ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs PAK: ಸ್ಪೋಟಕ ಅರ್ಧಶತಕ ಸಿಡಿಸಿ ಯುವರಾಜ್‌ ಸಿಂಗ್‌ ದಾಖಲೆ ಮುರಿದ ಇಶಾನ್‌ ಕಿಶನ್!

Ishan kishan Breaks Yuvraj Singh's Record: ಪಾಕಿಸ್ತಾನ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡದ ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ ಸ್ಪೋಟಕ ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಅವರು ಸಾಂಪ್ರದಾಯಿಕ ಎದುರಾಳಿಗಳ ನಡುವಣ ಟಿ20ಐ ಕ್ರಿಕೆಟ್‌ನಲ್ಲಿ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅವರ ದಾಖಲೆಯನ್ನು ಇಶಾನ್‌ ಮುರಿದಿದ್ದಾರೆ.

50 ರನ್‌ ಸಿಡಿಸಿ ಯುವರಾಜ್‌ ಸಿಂಗ್‌ರ ದಾಖಲೆ ಮುರಿದ ಇಶಾನ್‌ ಕಿಶನ್‌!

ಯುವರಾಜ್‌ ಸಿಂಗ್‌ ದಾಖಲೆ ಮುರಿದ ಇಶಾನ್‌ ಕಿಶನ್‌. ಚಿತ್ರ ಬಿಸಿಸಿಐ -

Profile
Ramesh Kote Feb 15, 2026 8:41 PM

ಕೊಲಂಬೊ: ಪಾಕಿಸ್ತಾನ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ (Ishan kishan) ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ನಮೀಬಿಯಾ ವಿರುದ್ಧ ಕಳೆದ ಪಂದ್ಯದಲ್ಲಿ ತೋರಿದ್ದ ಅದೇ ಲಯವನ್ನು ಎಡಗೈ ಬ್ಯಾಟ್ಸ್‌ಮನ್‌ ಪಾಕ್‌ ವಿರುದ್ಧ ಮುಂದುವರಿಸಿದರು. ಅವರು ತಮ್ಮ ಸ್ಪೋಟಕ ಅರ್ಧಶತಕವನ್ನ ಪೂರ್ಣಗೊಳಿಸಿ, ಭಾರತದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ (Yuvraj Singh) ಅವರ ದಾಖಲೆಯನ್ನು ಮುರಿದಿದ್ದಾರೆ. ಈ ದಾಖಲೆಯ ಬಗ್ಗೆ ಸಂಪೂರ್ಣ ವಿವರವನ್ನು ಇಲ್ಲಿ ವಿವರಿಸಲಾಗಿದೆ.

ಭಾನುವಾರ ಇಲ್ಲಿನ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಇಶಾನ್‌ ಕಿಶನ್‌, ಮೊದಲನೇ ಓವರ್‌ನಿಂದಲೂ ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿದರು. ತಮ್ಮ ಆರಂಭಿಕ ಜೊತೆಗಾರ ಅಭಿಷೇಕ್‌ ಶರ್ಮಾ ಬೇಗ ವಿಕೆಟ್‌ ಒಪ್ಪಿಸಿದರೂ ತಲೆ ಕೆಡಿಸಿಕೊಳ್ಳದ ಇಶಾನ್‌, ಸ್ಪೋಟಕ ಆಟವನ್ನು ಆಡಿದರು. ಅವರು ಕೇವಲ 27 ಎಸೆತಗಳಲ್ಲಿಯೇ ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಭಾರತ ಹಾಗೂ ಪಾಕಿಸ್ತಾನ ನಡುವಣ ಟಿ20ಐ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

IND vs PAK: ಪಾಕಿಸ್ತಾನ ನಾಯಕ ಸಲ್ಮಾನ್‌ ಆಘಾಗೆ ಹ್ಯಾಂಡ್‌ಶೇಕ್‌ ಮಾಡದ ಸೂರ್ಯಕುಮಾರ್‌ ಯಾದವ್‌!

ಯುವರಾಜ್‌ ಸಿಂಗ್‌ ದಾಖಲೆ ಮುರಿದ ಇಶಾನ್‌

ಈ ಅರ್ಧಶತಕದ ಮೂಲಕ ಇಶಾನ್‌ ಕಿಶನ್‌, ಇಂಡೋ-ಪಾಕ್‌ ನಡುವಣ ಟಿ20ಐ ಪಂದ್ಯದಲ್ಲಿ ವೇಗದ ಅರ್ಧಶತಕವನ್ನು ಸಿಡಿಸಿದ ಮೂರನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಆ ಮೂಲಕ ಯುವರಾಜ್‌ ಸಿಂಗ್‌ ಅವರನ್ನು ಇಶಾನ್‌ ಕಿಶನ್‌ ಹಿಂದಿಕ್ಕಿದರು. ಇಶಾನ್‌ 27 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರೆ, ಯುವರಾಜ್‌ ಸಿಂಗ್‌ 2012ರಲ್ಲಿ ಅಹಮದಾಬಾದ್‌ನಲ್ಲಿ ಪಾಕ್‌ ಎದುರು 29 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು.



ಭಾರತ-ಪಾಕಿಸ್ತಾನ ಟಿ20ಐ ಪಂದ್ಯದಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ಬ್ಯಾಟರ್ಸ್‌

  • ಮೊಹಮ್ಮದ್‌ ಹಫೀಜ್‌: ಅಹಮದಾಬಾದ್‌ನಲ್ಲಿ 23ಎಸೆತಗಳಲ್ಲಿ ಅರ್ಧಶತಕ (2012)
  • ಅಭಿಷೇಕ್‌ ಶರ್ಮಾ: ದುಬೈನಲ್ಲಿ 24 ಎಸೆತಗಳಲ್ಲಿ ಅರ್ಧಶತಕ (2025)
  • ಇಶಾನ್‌ ಕಿಶನ್‌: ಕೊಲಂಬೊದಲ್ಲಿ 27 ಎಸೆತಗಳಲ್ಲಿ ಅರ್ಧಶತಕ (2026)
  • ಯುವರಾಜ್‌ ಸಿಂಗ್‌: ಅಹಮದಾಬಾದ್‌ನಲ್ಲಿ 29 ಎಸೆತಗಳಲ್ಲಿ ಅರ್ಧಶತಕ (2012)

40 ಎಸೆತಗಳಲ್ಲಿ 77 ರನ್‌ ಬಾರಿಸಿದ ಕಿಶನ್‌

ಅರ್ಧಶತಕದ ಸಿಡಿಸಿದ ಬಳಿಕ ಇಶಾನ್‌ ಕಿಶನ್‌ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಮುಂದುವರಿದರು. ಅವರು ತಿಲಕ್‌ ವರ್ಮಾ ಜೊತೆಗೆ ಎರಡನೇ ವಿಕೆಟ್‌ಗೆ 46 ಎಸೆತಗಳಲ್ಲಿ 87 ರನ್‌ಗಳ ಜೊತೆಯಾಟವನ್ನುಆಡಿದರು. ಅಂತಿಮವಾಗಿ ಇಶಾನ್‌ ಕಿಶನ್‌, 40 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 77 ರನ್‌ಗಳನ್ನು ಸಿಡಿಸಿದರು. ಆದರೆ, ಸೈಯಮ್‌ ಆಯುಬ್‌ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್‌ ಆದರು. ಒಟ್ಟಾರೆ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 175 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಪಾಕಿಸ್ತಾನಕ್ಕೆ 176 ರನ್‌ಗಳ ಗುರಿಯನ್ನು ನೀಡಿತು.