ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಜಿತ್‌ ಅಗರ್ಕರ್‌ ಚೀಫ್‌ ಸೆಲೆಕ್ಟರ್‌ ಹುದ್ದೆಯನ್ನು ತೊರೆಯಲು ರೋಹಿತ್‌ ಶರ್ಮಾ, ವಿವಿಎಸ್‌ ಲಕ್ಷ್ಮಣ್‌ ಕಾರಣ?

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರರಾಗಿ ಅಜಿತ್ ಅಗರ್ಕರ್ ಮುಂದುವರಿಯುವುದಿಲ್ಲ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ಅವರ ಭವಿಷ್ಯದ ಕುರಿತ ಭಿನ್ನಾಭಿಪ್ರಾಯಗಳು ಹಾಗೂ ವಿವಿಎಸ್ ಲಕ್ಷ್ಮಣ್ ಅವರೊಂದಿಗಿನ ಭಿನ್ನಮತವೇ ಅಗರ್ಕರ್ ಅವರ ನಿರ್ಗಮನಕ್ಕೆ ಪ್ರಮುಖ ಕಾರಣಗಳಾಗಿವೆ ಎಂಬ ಮಾಹಿತಿ ಹೊರಬಿದ್ದಿದೆ.

ಅಜಿತ್‌ ಅಗರ್ಕರ್‌ ತಮ್ಮ ಹುದ್ದೆಯನ್ನು ತೊರೆಯಲು ರೋಹಿತ್‌, ಲಕ್ಷ್ಮಣ್‌ ಕಾರಣ?

ಅಜಿತ್‌ ಅಗರ್ಕರ್‌ ಹುದ್ದೆಯನ್ನು ತೊರೆಯಲು ರೋಹಿತ್‌ ಕಾರಣ? -

Profile
Ramesh Kote Sep 19, 2026 10:21 PM

ನವದಹೆಲಿ: ಅಜಿತ್‌ ಅಗರ್ಕರ್‌ (Ajit Agarkar) ಅವರ ಭಾರತ ಪುರುಷರ ಕ್ರಿಕೆಟ್‌ ತಂಡದ ಮುಖ್ಯ ಆಯ್ಕೆದಾರ ಹುದ್ದೆಯ ಅವಧಿ ಅಕ್ಟೋಬರ್‌ ತಿಂಗಳಲ್ಲಿ ಅಂತ್ಯವಾಗಲಿದೆ. ಈ ಬಗ್ಗೆ ಬಿಸಿಸಿಐ (BCCI) ಕಾರ್ಯದರ್ಶಿ ದೇವಜೀತ್‌ ಸೈಕಿಯಾ ಅವರು ವಾರ್ಷಿಕ ಸಭೆಯಲ್ಲಿ ಪರೋಕ್ಷವಾಗಿ ಮಾಹಿತಿಯನ್ನು ನೀಡಿದ್ದರು. ಹಾಗಾಗಿ ಅಜಿತ್‌ ಅಗರ್ಕರ್‌ ಅವರು ತಮ್ಮ ಹುದ್ದೆಯನ್ನು ತೊರೆಯಲಿದ್ದಾರೆಂಬ ಬಗ್ಗೆ ಮೂಲಗಳು ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಇದರ ಜೊತೆಗೆ ಅಗರ್ಕರ್‌ ತಮ್ಮ ಹುದ್ದೆಯನ್ನು ಮುಂದುವರಿಸದೆ ಇರಲು ರೋಹಿತ್‌ ಶರ್ಮಾ ಹಾಗೂ ವಿವಿಎಸ್‌ ಲಕ್ಷ್ಮಣ್‌ ಕಾರಣ ಎಂಬ ಅಂಶ ವರದಿಯಾಗಿದೆ.

