನ ಸರಣಿಗೆ ಸಜ್ಜಾಗಲಿದ್ದಾರೆ.

ಗೌತಮ್‌ ಗಂಭೀರ್‌ ರಣಜಿ ಟ್ರೋಫಿ ತಂಡಕ್ಕೆ ಕೋಚ್‌ ಆಗಬೇಕು: ಮಾಂಟಿ ಪನೇಸರ್‌ ವ್ಯಂಗ್ಯ!

28000 ರನ್‌ ಸನಿಹದಲ್ಲಿ ವಿರಾಟ್‌ ಕೊಹ್ಲಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28000 ರನ್‌ಗಳನ್ನು ಪೂರ್ಣಗೊಳಿಸಲು ವಿರಾಟ್‌ ಕೊಹ್ಲಿಗೆ ಇನ್ನು ಕೇವಲ 25 ರನ್‌ ಅಗತ್ಯವಿದೆ. ಮೊದಲನೇ ಏಕದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 25ನೇ ರನ್‌ ಗಳಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆಗೆ ಭಾಜನರಾದ ವಿಶ್ವದ ಮೂರನೇ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ಹಾಗೂ ಕುಮಾರ ಸಂಗಕ್ಕಾರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ವೇಗವಾಗಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್‌ ಸಚಿನ್‌ ತೆಂಡೂಲ್ಕರ್‌. ಅವರು 644 ಇನಿಂಗ್ಸ್‌ಗಳನ್ನು ಆಡುವ ಮೂಲಕ 28000 ರನ್‌ಗಳನ್ನು ಗಳಿಸಿದ್ದಾರೆ. ಅವರು ತಮ್ಮ ವೃತ್ತಿ ಜೀವನದಲ್ಲಿ 782 ಇನಿಂಗ್ಸ್‌ಗಳಿಂದ 34357 ರನ್‌ಗಳನ್ನು ಗಳಿಸಿದ್ದಾರೆ.

VHT 2025-26: ರಿಷಭ್‌ ಪಂತ್‌ ವಿಫಲವಾದರೂ ಸೌರಾಷ್ಟ್ರ ಎದುರು ಗೆದ್ದ ದೆಹಲಿ!

ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ಇನಿಂಗ್ಸ್‌ನಲ್ಲಿ 28000 ರನ್‌ಗಳನ್ನು ಪೂರ್ಣಗೊಳಿಸಿದ್ದರು. ಇವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 666 ಇನಿಂಗ್ಸ್‌ಗಳಿಂದ 28016 ರನ್‌ಗಳನ್ನು ಗಳಿಸಿದ್ದಾರೆ. 2015ರಲ್ಲಿ ಭಾರತದ ಎದುರು ಸಂಗಕ್ಕಾರ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

ವಿರಾಟ್‌ ಕೊಹ್ಲಿ ಕೇವಲ 623 ಇನಿಂಗ್ಸ್‌ಗಳಲ್ಲಿ 27975 ರನ್ ಗಳಿಸಿದ್ದಾರೆ. ಅವರು ಸಚಿನ್ ತೆಂಡೂಲ್ಕರ್‌ ಅವರ ದಾಖಲೆಯನ್ನು ಸುಲಭವಾಗಿ ಮುರಿಯುತ್ತಾರೆ. ಏಕದಿನ ಪಂದ್ಯಗಳಲ್ಲಿ ವೇಗವಾಗಿ 10000 ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿರುವ ಕೊಹ್ಲಿ , 308 ಏಕದಿನ ಪಂದ್ಯಗಳಲ್ಲಿ 14557 ರನ್ ಗಳಿಸಿದ್ದಾರೆ. ಅವರು ಇದರಲ್ಲಿ 53 ಶತಕಗಳು ಮತ್ತು 76 ಅರ್ಧಶತಕಗಳಿವೆ.

ವಿರಾಟ್‌ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನವನ್ನು 123 ಪಂದ್ಯಗಳಲ್ಲಿ 9230 ರನ್‌ಗಳೊಂದಿಗೆ ಕೊನೆಗೊಳಿಸಿದ್ದಾರೆ. ಅವರು 2011 ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಬಲಗೈ ಬ್ಯಾಟ್ಸ್‌ಮನ್ 2025ರ ಮೇನಲ್ಲಿ ಟೆಸ್ಟ್ ನಿವೃತ್ತಿಯನ್ನು ಘೋಷಿಸಿದ್ದರು. ಭಾರತದ ಅತ್ಯಂತ ಯಶಸ್ವಿ ನಾಯಕನಾಗಿ ಅವರು ತಮ್ಮ ಟೆಸ್ಟ್ ನಾಯಕತ್ವದ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ 68 ಟೆಸ್ಟ್‌ಗಳಲ್ಲಿ 40 ಗೆಲುವುಗಳನ್ನು ಸಾಧಿಸಿದೆ.

Abhishek sharma: ಈ ಯುವ ಆಟಗಾರನಿಗೆ ಏಕದಿನ ತಂಡದಲ್ಲಿಯೂ ಸ್ಥಾನ ನೀಡಬೇಕೆಂದ ಆರ್‌ ಅಶ್ವಿನ್‌!

ಒಂದು ಕಾಲದಲ್ಲಿ ಟಿ20ಐಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೊಹ್ಲಿ 125 ಪಂದ್ಯಗಳಲ್ಲಿ 4188 ರನ್‌ಗಳನ್ನು ಗಳಿಸಿದರು. ಅವರು ಈ ಸ್ವರೂಪದಲ್ಲಿ ಒಂದು ಶತಕ ಮತ್ತು 38 ಅರ್ಧಶತಕಗಳನ್ನು ಗಳಿಸಿದರು. ರೋಹಿತ್ ಶರ್ಮಾ ನಾಯಕತ್ವದಲ್ಲಿ 2024 ರ ವಿಶ್ವಕಪ್ ಗೆದ್ದ ನಂತರ ಅವರು ಅತಿ ಅಂತಾರಾಷ್ಟ್ರೀಯ ಚುಟಕು ಸ್ವರೂಪದಿಂದ ನಿವೃತ್ತರಾಗಿದ್ದರು.