ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs WI: ʻಫೋನ್‌ ಸ್ವಿಚ್‌ ಮಾಡಿ, ಸೋಶಿಯಲ್‌ ಮೀಡಿಯಾದಿಂದ ದೂರ ಇದ್ದೇನೆʼ,-ಸಂಜು ಸ್ಯಾಮ್ಸನ್‌!

Sanju Samson on handling tough phases: ವೆಸ್ಟ್‌ ಇಂಡೀಸ್‌ ವಿರುದ್ಧದ ಸೂಪರ್‌-8ರ ಕೊನೆಯ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಭಾರತ ತಂಡದ ಗೆಲುವಿಗೆ ನೆರವು ನೀಡಿದರು. ಈ ಪಂದ್ಯದ ಬಳಿಕ ಸಂಜು ಸ್ಯಾಮ್ಸನ್‌ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.

ಫೋನ್‌ ಸ್ವಿಚ್‌ ಆಫ್‌ ಮಾಡಿ, ಸೋಶಿಯಲ್‌ ಮೀಡಿಯಾದಿಂದ ದೂರ ಇದ್ದೇನೆ: ಸಂಜು!

ಮ್ಯಾಚ್‌ ವಿನ್ನಿಂಗ್‌ ಬ್ಯಾಟಿಂಗ್‌ ಬಗ್ಗೆ ಸಂಜು ಸ್ಯಾಮ್ಸನ್‌ ಹೇಳಿಕೆ. -

Profile
Ramesh Kote Mar 2, 2026 4:23 PM

ನವದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಸೂಪರ್‌-8ರ ಪಂದ್ಯದಲ್ಲಿ (IND vs WI) ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ (Sanju Samson), ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ತಮ್ಮ ವೃತ್ತಿ ಜೀವನದ ಕಠಿಣ ಅವಧಿಯನ್ನು ಹೇಗೆ ನಿರ್ವಹಿಸಿದ್ದೇನೆಂದು ಬಹಿರಂಗಪಡಿಸಿದ್ದಾರೆ. ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡು, ಸೋಶಿಯಲ್‌ ಮೀಡಿಯಾದಿಂದ ದೂರ ಉಳಿಯುತ್ತೇನೆ ಹಾಗೂ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಡುತ್ತೇನೆ. ಇದರ ಫಲವಾಗಿ ವೆಸ್ಟ್‌ ಇಂಡೀಸ್‌ ವಿರುದ್ಧ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನವನ್ನು ತೋರಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ನೀಡಿದ್ದ 196 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಸಂಜು ಸ್ಯಾಮ್ಸನ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ 50 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ ಅಜೇಯ 97 ರನ್‌ಗಳನ್ನು ಬಾರಿಸಿದರು. ಇವರ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ 5 ವಿಕೆಟ್‌ ಗೆಲುವು ಪಡೆದು ಸೆಮಿಫೈನಲ್ಸ್‌ಗೆ ಅಧಿಕೃತವಾಗಿ ಅರ್ಹತೆ ಪಡೆಯಿತು.

ವಿಂಡೀಸ್‌ ಔಟ್‌, ಇಂಡಿಯಾ ಇನ್‌ ಟು ದಿ ಸೆಮಿಫೈನಲ್‌

ಫೋನ್‌ ಸ್ವಿಚ್‌ ಮಾಡಿದ್ದೇನೆ

ಪಂದ್ಯದ ಬಳಿಕ ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಸಂಜು ಸ್ಯಾಮ್ಸನ್‌, "ಶಾಟ್‌ ಸೆಲೆಕ್ಟನ್‌ ಬಗ್ಗೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ನಾನು ಜಾಸ್ತಿ ಬದಲಾವಣೆಯನ್ನು ಮಾಡಿಕೊಳ್ಳಲು ಬಯಸುವುದಿಲ್ಲ, ಏಕೆಂದರೆ ನಾನು ಇದೇ ಸೆಟ್‌ ಅಪ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತೇಬನೆಂದು ಗೊತ್ತಿದೆ," ಎಂದು ಹೇಳಿದ್ದಾರೆ.

