ಶುಭಮನ್ ಗಿಲ್ ಅಲ್ಲವೇ ಅಲ್ಲ; ಸರ್ಫರಾಝ್ ಖಾನ್ ಉಪಖಂಡದ ರಾಜ ಎಂದ ಆರ್ ಅಶ್ವಿನ್! ಏಕೆ ಗೊತ್ತೆ?
ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಸಾಯಿ ಸುದರ್ಶನ್ ಹೊರ ನಡೆದಿದ್ದು, ಅವರ ಸ್ಥಾನಕ್ಕೆ ಸರ್ಫರಾಝ್ ಖಾನ್ ತಂಡಕ್ಕೆ ಮರಳಿದ್ದಾರೆ. ಭಾರತ ತಂಡದಲ್ಲಿ ಸರ್ಫರಾಝ್ ಖಾನ್ ಅವರ ಜೊತೆಗೆ ಟೀಮ್ ಮ್ಯಾನೇಜ್‌ಮೆಂಟ್ ಸ್ಪಷ್ಟವಾಗಿ ಸಂವಹನ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಉಪಖಂಡದ ರಾಜ ಯಾರೆಂದು ತಿಳಿಸಿದ ಆರ್ ಅಶ್ವಿನ್. -
ಗಾಲೆ: ಇಲ್ಲಿನ ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಂದು ಆರಂಭವಾಗಲಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ (IND vs SL) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ XI ಯಾವ ರೀತಿ ಇರಲಿದೆ ಎಂಬುದು ತೀವ್ರ ಕುತೂಹಲವನ್ನು ಕೆರಳಿಸಿದೆ. ಅಂದ ಹಾಗೆ ಗಾಯಾಳು ಸಾಯಿ ಸುದರ್ಶನ್ ಅವರ ಸ್ಥಾನಕ್ಕೆ ರಾಷ್ಟ್ರೀಯ ತಂಡಕ್ಕೆ ಮರಳಿರುವ ಸರ್ಫರಾಝ್ ಖಾನ್ (Sarfaraz Khan) ಅವರನ್ನು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಸರ್ಫರಾಝ್ ಖಾನ್ ಉಪಖಂಡದ ರಾಜ ಎಂದು ಬಣ್ಣಿಸಿದ್ದಾರೆ. ಇದಕ್ಕೆ ಕಾರಣವೇನೆಂದು ಕೂಡ ವಿವರಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆರ್ ಅಶ್ವಿನ್, ಭಾರತ ತಂಡದ ಪ್ಲೇಯಿಂಗ್ Xiನಲ್ಲಿ ಸರ್ಫರಾಝ್ ಖಾನ್ ಬದಲು ಧ್ರುವ್ ಜುರೆಲ್ ಅವರನ್ನು ಆಡಿಸುತ್ತೇನೆ. ಸರ್ಫರಾಝ್‌ಗೆ ಕೇವಲ ಉಪಖಂಡದಲ್ಲಿ ಮಾತ್ರ ಅವಕಾಶವನ್ನು ನೀಡಬೇಕೆಂಬುದು ಅಶ್ವಿನ್ ಅಭಿಪ್ರಾಯ. ಆದರೆ, ಯುವ ಬ್ಯಾಟ್ಸ್‌ಮನ್‌ಗೆ ತಮ್ಮ ಪಾತ್ರದ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಸ್ಪಷ್ಟತೆ ನೀಡಬೇಕು ಎಂದು ಹೇಳಿದ್ದಾರೆ.
