ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

DC vs GT: ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಗೆದ್ದು ಸಂಭ್ರಮದಲ್ಲಿದ್ದ ಶುಭಮನ್‌ ಗಿಲ್‌ಗೆ ಶಾಕ್‌ ನೀಡಿದ ಬಿಸಿಸಿಐ!

IPL 2026: ಗುಜರಾತ್‌ ಟೈಟನ್ಸ್‌ ತಂಡದ ನಾಯಕ ಶುಭಮನ್‌ ಗಿಲ್ ಅವರಿಗೆ ಬಿಸಿಸಿಐ 12 ಲಕ್ಷ ರು ದಂಡವನ್ನು ವಿಧಿಸಿದೆ. 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ನಿಧಾನಗತಿಯ ಬೌಲ್‌ ಮಾಡಿದ ಕಾರಣ ಬಿಸಿಸಿಐ ಈ ಕ್ರಮ ತೆಗೆದುಕೊಂಡಿದೆ. ಈ ಸೀಸನ್‌ನಲ್ಲಿ ಶುಭಮನ್‌ ಗಿಲ್‌ಗೆ ಇದು ಮೊದಲ ಪ್ರಮಾದವಾಗಿದೆ.

DC vs GT: ಡೆಲ್ಲಿ ಎದುರು ಗೆದ್ದರೂ ಶುಭಮನ್‌ ಗಿಲ್‌ಗೆ ದಂಡ!

ಶುಭಮನ್‌ ಗಿಲ್‌ಗೆ ದಂಡ ವಿಧಿಸಿದ ಬಿಸಿಸಿಐ. -

Profile
Ramesh Kote Apr 9, 2026 4:40 PM

ನವದೆಹಲಿ: ಗುಜರಾತ್‌ ಟೈಟನ್ಸ್‌ (Gujarat Titans) ತಂಡದ ನಾಯಕ ಶುಭಮನ್‌ ಗಿಲ್‌ಗೆ (Shubman Gill) 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಬುಧವಾರ ರೋಚಕ ಜಯ ಸಾಧಿಸಿದ ಹೊರತಾಗಿಯೂ ನಿಧಾನಗತಿಯ ಓವರ್ ರೇಟ್ ಕಾರಣ ಬಿಸಿಸಿಐ 12 ಲಕ್ಷ ರು ದಂಡವನ್ನು ವಿಧಿಸಿದೆ. ಈ ಸೀಸನ್‌ನಲ್ಲಿ ಗಿಲ್ ಅವರ ಮೊದಲ ಪ್ರಮಾದ ಇದಾಗಿದೆ. ಇದೇ ರೀತಿಯ ಎರಡು ಬಾರಿ ಪ್ರಮಾದವೆಸಗಿದ ಶ್ರೇಯಸ್‌ ಅಯ್ಯರ್‌ ಮತ್ತು ಅಂಪೈರ್ ವಿರುದ್ಧ ಆಕ್ರೋಶ ತೋರಿದ ಅಭಿಷೇಕ್‌ ಶರ್ಮಾ ಅವರ ಪಟ್ಟಿಗೆ ಇದೀಗ ಶುಭಮನ್‌ ಗಿಲ್ ಕೂಡ ಸೇರಿದ್ದಾರೆ.

ಶುಭಮನ್‌ ಗಿಲ್‌ ಅಂತಿಮ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಗೆಲುವಿಗೆ 13 ರನ್ ಅಗತ್ಯವಿದ್ದಾಗ, ಪ್ರಸಿಧ್‌ ಕೃಷ್ಣ ಅವರನ್ನು ಬೌಲಿಂಗ್‌ಗೆ ಕರೆಸಿದರು. ಕೆಲ ದಿನಗಳ ಹಿಂದೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಪ್ರಸಿಧ್ ತಮ್ಮ ಪ್ರದರ್ಶನದಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.‌ ಒತ್ತಡದ ಪರಿಸ್ಥಿತಿಯಲ್ಲಿ ಪ್ರಸಿಧ್‌ ಅತ್ಯಂತ ಪರಿಣಾಮಕಾರಿಯಾಗಿ ಬೌಲ್‌ ಮಾಡಿ ಡೇವಿಡ್‌ ಮಿಲ್ಲರ್‌ ಅವರನ್ನು ನಿಯಂತ್ರಿಸಿದರು. ಆ ಮೂಲಕ ಟೈಟನ್ಸ್‌ಗೆ ಗೆಲುವು ಖಾತ್ರಿ ಪಡೆಸಿದರು.

