IND vs WI ಏಕದಿನ ಸರಣಿಯಲ್ಲಿ ಗಮನ ಸೆಳೆಯಬಲ್ಲ ಆಟಗಾರನನ್ನು ಹೆಸರಿಸಿದ ಇರ್ಫಾನ್ ಪಠಾಣ್!
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಸಜ್ಜಾಗುತ್ತಿದೆ. ಸೆಪ್ಟಂಬರ್ 27 ರಂದು ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರು ಎಲ್ಲರ ಗಮನ ಸೆಳೆಯಲಿದ್ದಾರೆಂದು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಬಗ್ಗೆ ಇರ್ಫಾನ್ ಪಠಾಣ್ ದೊಡ್ಡ ಭವಿಷ್ಯ. -
ನವದೆಹಲಿ: ವೆಸ್ಟ್ ಇಂಡೀಸ್ ವಿರದ್ಧದ ಏಕದಿನ ಸರಣಿಯಲ್ಲಿ (IND vs WI) ಭಾರತ ತಂಡದಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal) ಎಲ್ಲರ ಗಮನ ಸೆಳೆಯಲಿದ್ದಾರೆಂದು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಭವಿಷ್ಯ ನುಡಿದಿದ್ದಾರೆ. ವಿಂಡೀಸ್ ಏಕದಿನ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಎಡಗೈ ಬ್ಯಾಟ್ಸ್‌ಮನ್ ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಲಿದ್ದಾರೆಂಬ ಬಗ್ಗೆ ಪಠಾಣ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗಮನದಲ್ಲಿಟ್ಟುಕೊಂಡು ಬೆಂಚ್ ಆಟಗಾರರಿಗೆ ನಿಯಮಿತವಾಗಿ ಅವಕಾಶ ಸಿಗಬೇಕೆಂಬುದು ಮಾಜಿ ಆಲ್‌ರೌಂಡರ್ ಅಭಿಪ್ರಾಯವಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಕ್ಕೆ ಇನ್ನು ಒಂದು ವಾರ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ ತಂಡ, ಸಜ್ಜಾಗುತ್ತಿದೆ. ಸೆಪ್ಟಂಬರ್ 27 ರಂದು ಮೊದಲನೇ ಪಂದ್ಯದ ಮೂಲಕ ವಿಡೀಸ್ ತಂಡದ ಭಾರತದ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ. ಈ ಸರಣಿ ನಡೆಯುವ ಅವಧಿಯಲ್ಲಿ ಜಪಾನ್ ಆತಿಥ್ಯದಲ್ಲಿ ಏಷ್ಯಾ ಕ್ರೀಡಾಕೂಟ ನಡೆಯಲಿದೆ. ಹಾಗಾಗಿ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡ ಅಲ್ಲಿಗೆ ಪ್ರವಾಸ ಕೈಗೊಳ್ಳಲಿದ್ದು, ಹಲವು ಸ್ಟಾರ್ ಆಟಗಾರರು ಕೂಡ ಏಷ್ಯನ್ ಗೇಮ್ಸ್‌ಗೆ ತೆರಳಿದ್ದಾರೆ. ಹಾಗಾಗಿ ಭಾರತ ಏಕದಿನ ತಂಡದಲ್ಲಿ ಆಡಲು ಹಲವು ಹೊಸ ಮುಖಗಳಿಗೆ ಅವಕಾಶ ಸಿಗಲಿದೆ.
ಕೊಹ್ಲಿ, ರೋಹಿತ್ ಅಲ್ಲವೇ ಅಲ್ಲ; ತಾವು ಎದುರಿಸಿದ ಭಾರತದ ಅತ್ಯಂತ ಕಠಿಣ ಬ್ಯಾಟರ್ ಆರಿಸಿದ ಪ್ಯಾಟ್ ಕಮಿನ್ಸ್!
ಸ್ಟಾರ್ ಸ್ಪೋರ್ಟ್ಸ್ ವಿಡಿಯೊದಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, "ಈ ಸರಣಿಯಲ್ಲಿ ಒಬ್ಬ ಆಟಗಾರನ ಮೇಲೆ ನಾನು ಕಟ್ಟಿಟ್ಟಿರುತ್ತೇನೆ. ಅವರೇ ಯಶಸ್ವಿ ಜೈಸ್ವಾಲ್, ಈ ಸರಣಿಯಲ್ಲಿ ಅವರಿಗೆ ಎಷ್ಟು ಅವಕಾಶಗಳು ಸಿಗಲಿವೆ ಎಂಬುದನ್ನು ನೋಡಲು ನಾನು ಕಾಯುತ್ತಿದ್ದೇನೆ, ವಿಶೇಷವಾಗಿ ವೆಸ್ಟ್ ಇಂಡೀಸ್ ವಿರುದ್ಧದ , ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ," ಎಂದು ಹೇಳಿದ್ದಾರೆ.
