ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs RR: ವೈಭವ್‌ ಸೂರ್ಯವಂಶಿ ಟಾರ್ಗೆಟ್‌, ರಾಜಸ್ಥಾನ್‌ ಎದುರು ಗೆಲ್ಲುತ್ತಾ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು?

RCB vs RR Match Preview: ಸತತ ಎರಡು ಪಂದ್ಯಗಳನ್ನು ಗೆದ್ದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಏಪ್ರಿಲ್‌ 10 ರಂದು ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎದುರು ತನ್ನ ಮೂರನೇ ಪಂದ್ಯವನ್ನು ಆಡಲಿದೆ. ರಿಯಾನ್‌ ಪರಾಗ್‌ ನಾಯಕತ್ವದ ಆರ್‌ಆರ್‌ ಕೂಡ ಸತತ ಮೂರೂ ಪಂದ್ಯಗಳನ್ನು ಗೆದ್ದು ವಿಶ್ವಾಸದಲ್ಲಿದೆ.

ರಾಜಸ್ಥಾನ್‌ ಕದನಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI ಹೇಗಿದೆ?

ರಾಜಸ್ಥಾನ್‌ ರಾಯಲ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು. -

Profile
Ramesh Kote Apr 9, 2026 4:10 PM

ಗುವಾಹಟಿ: ಸೋಲು ಕಾಣದೆ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಮುನ್ನುಗ್ಗುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳು (RCB vs RR) ಏಪ್ರಿಲ್‌ 10 ರಂದು ಶುಕ್ರವಾರ ಇಲ್ಲಿನ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯುವ 16ನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದ ವಿಶ್ವಾಸದಲ್ಲಿದ್ದರೂ ಆರ್‌ಸಿಬಿ ತಂಡಕ್ಕೆ ರಾಜಸ್ಥಾನ್‌ ಎದುರು ಅವರ ತವರಿನಲ್ಲಿ ಕಠಿಣ ಸವಾಲು ಎದುರಾಗಲಿದೆ. ಹಾಗಾಗಿ ರಜತ್‌ ಪಾಟಿದಾರ್‌ (Rajat Patidar) ನಾಯಕತ್ವದ ಬೆಂಗಳೂರು ತಂಡ, ಬಹಳ ಎಚ್ಚರಿಕೆಯಿಂದ ಆಡಬೇಕಾಗಿದೆ.

ಆರಂಭಿಕ ಮೂರೂ ಪಂದ್ಯಗಳನ್ನು ಗೆದ್ದಿರುವ ರಾಜಸ್ಥಾನ್‌ ರಾಯಲ್ಸ್‌ ತಂಡ, ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ರಾಜಸ್ಥಾನ್‌ ತಂಡ, ಚೆನ್ನೈ ಸೂಪರ್‌ ಕಿಂಗ್ಸ್‌, ಗುಜರಾತ್‌ ಟೈಟನ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ಕ್ರಮವಾಗಿ ಗೆಲುವು ಪಡೆದಿದೆ. ಇನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಗೆದ್ದಿದೆ.

ರಾಜಸ್ಥಾನ್‌ ಹಾಗೂ ಬೆಂಗಳೂರು ಎರಡೂ ತಂಡಗಳು ಅತ್ಯಂತ ಬಲಿಷ್ಠ ಬ್ಯಾಟಿಂಗ್‌ ವಿಭಾಗವನ್ನು ಹೊಂದಿವೆ. ಆದರೆ, ಬೌಲಿಂಗ್‌ನಲ್ಲಿ ಆರ್‌ಸಿಬಿಗಿಂತ ಆರ್‌ಆರ್‌ ತಂಡ ಹೆಚ್ಚು ಬಲಶಾಲಿಯಾಗಿದೆ. ಹೊಸ ಚೆಂಡಿನ ಬೌಲರ್‌ಗಳು ಎರಡೂ ತಂಡಗಳಲ್ಲಿ ಉತ್ತಮವಾಗಿದ್ದಾರೆ. ಆರ್‌ಸಿಬಿ ಪರ ಜೇಕಬ್‌ ಡಫಿ ಹಾಗೂ ಭುವನೇಶ್ವರ್‌ ಕುಮಾರ್‌ ಪರಿಣಾಮಕಾರಿಯಾಗಿದ್ದಾರೆ. ಇನ್ನು ಆರ್‌ಆರ್‌ ಪರ ಜೋಫ್ರಾ ಆರ್ಚರ್‌ ಮತ್ತು ನಾಂಡ್ರೆ ಬರ್ಗರ್‌ ಉತ್ತಮವಾಗಿದ್ದಾರೆ.

IPL 2026 ಟೂರ್ನಿಯಿಂದ ಹೊರಗುಳಿಯಿರಿ: ಎಂಎಸ್‌ ಧೋನಿಗೆ ಆರ್‌ ಅಶ್ವಿನ್‌ ಮನವಿ!

