ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs SL ಟೆಸ್ಟ್‌ ಸರಣಿಯ ಪಂದ್ಯಗಳಿಗೆ ಗಾಲೆ, ಕೊಲಂಬೊ ಕ್ರೀಡಾಂಗಣಗಳಲ್ಲಿ ಉಚಿತ ಪ್ರವೇಶ!

ಭಾರತ ಹಾಗೂ ಶ್ರೀಲಂಕಾ ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಆರಂಭಕ್ಕೆ ಇನ್ನೂ ಒಂದು ವಾರ ಬಾಕಿ ಇದೆ. ಇದರ ನಡುವೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಅಲ್ಲಿನ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಟೆಸ್ಟ್‌ ಸರಣಿಯ ಎರಡೂ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ಉಚಿತವಾಗಿ ಸ್ಟೇಡಿಯಂಗಳಿಗೆ ಪ್ರವೇಶ ಮಾಡಬಹುದು ಎಂದು ತಿಳಿಸಿದೆ. ಹಾಗಾಗಿ ಈ ಗಾಲೆ ಹಾಗೂ ಕೊಲಂಬೊ ಸ್ಟೇಡಿಯಂಗಳಲ್ಲಿ ಅಭಿಮಾನಿಗಳು ಉಚಿತವಾಗಿ ಪಂದ್ಯಗಳನ್ನು ವೀಕ್ಷಿಸಬಹುದು.

IND vs SL ಟೆಸ್ಟ್‌ ಸರಣಿಯ ಪಂದ್ಯಗಳ ವೀಕ್ಷಣೆಗೆ ಉಚಿತ ಪ್ರವೇಶ!

ಭಾರತ vs ಶ್ರೀಲಂಕಾ ನಡುವಣ ಟೆಸ್ಟ್‌ ಸರಣಿಯ ಪಂದ್ಯಗಳ ವೀಕ್ಷಣೆ ಉಚಿತ. -

Profile
Ramesh Kote Aug 7, 2026 9:59 PM

ಕೊಲಂಬೊ: ಶ್ರೀಲಂಕಾ ಮತ್ತು ಭಾರತ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿಯ (IND vs SL) ಆರಂಭಕ್ಕೆ ಇನ್ನೂ ಒಂದು ವಾರ ಬಾಕಿ ಇರುವಾಗಲೇ ಶ್ರೀಲಂಕಾ ಕ್ರಿಕೆಟ್‌ ಮಂಡಳಿ (SLC) ತನ್ನ ಕಿಕೆಟ್‌ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ. ಮೊದಲನೇ ಪಂದ್ಯ ಆಗಸ್ಟ್‌ 15 ರಂದು ಗಾಲೆಯಲ್ಲಿ ಆರಂಭವಾದರೆ, ಎರಡನೇ ಪಂದ್ಯ ರಾಜಧಾನಿ ಕೊಲಂಬೊದಲ್ಲಿ ಆಗಸ್ಟ್‌ 23 ರಂದು ಆರಂಭವಾಗಲಿದೆ. ಟೆಸ್ಟ್‌ ಸರಣಿಯ ಎರಡೂ ಪಂದ್ಯಗಳಿಗೆ ಹಾಜರಾತಿಯನ್ನು ಹೆಚ್ಚಿಸುವ ಭಾಗವಾಗಿ ಶ್ರೀಲಂಕಾ ಕ್ರಿಕೆಟ್‌ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಎರಡೂ ಪಂದ್ಯಗಳ ವೀಕ್ಷಣೆಗಾಗಿ ಕ್ರಿಕೆಟ್‌ ಅಭಿಮಾನಿಗಳು ಎರಡೂ ಸ್ಟೇಡಿಯಂಗಳಿಗೆ ಉಚಿತವಾಗಿ ಪ್ರವೇಶಿಸಬಹುದಾಗಿದೆ.

"ಶ್ರೀಲಂಕಾ ಮತ್ತು ಭಾರತ ನಡುವಿನ ಮುಂಬರುವ ಟೆಸ್ಟ್ ಸರಣಿಗೆ ಪ್ರೇಕ್ಷಕರ ಪ್ರವೇಶ ಉಚಿತವಾಗಿರುತ್ತದೆ ಎಂದು ಘೋಷಿಸಲು ಶ್ರೀಲಂಕಾ ಕ್ರಿಕೆಟ್ ಬಯಸುತ್ತದೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ವಿಶ್ವ ದರ್ಜೆಯ ಟೆಸ್ಟ್ ಕ್ರಿಕೆಟ್ ಅನ್ನು ವೀಕ್ಷಿಸಲು ಅದ್ಭುತ ಅವಕಾಶವನ್ನು ಒದಗಿಸುತ್ತದೆ," ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಪ್ರೇಕ್ಷಕರಿಗೆ ಸುಗಮ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಶ್ರೀಲಂಕಾ ಕ್ರಿಕೆಟ್ ಎರಡೂ ಸ್ಥಳಗಳಲ್ಲಿ ನಿರ್ದಿಷ್ಟ ಪ್ರವೇಶ ಬಿಂದುಗಳನ್ನು ನಿಗದಿಪಡಿಸಿದೆ. ಗಾಲೆಯಲ್ಲಿ ನಡೆಯುವ ಪಂದ್ಯಕ್ಕೆ ಹಾಜರಾಗುವ ಅಭಿಮಾನಿಗಳಿಗೆ ಗೇಟ್ 4ರ ಮೂಲಕ ಉಚಿತ ಪ್ರವೇಶವಿದ್ದರೆ, ಕೊಲಂಬೊದಲ್ಲಿ ಗೇಟ್ 3, 4, 5 ಮತ್ತು 7ರ ಮೂಲಕ ಕ್ರೀಡಾಂಗಣವನ್ನು ಪ್ರವೇಶಿಸಬಹುದು.