ಗಾಲೆಯಲ್ಲಿ ಭಾರತಕ್ಕೆ ಸ್ಪಿನ್ 'ಟೆಸ್ಟ್'; ನಾಳೆಯಿಂದ ಲಂಕಾ ವಿರುದ್ಧ ಮೊದಲ ಟೆಸ್ಟ್
"ನಾನು ಧ್ರುವ್ ಜುರೆಲ್ ಅವರೊಂದಿಗೆ ಆರಂಭಿಸುತ್ತೇನೆ. ಸಾಯಿ ಸುದರ್ಶನ್ ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಸರ್ಫರಾಝ್ ಖಾನ್ ತಂಡಕ್ಕೆ ಮರಳಿದ್ದಾರೆ. ಸರ್ಫರಾಝ್‌ಗೆ ಸಂದೇಶ ರವಾನಿಸುವುದು ತುಂಬಾ ಮುಖ್ಯ. ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಅವರು ಸೂಕ್ತ ಆಟಗಾರರಲ್ಲ ಎಂದು ನೀವು ಭಾವಿಸಿದರೆ, ಅವರಿಗೆ ಸ್ಪಷ್ಟತೆ ನೀಡಬೇಕು. ಉಪಖಂಡದ ಪರಿಸ್ಥಿತಿಗಳಲ್ಲಿ ಅವರು ತಂಡಕ್ಕೆ ಉತ್ತಮವಾಗಿ ಕೊಡುಗೆ ನೀಡಬಲ್ಲರು ಎಂಬುದನ್ನು ಅವರಿಗೆ ತಿಳಿಸಬೇಕು," ಎಂದು ಅಶ್ವಿನ್ ಸಲಹೆ ನೀಡಿದ್ದಾರೆ.
ಉಪಖಂಡದಲ್ಲಿ ಸರ್ಫರಾಝ್ ಖಾನ್ ಕಿಂಗ್
ಸರ್ಫರಾಝ್ ಖಾನ್‌ಗೆ ಭಾರತ ತಂಡದಲ್ಲಿ ಅವರ ಪಾತ್ರದ ಬಗ್ಗೆ ನೀವು ಸ್ಪಷ್ಟತೆ ನೀಡುವುದಾದರೆ, ಅವರು ಸ್ಪಿನ್ ಎದುರು ಬ್ಯಾಟಿಂಗ್‌ಗೆ ತಯಾರಿ ನಡೆಸುತ್ತಾರೆಂಬುದು ಅಶ್ವಿನ್ ಅವರ ಅಭಿಪ್ರಾಯ. ಉಪಖಂಡದಲ್ಲಿ ಅವರು ಸ್ಪಿನ್ನರ್‌ಗಳ ಎದುರು ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ. ಹಾಗಾಗಿ ಅವರು ಉಪಖಂಡದ ರಾಜ ಎಂದು ಸ್ಪಿನ್ ದಿಗ್ಗಜ ಬಣ್ಣಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತದ ಸಂಭಾವ್ಯ ಆಡುವ ಬಳಗ ಹೀಗಿದೆ
"ಈ ವಿಷಯಗಳನ್ನು ಸರ್ಫರಾಝ್ ಖಾನ್‌ಗೆ ನೇರವಾಗಿ ತಿಳಿಸಿದರೆ, ಅವರ ಬಾಕಿ ಇರುವ ಸಂಗತಿಗಳನ್ನು ಪೂರ್ಣಗೊಳಿಸಲು ತಮ್ಮ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಸ್ಪಿನ್ ಬೌಲರ್‌ಗಳಿಗೆ ಆಡುವುದರ ಕಡೆಗೆ ಗಮನ ನೀಡುವ ಜೊತೆಗೆ ಉಪಖಂಡದಲ್ಲಿ ರಾಜನಾಗುವ ಎಲ್ಲಾ ಸಾಧ್ಯತೆಗಳು ಇವೆ. ಅವರು ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಲ್ಲರು. ಶ್ರೀಲಂಕಾ ಕಂಡೀಷನ್ಸ್‌ನಲ್ಲಿ ಅವರ ಆಟ ವರ್ಕ್‌ಔಟ್ ಆಗುವುದಿಲ್ಲ ಎಂದಾದರೆ, ನೀವು ಅವರ ಬಳಿ ಸಂವಹನ ನಡೆಸಿ," ಎಂದು ಅಶ್ವಿನ್ ಸಲಹೆ ನೀಡಿದ್ದಾರೆ.
ಶ್ರೀಲಂಕಾ ಟೆಸ್ಟ್ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ( ವಿಕೆಟ್ ಕೀಪರ್), ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್, ಸಾರಾಂಶ್ ಜೈನ್, ಆಕಿಬ್ ನಬಿ.