ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹರ್ಮನ್‌ಪ್ರೀತ್‌ ಕೌರ್‌ ಅರ್ಧಶತಕ, 5ನೇ ಪಂದ್ಯವನ್ನು ಗೆದ್ದು ಟಿ20ಐ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಭಾರತ!

INDW vs SLW match Highlights: ಭಾರತ ಮಹಿಳಾ ಕ್ರಿಕೆಟ್ ತಂಡ, ಶ್ರೀಲಂಕಾ ತಂಡವನ್ನು 5ನೇ ಟಿ20ಐ ಪಂದ್ಯದಲ್ಲಿ 15 ರನ್‌ಗಳಿಂದ ಸೋಲಿಸಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯನ್ನು 5-0 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ಅರ್ಧಶತಕ ಬಾರಿಸಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಶ್ರೀಲಂಕಾ ಎದುರು ಐದನೇ ಪಂದ್ಯವನ್ನು ಗೆದ್ದ ಭಾರತ ವನಿತೆಯರು!

ಶ್ರೀಲಂಕಾ ಎದುರು ಟಿ20ಐ ಸರಣಿ ಗೆದ್ದು ಸಂಭ್ರಮಿಸಿದ ಭಾರತ ವನಿತೆಯರು. -

Profile
Ramesh Kote Dec 30, 2025 11:58 PM

ತಿರುವನಂತಪುರಂ: ನಾಯಕಿ ಹರ್ಮನ್‌ಪ್ರೀತ್‌ ಕೌರ್ (Harmanpreet kaur) ಅರ್ಧಶತಕದ ಬಲದಿಂದ ಭಾರತ ಮಹಿಳಾ ತಂಡ, ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ (INDW vs SLW) ಎದುರಾಳಿ ಶ್ರೀಲಂಕಾ ತಂಡವನ್ನು 15 ರನ್‌ಗಳಿಂದ ಸೋಲಿಸಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಟೀಮ್ ಇಂಡಿಯಾ (India women Team) ತನ್ನ ಪಾಲಿನ 20 ಓವರ್‌ಗಳಿಗೆ ಏಳು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಕೇವಲ 160 ರನ್ ಗಳಿಸಲು ಸಾಧ್ಯವಾಯಿತು. ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗದೆ, ಪ್ರವಾಸಿ ಶ್ರೀಲಂಕಾ ತಂಡ ನಿರಾಶೆಯೊಂದಿಗೆ ಭಾರತದ ಪ್ರವಾಸವನ್ನು ಮುಗಿಸಿತು.

ಈ ಪಂದ್ಯದಲ್ಲಿ ಟಾಸ್ ಸೋತ ನಂತರ ಮೊದಲು ಬ್ಯಾಟ್‌ ಮಾಡುವಂತಾದ ಭಾರತದ ಪರ ಶಫಾಲಿ ವರ್ಮಾ ಕೇವಲ ಐದು ರನ್‌ಗಳಿಗೆ ಔಟಾದರು. ಗುಣಲನ್ ಕಮಲಿನಿ 12 ರನ್ ಮತ್ತು ಹರ್ಲೀನ್ ಡಿಯೋಲ್ 13 ರನ್ ಗಳಿಸಿದರು. ಆದಾಗ್ಯೂ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅದ್ಭುತ ಇನಿಂಗ್ಸ್ ಆಡಿದರು. ಅವರು ಆಡಿದ 43 ಎಸೆತಗಳಲ್ಲಿ 68 ರನ್ ಗಳಿಸಿ ತಂಡವನ್ನು ಸ್ಥಿರಗೊಳಿಸಿದರು. ಅಮನ್‌ಜೋತ್ ಕೌರ್ 21 ರನ್ ಗಳಿಸಿದರೆ, ಅರುಂಧತಿ ರೆಡ್ಡಿ 23 ರನ್ ಗಳಿಸಿ ಭಾರತವನ್ನು 175ಕ್ಕೆ ಕೊಂಡೊಯ್ದರು. ಶ್ರೀಲಂಕಾ ಪರ ರಶ್ಮಿಕಾ ಸೆವ್ವಂಡಿ, ಚಾಮರಿ ಅಟಪಟ್ಟು ಮತ್ತು ಕವಿಶಾ ದಿಲ್ಹಾರಿ ತಲಾ ಎರಡು ವಿಕೆಟ್ ಪಡೆದರೆ, ನಿಮ್ಶಾ ಮೀಪಗೆ ಒಂದು ವಿಕೆಟ್ ಪಡೆದರು.