"ಒಂದು ಸಂಗತಿ ಇಲ್ಲಿ ಸತ್ಯ: ಜೈಸ್ವಾಲ್ ಅವರು ಭಾರತ ತಂಡಕ್ಕೆ ಬ್ಯಾಕಪ್ ಓಪನರ್. ಅವರು ಪ್ರಸ್ತುತ ಭಾರತ ತಂಡಕ್ಕೆ ಮೂರನೇ ಓಪನರ್. ಒಮ್ಮೆ ನೀವು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲು ದಕ್ಷಿಣ ಆಫ್ರಿಕಕ್ಕೆ ಹೋಗುವುದಕ್ಕೂ ಮುನ್ನ ಬ್ಯಾಕ್ ಅಪ್ ಓಪನರ್‌ಗೆ ನೀವು ಕಡಿಮೆ ಅವಕಾಶಗಳನ್ನು ನೀಡಿರಬಾರದು. ಹಾಗಾಗಿ ಭಾರತ ತಂಡದಲ್ಲಿ ಯಾವಗಲಾದರೂ ಅವಕಾಶ ಬಂದರೂ ನೀವು ಅವರಿಗೆ ಅವಕಾಶವನ್ನು ನೀಡಬೇಕು, ಅವರು ಆಡುವ ಬಳಗದಲ್ಲಿ ಇರಬೇಕು," ಎಂದು ಇರ್ಫಾನ್ ಪಠಾಣ್ ಸಲಹೆ ನೀಡಿದ್ದಾರೆ.
200 ಒಡಿಐ ವಿಕೆಟ್ ಕಿತ್ತು ಶೇನ್ ವಾರ್ನ್ ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರಿದ ಆಡಮ್ ಝಾಂಪ!
ಏಷ್ಯನ್ ಗೇಮ್ಸ್‌ನಲ್ಲಿ ಆಡಲು ಹಲವು ಸ್ಟಾರ್ ಆಟಗಾರರು ಆಡಲಿದ್ದಾರೆ. ಹಾಗಾಗಿ ಏಕದಿನ ಸರಣಿಯಲ್ಲಿ ಆಕಿಬ್ ನಬಿ ಹಾಗೂ ನಮನ್ ಧೀರ್‌ಗೆ ಚೊಚ್ಚಲ ಅವಕಾಶವನ್ನು ನೀಡಲಾಗಿದೆ. ಇನ್ನು ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯಲ್ಲಿ ಬೌಲಿಂಗ್‌ನಲ್ಲಿ ಗಮನ ಸೆಳೆದಿದ್ದ ನಿತೀಶ್‌ಕುಮಾರ್ ರೆಡ್ಡಿ ಅವರ ಮೇಲೆಯೂ ಈ ಸರಣಿಯಲ್ಲಿ ಗಮನವಿದೆ.
"ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ ಅವರು ಏಷ್ಯನ್ ಗೇಮ್ಸ್‌ನಲ್ಲಿ ಆಡಲಿದ್ದಾರೆ, ಹಾಗಾಗಿ ಅವರು ವೆಸ್ಟ್ ಇಂಡೀಸ್ ಏಕದಿನ ಸರಣಿಯಲ್ಲಿ ಆಡುವುದಿಲ್ಲ. ಕೀ ಆಟಗಾರರ ಅನುಪಸ್ಥಿತಿಯಲ್ಲಿ ಇನ್ನುಳಿದ ಆಟಗಾರರಿಗೆ ಈ ಸರಣಿಯಲ್ಲಿ ಅತ್ಯುತ್ತಮ ಅವಕಾಶ ಸಿಗಲಿದೆ," ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
ಏಷ್ಯನ್ ಗೇಮ್ಸ್: ಭಾರತದ ಪುರುಷರ ಕ್ರಿಕೆಟ್ ತಂಡಕ್ಕೆ ಕಿಟ್ ವಿಳಂಬದ ಸಮಸ್ಯೆ
"ಸಾಕಷ್ಟು ಆಟಗಾರರನು ಪ್ರಯತ್ನಿಸುತ್ತಿರುವುದು ಇದು ಎರಡನೇ ಸಲ. ನಿತೀಶ್ ಕುಮಾರ್ ರೆಡ್ಡಿ ಅವರು ಅವಕಾಶವನ್ನು ಪಡೆಯಲಿದ್ದಾರೆ. ಧ್ರುವ್ ಜುರೆಲ್ ಅವರು ಅವಕಾಶವನ್ನು ಪಡೆಯಲಿದ್ದಾರೆ. ಆಕಿಬ್ ನಬಿಗೂ ಕೂಡ ಅವಕಾಶ ಸಿಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಪಯಣವನ್ನು ಮುಂದುವರಿಸಲು ಗುರ್ನೂರ್ ಬ್ರಾರ್‌ಗೂ ಅವಕಾಶ ಸಿಗಲಿದೆ," ಎಂದು ಅವರು ಹೇಳಿದ್ದಾರೆ.