ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs WI: ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಗೆ ತಯಾರಿ ಆರಂಭಿಸಿದ ರೋಹಿತ್‌ ಶರ್ಮಾ!

ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಸಜ್ಜಾಗುತ್ತಿದ್ದಾರೆ. ಸೆಪ್ಟಂಬರ್‌ 27 ರಂದು ತವರಿನಲ್ಲಿ ವಿಂಡೀಸ್‌ ಎದುರು ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯ ನಿಮಿತ್ತ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ತರಬೇತಿಯನ್ನು ಶುರು ಮಾಡಿದ್ದಾರೆ.

ವಿಂಡೀಸ್‌ ಏಕದಿನ ಸರಣಿಗೆ ತಯಾರಿ ಆರಂಭಿಸಿದ ರೋಹಿತ್‌ ಶರ್ಮಾ!

ವೆಸ್ಟ್‌ ಇಂಡೀಸ್‌ ಸರಣಿಗೆ ಸಜ್ಜಾಗುತ್ತಿರುವ ರೋಹಿತ್‌ ಶರ್ಮಾ. -

Profile
Ramesh Kote Sep 10, 2026 3:52 PM

ನವದೆಹಲಿ: ಟೀಮ್‌ ಇಂಡಿಯಾ ಹಿರಿಯ ಬ್ಯಾಟರ್‌ ರೋಹಿತ್ ಶರ್ಮಾ (Rohit Sharma) ಅವರ ನಿವೃತ್ತಿ ಕುರಿತ ವದಂತಿಗಳು ಮತ್ತೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ಅವರ ಮಾಧ್ಯಮ ತಂಡ ‘ಟೀಮ್‌ ರೋ’ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್‌ ಕೌಶಲದ ವಿಡಿಯೊವನ್ನು ಹಂಚಿಕೊಂಡಿದೆ. ವಿಡಿಯೊಗೆ ಕೇವಲ ‘Finesse’ ಎಂಬ ಶೀರ್ಷಿಕೆ ನೀಡಲಾಗಿದೆ.

39ರ ವಯಸ್ಸಿನ ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಲಿದ್ದಾರೆಯೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ತಮ್ಮ ಬ್ಯಾಟ್‌ ಮೂಲಕವೇ ಟೀಕಾಕಾರರಿಗೆ ಉತ್ತರ ನೀಡುತ್ತಿರುವ ರೋಹಿತ್, ಇತ್ತೀಚಿನ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಇಂಗ್ಲೆಂಡ್ ಪ್ರವಾಸದ ವೇಳೆ, ಲಾರ್ಡ್ಸ್‌ನಲ್ಲಿ ನಡೆದಿದ್ದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವೇ ರೋಹಿತ್ ಅವರ ಭಾರತದ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಈಗಾಗಲೇ ಅವರು ಟಿ20 ಅಂತಾರಾಷ್ಟ್ರೀಯ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಈ ಚರ್ಚೆ ಮತ್ತಷ್ಟು ಜೋರಾಗಿತ್ತು.

ENG vs PAK: ಮೊದಲ ಮಹಾಯುದ್ಧದ ಬಳಿಕ ಅತ್ಯುತ್ತಮ ಟೆಸ್ಟ್‌ ಸರಾಸರಿಯಲ್ಲಿ 100 ವಿಕೆಟ್‌ ಕಿತ್ತ ಓಲ್ಲಿ ರಾಬಿನ್ಸನ್‌!