2023‌ರ ಜುಲೈನಲ್ಲಿ ಚೀಫ್‌ ಸೆಲೆಕ್ಟರ್‌ ಆಗಿ ಅಜಿತ್‌ ಅಗರ್ಕರ್‌ ಅವರು ಬಿಸಿಸಿಐಗೆ ಸೇರ್ಪಡೆಯಾಗಿದ್ದರು. ಇವರ ಅವಧಿಯಲ್ಲಿ ಭಾರತ ತಂಡ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿತ್ತು. 2024 ಮತ್ತು 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿಯೂ ಭಾರತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಆದರೂ ಅಜಿತ್‌ ಅಗರ್ಕರ್‌ ಅವರು ತಮ್ಮ ಹುದ್ದೆಯನ್ನು ತೊರೆಯುತ್ತಿದ್ದಾರೆಂದು ಹೇಳಲಾಗುತ್ತಿದೆ.

200 ಒಡಿಐ ವಿಕೆಟ್‌ ಕಿತ್ತು ಶೇನ್‌ ವಾರ್ನ್‌ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರಿದ ಆಡಮ್‌ ಝಾಂಪ!

ರೋಹಿತ್‌ ಶರ್ಮಾ ಬಗೆಗಿನ ವಿಚಾರದಲ್ಲಿ ಅಸಮಾಧಾನಗೊಂಡಿದ್ದ ಅಗರ್ಕರ್‌

ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ವರದಿ ಪ್ರಕಾರ, ಅಜಿತ್ ಅಗರ್ಕರ್ ಅವರ ಒಪ್ಪಂದವನ್ನು ವಿಸ್ತರಿಸದಿರಲು ರೋಹಿತ್ ಶರ್ಮಾ ಅವರ ಭವಿಷ್ಯದ ಕುರಿತಾಗಿ ಉಂಟಾದ ಉದ್ವಿಗ್ನತೆ ಹಾಗೂ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಹೊಂದಾಣಿಕೆಯಾಗದ ಅಭಿಪ್ರಾಯಗಳು ಪ್ರಮುಖ ಕಾರಣಗಳಾಗಿವೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

ಇಂಗ್ಲೆಂಡ್ ಸರಣಿಗೂ ಮುನ್ನ ಬಿಸಿಸಿಐನ ಪ್ರಮುಖ ನಿರ್ಧಾರ ಕೈಗೊಳ್ಳುವವರು ಹಾಗೂ ಆಯ್ಕೆ ಸಮಿತಿ ಒಟ್ಟಾಗಿ ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಂಡಿದ್ದರು ಎಂದು ವರದಿಯಾಗಿದೆ. ಲಾರ್ಡ್ಸ್‌ನಲ್ಲಿ ನಡೆದಿದ್ದ ಏಕದಿನ ಪಂದ್ಯದ ಬಳಿಕ ರೋಹಿತ್ ಶರ್ಮಾ ಅವರನ್ನು ಮುಂದುವರಿಸದಿರಲು ನಿರ್ಧರಿಸಲಾಗಿತ್ತು ಎನ್ನಲಾಗಿದೆ.

ಈ ನಿರ್ಧಾರವನ್ನು ರೋಹಿತ್ ಶರ್ಮಾಗೆ ತಿಳಿಸುವ ಜವಾಬ್ದಾರಿಯನ್ನು ದಕ್ಷಿಣ ವಲಯದ ಆಯ್ಕೆಗಾರ ಪ್ರಜ್ಞಾನ ಓಜಾ ಅವರಿಗೆ ನೀಡಲಾಗಿತ್ತು. ರೋಹಿತ್ ಈ ನಿರ್ಧಾರದಿಂದ ಸಂತಸಗೊಂಡಿರಲಿಲ್ಲ. ಬಳಿಕ ಅವರು ಬಿಸಿಸಿಐನ ‘ಪ್ರಭಾವಿ ಆಡಳಿತಾಧಿಕಾರಿ’ಯೊಬ್ಬರನ್ನು ಸಂಪರ್ಕಿಸಿ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರಿಂದ ತಮಗೆ ನೀಡಲಾಗುತ್ತಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಪಿಟಿಐ ವರದಿ ತಿಳಿಸಿದೆ.

ಭಾರತದ ಟೆಸ್ಟ್‌ ಪದಾರ್ಪಣೆಯ ರಾಹುಲ್‌ ದ್ರಾವಿಡ್‌ ಸಂದೇಶವನ್ನು ನಿರಾಕರಿಸಿದ್ದ ಆಕಾಶ್‌ ದೀಪ್‌!