IND vs SLXI Warm-up Match: ಮೊದಲನೇ ದಿನ ಶ್ರೀಲಂಕಾ ಇಲೆವೆನ್‌ ತಂಡಕ್ಕೆ ಮುನ್ನಡೆ!

"ಶ್ರೀಲಂಕಾ ಕ್ರಿಕೆಟ್ ದೇಶಾದ್ಯಂತ ಕ್ರಿಕೆಟ್ ಉತ್ಸಾಹಿಗಳು, ಯುವ ಕ್ರಿಕೆಟಿಗರು, ಕುಟುಂಬಗಳು ಮತ್ತು ಕ್ರೀಡಾ ಪ್ರೇಮಿಗಳನ್ನು ಈ ಉಪಕ್ರಮದ ಲಾಭ ಪಡೆಯಲು ಮತ್ತು ಶ್ರೀಲಂಕಾ ಮತ್ತು ಭಾರತ ನಡುವಿನ ಟೆಸ್ಟ್ ಕ್ರಿಕೆಟ್‌ನ ರೋಮಾಂಚನವನ್ನು ಅನುಭವಿಸಲು ಹೃತ್ಪೂರ್ವಕವಾಗಿ ಆಹ್ವಾನಿಸುತ್ತದೆ," ಎಂದು ಶ್ರೀಲಂಕಾ ಕ್ರಿಕೆಟ್ ಹೇಳಿದೆ.

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತಕ್ಕೆ 5ನೇ ಸ್ಥಾನ

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ ಪ್ರಸ್ತುತ ಐದನೇ ಸ್ಥಾನದಲ್ಲಿರುವ ಭಾರತ, ಫೈನಲ್ ತಲುಪುವ ಭರವಸೆಯನ್ನು ಜೀವಂತವಾಗಿಟ್ಟುಕೊಳ್ಳಬೇಕೆಂದರೆ ಆರನೇ ಸ್ಥಾನದಲ್ಲಿರುವ ಶ್ರೀಲಂಕಾ ವಿರುದ್ಧದ ಮುಂಬರುವ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. 2017 ರಲ್ಲಿ ಭಾರತ ತನ್ನ ಹಿಂದಿನ ಶ್ರೀಲಂಕಾ ಟೆಸ್ಟ್ ಪ್ರವಾಸವನ್ನು ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದಿತ್ತು.

ಪ್ರಸ್ತುತ ಸರಣಿಯು ರೋಮಾಂಚಕಾರಿ ಸ್ಪರ್ಧೆಯ ಭರವಸೆ ನೀಡುತ್ತದೆ; ಭಾರತ ತಂಡವು ಯುವ ಪ್ರತಿಭೆಗಳಿಂದ ತುಂಬಿದ್ದರೂ, ಶ್ರೀಲಂಕಾ ತಂಡ ಯುವ ಮತ್ತು ಅನುಭವದ ಸಮತೋಲಿತ ಮಿಶ್ರಣವನ್ನು ಹೊಂದಿದೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅವರು ಟೆಸ್ಟ್‌ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿರುವ ಕಾರಣ, ಈ ಸರಣಿಯಲ್ಲಿ ಶುಭಮನ್‌ ಗಿಲ್‌ ನಾಯಕತ್ವದ ಟೀಮ್‌ ಇಂಡಿಯಾಗೆ ಸಿಂಹಳೀಯರ ನಾಡಿನಲ್ಲಿ ಕಠಿಣ ಸವಾಲು ಎದುರಾಗಲಿದೆ.

ಶ್ರೀಲಂಕಾ ಸರಣಿ ಗೆದ್ದರೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಬಹುದೇ?

ಶ್ರೀಲಂಕಾ ಟೆಸ್ಟ್‌ ಸರಣಿಯ ಭಾರತ ತಂಡ

ಶುಭಮನ್‌ ಗಿಲ್‌ (ನಾಯಕ), ಕೆಎಲ್‌ ರಾಹುಲ್‌ (ಉಪ ನಾಯಕ), ಯಶಸ್ವಿ ಜೈಸ್ವಾಲ್‌, ರಿಷಭ್‌ ಪಂತ್‌, ಸಾಯಿ ಸುದರ್ಶನ್‌ (ಫಿಟ್‌ನೆಸ್‌ ಮೇಲೆ ಅವಲಂಬನೆ), ಧ್ರುವ್‌ ಜುರೆಲ್‌, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಮಾನವ್‌ ಸುತಾರ್‌, ಮೊಹಮ್ಮದ್‌ ಸಿರಾಜ್‌, ಪ್ರಸಿಧ್‌ ಕೃಷ್ಣ, ಗುರ್ನೂರ್‌ ಬ್ರಾರ್‌, ದೇವದತ್‌ ಪಡಿಕ್ಕಲ್‌, ಸಾರಾಂಶ್‌ ಜೈನ್‌, ಆಕಿಬ್‌ ನಬಿ