ಆದರೆ, ಲಾರ್ಡ್ಸ್‌ನಲ್ಲಿ ನಡೆದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಭರ್ಜರಿ ಬ್ಯಾಟಿಂಗ್‌ ಮೂಲಕ ಎಲ್ಲಾ ವದಂತಿಗಳಿಗೆ ತಿರುಗೇಟು ನೀಡಿದರು. 388 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತ ಪರ ರೋಹಿತ್ ಶರ್ಮಾ ಕೇವಲ ಅದ್ಭುತವಷ್ಟೇ ಅಲ್ಲದೆ ಆಕ್ರಮಣಕಾರಿ ಶೈಲಿಯಲ್ಲಿ 138 ರನ್ ಸಿಡಿಸಿದರು. ಭಾರತ ಅಂತಿಮವಾಗಿ 27 ರನ್‌ಗಳಿಂದ ಸೋಲು ಕಂಡರೂ, ರೋಹಿತ್ ತಮ್ಮ ಫಾರ್ಮ್‌ ಹಾಗೂ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಒಟ್ಟು 175 ರನ್ ಗಳಿಸಿದ್ದು, 58.33ರ ಸರಾಸರಿ ಹಾಗೂ 98.31ರ ಸ್ಟ್ರೈಕ್‌ರೇಟ್ ದಾಖಲಿಸಿದ್ದಾರೆ. ಇದರಲ್ಲಿ ಒಂದು ಶತಕವೂ ಸೇರಿದೆ.



ಇನ್ನು ಮುಂಬೈನಲ್ಲಿ ನಡೆದ ಬಿಸಿಸಿಐ ಪರಿಶೀಲನಾ ಸಭೆಯ ಬಳಿಕ ಮಂಡಳಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ರೋಹಿತ್ ಶರ್ಮಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಇತ್ತೀಚಿನ ಶತಕವನ್ನು ಉಲ್ಲೇಖಿಸಿದ ಅವರು, ರೋಹಿತ್ ಅವರ ನಿವೃತ್ತಿ ಕುರಿತ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಜಸ್‌ಪ್ರೀತ್‌ ಬುಮ್ರಾ ಫಿಟ್‌; ಆಫ್ಘಾನ್‌ ಸೇರಿ ಏಷ್ಯನ್ ಗೇಮ್ಸ್‌ನಿಂದ ಹೊರಬಿದ್ದ ಹರ್ಷಿತ್‌ ರಾಣ

“ಅವರು ಎಲ್ಲಾ ಪಂದ್ಯಗಳಲ್ಲೂ ಅದ್ಭುತವಾಗಿ ಆಡುತ್ತಿದ್ದಾರೆ. ಇನ್ನೇನು ಬೇಕು? ಕೊನೆಯ ಪಂದ್ಯದಲ್ಲಿ ಅವರು 138 ರನ್‌ ಗಳಿಸಿದ್ದಾರೆ. ಹಾಗಿದ್ದಾಗ ನಿವೃತ್ತಿ ಕುರಿತು ಏಕೆ ಇಷ್ಟೊಂದು ಊಹಾಪೋಹ? ಸದ್ಯಕ್ಕೆ ಊಹಾಪೋಹಗಳಿಗೆ ನಾನು ಯಾವುದೇ ಬೆಂಬಲ ನೀಡಲು ಬಯಸುವುದಿಲ್ಲ,” ಎಂದು ದೇವಜಿತ್‌ ಸೈಕಿಯಾ ಹೇಳಿದ್ದಾರೆ.

ಇನ್ನು ಪ್ರಸಕ್ತ ವರ್ಷ ರೋಹಿತ್ ಶರ್ಮಾ ಅವರ ಏಕದಿನ ಫಾರ್ಮ್‌ನಲ್ಲಿ ಏರಿಳಿತ ಕಂಡುಬಂದಿದೆ. ಈ ವರ್ಷ ಅವರು 9 ಇನಿಂಗ್ಸ್‌ಗಳಲ್ಲಿ 379 ರನ್ ಗಳಿಸಿದ್ದು, 42.11ರ ಸರಾಸರಿ ಹಾಗೂ 99ಕ್ಕೂ ಅಧಿಕ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕ ಸೇರಿದ್ದು, ಅವರ ಗರಿಷ್ಠ ವೈಯಕ್ತಿಕ ಮೊತ್ತ 138 ರನ್ ಆಗಿದೆ.