ಇದರ ಬೆನ್ನಲ್ಲೇ, ರೋಹಿತ್ ಅವರ ನಿವೃತ್ತಿ ಕುರಿತು ಹರಿದಾಡುತ್ತಿದ್ದ ವದಂತಿಗಳನ್ನು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಳ್ಳಿಹಾಕಿ, ಲಾರ್ಡ್ಸ್ ಪಂದ್ಯವೇ ರೋಹಿತ್ ಅವರ ಕೊನೆಯ ಪಂದ್ಯವಲ್ಲ ಎಂದು ಸಾರ್ವಜನಿಕವಾಗಿ ಹೇಳಿದ್ದರು. ಈ ಹೇಳಿಕೆ ಅಗರ್ಕರ್ ಅವರಿಗೆ ಅಸಮಾಧಾನ ಮತ್ತು ಬೇಸರ ಉಂಟುಮಾಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಳಿಕ ಲಾರ್ಡ್ಸ್ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿದ್ದರು. ಈ ಬೆಳವಣಿಗೆಯ ನಂತರ ರೋಹಿತ್ ಅವರ ಭವಿಷ್ಯದ ವಿಚಾರದಲ್ಲಿ ಆಯ್ಕೆ ಸಮಿತಿಯ ನಿರ್ಧಾರಕ್ಕೆ ಮಿತಿಗಳಿವೆ ಎಂಬುದು ಸ್ಪಷ್ಟವಾಯಿತು ಎಂದು ಪಿಟಿಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

IND vs WI ಏಕದಿನ ಸರಣಿಯಲ್ಲಿ ಗಮನ ಸೆಳೆಯಬಲ್ಲ ಆಟಗಾರನನ್ನು ಹೆಸರಿಸಿದ ಇರ್ಫಾನ್‌ ಪಠಾಣ್!

ಲಕ್ಷ್ಮಣ್‌ ಜೊತೆ ಭಿನ್ನಾಭಿಪ್ರಾಯ

ಅಜಿತ್ ಅಗರ್ಕರ್ ಮತ್ತು ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರ ನಡುವೆ ತಂಡದ ಆಯ್ಕೆ ಮತ್ತು ನೀತಿ ವಿಚಾರದಲ್ಲಿ ಭಿನ್ನಾಭಿಪ್ರಾಯವಿತ್ತು ಎಂಬ ಮಾಹಿತಿಯೂ ಇದೀಗ ಹೊರಬಿದ್ದಿದೆ ಎಂದು ಪಿಟಿಐ ವರದಿ ತಿಳಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಗೌತಮ್ ಗಂಭೀರ್ ತಂಡದ ಜವಾಬ್ದಾರಿ ವಹಿಸಿಕೊಳ್ಳಲಿರುವ ಹಿನ್ನೆಲೆಯಲ್ಲಿ, ಲಕ್ಷ್ಮಣ್ 2026ರ ಏಷ್ಯನ್ ಗೇಮ್ಸ್‌ಗಾಗಿ ಭಾರತೀಯ ತಂಡದೊಂದಿಗೆ ಜಪಾನ್‌ಗೆ ತೆರಳುತ್ತಿದ್ದಾರೆ.

‘ಟಯರ್-2’ ಮಟ್ಟದ ಕ್ರೀಡಾಕೂಟವಾಗಿರುವ ಏಷ್ಯನ್ ಗೇಮ್ಸ್‌ಗೆ ಪೂರ್ಣ ಸಾಮರ್ಥ್ಯದ ತಂಡವನ್ನು ಕಳುಹಿಸುವ ನಿರ್ಧಾರಕ್ಕೆ ಅಗರ್ಕರ್ ಒಪ್ಪಿಗೆ ನೀಡಿರಲಿಲ್ಲ ಎಂದು ಪಿಟಿಐ ವರದಿ ಹೇಳಿದೆ. ಆದರೆ, ಲಭ್ಯವಿರುವ ಅತ್ಯುತ್ತಮ ಆಟಗಾರರನ್ನೇ ಒಳಗೊಂಡ ತಂಡವನ್ನು ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯವನ್ನು ಲಕ್ಷ್ಮಣ್ ಹೊಂದಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.