"ನನ್ನ ಮೇಲೆ ನಾನು ನಂಬಿಕೆಯನ್ನು ಇಟ್ಟಿದ್ದೇನೆ, ನನ್ನ ಫೋನ್‌ ಸ್ವಿಚ್‌ ಆಫ್‌ ಮಾಡಿದ್ದೇನೆ ಹಾಗೂ ಸೋಶಿಯಲ್‌ ಮೀಡಿಯಾದಿಂದ ದೂರ ಉಳಿದು, ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದೇನೆ. ವಿಶೇಷ ಪಂದ್ಯದಲ್ಲಿ ಇದು ಸಂಭವಿಸಿರುವ ಕಾರಣ ತುಂಬಾ ಸಂತೋಷವಾಗಿದೆ," ಎಂದು ಸಂಜು ಸ್ಯಾಮ್ಸನ್‌ ತಿಳಿಸಿದ್ದಾರೆ.



196 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಇನಿಂಗ್ಸ್‌ನಲ್ಲಿ ವಿಕೆಟ್‌ಗಳು ನಿಯಮಿತವಾಗಿ ಉರುಳುತ್ತಿದ್ದವು. ಅಭಿಷೇಕ್‌ ಶರ್ಮಾ (10), ಸೂರ್ಯಕುಮಾರ್‌ ಯಾದವ್‌ (18) ಹಾಗೂ ತಿಲಕ್‌ ವರ್ಮಾ (27) ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಸಂಜು ಸ್ಯಾಮ್ಸನ್‌, ಭಾರತಕ್ಕೆ ಗೆಲುವು ತಂದುಕೊಟ್ಟರು.



ಚೇಸಿಂಗ್‌ ಸ್ವಲ್ಪ ಕಠಿಣವಾಗಿತ್ತು: ಸಂಜು

“ಚೇಸಿಂಗ್‌ ಸ್ವಲ್ಪ ಕಠಿಣವಾಗಿತ್ತು. ನಮ್ಮ ಬ್ಯಾಟಿಂಗ್ ಶಕ್ತಿಯನ್ನು ಗಮನಿಸಿದರೆ, ಈಡನ್ ಗಾರ್ಡನ್ಸ್‌ನಲ್ಲಿ ಇಬ್ಬನಿ ಬೀಳುವ ಸಂದರ್ಣದಲ್ಲಿ 190 ರನ್‌ಗಳ ಗುರಿಯನ್ನು ಹಿಂಬಾಲಿಸುವುದು ಸ್ವಲ್ಪ ಸುಲಭವಾಗುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ನಿರಂತರವಾಗಿ ವಿಕೆಟ್‌ಗಳು ಬೀಳುತ್ತಿದ್ದುದರಿಂದ ಅದು ಸವಾಲಿನಂತಾಯಿತು,” ಎಂದು ಅವರು ಹೇಳಿದರು.

“ನಿಜವ ಹೇಳಬೇಕೆಂದರೆ, ಅಲ್ಲಿ ನನ್ನ ಅನುಭವ ಮತ್ತು ನನ್ನ ಪಾತ್ರ ದೊಡ್ಡ ಪಾತ್ರ ವಹಿಸಿತು. ನನಗೆ ಉತ್ತಮ ಆರಂಭ ಸಿಕ್ಕಿತ್ತು. ಆದರೆ ವಿಕೆಟ್‌ಗಳು ಕ್ರಮವಾಗಿ ಬೀಳುತ್ತಿದ್ದಾಗ, ಪಂದ್ಯವನ್ನು ಕೊನೆಯ ಕ್ಷಣದವರೆಗೂ ಕೊಂಡೊಯ್ಯಬೇಕು ಮತ್ತು ಅಂತಿಮವಾಗಿ ಮುಗಿಸಬೇಕು ಎಂಬ ಹೊಣೆಗಾರಿಕೆಯನ್ನು ನಾನು ಅನುಭವಿಸಿದೆ,” ಎಂದು ಸಂಜು ಸ್ಯಾಮ್ಸನ್‌ ತಿಳಿಸಿದ್ದಾರೆ.