IND vs SL: 350 ಟೆಸ್ಟ್ ವಿಕೆಟ್‌ಗಳ ಮೂಲಕ ದಿಗ್ಗಜರನ್ನೊಳಗೊಂಡ ಎಲೈಟ್ ಲಿಸ್ಟ್‌ಗೆ ಸೇರಿದ ರವೀಂದ್ರ ಜಡೇಜಾ!
ಶ್ರೀಲಂಕಾ ವಿರುದ್ಧ ಗಾಲೆ ಟೆಸ್ಟ್ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತ ತಂಡದ ರವೀಂದ್ರ ಜಡೇಜಾ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 350 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಕಪಿಲ್ ದೇವ್ ಒಳಗೊಂಡ ದಿಗ್ಗಜರನ್ನು ಒಳಗೊಂಡ ಎಲೈಟ್ ಲಿಸ್ಟ್‌ಗೆ ರವೀಂದ್ರ ಜಡೇಜಾ ಸೇರ್ಪಡೆಯಾಗಿದ್ದಾರೆ.
350 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ರವೀಂದ್ರ ಜಡೇಜಾ. -
ಗಾಲೆ: ಇಲ್ಲಿನ ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ (IND vs SL) ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ರವೀಂದ್ರ ಜಡೇಜಾ (Ravindra Jadeja) ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ನೂತನ ಮೈಲುಗಲ್ಲು ತಲುಪಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳನ್ನು ಕಬಳಿಸಿದ ಭಾರತದ ಮೊದಲ ಎಡಗೈ ಬೌಲರ್ ಎಂಬ ದಾಖಲೆಯನ್ನು ಬರೆದಿದ್ದಾರೆ.
ಪಂದ್ಯದ ಮೂರನೇ ದಿನ ಕೇಶಾರ ನುವಾಂತ ಅವರನ್ನು ಔಟ್ ಮಾಡಿದ ಬಳಿಕ ರವೀಂದ್ರ ಜಡೇಜಾ ಈ ದಾಖಲೆಯನ್ನು ಬರೆದಿದ್ದಾರೆ. ಅವರು ಮೂರನೇ ದಿನ ಮೂರನೇ ಸೆಷನ್‌ನಲ್ಲಿ ಈ ಮೈಲುಗಲ್ಲು ತಲುಪಿದ್ದರು. ರವೀಂದ್ರ ಜಡೇಜಾ ಅವರ ಸ್ಪಿನ್ ಮೋಡಿಯ ನೆರವಿನಿಂದ ಭಾರತ ತಂಡ, ಶ್ರೀಲಂಕಾ ತಂಡವನ್ನು 284 ರನ್‌ಗಳಿಗೆ ಆಲ್‌ಔಟ್ ಮಾಡಲು ನೆರವು ನೀಡಿದರು.
IND vs SL: ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಕನ್ನಡಿಗ ದೇವದತ್ ಪಡಿಕ್ಕಲ್!
350 ವಿಕೆಟ್ ಕಿತ್ತ ರವೀಂದ್ರ ಜಡೇಜಾ
ದೀರ್ಘಾವಧಿ ಸ್ವರೂಪದಲ್ಲಿ 350ಕ್ಕೂ ಅಧಿಕ ವಿಕೆಟ್‌ಗಳನ್ನು ಕಬಳಿಸಿದ ಮೊದಲ ಭಾರತೀಯ ಎಡಗೈ ಬೌಲರ್ ಎಂಬ ದಾಖಲೆಯನ್ನು ರವೀಂದ್ರ ಜಡೇಜಾ ಬರೆದಿದ್ದಾರೆ. ಮಾಜಿ ಎಡಗೈ ವೇಗಿ ಜಹೀರ್ ಖಾನ್ ಅವರು 311 ವಿಕೆಟ್‌ಗಳನ್ನಿ ಕಬಳಿಸಿದ್ದರು. 350ಕ್ಕೂ ಅಧಿಕ ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ಭಾರತದ ಐದನೇ ಬೌಲರ್ ಎಂಬ ಖ್ಯಾತಿಗೆ ಜಡೇಜಾ ಭಾಜನರಾಗಿದ್ದಾರೆ. ಇದಕ್ಕೂ ಮುನ್ನ ಅನಿಲ್ ಕುಂಬ್ಳೆ (619 ವಿಕೆಟ್‌ಗಳು), ರವಿಚಂದ್ರನ್ ಅಶ್ವಿನ್ (537 ವಿಕೆಟ್‌ಗಳು), ಕಪಿಲ್ ದೇವ್ (434) ಹಾಗೂ ಹರ್ಭಜನ್ ಸಿಂಗ್ (416 ವಿಕೆಟ್‌ಗಳು) ಅಗ್ರ ನಾಲ್ಕು ಸ್ಥಾನಗಳಲ್ಲಿದ್ದಾರೆ.
Two wickets in quick succession!
— BCCI (@BCCI) August 17, 2026
Ravindra Jadeja 🤝 Manav Suthar
Sri Lanka lose their 9th wicket.
Updates ▶️ https://t.co/M9LVyCAp8y#TeamIndia | #SLvIND pic.twitter.com/3YkvINQMUk
ವಿಶ್ವದ ಮೂರನೇ ಎಡಗೈ ಸ್ಪಿನ್ನರ್
ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ, ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳ ಮೈಲಿಗಲ್ಲು ತಲುಪುವ ಮೂಲಕ ವಿಶ್ವದ ಶ್ರೇಷ್ಠ ಎಡಗೈ ಸ್ಪಿನ್ನರ್‌ಗಳ ಸಾಲಿಗೆ ಸೇರಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಎಡಗೈ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ರಂಗನಾ ಹೆರಾತ್ (433 ವಿಕೆಟ್) ಮತ್ತು ನ್ಯೂಜಿಲೆಂಡ್‌ನ ಡೇನಿಯಲ್ ವೆಟ್ಟೋರಿ (362 ವಿಕೆಟ್) ಈಗಾಗಲೇ ಇದ್ದಾರೆ. ಇದೇ ವೇಳೆ ಜಡೇಜಾ ಮತ್ತೊಂದು ಮಹತ್ವದ ದಾಖಲೆಯನ್ನೂ ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 4,000ಕ್ಕೂ ಹೆಚ್ಚು ರನ್ ಮತ್ತು 350ಕ್ಕೂ ಹೆಚ್ಚು ವಿಕೆಟ್ ಗಳಿಸಿದ ಕೇವಲ ನಾಲ್ಕನೇ ಆಟಗಾರರಾಗಿದ್ದಾರೆ.
IND vs SL: ಕಮಿಂದು ಮೆಂಡಿಸ್‌ರ ಸ್ಟನಿಂಗ್ ಕ್ಯಾಚ್ ಪಡೆದ ಶುಭಮನ್ ಗಿಲ್! ವಿಡಿಯೊ
4000ಕ್ಕೂ ಆಧಿಕ ರನ್, 350ಕ್ಕೂ ಅಧಿಕ ವಿಕೆಟ್ ಸಾಧಕರು
ಕಪಿಲ್ ದೇವ್ – 5,248 ರನ್, 434 ವಿಕೆಟ್
ಇಯಾನ್ ಬಾಥಮ್ – 5,200 ರನ್, 383 ವಿಕೆಟ್
ಡೇನಿಯಲ್ ವೆಟ್ಟೋರಿ – 4,531 ರನ್, 362 ವಿಕೆಟ್
ರವೀಂದ್ರ ಜಡೇಜಾ – 4,000+ ರನ್, 350+ ವಿಕೆಟ್