MI vs GT: ಐಪಿಎಲ್ ನಿಯಮ ಉಲ್ಲಂಘಿಸಿದ ಹಾರ್ದಿಕ್ ಪಾಂಡ್ಯ, ಆಶಿಶ್ ನೆಹ್ರಾಗೆ ದಂಡ!
MI vs GT: ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಣ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂದ್ಯದಲ್ಲಿ ನಿಯಮ ಉಲ್ಲಂಘಿಸಿದ ಎಂಐ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಜಿಟಿ ಕೋಚ್ ಆಶಿಶ್ ನೆಹ್ರಾ ಅವರಿಗೆ ದಂಡವನ್ನು ವಿಧಿಸಲಾಗಿದೆ.

ಹಾರ್ದಿಕ್ ಪಾಂಡ್ಯ, ಆಶಿಶ್ ನೆಹ್ರಾಗೆ ದಂಡ.

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲಿ ಐಪಿಎಲ್ ನಿಯಮ ಉಲ್ಲಂಘಿಸಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ಗುಜರಾತ್ ಟೈಟನ್ಸ್ ತಂಡದ ಹೆಡ್ ಕೋಚ್ ಆಶಿಶ್ ನೆಹ್ರಾಗೆ (Ashish Nehra) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ದಂಡವನ್ನು ವಿಧಿಸಿದೆ. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಮೂರು ವಿಕೆಟ್‌ಗಳಿಂದ (ಡಿಎಲ್‌ಎಸ್) ಗೆಲುವು ಪಡೆಯಿತು. ಇದರೊಂದಿಗೆ ಶುಭಮನ ಗಿಲ್‌ಗೆ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.
ಮುಂಬೈ ಇಂಡಿಯನ್ಸ್ ತಂಡ ನಿಧಾನಗತಿಯ ಬೌಲಿಂಗ್ ಕಾರಣ ನಾಯಕ ಹಾರ್ದಿಕ್ ಪಾಂಡ್ಯಗೆ 24ರೂ ಲಕ್ಷ ರೂ ದಂಡವನ್ನು ವಿಧಿಸಲಾಗಿದೆ. ಪ್ರಸಕ್ತ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪಾಲಿಗೆ ಇದು ಎರಡನೇ ಸ್ಲೋ ಓವರ್ ಪ್ರಮಾದವಾಗಿದೆ. ಇನ್ನು ಹಾರ್ದಿಕ್ ಪಾಂಡ್ಯ ಸಹ ಆಟಗಾರರು, ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಪಂದ್ಯವನ್ನು ಆಡಿದ ಎಲ್ಲಾ ಆಟಗಾರರಿಗೂ ಪಂದ್ಯದ ಸಂಭಾವನೆಯಲ್ಲಿ 25ರಷ್ಟು ದಂಡವನ್ನು ವಿಧಿಸಲಾಗಿದೆ.
MI vs GT: ಲೋಸ್ಕೋರಿಂಗ್ ಪಂದ್ಯದಲ್ಲಿ ಮುಂಬೈ ಸದ್ದಡಗಿಸಿದ ಗುಜರಾತ್ ಟೈಟನ್ಸ್!
ಇನ್ನು ಗುಜರಾತ್ ಟೈಟನ್ಸ್ ತಂಡದ ಹೆಡ್ ಕೋಚ್ ಆಶಿಶ್ ನೆಹ್ರಾ ಅವರಿಗೂ ದಂಡವನ್ನು ವಿಧಿಸಲಾಗಿದೆ. ಪಂದ್ಯದ ವೇಳೆ ಆನ್‌ಫೀಲ್ಡ್ ಅಂಪೈರ್‌ಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಆ ಮೂಲಕ ಕ್ರೀಡಾ ಸ್ಪೂರ್ತಿಗೆ ದಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಅವರು ಆರ್ಟಿಕಲ್ 2.20ರ ಮೊದಲನೇ ಹಂತದ ನಿಪಂದ್ಯದ ಸಂಭಾವನೆಯಲ್ಲಿ ಶೇ 25 ರಷ್ಟು ದಂಡವನ್ನು ಆಶಿಶ್ ನೆಹ್ರಾಗೆ ವಿಧಿಸಲಾಗಿದೆ ಹಾಗೂ ಒಂದು ಡಿಮೆರಿಟ್ ಅಂಕವನ್ನು ನೀಡಲಾಗಿದೆ.
"ಐಪಿಎಲ್‌ನ ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಮುಂಬೈ ಇಂಡಿಯನ್ಸ್ ತಂಡ, ಈ ಋತುವಿನಲ್ಲಿ ಎರಡನೇ ಪ್ರಮಾದವನ್ನು ಎಸಗಿದೆ. ಈ ಹಿನ್ನೆಲೆಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ," ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
IPL 2025: ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಕಡಿಮೆ ಎಂದವರಿಗೆ ಎಬಿಡಿ ತಿರುಗೇಟು!
"ಗುಜರಾತ್ ಟೈಟನ್ಸ್‌ನ ಮುಖ್ಯ ತರಬೇತುದಾರ ಆಶಿಶ್ ನೆಹ್ರಾ ಅವರಿಗೆ ಪಂದ್ಯ ಶುಲ್ಕದ 25% ದಂಡ ವಿಧಿಸಲಾಗಿದೆ ಮತ್ತು ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ನೀಡಲಾಗಿದೆ. ಅವರು ಆರ್ಟಿಕಲ್ 2.20 ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಒಪ್ಪಿಕೊಂಡಿದ್ದಾರೆ," ಎಂದು ಐಪಿಎಲ್ ಹೇಳಿದೆ.
ಸೋಲಿನ ಸನಿಹ ಬಂದು ಗೆದ್ದು ಬೀಗಿದ ಗುಜರಾತ್ ಟೈಟನ್ಸ್
ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಣ ಪಂದ್ಯಕ್ಕೆ ಎರಡು ಬಾರಿ ಮಳೆ ಅಡ್ಡಿಪಡಿಸಿತ್ತು. 156 ರನ್‌ಗಳ ಗುರಿ ಹಿಂಬಾಲಿಸಿದ್ದ ಗುಜರಾತ್ ಟೈಟನ್ಸ್ ತಂಡ 18 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕ 132 ರನ್‌ಗಳನ್ನು ಕಲೆ ಹಾಕಿತ್ತು. ಈ ವೇಳೆ ಮಳೆ ಬಂದ ಕಾರಣ, ಪಂದ್ಯವನ್ನು ಡಿಎಲ್‌ಎಸ್ ನಿಯಮದ ಪ್ರಕಾರ 19ನೇ ಓವರ್‌ಗೆ ಸೀಮಿತಗೊಳಿಸಲಾಯಿತು. ಆ ಮೂಲಕ ಗುಜರಾತ್‌ಗೆ ಕೊನೆಯ ಓವರ್‌ನಲ್ಲಿ 15 ರನ್‌ಗಳ ಗುರಿಯನ್ನು ನೀಡಲಾಗಿತ್ತು. ರಾಹುಲ್ ತೆವಾಟಿಯಾ ಹಾಗೂ ಜೆರಾಲ್ಡ್ ಕೊಯೆಡ್ಜಿ ಕ್ರಮವಾಗಿ ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ ತಂಡವನ್ನು ಗೆಲ್ಲಿಸಿದರು.