INDW vs SLW: ಶ್ರೀಲಂಕಾ ಎದುರು ಮೂರನೇ ಪಂದ್ಯ ಗೆದ್ದು ಟಿ20ಐ ಸರಣಿಯನ್ನು ವಶಪಡಿಸಿಕೊಂಡ ಭಾರತ!
INDW vs SLW Match Highlights: ಭಾರತ ಮಹಿಳಾ ತಂಡ ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಟಿ20ಐ ಸರಣಿಯನ್ನು ವಶಪಡಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ 7 ವಿಕೆಟ್‌ಗಳ ನಷ್ಟಕ್ಕೆ 112 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಭಾರತ, ಶಫಾಲಿ ವರ್ಮಾ ಅರ್ಧಶತಕದ ಬಲದಿಂದ 13.2 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 115 ರನ್‌ಗಳನ್ನು ಗಳಿಸಿ ಗೆದ್ದು ಬೀಗಿತು.
ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ಭಾರತಕ್ಕೆ 8 ವಿಕೆಟ್ ಜಯ. -
ತಿರುವನಂಪುರಂ: ರೇಣುಕಾ ಸಿಂಗ್ (21ಕ್ಕೆ 4) ಹಾಗೂ ದೀಪ್ತಿ ಶರ್ಮಾ (18 ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್ ಹಾಗೂ ಶಫಾಲಿ ವರ್ಮಾ (Shafali Verma) ದಾಳಿಯ ಸಹಾಯದಿಂದ ಭಾರತ ಮಹಿಳಾ ತಂಡ, ಮೂರನೇ ಪಂದ್ಯದಲ್ಲಿ(INDW vs SLW) ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಹರ್ಮನ್‌ಪೀತ್ ಕೌರ್ ನಾಯಕತ್ವದ ಭಾರತ ತಂಡ (India women Team) ಟಿ20ಐ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿತು. ಆದರೆ, ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಶ್ರೀಲಂಕಾ ತಂಡ ಮೂರನೇ ಪಂದ್ಯದಲ್ಲಿಯೂ ಸೋಲುವ ಮೂಲಕ ಸರಣಿಯನ್ನು ಕಳೆದುಕೊಂಡಿತು.
ಶುಕ್ರವಾರ ಇಲ್ಲಿನ ಗ್ರೀನ್ ಫೀಲ್ಡ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 113 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ಮಹಿಳಾ ತಂಡ, ಶಫಾಲಿ ವರ್ಮಾ (79) ಅವರ ಸ್ಪೋಟಕ ಬ್ಯಾಟಿಂಗ್ ಸಹಾಯದಿಂದ 13.2 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 115 ರನ್‌ಗಳನ್ನು ಕಲೆ ಹಾಕಿ ಎಂಟು ವಿಕೆಟ್‌ಗಳಿಂದ ಗೆದ್ದು ಬೀಗಿತು. ಸ್ಮೃತಿ ಮಂಧಾನಾ (1 ) ಹಾಗೂ ಜೆಮಿಮಾ ರೊಡ್ರಿಗಸ್ (9) ಅವರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ, ಒಂದು ತುದಿಯಲ್ಲಿ ಸ್ಪೋಟಕ ಬ್ಯಾಟ್ ಮಾಡಿದ ಶಫಾಲಿ ವರ್ಮಾ ಕೇವಲ 42 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 79 ರನ್‌ಗಳನ್ನು ಸಿಡಿಸಿದರು. ಕೊನೆಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಜೇಯ 21 ರನ್‌ಗಳನ್ನು ಗಳಿಸಿದರು.
Vijay Hazare Trophy: ಮೈಕಲ್ ಬೆವನ್‌ರ ವಿಶ್ವ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ!
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಶ್ರೀಲಂಕಾ ತಂಡ, ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ರೇಣುಕಾ ಸಿಂಗ್ ಮಾರಕ ಬೌಲಿಂಗ್ ದಾಳಿ ಹಾಗೂ ದೀಪ್ತಿ ಶರ್ಮಾ ಸ್ಪಿನ್ ಮೋಡಿಗೆ ನಲುಗಿತು. ಆ ಮೂಲಕ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 7 ವಿಕೆಟ್‌ಗಳ ನಷ್ಟಕ್ಕೆ 112 ರನ್‌ಗಳಿಗೆ ಶಕ್ತವಾಯಿತು. ಇದರೊಂದಿಗೆ ಎದುರಾಳಿ ಭಾರತ ತಂಡಕ್ಕೆ 113 ರನ್‌ಗಳ ಗುರಿಯನ್ನು ನೀಡಿತ್ತು.
KAR vs KER: ದೇವದತ್ ಪಡಿಕ್ಕಲ್, ಕರುಣ್ ನಾಯರ್ ಭರ್ಜರಿ ಶತಕ, ಕೇರಳ ಎದುರು ಕರ್ನಾಟಕಕ್ಕೆ ಭರ್ಜರಿ ಜಯ!
ಶ್ರೀಲಂಕಾ ತಂಡದ ಪರ ಹಾಸೀನಾ ಪೆರೆರಾ 25 ರನ್, ಇಮೇಶಾ ದುಲಾನಿ 27 ಹಾಗೂ ಕಾವೇಶ್ ದಿಲ್ಹಾರಿ 20 ರನ್ ಗಳಿಸಿದರು. ಇವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಆಟಗಾರ್ತಿಯರು 20ರ ಗಡಿ ದಾಟಲಿಲ್ಲ. ಭಾರತದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ರೇಣುಕಾ ಸಿಂಗ್ 4 ಓವರ್‌ಗಳಿಗೆ 21 ರನ್ ನೀಡಿ 4 ವಿಕೆಟ್ ಕಿತ್ತರು. ಇನ್ನು ಇವರಿಗೆ ಸಾಥ್ ನೀಡಿದ ದೀಪ್ತಿ ಶರ್ಮಾ ಬೌಲ್ ಮಾಡಿದ ನಾಲ್ಕು ಓವರ್‌ಗಳಿಗೆ 18 ರನ್ ನೀಡಿ ಮೂರು ವಿಕೆಟ್‌ಗಳನ್ನು ತೆಗೆದುಕೊಂಡರು.