ಕಳೆದ ಪಂದ್ಯಗಳಲ್ಲಿ ಅಬ್ಬರಿಸಿರುವ ಯಶಸ್ವಿ ಜೈಸ್ವಾಲ್‌ ಹಾಗೂ ವೈಭವ್‌ ಸೂರ್ಯವಂಶಿ ಸದ್ಯ ಸ್ಪೋಟಕ ಫಾರ್ಮ್‌ನಲ್ಲಿದ್ದು, ಎದುರಾಳಿ ತಂಡಗಳಿಗೆ ಭೀತಿ ಹುಟ್ಟಿಸಿದ್ದಾರೆ. ಈ ಇಬ್ಬರನ್ನು ಬೇಗ ಆರ್‌ಸಿಬಿ ಔಟ್‌ ಮಾಡುವುದು ಅನಿವಾರ್ಯ. ಮುಂಬೈ ಇಂಡಿಯನ್ಸ್‌ ಎದುರು ಕಳೆದ ಪಂದ್ಯದಲ್ಲಿ ಈ ಇಬ್ಬರೂ ಅಬ್ಬರಿಸಿದ್ದರು. ಇನ್ನು ಆರ್‌ಸಿಬಿ ಪರ ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿ ಕೂಡ ಆರ್‌ಸಿಬಿ ಪರ ಉತ್ತಮವಾಗಿ ಆಡುತ್ತಿದ್ದಾರೆ.

ಪಂದ್ಯದ ವಿವರ

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ರಾಜಸ್ಥಾನ್‌ ರಾಯಲ್ಸ್‌

ಪಂದ್ಯ: 16

ದಿನಾಂಕ: ಏಪ್ರಿಲ್‌ 10, 2026

ಸಮಯ: ಸಂಜೆ 07: 30ಕ್ಕೆ

ಸ್ಥಳ: ಬರ್ಸಪರ ಕ್ರೀಡಾಂಗಣ, ಗುವಾಹಟಿ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ಜಿಯೊ ಹಾಟ್‌ಸ್ಟಾರ್‌

IPL 2026: ʻಆರ್‌ಸಿಬಿಗೆ ಮರಳಿದ್ದು ನನ್ನ ಪಾಲಿಗೆ ಟರ್ನಿಂಗ್‌ ಪಾಯಿಂಟ್‌ʼ-ದೇವದತ್‌ ಪಡಿಕ್ಕಲ್‌!

ಮುಖಾಮುಖಿ ದಾಖಲೆ

ಒಟ್ಟು ಆಡಿರುವ ಪಂದ್ಯಗಳು: 34

ರಾಜಸ್ಥಾನ್‌ ರಾಯಲ್ಸ್ ಗೆಲುವು: 14

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 17

ನೋ ರಿಸಲ್ಟ್‌: 03

ಬರ್ಸಪರ ಕ್ರೀಡಾಂಗಣದ ಪಿಚ್‌ ರಿಪೋರ್ಟ್‌

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬರ್ಸಪರ ಕ್ರೀಡಾಂಗಣ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಮೊದಲನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ನೀಡಿದ್ದ 128 ರನ್‌ಗಳ ಗುರಿಯನ್ನು ರಾಜಸ್ಥಾನ್‌, ಸುಲಭವಾಗಿ ಚೇಸ್‌ ಮಾಡಿ ಗೆದ್ದಿತ್ತು. ಇನ್ನು ಎರಡನೇ ಪಂದ್ಯಕ್ಕೆ ಮಳೆ ಕಾಟ ನೀಡಿತ್ತು. ಹಾಗಾಗಿ, 11 ಓವರ್‌ಗಳಿಗೆ ಪಂದ್ಯವನ್ನು ಇಳಿಸಲಾಗಿತ್ತು. ಈ ಪಂದ್ಯದಲ್ಲಿಯೂ ಆರ್‌ಆರ್‌ ಭರ್ಜರಿಯಾಗಿ ಗೆದ್ದು ಬೀಗಿತ್ತು.

Updated IPL 2026 Points Table: ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಅಗ್ರಸ್ಥಾನಕೇರಿದ ಆರ್‌ಸಿಬಿ

ರಾಜಸ್ಥಾನ್‌ ರಾಯಲ್ಸ್‌: ಯಶಸ್ವಿ ಜೈಸ್ವಾಲ್‌ಮ ವೈಭವ್‌ ಸೂರ್ಯವಂಶಿ, ಧ್ರುವ್‌ ಜುರೆಲ್‌ (ವಿಕೆಟ್‌ ಕೀಪರ್‌), ರಿಯಾನ್‌ ಪರಾಗ್‌ (ನಾಯಕ), ಶಿಮ್ರಾನ್‌ ಹೆಟ್ಮಾಯೆರ್‌, ಡೊನೊವಾನ್‌ ಪೆರೆರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್‌, ನಾಂಡ್ರೆ ಬರ್ಗರ್‌, ತುಷಾರ್‌ ದೇಶಪಾಂಡೆ, ಸಂದೀಪ್‌ ಶರ್ಮಾ

ಇಂಪ್ಯಾಕ್ಟ್‌ ಪ್ಲೇಯರ್‌: ರವಿ ಬಿಷ್ಣೋಯ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ದೇವದತ್‌ ಪಡಿಕ್ಕಲ್‌, ರಜತ್‌ ಪಾಟಿದಾರ್‌ (ನಾಯಕ), ಜಿತೇಶ್‌ ಶರ್ಮಾ (ವಿಕೆಟ್‌ ಕೀಪರ್‌), ಟಿಮ್‌ ಡೇವಿಡ್‌, ರೊಮ್ಯಾರಿಯೊ ಶೆಫರ್ಡ್‌, ಕೃಣಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಅಭಿನಂದನ್‌ ಸಿಂಗ್‌, ಜೇಕಬ್‌ ಡಫಿ

ಇಂಪ್ಯಾಕ್ಟ್‌ ಪ್ಲೇಯರ್:‌ ಸೂಯೇಶ್‌ ಶರ್ಮಾ