IPL 2026: ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತ, ಮತ್ತಷ್ಟು ಪಂದ್ಯಗಳಿಗೆ ಮಿಚೆಲ್‌ ಸ್ಟಾರ್ಕ್‌ ಅಲಭ್ಯ!

"ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ 2026ರ 14ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ಕಾರಣಕ್ಕೆ ಗುಜರಾತ್‌ ಟೈಟನ್ಸ್‌ ತಂಡದ ನಾಯಕ ಶುಭಮನ್‌ ಗಿಲ್‌ ಅವರಿಗೆ ದಂಡ ವಿಧಿಸಲಾಗಿದೆ,” ಎಂದು ಐಪಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

“ಐಪಿಎಲ್‌ನ ನಡವಳಿಕೆ ಸಂಹಿತೆಯ (Code of Conduct) 2.22ರ ಪ್ರಕಾರ, ಇದು ಈ ಸೀಸನ್‌ನಲ್ಲಿ ತಂಡದ ಮೊದಲ ಪ್ರಮಾದವಾಗಿರುವುದರಿಂದ, ಗಿಲ್ ಅವರಿಗೆ 12 ಲಕ್ಷ ದಂಡ ವಿಧಿಸಲಾಗಿದೆ," ಎಂದು ತಿಳಿಸಿದೆ. ಮುಂದಿನ ಬಾರಿ ಇದೇ ತಪ್ಪು ಮರುಕಳಿಸಿದರೆ ಗಿಲ್ ಅವರ ದಂಡ ದ್ವಿಗುಣವಾಗಲಿದೆ. ಮೂರನೇ ಬಾರಿ ನಿಯಮ ಉಲ್ಲಂಘಿಸಿದರೆ, ಅವರಿಗೆ ಒಂದು ಪಂದ್ಯ ನಿಷೇಧವೂ ಎದುರಾಗುವ ಸಾಧ್ಯತೆ ಇದೆ.

IPL 2026: ಅಧಿಕ ಪ್ರಸಂಗ ತೋರಿದ ಆವೇಶ್‌ ಖಾನ್‌ಗೆ ಬುದ್ದಿ ಕಲಿಸುತ್ತಾ ಬಿಸಿಸಿಐ? ಇಲ್ಲಿದೆ ವಿಡಿಯೊ

ಪಂದ್ಯದ ಬಗ್ಗೆ ಹೇಳುವುದಾದರೆ ಡೆವೀಡ್‌ ಮಿಲ್ಲರ್‌ ಅವರು ಕೊನೆಯ ಎಸೆತ ಬಾಕಿ ಇರುವುದಕ್ಕೂ ಮುನ್ನ ಕುಲ್ದೀಪ್‌ ಯಾದವ್‌ ಅವರಿಗೆ ಸಿಂಗಲ್ ನೀಡಲು ನಿರಾಕರಿಸಿದ ನಿರ್ಧಾರ ಬಹಳ ಚರ್ಚೆಗೆ ಕಾರಣವಾಯಿತು. ಗುಜರಾತ್‌ ಟೈಟನ್ಸ್‌ ತಂಡ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕೇವಲ ಒಂದು ರನ್ ಅಂತರದಲ್ಲಿ ಸೋಲಿನಿಂದ ತಪ್ಪಿಸಿಕೊಂಡಿತು. ಮಿಲ್ಲರ್ ಒಂದು ಸಿಕ್ಸರ್ ಬಾರಿಸಿದ ನಂತರ ಸಮೀಕರಣ ಎರಡು ಚೆಂಡುಗಳಲ್ಲಿ ಎರಡು ರನ್‌ಗಳಿಗೆ ಇಳಿಯಿತು.

ಆದರೆ ಮುಂದಿನ ಎಸೆತದಲ್ಲಿ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಸಾಮರ್ಥ್ಯ ಹೊಂದಿರುವ ಕುಲ್ದೀಪ್‌ಗೆ ಸ್ಟ್ರೈಕ್ ನೀಡಲು ಅವರು ನಿರಾಕರಿಸಿದರು. ಕೊನೆಯ ಚೆಂಡಿನಲ್ಲಿ ಕುಲ್‌ದೀಪ್‌ ರನ್ ಔಟ್ ಆದಾಗ, ಮಿಲ್ಲರ್ ಅವರ ಈ ನಿರ್ಧಾರ ಅವರಿಗೆ ದುಬಾರಿಯಾಯಿತು. ಇದರಿಂದ ಡೆಲ್ಲಿ ತಂಡವು ಸತತ ಮೂರನೇ ಜಯ ಸಾಧಿಸುವ ಅವಕಾಶವನ್ನು ಕಳೆದುಕೊಂಡಿತು.