ಭಾರತ ಮಹಿಳಾ ತಂಡದ ಪ್ಲೇಯಿಂಗ್‌ XIನಲ್ಲಿ ಸ್ಮೃತಿ ಮಂಧಾನಾ ಸ್ಥಾನದಲ್ಲಿ ಆಡಿದ ಗುಣಲಕ್‌ ಕಮಲಿನಿ ಯಾರು!

160 ರನ್‌ಗಳಿಗೆ ಶಕ್ತವಾದ ಶ್ರೀಲಂಕಾ

176 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಕಳಪೆ ಆರಂಭವನ್ನು ಕಂಡಿತು. ಭಾರತದ ಬೌಲರ್‌ಗಳು ಬಿಗಿಯಾಗಿ ಬೌಲಿಂಗ್ ದಾಳಿ ನಡೆಸಿ ಶ್ರೀಲಂಕಾ ದೊಡ್ಡ ಮೊತ್ತವನ್ನು ಗಳಿಸುವುದನ್ನು ತಡೆದರು. ಹಾಸಿನಿ ಪೆರೆರಾ 65 ಮತ್ತು ಇಮೇಶಾ ದುಲಾನಿ 50 ರನ್ ಗಳಿಸಿದರು, ಆದರೆ ಅವರು ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿಫಲರಾದರು. ಶ್ರೀಲಂಕಾದ ಇಡೀ ತಂಡವು ಕೇವಲ 160 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು ಮತ್ತು ಭಾರತವು ಪಂದ್ಯವನ್ನು 15 ರನ್‌ಗಳಿಂದ ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ, ಭಾರತವು ಐದು ಪಂದ್ಯಗಳ ಟಿ20ಐ ಸರಣಿಯನ್ನು 5-0 ಅಂತರದಿಂದ ಗೆದ್ದುಕೊಂಡಿತು.



ಮೂರನೇ ಬಾರಿ ಭಾರತಕ್ಕೆ 5-0 ಸರಣಿ ಗೆಲುವು

ಟೀಮ್ ಇಂಡಿಯಾ 5-0 ಅಂತರದಲ್ಲಿ ಟಿ20ಐ ಸರಣಿಯನ್ನು ಗೆದ್ದಿರುವುದು ಇದು ಮೂರನೇ ಬಾರಿ. ಇದಕ್ಕೂ ಮೊದಲು, ಭಾರತೀಯ ಮಹಿಳಾ ಕ್ರಿಕೆಟ್ ತಂಡವು 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮತ್ತು 2024 ರಲ್ಲಿ ಬಾಂಗ್ಲಾದೇಶ ವಿರುದ್ಧ ಟಿ20ಐ ಸರಣಿಯನ್ನು 5-0 ಅಂತರದಲ್ಲಿ ಗೆದ್ದಿತ್ತು. ಇದಲ್ಲದೆ, ಇದು ಶ್ರೀಲಂಕಾ ವಿರುದ್ಧ ಭಾರತ ತಂಡದ 25ನೇ ಟಿ20ಐ ಗೆಲುವು.



ಹರ್ಮನ್‌ಪ್ರೀತ್‌ ಕೌರ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ

ಈ ಪಂದ್ಯದಲ್ಲಿ ಭಾರತ ತಂಡ ಆರಂಭದಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತವಾಗಿ ಬ್ಯಾಟ್‌ ಮಾಡಿ ಅರ್ಧಶತಕ ಗಳಿಸಿ ಭಾರತದ ಗೆಲುವಿಗೆ ನೆರವು ನೀಡಿದ ಹರ್ಮನ್‌ಪ್ರೀತ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಈ ಸರಣಿಯಲ್ಲಿ ಐದು ಪಂದ್ಯಗಳಿಂದ 80.33ರ ಸರಾಸರಿ ಮತ್ತು 181.20ರ ಸ್ಟ್ರೈಕ್‌ ರೇಟ್‌ನಲ್ಲಿ 241 ರನ್‌ ಸಿಡಿಸಿದ್ದ ಭಾರತದ ಶಫಾಲಿ ವರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.